ದೇವಾಲಯದ ಆವರಣದಲ್ಲಿ ಗಾಂಜಾ ಬೆಳೆದ ಅರ್ಚಕ ಬಂಧನ : ₹70 ಲಕ್ಷ ಮೌಲ್ಯದ ವಸ್ತುಗಳ ವಶಕ್ಕೆ ಪಡೆದ ಪೊಲೀಸರು

ತೆಲಂಗಾಣ : ದೇವಾಲಯದ ಆವರಣದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಂಗರೆಡ್ಡಿ ಜಿಲ್ಲೆಯ ದೇವಾಲಯದ ಅರ್ಚಕನೊಬ್ಬನನ್ನು ಶನಿವಾರ ಬಂಧಿಸಲಾಗಿದೆ. ಸಂಗರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಪಂಚಗಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 48 ವರ್ಷದ ಆವುತಿ ನಾಗಯ್ಯ ಎಂಬ ಆರೋಪಿ ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡುತ್ತಿದ್ದ. ಅಕ್ರಮ ಗಾಂಜಾ ಬೆಳೆದು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಡಿಟಿಎಫ್ ಸಂಗರೆಡ್ಡಿ ತಂಡವು ಆತನನ್ನು ಬಂಧಿಸಿದೆ.

 

ಹೂ ತೋಟದಲ್ಲಿ ಗಾಂಜಾ ಬೆಳೆ ಯಾರಿಗೂ ಅನುಮಾನ ಬಾರದಂತೆ ದೇವಸ್ಥಾನದ ಆವರಣದಲ್ಲಿಯೇ ಗಾಂಜಾ ಗಿಡಗಳನ್ನು ಬೆಳೆಸಲಾಗುತ್ತಿದ್ದು, ಚೆಂಡು ಮತ್ತು ಸೇವಂತಿ ( ಮಾರಿಗೋಲ್ಡ್) ಹೂವಿನ ತೋಟದೊಳಗೆ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದ ಎಂದು ಪೊಲೀಸರ ಪರಿಶೀಲನೆ ವೇಳೆ ಬಹಿರಂಗವಾಗಿದೆ. ಶುಕ್ರವಾರ ಮೇಡಕ್ ನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನಿಷೇಧ ಮತ್ತು ಅಬಕಾರಿ ಅಧಿಕಾರಿ ಸಂಗಾರೆಡ್ಡಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ‌.

 

ದಾಳಿ ವೇಳೆ ಡಿಟಿಎಫ್ ಅಬಕಾರಿ ತಂಡವು ದೊಡ್ಡ ಪ್ರಮಾಣದ ಅಕ್ರಮ ಗಾಂಜಾ ಕೃಷಿಯನ್ನು ಪತ್ತೆ ಹಚ್ಚಿದ್ದು, ಸ್ಥಳದಿಂದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದೆ. 70 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ದಾಳಿ ವೇಳೆ ಅಧಿಕಾರಿಗಳು ದೇವಾಲಯದ ಆವರಣದಿಂದ 685 ಗಾಂಜಾ ಗಿಡಗಳು, 17.741 ಕಿ.ಗ್ರಾಂ ಒಣ ಗಾಂಜಾ, 0.897 ಕಿ.ಗ್ರಾಂ ಗಾಂಜಾ ಬೀಜಗಳು, 1 ಡಿಜಿಟಲ್ ತೂಕದ ಯಂತ್ರ 1 ಮೊಬೈಲ್ ಫೋನ್ ಸೇರಿದಂತೆ ಒಟ್ಟು ಸುಮಾರು 70 ಲಕ್ಷ ರೂ. ಗಳಷ್ಟು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಗಾಂಜಾವನ್ನು ಅಕ್ರಮವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಆನ್‌ಲೈನ್ ಬೆಟ್ಟಿಂಗ್ ವ್ಯಸನ : ಸರ್ವಿಸ್ ರಿವಾಲ್ವರ್ ಅಡವಿಟ್ಟ ಎಸ್ಐ

ಆಂಧ್ರಪ್ರದೇಶದ ರಾಯಚೋಟಿಗೆ ಸೇರಿದ ಭಾನು ಪ್ರಕಾಶ್ ಅಂಬರ್‌ಪೇಟ್ ಪೊಲೀಸ್ ಠಾಣೆಯಲ್ಲಿ ಕ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ತಾಯಿ ನಿಧನ ಮುಖ ತಿರುಗಿಸಿಕೊಂಡ ಗ್ರಾಮಸ್ಥರು.. ತಾಯಿಯ ಅಂತ್ಯಸಂಸ್ಕಾರ ನೇರವೆರಿಸಿದ ಇಬ್ಬರು ಪುತ್ರಿಯರು

ಬಿಹಾರ : ಛಾಪ್ರಾ, ಬಿಹಾರದಲ್ಲಿ ಒಬ್ಬ ತಾಯಿ ನಿಧನರಾದರು. ಆದರೆ ಗ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಪ್ರತಿವರ್ಷ ಕೇಂದ್ರ ಬಜೆಟ್‌ ಫೆಬ್ರವರಿ 1 ರಂದೇ ಮಂಡಿಸುವುದೇಕೆ?

ನವದೆಹಲಿ: ಭಾರತದಲ್ಲಿ ಯೂನಿಯನ್ ಬಜೆಟ್‌ ಅನ್ನು ಪ್ರತಿವರ್ಷ ಫೆಬ್ರ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಏನಾಗಬಹುದು ಆಂಧ್ರದ DCM ಪವನ್ ಕಲ್ಯಾಣ್ ಸಿನಿಮಾ ಭವಿಷ್ಯ!?

ರಾಜಕೀಯ ಕೆಲಸಗಳ ಜೊತೆ ಪವನ್ ಕಲ್ಯಾಣ್ ಅವರ ಮುಂದಿನ ಸಿನಿಮಾ ಬಗ್ಗೆ ನಾನಾ ಊಹಾಪೋಹಗಳು ಹ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಬಕ್ರೀದ್ ಹಬ್ಬಕ್ಕೆ ಬಲಿ ನೀಡಿದ ಕುರಿ ಮೇಲೆ ‘ರಾಮ’ ಎಂದು ಬರಹ- ಮೂವರು ಅರೆಸ್ಟ್!

ಮುಂಬೈ: ಮುಂಬೈನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಆಘಾತಕಾರಿ ಘಟನೆ: ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿತ್ತು ಸತ್ತ ಹಾವು!

ಬಿಹಾರ: ಬಿಹಾರದ ಬಂಕಾದಲ್ಲಿ ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಪಶ್ಚಿಮ ಬಂಗಾಳದಲ್ಲಿ ಭೀಕರ ರೈಲು ದುರಂತ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಮತ್ತೊಂದು ಭೀಕರ ರೈಲು ಅಪಘಾತ: 5 ಜನರ ಸಾವು..! 30ಕ್ಕೂ ಹೆಚ್ಚು ಜನರಿಗೆ ಗಾಯ

ಕೋಲ್ಕತ್ತಾ: ಗೂಡ್ಸ್ ರೈಲೊಂದು ಎಕ್ಸ್‌ಪ್ರೆಸ್ ರೈಲಿಗೆ ಹಿಂಬದಿಯಿಂ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಹೊಟೇಲ್‌‌ʼಗೆ ಫ್ಯಾಮಿಲಿ ಜೊತೆ ಊಟಕ್ಕೆ ಬಂದ ವ್ಯಕ್ತಿ ಹೃದಯಾಘತ! ವಿಡಿಯೋ ವೈರಲ್

ಮಧ್ಯಪ್ರದೇಶ: ಹೃದಯಾಘಾತ ಎನ್ನುವುದು ಇತ್ತೀಚೆಗೆ ಶೀತ, ಜ್ವರದಷ್ಟೇ ಸಾಮಾನ್ಯ ಎನ್ನುವಂತ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಮತ್ತೊಮ್ಮೆ ಹಿಜಾಬ್ ಜಗಳ ಅರಂಭ.... ಹಿಜಾಬ್‌ಗೆ ಕಾಲೇಜಿನಲ್ಲಿ ಮತ್ತೆ ನಿಷೇಧ.. ಕೋರ್ಟ್ ಮೆಟ್ಟಿಲೇರಿದ ಮುಸ್ಲೀಂ ವಿದ್ಯಾರ್ಥಿನಿಯರು!

ಮುಂಬೈ: ಮತ್ತೊಮ್ಮೆ ಹಿಜಾಬ್ ಜಗಳ ಅರಂಭಗೊಂಡಿದೆ. ಮುಂಬೈನ ಚೆಂಬೂರ್... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1