ಐಪಿಎಲ್ ಟಿಕೆಟ್ ಗೊಂದಲ: KSCA ವಿರುದ್ಧ ಶಾಸಕ ಗಣಿಗ ರವಿ ಆಕ್ರೋಶ
ಮಂಡ್ಯ: ಐಪಿಎಲ್ ಪಂದ್ಯಗಳ ಟಿಕೆಟ್ ಹಂಚಿಕೆ ಹಾಗೂ ಮಾರಾಟ ವ್ಯವಸ್ಥೆ ಕುರಿತು ಶಾಸಕ ಗಣಿಗ ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತಿರುವುದು ಸಂತೋಷದ ಸಂಗತಿಯೇ ಸರಿ, ಆದರೆ ಸಾಮಾನ್ಯ ಅಭಿಮಾನಿಗಳಿಗೆ ಟಿಕೆಟ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ಕೆಎಸ್‌ಸಿಎ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಅವರು, ಟಿಕೆಟ್ ವ್ಯವಸ್ಥೆಯಲ್ಲಿ ಅಸಮಾನತೆ ಇದ್ದು, ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟವಾಗುತ್ತಿದೆ ಎಂದು ಆರೋಪಿಸಿದರು. ಮೂಲ ದರಕ್ಕಿಂತ ಹತ್ತು ಪಟ್ಟು ಹೆಚ್ಚಾಗಿ ಟಿಕೆಟ್ ಮಾರಾಟವಾಗುತ್ತಿರುವುದನ್ನು ‘ಟಿಕೆಟ್ ಗ್ಯಾಂಬ್ಲಿಂಗ್’ ಎಂದು ಕಿಡಿಕಾರಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಟೀಕಿಸಿದ ಅವರು, “ಸ್ಟೇಡಿಯಂ ಅನ್ನು ಹಣ ಮಾಡುವ ಯಂತ್ರವನ್ನಾಗಿ ಮಾಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮಗೆ ಸಿಕ್ಕ ಎರಡು ಟಿಕೆಟ್‌ಗಳನ್ನು ಬಡ ಮಕ್ಕಳಿಗೆ ನೀಡಿದ್ದಾಗಿ ಹೇಳಿದ ಅವರು, “ಅವರಿಗೆ ಸ್ಟೇಡಿಯಂನಲ್ಲಿ ಕೂತು ಪಂದ್ಯ ನೋಡುವ ಆಸೆ ಇರೋದಿಲ್ಲವೇ?” ಎಂದು ಪ್ರಶ್ನಿಸಿದರು. ಬಡವರಿಗೂ ಸಮಾನ ಅವಕಾಶ ಸಿಗಬೇಕು ಎಂದು ಒತ್ತಾಯಿಸಿದ ಅವರು, “ನಾನು ಹಣ ಕೊಟ್ಟು ಸಾಲಿನಲ್ಲಿ ನಿಂತು ಟಿಕೆಟ್ ತೆಗೆದುಕೊಳ್ಳಲು ಸಿದ್ಧ. ಆದರೆ ಟಿಕೆಟ್ ಸಿಗುವ ಕೌಂಟರ್ ಎಲ್ಲಿದೆ ಎಂದು ತೋರಿಸಿ” ಎಂದು ಸವಾಲು ಹಾಕಿದರು. ಸ್ಟೇಡಿಯಂನ 40 ಸಾವಿರ ಆಸನಗಳಲ್ಲಿ ಕನಿಷ್ಠ 20 ಸಾವಿರ ಟಿಕೆಟ್‌ಗಳನ್ನು ಕೌಂಟರ್ ಮೂಲಕ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದ ಅವರು, “ನಾನು ಗಲ್ಲಿ ಕ್ರಿಕೆಟ್ ಆಡುವ ಹುಡುಗರ ಪರ, ಬಡವರ ಪರ. ಅವರಿಗೆ ಪಂದ್ಯ ನೋಡುವ ಅವಕಾಶ ದೊರೆಯಬೇಕು” ಎಂದು ಹೇಳಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚೆನ್ನೈನಲ್ಲಿ ಸಿಎಸ್‌ಕೆ ಬ್ಯಾಟಿಂಗ್ ಶೋ: ಮ್ಹಾತ್ರೆ ಅರ್ಧಶತಕದಿಂದ ಮಿಂಚು
ಚೆನ್ನೈ: ತಮ್ಮ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ... ಓದನ್ನು ಮುಂದುವರಿಸಿ
ಹೈದರಾಬಾದ್ ವಿರುದ್ಧ ತವರಿನಲ್ಲೇ ಮುಗ್ಗರಿಸಿದ ರಹಾನೆ ಪಡೆ: ಎಸ್‌ಆರ್‌ಎಚ್ ದಾಳಿ ಕೆಕೆಆರ್ ವಿರುದ್ಧ 65 ರನ್‌ಗಳ ಭರ್ಜರಿ ಜಯ
ಕೋಲ್ಕತ್ತಾ: ಐಪಿಎಲ್ ಪಂದ್ಯದಲ್ಲಿ Sunrisers Hyderabad ತಂಡದ ಸ... ಓದನ್ನು ಮುಂದುವರಿಸಿ
ನಕಲಿ ಟಿಕೆಟ್ ದಂಧೆ ಬಯಲು: RCB ಪಂದ್ಯಕ್ಕೆ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ
ಬೆಂಗಳೂರು: ಐಪಿಎಲ್ ಕ್ರಿಕೆಟ್ ಹಬ್ಬದ ನಡುವೆ ಬೆಂಗಳೂರಿನಲ್ಲಿ ನಕಲ... ಓದನ್ನು ಮುಂದುವರಿಸಿ
4 ವಿಕೆಟ್ ಕಳೆದು ಸಂಕಷ್ಟದಲ್ಲಿದ್ದ ಡೆಲ್ಲಿ ಗೆಲುವಿನತ್ತ: ರಿಜ್ವಿ–ಸ್ಟಬ್ಸ್ ಮ್ಯಾಜಿಕ್
ಲಖ್ನೋ: ಎಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಐ... ಓದನ್ನು ಮುಂದುವರಿಸಿ
ಮಹಿಳಾ ಆಟಗಾರ್ತಿಯರಿಗೆ ಸಿಹಿ ಸುದ್ದಿ : ಮಾಜಿ ಮಹಿಳಾ ಕ್ರಿಕೆಟರ್‌ಗಳಿಗೆ ಪಿಂಚಣಿ - ಕೆಎಸ್‌ಸಿಎಯಿಂದ ಮಹತ್ವದ ಘೋಷಣೆ
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ರಾಜ್ಯದ ಮಾಜಿ... ಓದನ್ನು ಮುಂದುವರಿಸಿ
ಐಪಿಎಲ್ ಪಂದ್ಯದಲ್ಲಿ ಬ್ಯಾಟ್ ವಿವಾದ – ತೆವಾಟಿಯಾ ತಡೆ
ಐಪಿಎಲ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲ... ಓದನ್ನು ಮುಂದುವರಿಸಿ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳ್ಳರ ಅಟ್ಟಹಾಸ : 28 ಮೊಬೈಲ್ ವಶಕ್ಕೆ, ಅಪ್ರಾಪ್ತರು ಸೇರಿ ಮೂವರು ಅರೆಸ್ಟ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಮತ್ತು SRH... ಓದನ್ನು ಮುಂದುವರಿಸಿ
ಚೆಂಡು ವಿರೂಪ ಆರೋಪ: ಫಖರ್ ಝಮಾನ್‌ಗೆ 2 ಪಂದ್ಯ ನಿಷೇಧ
ಲಾಹೋರ್: ಲಾಹೋರ್ ಖಲಂದರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಫಖರ್ ಝ... ಓದನ್ನು ಮುಂದುವರಿಸಿ
ಪಶ್ಚಿಮ ಬಂಗಾಳ ಚುನಾವಣೆ : ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ
ಕೋಲ್ಕತ್ತಾ: ಭಾರತೀಯ ಟೆನಿಸ್ ಲೋಕದ ಖ್ಯಾತ ಆಟಗಾರ ಲಿಯಾಂಡರ್ ಪೇಸ್... ಓದನ್ನು ಮುಂದುವರಿಸಿ
CSK ಸೋಲು ನಡುವೆ ಜಡೇಜಾ ಭಾವುಕ ಕ್ಷಣ: ವಿಡಿಯೋ ವೈರಲ್
ಚೆನ್ನೈ: ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದ್ದ... ಓದನ್ನು ಮುಂದುವರಿಸಿ