ಎಲ್‌ಪಿಜಿ ಬಿಕ್ಕಟ್ಟಿಗೆ ಪರಿಹಾರ – ಕೇಂದ್ರದಿಂದ ಮಿನಿ ಗ್ಯಾಸ್ ಸಿಲಿಂಡರ್ ಯೋಜನೆ!

ನವದೆಹಲಿ: ಎಲ್‌ಪಿಜಿ ಬಿಕ್ಕಟ್ಟಿನ ನಡುವೆಯೇ ಸಾರ್ವಜನಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಮಿನಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಸಾಂಪ್ರದಾಯಿಕ ಗ್ಯಾಸ್ ಸಂಪರ್ಕವಿಲ್ಲದವರಿಗೂ ಸುಲಭವಾಗಿ ಗ್ಯಾಸ್ ಸಿಲಿಂಡರ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್ ಅಥವಾ ಇತರ ಮಾನ್ಯ ಗುರುತಿನ ದಾಖಲೆ ಸಲ್ಲಿಸುವ ಮೂಲಕ ಗ್ರಾಹಕರು ಮಿನಿ ಸಿಲಿಂಡರ್ ಖರೀದಿಸಬಹುದು. ಮಿನಿ ಸಿಲಿಂಡರ್ ಬೆಲೆ ಸುಮಾರು ₹1,581 ಆಗಿದ್ದು, 5 ಕೆಜಿ ಗ್ಯಾಸ್ ರೀಫಿಲ್ ₹600ಕ್ಕೆ ಲಭ್ಯವಿರುತ್ತದೆ. ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಈ ಯೋಜನೆ ಹೆಚ್ಚು ಉಪಯುಕ್ತವಾಗಲಿದೆ.

 

ಈ ಸಿಲಿಂಡರ್ ಒಂದನ್ನು ಸಾಮಾನ್ಯವಾಗಿ 15ರಿಂದ 20 ದಿನಗಳವರೆಗೆ ಬಳಸಬಹುದು ಎಂದು ಅಂದಾಜಿಸಲಾಗಿದೆ. ದಿನನಿತ್ಯದ ಅಗತ್ಯಗಳಿಗೆ ಇದು ಕೈಗೆಟುಕುವ ಹಾಗೂ ಅನುಕೂಲಕರ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಗ್ಯಾಸ್ ಲಭ್ಯತೆ ಕುರಿತು ದೂರುಗಳು ಹೆಚ್ಚಾಗಿವೆ. ಕೆಲವೆಡೆ ಕಾಳಸಂತೆ ಮಾರಾಟದ ಆರೋಪಗಳೂ ಕೇಳಿಬಂದಿವೆ. ಬಿಕ್ಕಟ್ಟಿನ ಹಿನ್ನೆಲೆ ಕೆಲ ಸಿಲಿಂಡರ್‌ಗಳ ಬೆಲೆ ₹6,000ರಿಂದ ₹7,000ವರೆಗೆ ಏರಿಕೆಯಾಗಿದೆ ಎಂಬ ವರದಿಗಳೂಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರ, ದೇಶದಲ್ಲಿ ಎಲ್‌ಪಿಜಿ, ಸಿಎನ್‌ಜಿ, ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ ಎಂದಿದೆ. ಆದರೆ ಅಂತರರಾಷ್ಟ್ರೀಯ ಪರಿಸ್ಥಿತಿಗಳ ಪರಿಣಾಮವಾಗಿ ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದೆ.

 

ಇರಾನ್ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಹಿನ್ನೆಲೆ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಿಲುಕಿರುವುದರಿಂದ ಅನಿಲ ಪೂರೈಕೆಗೆ ಅಡಚಣೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ, ಎಲ್‌ಪಿಜಿ ಬಿಕ್ಕಟ್ಟಿನ ಸಮಯದಲ್ಲಿ ಮಿನಿ ಗ್ಯಾಸ್ ಸಿಲಿಂಡರ್ ಯೋಜನೆ ಸಾರ್ವಜನಿಕರಿಗೆ ಪ್ರಮುಖ ಪರಿಹಾರವಾಗಿ ಪರಿಣಮಿಸುವ ನಿರೀಕ್ಷೆಯಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಬೆಂಗಳೂರು ನಗರ

ಒಂದೇ ದಿನದಲ್ಲಿ ಚಿನ್ನ ಬೆಲೆ ಏರಿಕೆ – ಖರೀದಿದಾರರಿಗೆ ತಲೆನೋವು

ಬೆಂಗಳೂರು: ಸತತ ಮೂರು ವಾರಗಳ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಚಿನ್ನದ ದರ ಇಳಿಕೆ – ಗ್ರಾಹಕರಿಗೆ ಸ್ವಲ್ಪ ನಿರಾಳತೆ!

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಟೋಲ್ ಪಾವತಿಯಲ್ಲಿ ದೊಡ್ಡ ಬದಲಾವಣೆ – ಏಪ್ರಿಲ್ 10ರಿಂದ ನಗದು ಸಂಪೂರ್ಣ ಬ್ಯಾನ್!

ನವದೆಹಲಿ: ದೇಶದ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಮಹತ್ವದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಗೋಲ್ಡ್-ಸಿಲ್ವರ್ ರೇಟ್ ಶಾಂತ: ಇಂದಿನ ದರಗಳ ವಿವರ

ಭಾರತ: ಕಳೆದ ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನ ಮತ್ತು ಬೆಳ್... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಹಳೆಯ ವಾಹನಗಳಿಗೆ HSRP ಕಡ್ಡಾಯ: ರಾಜ್ಯ ಸಾರಿಗೆ ಇಲಾಖೆಯ ಸ್ಪಷ್ಟನೆ

ಬೆಂಗಳೂರು: 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಾಯಿತವಾಗಿರುವ ಎಲ್... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ – ಇಂದು ₹200ರವರೆಗೆ ಜಿಗಿತ!

ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ನಿನ್ನ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1
ಬೆಂಗಳೂರು ನಗರ

ಐಪಿಎಲ್ ಪಂದ್ಯಕ್ಕೆ ಮೆಟ್ರೋ ಸೌಲಭ್ಯ ವಿಸ್ತರಣೆ: ಮಧ್ಯರಾತ್ರಿ 2ರವರೆಗೆ ಸೇವೆ!

ಬೆಂಗಳೂರು: ಐಪಿಎಲ್–2026 ಪಂದ್ಯಗಳ ಹಿನ್ನೆಲೆ, ಬಿಎಂಆರ್‌ಸಿಎಲ್ ನ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಮತ್ತೆ ಗ್ಯಾಸ್ ದರ ಏರಿಕೆ : ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಮತ್ತೊಂದು ಹೊಡೆತ

ದೆಹಲಿ: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ನಡುವೆ ಬಳಕೆದಾರ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1
ಬೆಂಗಳೂರು ನಗರ

ವಾಹನ ಸವಾರರಿಗೆ ರಿಲೀಫ್ : ಹೊರರಾಜ್ಯದಲ್ಲಿ ಇನ್ಮುಂದೆ ದಂಡ ಇಲ್ಲ!

ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದ್ದ ಪ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1
ರಾಮನಗರ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಏರಿಕೆ ಜಾರಿ

ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1