ಐಪಿಎಲ್ 2026: ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿ ಪ್ರಕಟ – ಮಾರ್ಚ್ 28ರಂದು ಟೂರ್ನಿ ಆರಂಭ
ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ಉತ್ಸವವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟವಾಗಿದೆ. ಈ ಬಾರಿ ಟೂರ್ನಿಯು ಮಾರ್ಚ್ 28ರಂದು ಆರಂಭವಾಗಲಿದ್ದು, ಅಭಿಮಾನಿಗಳಲ್ಲಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತವರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ಮೊದಲ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿದ್ದು, ಅವು ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ವಿವಿಧ ನಗರಗಳಲ್ಲಿ ಆಯೋಜಿಸಲಾಗಿದೆ.
ಈ ಹಂತದಲ್ಲಿ ಆರ್‌ಸಿಬಿ ನಾಲ್ಕು ಪಂದ್ಯಗಳನ್ನು ಆಡಲಿದ್ದು, ಅವುಗಳಲ್ಲಿ ಎರಡು ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ಉಳಿದ ಎರಡು ಪಂದ್ಯಗಳು ಗುವಾಹಟ್ಟಿ ಮತ್ತು ಮುಂಬೈನಲ್ಲಿ ನಡೆಯಲಿವೆ.
ಆರ್‌ಸಿಬಿ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ
ಮಾರ್ಚ್ 28: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ – ಸಂಜೆ 7:30, ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಏಪ್ರಿಲ್ 5: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ (CSK) – ಸಂಜೆ 7:30, ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಏಪ್ರಿಲ್ 10: ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ – ಸಂಜೆ 7:30, ಗುವಾಹಟ್ಟಿ
ಏಪ್ರಿಲ್ 12: ಆರ್‌ಸಿಬಿ vs ಮುಂಬೈ ಇಂಡಿಯನ್ಸ್ – ಸಂಜೆ 7:30, ವಾಂಖೆಡೆ ಸ್ಟೇಡಿಯಂ, ಮುಂಬೈ
ಐಪಿಎಲ್ 2026ರ ಮೊದಲ ಹಂತದ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾತರತೆ ಹೆಚ್ಚಾಗಿದೆ. ಅಭಿಮಾನಿಗಳು ಈ ಕ್ರಿಕೆಟ್ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಕಾದು ಕುಳಿತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕ್ರೀಡಾ ಚಟುವಟಿಕೆ ಮೂಲಕ ದೈಹಿಕ ಸಾಮರ್ಥ್ಯ ಹೆಚ್ಚಿಸಿ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು: ಪ್ರತಿಯೊಬ್ಬರೂ ಜೀವನವನ್ನು ಕ್ರೀಡಾಸ್ಪೂರ್ತಿಯಿಂದ ನಡೆ... ಓದನ್ನು ಮುಂದುವರಿಸಿ
ಐಪಿಎಲ್ ಉದ್ಘಾಟನಾ ಪಂದ್ಯಗಳಲ್ಲಿ ಆರ್‌ಸಿಬಿ ಸಾಧನೆ ಹೇಗೆ? ಇಲ್ಲಿದೆ ದಾಖಲೆ
19ನೇ ಆವೃತ್ತಿಯ Indian Premier League (ಐಪಿಎಲ್) ಆರಂಭಕ್ಕೆ ಈಗ ಕೆಲವೇ ದಿನಗಳು ಬಾ... ಓದನ್ನು ಮುಂದುವರಿಸಿ
ಧ್ವಜವನ್ನು ಮೈಮೇಲೆ ಸುತ್ತಿಕೊಂಡು ಸಂಭ್ರಮ: ಕ್ರಿಕೆಟಿಗ Hardik Pandya ವಿರುದ್ಧ ದೂರು
ಪುಣೆ: ಹಾರ್ದಿಕ್ ಪಾಂಡ್ಯ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡ... ಓದನ್ನು ಮುಂದುವರಿಸಿ
ಮಾರ್ಚ್ 28ರಿಂದ ಐಪಿಎಲ್ 19: RCB–SRH ಉದ್ಘಾಟನಾ ಪಂದ್ಯ, ಮೊದಲ ಹಂತದ 20 ಪಂದ್ಯಗಳ ವಿವರಗಳು ಪ್ರಕಟ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಮೊದಲ ಹಂತದ 20 ಪಂದ್ಯಗಳ... ಓದನ್ನು ಮುಂದುವರಿಸಿ
ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ — 8 ಪ್ರಮುಖ ಆಟಗಾರರು ಹೊರಗುಳಿದರು!
ಟಿ20 ವಿಶ್ವಕಪ್ ಫೈನಲ್ ಸೋಲಿನ ಬಳಿಕ ನ್ಯೂಜಿಲೆಂಡ್ ತಂಡ ಸೌತ್ ಆಫ್ರಿಕಾ ವಿರುದ್ಧ ಐದು... ಓದನ್ನು ಮುಂದುವರಿಸಿ
ಹೊಸ ಗರ್ಲ್‌ಫ್ರೆಂಡ್ ಮುಂಬರುವಂತೆಯೇ ಹಾರ್ದಿಕ್-ಕೃನಾಲ್ ನಡುವೆ ದೂರ!
ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಅವರ ಅಣ್ಣ ಕೃನಾಲ್ ಪಾಂಡ್ಯ... ಓದನ್ನು ಮುಂದುವರಿಸಿ
ಭಾರತ ಟೀಂಗೆ 131 ಕೋಟಿ ನಗದು ಬಹುಮಾನ: 2026 ಟಿ20 ವಿಶ್ವಕಪ್ ಗೆಲುವಿನ ಸಂತೋಷ
ಮುಂಬೈ: 2026 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪ... ಓದನ್ನು ಮುಂದುವರಿಸಿ
ಭಾರತಕ್ಕೆ 131 ಕೋಟಿ ನಗದು ಬಹುಮಾನ: 2026 ಟಿ20 ವಿಶ್ವಕಪ್ ಗೆಲುವಿಗೆ ಬಿಸಿಸಿಐ ಘೋಷಣೆ
ಮುಂಬೈ: Board of Control for Cricket in India (BCCI) 202... ಓದನ್ನು ಮುಂದುವರಿಸಿ
2028 ಟಿ20 ವಿಶ್ವಕಪ್: 12 ತಂಡಗಳಿಗೆ ನೇರ ಅರ್ಹತೆ, ಭಾರತ–ನ್ಯೂಜಿಲೆಂಡ್ ಖಚಿತ
2028 ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನಡೆಯಲಿದೆ. ಈಗಾಗಲ... ಓದನ್ನು ಮುಂದುವರಿಸಿ
ಟೀಂ ಇಂಡಿಯಾ 2026 ಟಿ20 ವಿಶ್ವಕಪ್ ಗೆಲುವು: ಗೌತಮ್ ಗಂಭೀರ್ ಕೋಚ್ ಆಗಿ ಐತಿಹಾಸಿಕ ಸಾಧನೆ
ಅಹಮದಾಬಾದ್: ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ... ಓದನ್ನು ಮುಂದುವರಿಸಿ