ಬೈಕ್ ಅಡ್ಡಗಟ್ಟಿ ತುಳಿದ ಕಾಡಾನೆ: ಕೂದಲೆಳೆ ಅಂತರದಲ್ಲಿ ಪಾರಾದ ಸವಾರ
ಚಿಕ್ಕಮಗಳೂರು: ತಾಲ್ಲೂಕಿನ ಗುಡ್ಡೆಕೊಪ್ಪ ಗ್ರಾಮದ ಬಳಿ ಕಾಡಾನೆ ಬೈಕ್ ಅನ್ನು ಅಡ್ಡಗಟ್ಟಿ ತುಳಿದುಹಾಕಿದ ಘಟನೆ ನಡೆದಿದೆ. ಅದೃಷ್ಟವಶಾತ್, ಬೈಕ್ ಸವಾರ ಸಮಯಕ್ಕೆ ಸ್ಥಳದಿಂದ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ವೇಳೆ ಬೈಕ್ ಸಂಪೂರ್ಣ ಹಾನಿಗೊಳಗಾದರೂ, ಸವಾರ ತಕ್ಷಣ ವಾಹನವನ್ನು ಬಿಟ್ಟು ಓಡಿದ ಕಾರಣ ಯಾವುದೇ ಗಾಯಗಳಿಲ್ಲದೆ ತಪ್ಪಿಸಿಕೊಂಡಿದ್ದಾನೆ.
ಘಟನೆಯ ಮಾಹಿತಿ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಕಾಡಾನೆಯನ್ನು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಈ ವರ್ಷ ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಯಿಂದ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಂದಿದೆ.
ಇದಕ್ಕೂ ಸೇರಿ, ಕಾಡಾನೆಗಳು ನಗರದಿಂದ ಕೇವಲ 5 ಕಿಲೋಮೀಟರ್ ದೂರದ ಮತ್ತಾವರ ಗ್ರಾಮದ ಸುತ್ತಮುತ್ತಲೂ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಭೀತಿಯನ್ನು ಹೆಚ್ಚಿಸಿದೆ. ಈ ಹಿನ್ನೆಲೆ, ಮತ್ತಷ್ಟು ಅನಾಹುತಗಳು ಸಂಭವಿಸದಂತೆ ಕಾಡಾನೆಗಳನ್ನು ತಕ್ಷಣ ಸೆರೆಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು: ಧರ್ಮಸ್ಥಳದಲ್ಲಿನ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ... ಓದನ್ನು ಮುಂದುವರಿಸಿ
ಗುಡಿಬಂಡಾ
ಉರ್ದು ಉತ್ಸವದಿಂದ ಗುಡಿಬಂಡೆಯಲ್ಲಿ ಸಾಹಿತ್ಯ ಸಡಗರ-ಕವಿಗಳ ಕಾವ್ಯ ರಸದೊಂದಿಗೆ ಮನಸೆಳೆಯುವ ಉತ್ಸವ
ಗುಡಿಬಂಡೆ: ಪಟ್ಟಣದ ಬಾಪೂಜಿನಗರದ ಶಾದಿ ಮಹಲ್‌ನಲ್ಲಿ ಕರ್ನಾಟಕ ಉರ್... ಓದನ್ನು ಮುಂದುವರಿಸಿ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಫ್ಲೈಟ್ ರದ್ದು: ಪ್ರಯಾಣಿಕರ ಆಕ್ರೋಶ
ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ... ಓದನ್ನು ಮುಂದುವರಿಸಿ
ಗರ್ಭಗುಡಿಗೆ ನುಗ್ಗಿದ ಕಳ್ಳ: ವಿಗ್ರಹದ ಆಭರಣ ಕದ್ದ ದುಷ್ಕರ್ಮಿ
ಕಲಬುರಗಿ: ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ... ಓದನ್ನು ಮುಂದುವರಿಸಿ
ಎಲ್‌ಪಿಜಿ ಅಭಾವ : ನಿತ್ಯದ ಊಟಕ್ಕೂ ಸಂಕಷ್ಟ: ರೊಟ್ಟಿ ಅಂಗಡಿಗಳು ಬಂದ್
ರಾಯಚೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಇಸ್... ಓದನ್ನು ಮುಂದುವರಿಸಿ
ನೀರಿಲ್ಲದೆ ಒಣಗುತ್ತಿರುವ ಬೆಳೆಗಳು- KRSನಲ್ಲಿ 104 ಅಡಿ ನೀರು… ಆದರೆ ರೈತರಿಗೆ ಹನಿ ನೀರಿಲ್ಲ! ರಸ್ತೆ ತಡೆದು ಆಕ್ರೋಶ
ಮಂಡ್ಯ: ಕೆಆರ್‌ಎಸ್ ಜಲಾಶಯದಲ್ಲಿ ಸಾಕಷ್ಟು ನೀರು ಇದ್ದರೂ, ವಿಶ್ವೇ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಪಾನಿಪೂರಿ ತಿನ್ನುತ್ತಿದ್ದ ಯುವತಿಗೆ ಕಲ್ಲು ಎಸೆದ ಆರೋಪ: ಆರೋಪಿಗೆ ಸಾರ್ವಜನಿಕರಿಂದ ಗೂಸ
ದೊಡ್ಡಬಳ್ಳಾಪುರ: ಪಾನಿಪೂರಿ ತಿನ್ನುತ್ತಿದ್ದ ಯುವತಿಗೆ ಕಲ್ಲು ಎಸೆ... ಓದನ್ನು ಮುಂದುವರಿಸಿ
ಮಂಗಳೂರು
ನವ ಮಂಗಳೂರು ಬಂದರಿಗೆ ₹438 ಕೋಟಿ ಅಭಿವೃದ್ಧಿ ಯೋಜನೆಗೆ ಮಂಜೂರು
ಮಂಗಳೂರು: ನವ ಮಂಗಳೂರು ಬಂದರಿನ ಅಭಿವೃದ್ಧಿಗೆ ಮತ್ತೊಂದು ಮಹತ್ವದ... ಓದನ್ನು ಮುಂದುವರಿಸಿ
RSS ಬಾಲಕರ ಶಾಖೆ ವೇಳೆ ಚಾಕು ಪ್ರದರ್ಶನ: ಬಾಲಕನಿಂದ ಆತಂಕ ಸೃಷ್ಟಿ
ಹಾವೇರಿ: ನಗರದ ಸರ್ಕಾರಿ ಶಾಲಾ ಆವರಣದಲ್ಲಿ ನಡೆಯುತ್ತಿದ್ದ ರಾಷ್ಟ್... ಓದನ್ನು ಮುಂದುವರಿಸಿ
ನರಗುಂದ
ಹಗಲು-ರಾತ್ರಿ ಮರಳು ದಂಧೆ : ನರಗುಂದದಲ್ಲಿ ಎಗ್ಗಿಲ್ಲದೇ ಮರಳು ಲೂಟಿ ಸರ್ಕಾರಕ್ಕೆ ಲಕ್ಷಾಂತರ ನಷ್ಟ
ಗದಗ: ಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮರಳು ಗಣಿಗ... ಓದನ್ನು ಮುಂದುವರಿಸಿ