ಎಸ್‌ಎಸ್‌ಎಲ್‌ಸಿ ಅಂಕಪದ್ದತಿಯಲ್ಲಿ ದೊಡ್ಡ ಬದಲಾವಣೆ: ಈ ವರ್ಷದಿಂದ SSLC ಪರೀಕ್ಷೆ ಅಂಕ 625 ಅಲ್ಲ 525 ಮಾತ್ರ! ಹಿಂದಿ ಅಂಕಕ್ಕೆ ಕೋಕ್
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಎಂಬ ಬೇಡಿಕೆಗಳ ಹಿನ್ನೆಲೆ, ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೊಸ ನಿಯಮದ ಪ್ರಕಾರ, ತೃತೀಯ ಭಾಷೆಗಳಾದ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ ವಿಷಯಗಳ ಅಂಕಗಳನ್ನು ಒಟ್ಟು ಫಲಿತಾಂಶದಲ್ಲಿ ಪರಿಗಣಿಸಲಾಗುವುದಿಲ್ಲ. ಬದಲಾಗಿ, ಈ ವಿಷಯಗಳಿಗೆ A, B, C, D ಗ್ರೇಡ್ ನೀಡಲಾಗುತ್ತದೆ. ಆದರೆ, ತೃತೀಯ ಭಾಷೆ ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿಯೇ ಮುಂದುವರಿಯಲಿದೆ.
ಪ್ರಸ್ತುತ ನಡೆಯುತ್ತಿರುವ ಪರೀಕ್ಷೆಗಳ ನಡುವೆಯೇ ಈ ಬದಲಾವಣೆ ಘೋಷಿಸಲಾಗಿದ್ದು, ಹೊಸ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ತ್ರಿಭಾಷಾ ನೀತಿ ಮುಂದುವರಿದರೂ, ಮೌಲ್ಯಮಾಪನ ವಿಧಾನದಲ್ಲಿ ಈ ಬದಲಾವಣೆ ತರಲಾಗಿದೆ. ಇದುವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 625 ಅಂಕಗಳಿಗೆ ನಡೆಯುತ್ತಿತ್ತು. ಈಗ ತೃತೀಯ ಭಾಷೆಯ 100 ಅಂಕಗಳನ್ನು ಹೊರಗಿಡಲಾಗುವುದರಿಂದ, ವಿದ್ಯಾರ್ಥಿಗಳ ಅಂತಿಮ ಫಲಿತಾಂಶವನ್ನು 525 ಅಂಕಗಳ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆಯಾಗಲಿದೆ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ. ಉಳಿದ ತರಗತಿಗಳಲ್ಲಿಯೂ ಇದೇ ಮಾದರಿಯನ್ನು ಜಾರಿಗೆ ತರಬೇಕೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗಳೂರು
600/600 ಅಂಕ, ನೋವಿನ ನಡುವೆಯೂ ಶಿಖರ: ತಾಯಿಯನ್ನು ಕಳೆದುಕೊಂಡರೂ ರಾಜ್ಯ ಪ್ರಥಮ ಸ್ಥಾನ ಪಡೆದ ದಿಶಾ
ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವ... ಓದನ್ನು ಮುಂದುವರಿಸಿ
ಈ ವರ್ಷ ಪಿಯುಸಿ ಫಲಿತಾಂಶದಲ್ಲಿ ಭಾರೀ ಏರಿಕೆ – ಶಿಕ್ಷಣ ಸಚಿವರ ಸಂತಸ
ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಮಧ್ಯ... ಓದನ್ನು ಮುಂದುವರಿಸಿ
2nd PUC ಫಲಿತಾಂಶ ಪ್ರಕಟ – ಫೇಲ್ ಆದವರಿಗೆ ಮತ್ತೊಂದು ಚಾನ್ಸ್, ಪರೀಕ್ಷೆ-2 ದಿನಾಂಕ ಘೋಷಣೆ!
ಬೆಂಗಳೂರು: 2025-26ನೇ ಸಾಲಿನ ಕರ್ನಾಟಕದ ದ್ವಿತೀಯ ಪಿಯುಸಿ ಮೊದಲ... ಓದನ್ನು ಮುಂದುವರಿಸಿ
ಮಂಗಳೂರು
2nd PUC ಟಾಪರ್ ದಿಶಾ : 600ಕ್ಕೆ 600 ಅಂಕ: ದಕ್ಷಿಣ ಕನ್ನಡದ ದಿಶಾ ರಾಜ್ಯ ಟಾಪರ್
ಮಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ... ಓದನ್ನು ಮುಂದುವರಿಸಿ
ಕರ್ನಾಟಕ 2nd PUC ಫಲಿತಾಂಶ ಪ್ರಕಟ: 7 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯ ಫಲಿ... ಓದನ್ನು ಮುಂದುವರಿಸಿ
ಪಿಯುಸಿ ಫಲಿತಾಂಶ ವಿಳಂಬ – ವಿದ್ಯಾರ್ಥಿಗಳಿಗೆ ನಿರಾಸೆ, ಏಪ್ರಿಲ್ 9ಕ್ಕೆ ಸಾಧ್ಯತೆ
ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ... ಓದನ್ನು ಮುಂದುವರಿಸಿ
ಇಂದು ದ್ವಿತೀಯ ಪಿಯುಸಿ ಫಲಿತಾಂಶ? ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಕುತೂಹಲ
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್... ಓದನ್ನು ಮುಂದುವರಿಸಿ
2ನೇ ಪಿಯುಸಿ ಫಲಿತಾಂಶ ಮುಂದೂಡಿಕೆ – ನಾಳೆ ಪ್ರಕಟವಾಗುವುದಿಲ್ಲ!
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದ ದ್ವ... ಓದನ್ನು ಮುಂದುವರಿಸಿ
ಹೊಸ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ನಿಯಮ: ಸ್ವಂತ ಜಾಗ ಅಥವಾ 15 ವರ್ಷ ಲೀಸ್ ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ಹೊಸ ಖಾಸಗಿ ಶಾಲೆಗಳ ಆರಂಭ, ಮಾನ್ಯತೆ ಮತ್... ಓದನ್ನು ಮುಂದುವರಿಸಿ
ಪೋಷಕರಿಗೆ ಗುಡ್ ನ್ಯೂಸ್: ಒಂದನೇ ತರಗತಿಯ ದಾಖಲೆಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ
ಬೆಂಗಳೂರು: ರಾಜ್ಯ ಸರ್ಕಾರವು 2026-27ನೇ ಶೈಕ್ಷಣಿಕ ವರ್ಷದಲ್ಲಿ ಒ... ಓದನ್ನು ಮುಂದುವರಿಸಿ