ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ಬಲಗೈ ಜಾತಿಗಳ ಒಕ್ಕೂಟ ನಾಮಕರಣ – ಪದಾಧಿಕಾರಿಗಳ ಆಯ್ಕೆ.
ಗುಡಿಬಂಡೆ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಬಲಗೈ ಜಾತಿಗಳ ಒಕ್ಕೂಟದ ನಾಮಕರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಲವಾದಿ ಮಹಾಸಭಾ, ವಲಯ ಒಕ್ಕೂಟ, ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳನ್ನು ಒಂದೇ ಛತ್ರದಡಿ ಒಗ್ಗೂಡಿಸುವ ಉದ್ದೇಶದಿಂದ, ಶ್ರೀ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳ ತೀರ್ಮಾನದಂತೆ “ಬಲಗೈ ಜಾತಿಗಳ ಒಕ್ಕೂಟ” ಎಂಬ ನಾಮಕರಣ ಮಾಡಲಾಗಿದೆ ಎಂದು ಜಿಲ್ಲಾ ಸಮಿತಿ ಸಲಹಾ ಸಮಿತಿ ಸದಸ್ಯರಾದ ವೆಂಕಟರಮಣಪ್ಪ ಅವರು ತಿಳಿಸಿದರು.
ನಂತರ ಮಾತನಾಡಿದ ಏಡ ಕೊಂಡ್ಲು ಶ್ರೀನಿವಾಸ್ ಅವರು, ಸಂಘದ ಎಲ್ಲಾ ಮುಖಂಡರು ನಿಷ್ಠೆಯಿಂದ ಶ್ರಮಿಸಬೇಕಾಗಿದೆ. ಸಂಘದ ವ್ಯಾಪ್ತಿಯಲ್ಲಿ ಇರುವ ಬಡವರಿಗೆ ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳಿದ್ದಲ್ಲಿ, ಸಂಘದ ಟ್ರಸ್ಟ್ ಮೂಲಕ ಅಗತ್ಯ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಸಿ. ಚಿಕ್ಕನರಸಮ್ಮಪ್ಪ ಅವರು, ತಾಲೂಕಿನಲ್ಲಿನ ಎಲ್ಲಾ ಸಮಸ್ಯೆಗಳನ್ನು ಗುರುತಿಸಿ ಬಡವರಿಗೆ ನೆರವು ನೀಡಲಾಗುವುದು. ಸಂಘದ ಅಭಿವೃದ್ಧಿಗೆ ಸಂಪೂರ್ಣವಾಗಿ ಬದ್ಧನಾಗಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲೇ ಬಲಗೈ ಜಾತಿಗಳ ಒಕ್ಕೂಟದ ಪದಾಧಿಕಾರಿಗಳನ್ನು ಜಿಲ್ಲಾ ಸಮಿತಿಯ ಸಮ್ಮುಖದಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ತಾಲೂಕು ಅಧ್ಯಕ್ಷರಾಗಿ ಎಂ.ಸಿ. ಚಿಕ್ಕನರಸಮ್ಮಪ್ಪ,
ತಾಲೂಕು ಗೌರವಾಧ್ಯಕ್ಷರಾಗಿ ವೆಂಕಟನಾರಾಯಣಪ್ಪ,
ತಾಲೂಕು ಕಾರ್ಯಾಧ್ಯಕ್ಷರಾಗಿ ಓ. ಶ್ರೀನಿವಾಸ,
ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ (ಬೀಚಗಾನಹಳ್ಳಿ),
ಖಜಾಂಚಿಯಾಗಿ ಕೆ. ಗಂಗರಾಜು ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರಮೇಶ್ ಬಾಬು, ರಾಮಾಂಜಿನಪ್ಪ ಎನ್, ರಾಜಗೋಪಾಲ್, ಅಶ್ವತಪ್ಪ ಹಾಗೂ ಬಾವಣ್ಣ,
ಸಂಘಟನೆಯ ಕಾರ್ಯದರ್ಶಿಗಳಾಗಿ ಶ್ರೀನಿವಾಸ್, ರಾಜು, ಶಿವರಾಂ ಹಾಗೂ ಗಂಗರಾಜು ಅವರನ್ನು ಆಯ್ಕೆ ಮಾಡಲಾಯಿತು.
(ವರದಿ ನಾಸೀರ್ ಗುಡಿಬಂಡೆ )
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಡಿಕೆಶಿಗೆ ಸಿಎಂ ಸ್ಥಾನ ಕಲ್ಪಿಸಬೇಕು: ಶಾಸಕ ಇಕ್ಬಾಲ್ ಹುಸೇನ್ ಒತ್ತಾಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ಕೆಂಪೇಗೌಡ ವಿಮಾನ ನಿಲ್ದಾಣದ ವ್ಯಾಪ್ತಿಗೆ ಏರ್ ಬಲೂನ್ ಪ್ರವೇಶ; ಪ್ರಕರಣ ದಾಖಲು
ದೇವನಹಳ್ಳಿ: ಹೊಸಕೋಟೆ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ... ಓದನ್ನು ಮುಂದುವರಿಸಿ
ಚಾಮುಂಡೇಶ್ವರಿ ಜೆಡಿಎಸ್ ಶಾಸಕರ ಜಿ.ಟಿ. ದೇವೇಗೌಡಿಗೆ ಪಕ್ಷದ ಬಾಗಿಲು ಬಂದ್ – ಎಚ್.ಡಿ. ಕುಮಾರಸ್ವಾಮಿ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.... ಓದನ್ನು ಮುಂದುವರಿಸಿ
ಮೈಸೂರಿನ ಮೃಗಾಲಯದಲ್ಲಿ ದುಃಖ: 10 ವರ್ಷದ ಜೀಬ್ರಾ ‘ಪ್ರಾಚಿ’ ನಿಧನ
ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 10 ವರ್ಷದ ಹ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಮೆಟ್ರೋ ದರ ಏರಿಕೆ – ಡಿಕೆ ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ: ಮೆಟ್ರೋ ದರ ಏರಿಕೆ ವಿಚಾರದಲ್ಲ... ಓದನ್ನು ಮುಂದುವರಿಸಿ
ಹಕ್ಕಿ ಜ್ವರ ಭೀತಿ – ಕರ್ನಾಟಕದಲ್ಲಿ ಎಚ್ಚರಿಕೆ ಘೋಷಣೆ
ಬೆಂಗಳೂರು: ಹತ್ತಿರದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳ... ಓದನ್ನು ಮುಂದುವರಿಸಿ
ಕರಾವಳಿ, ಉತ್ತರ–ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರಿಕೆ – ತೀವ್ರ ಚಳಿ ಎಚ್ಚರಿಕೆ
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡು ಭಾಗಗಳಲ್... ಓದನ್ನು ಮುಂದುವರಿಸಿ
ವಿಜಯನಗರದಲ್ಲಿ ಬಿಎಂಟಿಸಿ ಬಸ್ ಅಪಘಾತ – ಬ್ರೇಕ್ ಫೇಲ್‌ನಿಂದ ಆಟೋ, ಬೈಕ್‌ಗೆ ಡಿಕ್ಕಿ
ಬೆಂಗಳೂರು: ನಗರದಲ್ಲಿ ಮತ್ತೊಂದು ಬಿಎಂಟಿಸಿ ಬಸ್ ಅಪಘಾತ ಸಂ... ಓದನ್ನು ಮುಂದುವರಿಸಿ
ಅಪ್ರಾಪ್ತೆಗೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ – ಅಪರಾಧಿಗಳಿಗೆ ಗಲ್ಲು ಶಿಕ್ಷೆ ದೃಢೀಕರಿಸಿದ ಹೈಕೋರ್ಟ್
ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಸಾಮೂಹಿಕ ಅತ್ಯಾಚಾರ ಎಸಗಿ... ಓದನ್ನು ಮುಂದುವರಿಸಿ
ಬೆಂಗಳೂರಿನಲ್ಲಿ ಕನ್ನಡ ಉಳಿದರೆ, ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ – ಎಂ. ಪ್ರಕಾಶ ಮೂರ್ತಿ
ಕೆ.ಆರ್.ಪುರ : ಬೆಂಗಳೂರು ನಗರದಲ್ಲಿ ಕನ್ನಡ ಉಳಿದರೆ ಮಾತ್ರ ಕರ್ನಾ... ಓದನ್ನು ಮುಂದುವರಿಸಿ