ರಾಜ್ಯದಲ್ಲಿ ನಂ.1, ದೇಶದಲ್ಲಿ 3ನೇ ಸ್ಥಾನ: ಕೋರಮಂಗಲ RTO ಭರ್ಜರಿ ದಾಖಲೆ
ಬೆಂಗಳೂರು: ಸಾಮಾನ್ಯವಾಗಿ ನೆಗೆಟಿವ್ ಸುದ್ದಿಗಳಿಂದಲೇ ಗುರುತಿಸಿಕೊಂಡಿರುವ ನಗರದ ಸೆಂಟ್ರಲ್ ಕೋರಮಂಗಲ ಆರ್‌ಟಿಓ ಕಚೇರಿ, ಈ ಬಾರಿ ಸಕಾರಾತ್ಮಕ ಸಾಧನೆಯ ಮೂಲಕ ಗಮನ ಸೆಳೆದಿದೆ. ದೇಶದಲ್ಲೇ ಮೂರನೇ ಅತಿಹೆಚ್ಚು ಆದಾಯ ಗಳಿಸಿದ ಆರ್‌ಟಿಓ ಕಚೇರಿಯಾಗಿ ಹೊರಹೊಮ್ಮಿದೆ. ಕೋರಮಂಗಲ ಆರ್‌ಟಿಓ ಕಚೇರಿ (KA-01) 2025-26ನೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 1273 ಕೋಟಿ ರೂಪಾಯಿ ರಾಜಸ್ವ ಸಂಗ್ರಹಿಸಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಇದರಿಂದ ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಗಳಿಸಿದ ಆರ್‌ಟಿಓ ಕಚೇರಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.
ದೇಶದ ಮಟ್ಟದಲ್ಲಿ ಮಹಾರಾಷ್ಟ್ರದ ಪುಣೆ ಆರ್‌ಟಿಓ ಕಚೇರಿ ಸುಮಾರು 1900 ಕೋಟಿ ರೂಪಾಯಿ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದು, ಪಿಂಪ್ರಿ ಆರ್‌ಟಿಓ ಕಚೇರಿ 1500 ಕೋಟಿ ರೂಪಾಯಿ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದೆ. ದೇಶದ ಸುಮಾರು 1100ಕ್ಕೂ ಹೆಚ್ಚು ಆರ್‌ಟಿಓ ಕಚೇರಿಗಳ ಪೈಕಿ ಕೋರಮಂಗಲ ಆರ್‌ಟಿಓ ಮೂರನೇ ಸ್ಥಾನಕ್ಕೇರಿರುವುದು ಗಮನಾರ್ಹ ಸಾಧನೆ. ಫ್ಯಾನ್ಸಿ ನಂಬರ್ ಹರಾಜು, ವಾಹನ ಪರವಾನಗಿ, ಎಫ್‌ಸಿ ನವೀಕರಣ ಹಾಗೂ ವಾಹನ ತಪಾಸಣೆ ಸೇರಿದಂತೆ ವಿವಿಧ ಸೇವೆಗಳ ಮೂಲಕ ಈ ಭಾರೀ ರಾಜಸ್ವ ಸಂಗ್ರಹ ಸಾಧ್ಯವಾಗಿದೆ. ಒಟ್ಟಿನಲ್ಲಿ, 1273 ಕೋಟಿ ರೂಪಾಯಿ ಆದಾಯದೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿರುವ ಕೋರಮಂಗಲ ಆರ್‌ಟಿಓ, ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಿ ಎರಡನೇ ಸ್ಥಾನ ಗುರಿಯಾಗಿಸಿಕೊಂಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಜನತೆಗೆ ಸ್ಪಷ್ಟ ಲೆಕ್ಕ ನೀಡಿ- ₹5,700 ಕೋಟಿ ಹಣ ಎಲ್ಲಿ? ರಾಜ್ಯ ಸರ್ಕಾರಕ್ಕೆ ಲೆಕ್ಕ ಕೇಳಿದ ಆರ್.ಅಶೋಕ್
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ... ಓದನ್ನು ಮುಂದುವರಿಸಿ
LPG ಕೊರತೆ: ಗ್ಯಾಸ್ ಇಲ್ಲದೇ ಆಟೋ ನಿಲ್ಲಿಸಿದ ಚಾಲಕರು, ಪರದಾಟ ತೀವ್ರ
ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಇಸ್ರೇಲ್–ಅಮೆ... ಓದನ್ನು ಮುಂದುವರಿಸಿ
ಕಾರವಾರ
ಕೆಎಸ್ಆರ್‌ಟಿಸಿ–ಖಾಸಗಿ ಭೀಕರ ಅಪಘಾತ : ಹಲವರಿಗೆ ಗಾಯ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಬಯಲಾಯ್ತು ಜಿಮ್ ಟ್ರೈನರ್ ಸಮೀರ್ ಕೃತ್ಯ- ಜ್ಯೂಸ್‌ನಲ್ಲಿ ಮದ್ದು ಬೆರೆಸಿ ಅತ್ಯಾಚಾರ?
ಹುಬ್ಬಳ್ಳಿ: ನಗರದಲ್ಲಿ ಸಂಚಲನ ಸೃಷ್ಟಿಸಿದ ಘಟನೆ ಒಂದರಲ್ಲಿ, ಹಳೆ... ಓದನ್ನು ಮುಂದುವರಿಸಿ
ಕಾರವಾರ
ಡಾಂಬರ್ ಪೂರೈಕೆ ಸ್ಥಗಿತ – ಕಾರವಾರ ಬಂದರು ಚಟುವಟಿಕೆಗಳಿಗೆ ಬ್ರೇಕ್ - ಮಧ್ಯಪ್ರಾಚ್ಯ ಸಂಘರ್ಷದ ನೇರ ಪರಿಣಾಮ
ಕಾರವಾರ: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಸಂಘರ್ಷದ ನೇರ ಪ... ಓದನ್ನು ಮುಂದುವರಿಸಿ
ಮಂಡ್ಯದಲ್ಲಿ ARAI ಯೋಜನೆಗೆ ರೈತರ ಆಕ್ರೋಶ: ಭೂಮಿ ಕೊಡೋದಿಲ್ಲ ಎಂದ ಜನ
ಮಂಡ್ಯದಲ್ಲಿ ಬೃಹತ್ ಕೈಗಾರಿಕಾ ಯೋಜನೆಗೆ ಆರಂಭದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಕೇ... ಓದನ್ನು ಮುಂದುವರಿಸಿ
ಬಿಜೆಪಿಗೆ ಸೋಲಿನ ಭಯ – ಯತ್ನಾಳ್ ಕರೆಸಿಕೊಂಡಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ
ಬಾಗಲಕೋಟೆ: ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ... ಓದನ್ನು ಮುಂದುವರಿಸಿ
ಭಾಷಣ ವೇಳೆ ಕುಸಿದ ನಿವೃತ್ತ ನ್ಯಾಯಮೂರ್ತಿಸಂತೋಷ್ ಹೆಗ್ಡೆ ಅಸ್ವಸ್ಥ
ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಕಾರ್ಯಕ... ಓದನ್ನು ಮುಂದುವರಿಸಿ
ಮೈಲ್ಸಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್ ದುರಂತ ಮನೆಯಲ್ಲಿದ್ದ ವಸ್ತುಗಳು ಚಿದ್ರಚಿದ್ರ
ಬೆಂಗಳೂರು: ನಗರದ ಬೇಗುರ್ ಪೋಸ್ಟ್ ವ್ಯಾಪ್ತಿಯ ಮೈಲ್ಸಂದ್ರ ಪ್ರದೇಶದಲ್ಲಿ ಶಾರ್ಟ್ ಸರ್ಕ... ಓದನ್ನು ಮುಂದುವರಿಸಿ
ರ್ಯಾಪಿಡೊ ಬೈಕ್‌ನಲ್ಲಿ ಯುವತಿಯ ಅಪಾಯಕಾರಿ ಸಾಹಸ! ಹೆಲ್ಮೆಟ್ ಇಲ್ಲದೆ ಸಿನಿಮೀಯ ಸ್ಟೈಲ್‌ನಲ್ಲಿ ಪ್ರಯಾಣ ವೈರಲ್ 🚨
ಬೆಂಗಳೂರು: ನಗರದಲ್ಲಿ ಟ್ರಾಫಿಕ್ ನಿಯಮಗಳನ್ನು ಬಹಿರಂಗವಾಗಿ ಉಲ್ಲಂ... ಓದನ್ನು ಮುಂದುವರಿಸಿ