2023ರ ಗ್ರೆನೇಡ್ ಪತ್ತೆ ಪ್ರಕರಣ: ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಎನ್ಐಎ ಬಲೆಗೆ
ಬೆಂಗಳೂರು: 2023ರ ಗ್ರೆನೇಡ್ ಪತ್ತೆ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ಶಂಕಿತ ಉಗ್ರನನ್ನು National Investigation Agency (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಅರ್ಷದ್ ಖಾನ್ ಎಂದು ಗುರುತಿಸಲಾಗಿದೆ. ಈತ ಪ್ರಕರಣದ ಪ್ರಮುಖ ಆರೋಪಿಯ ಆಪ್ತ ಸ್ನೇಹಿತನಾಗಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಈ ಹಿಂದೆ Central Crime Branch (ಸಿಸಿಬಿ) ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅರ್ಷದ್ ಖಾನ್ ಬಂಧನಕ್ಕೊಳಗಾಗಿದ್ದ. ಶಂಕೆ ಮೇರೆಗೆ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಪ್ರಕರಣವನ್ನು ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು. ಜಾಮೀನು ಸಿಕ್ಕ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ, ಶಂಕಿತನ ವಿರುದ್ಧ ಪ್ರೊಕ್ಲಮೇಶನ್ ಜಾರಿಯಾಗಿತ್ತು.
ಇತ್ತೀಚೆಗೆ ಆರ್.ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎನ್ಐಎ ಅಧಿಕಾರಿಗಳು ಮತ್ತೆ ಬಂಧಿಸಿದ್ದಾರೆ. ಅರ್ಷದ್ ಖಾನ್, ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಎಂದು ಆರೋಪಿಸಲ್ಪಟ್ಟ ಜುನೈದ್ ಅಹ್ಮದ್ ಅವರ ಆಪ್ತ ಸ್ನೇಹಿತನಾಗಿದ್ದಾನೆ ಎನ್ನಲಾಗಿದೆ. ಜುನೈದ್ ಪ್ರಸ್ತುತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತನನ್ನು ವಶಕ್ಕೆ ಪಡೆದು ಎನ್ಐಎ ಅಧಿಕಾರಿಗಳು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೇವನಹಳ್ಳಿ
ಪೋಕ್ಸೋ ಆರೋಪ ದಾಖಲಿಸಿದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರು ಆರೋಪಿಗಳ ವಿರುದ್ಧ FIR
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕ... ಓದನ್ನು ಮುಂದುವರಿಸಿ
ಸಂಜಯನಗರದಲ್ಲಿ ಹೇಮಂತ್ ಆತ್ಮಹತ್ಯೆ ಪ್ರಕರಣ: ಯುಡಿಆರ್ ದಾಖಲಾಗಿದ್ದು, ತನಿಖೆ ಪ್ರಾರಂಭ
ಬೆಂಗಳೂರು : ಮಾಜಿ ಮುಖ್ಯಮಂತ್ರಿ Basavaraj Bommai ಅವರ ಪರ್ಸನಲ... ಓದನ್ನು ಮುಂದುವರಿಸಿ
ಬೈರತಿ ಬಸವರಾಜ್ ನ್ಯಾಯಾಂಗ ಬಂಧನಕ್ಕೆ: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಆದೇಶ
ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ Byra... ಓದನ್ನು ಮುಂದುವರಿಸಿ
ಪ್ರಕರಣ ಮುಚ್ಚಿಹಾಕಲು ಕೈ ಜೋಡಿಸಿದ ಆರೋಪ: ವರ್ತೂರು ಪೊಲೀಸ್ ಇನ್‌ಸ್ಪೆಕ್ಟರ್ ಗಂಭೀರ ಟೀಕೆ
ಬೆಂಗಳೂರು : ವರ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ Yoganand... ಓದನ್ನು ಮುಂದುವರಿಸಿ
ವಿಚಾರಣೆ ಮುಗಿಸಿ ಕ್ಷಮೆಯಾಚಿಸಿದ ಸ್ನೇಹಮಯಿ ಕೃಷ್ಣ: ಸುಳ್ಳು ಲಂಚದ ಆರೋಪ ತಿರಸ್ಕರಣೆ
ಬೆಂಗಳೂರು : ಸರ್ಕಾರದ ಮುಖ್ಯ ಕಾರ್ಯದರ್ಶಿ Shalini Rajanesh ವಿ... ಓದನ್ನು ಮುಂದುವರಿಸಿ
ಕಬ್ಬಿನ ಟ್ರ್ಯಾಕ್ಟರ್ ಅಪಘಾತದಲ್ಲಿ 2 ವರ್ಷದ ಮಗು ಸೇರಿದಂತೆ 4 ಮಂದಿ ಮೃತ
ಬಾಗಲಕೋಟೆ, ಜಮಖಂಡಿ : ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಟ್ಟೆ ಕೆರೆ... ಓದನ್ನು ಮುಂದುವರಿಸಿ
ಹಾಸನ ನಾಪತ್ತೆ ಪ್ರಕರಣದಲ್ಲಿ ಸ್ಪೋಟಕ ತಿರುವು: ಪ್ರಿಯಾಂಕ ಪ್ರಿಯಕರನ ಜೊತೆ ಪತ್ತೆ, ಗಂಡನಿಗೆ ಮರಳಿ ಸೇರುವ ನಿರ್ಧಾರ
ಹಾಸನ: ನಾಪತ್ತೆ ಪ್ರಕರಣವೆಂದು ಭಾರೀ ಸಂಚಲನ ಸೃಷ್ಟಿಸಿದ್ದ ಘಟನೆಗೆ... ಓದನ್ನು ಮುಂದುವರಿಸಿ
ಅಣ್ಣನಂತೆ ನಂಬಿದವನ ಹೆಂಡತಿ ಮೇಲೆ ಮೌಲ್ವಿ ಅತ್ಯಾಚಾರ – ಆರೋಪಿಗೆ ಪೊಲೀಸ್ ಅರೆಸ್ಟ್
ಬೆಂಗಳೂರು: ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಮ್ಮದ್ ಜ... ಓದನ್ನು ಮುಂದುವರಿಸಿ
ಸಂಜಯನಗರದಲ್ಲಿ ದುರ್ಘಟನೆ – ಮಾಜಿ ಸಿಎಂ ಪರ್ಸನಲ್ ಸೆಕ್ರೆಟರಿಯ ಮಗ ಸಾವಿಗೆ ಶರಣು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರ್ಸನಲ್... ಓದನ್ನು ಮುಂದುವರಿಸಿ
ಬೆಳ್ಳಂಬೆಳಗ್ಗೆ ಫೀಲ್ಡ್‌ಗೆ ಇಳಿದ ಬೆಂಗಳೂರು ಪೊಲೀಸರು – ಮಾದಕ ಜಾಲಕ್ಕೆ ಕಂಟ್ರೋಲ್
ಬೆಂಗಳೂರು: ಮಾದಕ ವಸ್ತುಗಳ ಜಾಲದ ವಿರುದ್ಧ ಬೆಂಗಳೂರು ನಗರ ಪೊಲೀಸ್... ಓದನ್ನು ಮುಂದುವರಿಸಿ