ಗ್ಯಾಸ್ ಸಿಲಿಂಡರ್ ಕೊರತೆ ನಡುವೆ ಕಳ್ಳತನ - ಕಮರ್ಷಿಯಲ್ ಮತ್ತು ಶಾಲಾ ಗ್ಯಾಸ್ ಸಿಲಿಂಡರ್ ಕಳ್ಳತನ : ಸಾರ್ವಜನಿಕರಲ್ಲಿ ಭೀತಿ”
ಬೀದರ್: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗುತ್ತಿರುವಾಗ, ಸಿಲಿಂಡರ್ ಕಳ್ಳತನ ಪ್ರಕರಣಗಳು ಕೂಡ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿದೆ. ಬೆಂಗಳೂರಿನ ವಿವಿಧ ಜಿಲ್ಲೆಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಾಗದೆ, ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ; ಹಲವೆಡೆ ಹೋಟೆಲ್‌ಗಳು ತಾತ್ಕಾಲಿಕವಾಗಿ ಬೀಗ ಹಾಕುವ ಪರಿಸ್ಥಿತಿಯಲ್ಲಿವೆ.
ಈ ನಡುವೆ, ಬೀದರ್ ಜಿಲ್ಲೆಯ ಹುಲಸೂರು ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಡುಗೆಗೆ ಬಳಸುತ್ತಿದ್ದ 6 ಗ್ಯಾಸ್ ಸಿಲಿಂಡರ್‌ಗಳನ್ನು ಕಳ್ಳರು ಅಡುಗೆಕೋಣೆ ಬೀಗ ಮುರಿದು ಹೊತ್ತೊಯ್ದ ಘಟನೆ ನಡೆದಿದೆ. ಈ ಸಂಬಂಧ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ, ಭಾಲ್ಕಿ ಪ್ರದೇಶದಲ್ಲಿ ಮಲ್ಲಿಕಾರ್ಜುನ ಕಂಟೆಪ್ಪಾ ಎಂಬ ವ್ಯಕ್ತಿ ಸಿಲಿಂಡರ್ ಖರೀದಿಸಲು ಗೋದಾಮಿಗೆ ಹೋಗಿದಾಗ, ಅಪರಿಚಿತ ವ್ಯಕ್ತಿ ಸಿಲಿಂಡರ್ ಕದ್ದು ಪರಾರಿಯಾಗಿದ್ದರು. ಈ ಪ್ರಕರಣದಲ್ಲೂ ಭಾಲ್ಕಿ ಪೊಲೀಸ್ ತನಿಖೆ ಆರಂಭಿಸಿದೆ. ಅದರ ಜೊತೆಗೆ, ಬೆಂಗಳೂರಿನ ಬೇಗೂರು ವ್ಯಾಪ್ತಿಯ ಆರ್.ಸಿ ಲೇಔಟ್‌ನ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ಯುಗಾದಿ ದಿನ ಇಬ್ಬರು ಖದೀಮರು ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದು ಬೇಸ್‌ಮೆಂಟ್‌ನಲ್ಲಿದ್ದ ಎರಡು ಸಿಲಿಂಡರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಗ್ಯಾಸ್ ಕೊರತೆ ಮಧ್ಯೆ ಈ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಭಯ ಮತ್ತು ಆತಂಕ ಮೂಡಿಸುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
"ದಾವಣಗೆರೆ ಉಪಚುನಾವಣೆ: ‘ಕಾಂಗ್ರೆಸ್ ಗೆಲುವು ಖಚಿತ, ಜನರ ವಿಶ್ವಾಸದ ಫಲ’" -ಸಿದ್ದರಾಮಯ್ಯ
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ವಿಧಾನ... ಓದನ್ನು ಮುಂದುವರಿಸಿ
"ಇದು ಧರ್ಮ-ಅಧರ್ಮ, ಸತ್ಯ-ಸುಳ್ಳು ನಡುವಿನ ಚುನಾವಣೆಯಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್"
ಬಾಗಲಕೋಟೆ, ಮಾ. 23: ಉಪಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ... ಓದನ್ನು ಮುಂದುವರಿಸಿ
“ದಾವಣಗೆರೆ ರಾಜಕೀಯ ರಣಕಣ ತೀವ್ರ : ಪಕ್ಷಗಳು ಮತದಾರರ ಗಮನ ಸೆಳೆಯಲು ಶಕ್ತಿಪ್ರದರ್ಶನ
ದಾವಣಗೆರೆ: ದಾವಣಗೆರೆ ಕ್ಷೇತ್ರದಲ್ಲಿ ಚುನಾವಣೆ ಕಣ ದಿನದಿಂದ ದಿನಕ... ಓದನ್ನು ಮುಂದುವರಿಸಿ
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಸಮಾಧಾನ, ಸಿಎಂ ಸಿದ್ಧರಾಮಯ್ಯ ಮತ್ತು ಶಾಮನೂರು ಕುಟುಂಬ ಟಾರ್ಗೆಟ್”
ಚಿತ್ರದುರ್ಗ: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮ... ಓದನ್ನು ಮುಂದುವರಿಸಿ
ಹರಪನಹಳ್ಳಿ
ತುಂಗಭದ್ರೆಯಲ್ಲಿ ದಾರುಣ ದುರಂತ: ತಂದೆಯ ಕಣ್ಣು ಮುಂದೆ ಇಬ್ಬರು ಸಹೋದರರು ನೀರಿನಲ್ಲಿ ಸಿಲುಕಿ ಮೃತ
ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್... ಓದನ್ನು ಮುಂದುವರಿಸಿ
“ಸಚಿವ ಖಂಡ್ರೆ ಮತ್ತು ಸಿಎಂ ಕನಸು: ಹುಲಸೂರ ಶ್ರೀಗಳ ಭವಿಷ್ಯ ಏನು ಹೇಳುತ್ತಿದೆ?”
ಬೀದರ್: ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗ... ಓದನ್ನು ಮುಂದುವರಿಸಿ
“ಬಿಯರ್ ಕುಡಿಯುತ್ತಾ ಟ್ರಿಪಲ್ ರೈಡಿಂಗ್: ಮೋಜು-ಮಸ್ತಿಯಿಂದ ಮೂವರು ಯುವಕರ ಹುಚ್ಚಾಟ, ಪೊಲೀಸ್ ತನಿಖೆ ಶುರು” 🚨🏍️
ಬೆಂಗಳೂರು: ಬೆಂಗಳೂರಿನ ಬಿಟಿಎಂ ಲೇಔಟ್ ರಸ್ತೆಯಲ್ಲಿ ನಿನ್ನೆ ರಾತ್... ಓದನ್ನು ಮುಂದುವರಿಸಿ
ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ದಿಢೀರ್ ಸಚಿವ ಶಿವರಾಜ್ ತಂಗಡಗಿಗೆ ಎದೆ ನೋವು ಸಿದ್ಧಗಂಗಾ ಆಸ್ಪತ್ರೆಯಲ್ಲಿ ತಪಾಸಣೆ
ತುಮಕೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗ... ಓದನ್ನು ಮುಂದುವರಿಸಿ
ಪ್ರವೇಶ ನಿಷೇಧ ಉಲ್ಲಂಘನೆ - ಪೊಲೀಸರೊಂದಿಗೆ ವಾಗ್ವಾದ ಬಳಿಕ ಬೆಟ್ಟ ಏರಿದ ಪುನೀತ್ ಕೆರಹಳ್ಳಿ
ಕೊಪ್ಪಳ: ಜಿಲ್ಲೆಯಲ್ಲಿನ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದ... ಓದನ್ನು ಮುಂದುವರಿಸಿ
ಉಡುಪಿ ರಾಜಕೀಯ ತೀವ್ರ: ಯಶ್ ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ಗಂಭೀರ ಆರೋಪ
ಉಡುಪಿ: ಜಿಲ್ಲೆಯ ರಾಜಕೀಯದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ... ಓದನ್ನು ಮುಂದುವರಿಸಿ