ಗ್ಯಾಸ್ ಸಿಲಿಂಡರ್ ಸಿಗದೆ ಸಂಕಷ್ಟ: ಹೋಟೆಲ್‌ಗಳಲ್ಲಿ ಹಳೆಯ ಕಾಲದ ಸೌದೆ ಒಲೆ
ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಎದುರಾಗಿದ್ದು, ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇರಾನ್–ಇಸ್ರೇಲ್ ಸಂಘರ್ಷ ಹಿನ್ನೆಲೆ ಪೆಟ್ರೋಲಿಯಂ ಉತ್ಪನ್ನಗಳ ಆಮದಿನಲ್ಲಿ ವ್ಯತ್ಯಯ ಉಂಟಾಗಿ, ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಬಹುತೇಕ ಶೂನ್ಯಕ್ಕೇರಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ದೊರೆಯದ ಕಾರಣ, ಅಡುಗೆ ಮನೆಯ ಹೈಟೆಕ್ ಸ್ಟೌವ್‌ಗಳು ಇದೀಗ ಬಳಕೆಯಿಲ್ಲದೆ ಮೂಲೆ ಸೇರಿವೆ. ಹೋಟೆಲ್ ಉದ್ಯಮವನ್ನು ಮುಂದುವರಿಸಲು ಮಾಲೀಕರು ಹಳೆಯ ಕಾಲದ ಸೌದೆ ಒಲೆಗಳ ಮೊರೆ ಹೋಗಿದ್ದಾರೆ.
ಮಾಹಿತಿಯ ಪ್ರಕಾರ, ಹಲವರು ಟ್ರಕ್‌ಗಳ ಮೂಲಕ ಸೌದೆಯನ್ನು ತರಿಸಿಕೊಳ್ಳುತ್ತಿದ್ದು, ಒಬ್ಬೊಬ್ಬ ಹೋಟೆಲ್ ಮಾಲೀಕರು 10ರಿಂದ 15 ಕ್ವಿಂಟಾಲ್‌ವರೆಗೆ ಸೌದೆಯನ್ನು ಸಂಗ್ರಹ ಮಾಡಿಕೊಂಡಿದ್ದಾರೆ.
ಹೋಟೆಲ್‌ಗಳ ಹಿತ್ತಲಲ್ಲಿ ಅಥವಾ ಅಡುಗೆ ಮನೆಯ ಒಂದು ಭಾಗದಲ್ಲಿ ದೊಡ್ಡ ಸೌದೆ ಒಲೆಗಳನ್ನು ನಿರ್ಮಿಸಿ, ಅಲ್ಲಿಯೇ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ತಯಾರಿಸಲಾಗುತ್ತಿದೆ. ಗ್ಯಾಸ್ ಸರಬರಾಜು ಸಮಸ್ಯೆ ಮುಂದುವರಿದರೆ ಹೋಟೆಲ್ ಉದ್ಯಮಕ್ಕೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು, ಕುದುರೆ ವ್ಯಾಪಾರದಲ್ಲಿ ಖ್ಯಾತ” - ಡಿಸಿಎಂ ಡಿ.ಕೆ. ಶಿವಕುಮಾರ್”
ಬೆಂಗಳೂರು: ವಿಧಾನಸೌಧದ ಆವರಣ ಹಾಗೂ ಬಿಡದಿಯ ರೆಸಾರ್ಟ್‌ನಲ್ಲಿ ಮಾಧ... ಓದನ್ನು ಮುಂದುವರಿಸಿ
“ನಾವು ಯಾರ ಪರದಲ್ಲಿದ್ದೇವೆ ಎಂಬ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯ”
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಮಾಧ್ಯಮ ಅಕಾಡೆಮ... ಓದನ್ನು ಮುಂದುವರಿಸಿ
ಎಲ್‌ಪಿಜಿ ಸಮಸ್ಯೆ ಕರ್ನಾಟಕಕ್ಕೆ ಮಾತ್ರವಲ್ಲ, ಎಲ್ಲಾ ರಾಜ್ಯಗಳಿಗೆ ಇದೆ - ಬಸವರಾಜ ಬೊಮ್ಮಾಯಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ರ... ಓದನ್ನು ಮುಂದುವರಿಸಿ
ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ರದ್ದುಮಾಡಿ – ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲು
ಬೆಂಗಳೂರು: ವಿಧಾನಸಭೆಯಲ್ಲಿ 2026–27ನೇ ಸಾಲಿನ ಬಜೆಟ್ ಚರ್ಚೆಯ ವೇ... ಓದನ್ನು ಮುಂದುವರಿಸಿ
ಪಶ್ಚಿಮ ಏಷ್ಯಾದ ಸಂಘರ್ಷ: ಕರ್ನಾಟಕ ರಾಜ್ಯ ಪ್ರವಾಸಿಗರ ಆರಾಮಕ್ಕೆ ಪೂರ್ವಪ್ರಯತ್ನ
ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆ... ಓದನ್ನು ಮುಂದುವರಿಸಿ
ಭಿಕ್ಷಾಟನೆ ಮಾಫಿಯಾದ ಬಗ್ಗೆ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಬೆಂಗಳೂರು: ನಗರದಲ್ಲಿ ಭಿಕ್ಷಾಟನೆ ನಡೆಸುವ ಮಾಫಿಯಾ ಸಕ್ರಿಯವಾಗಿದೆ... ಓದನ್ನು ಮುಂದುವರಿಸಿ
ಎಲ್‌ಪಿಜಿ ಕಾಳಸಂತೆ ಮಾರಾಟದ ಮೇಲೆ ಗೃಹ ಸಚಿವ ಎಚ್ಚರಿಕೆ
ಬೆಂಗಳೂರು: ನಗರದ ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಮಾರಾಟ ಮಾಡ... ಓದನ್ನು ಮುಂದುವರಿಸಿ
ಎಸ್ಸಿ, ಎಸ್ಟಿ ಒಳಮೀಸಲಾತಿ ಜಾರಿಗೆ ಆಗ್ರಹ – ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಎಸ್ಸಿ-ಎಸ್ಟಿ ಒಳಮೀಸಲಾತಿ ಜಾರಿಗೆ ಹೆಚ್ಚ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸಿನ ತಾತ್ಕಾಲಿಕ ಕೊರತೆ – ಒಂದು ವಾರದಲ್ಲಿ ಸುಧಾರಣೆ ನಿರೀಕ್ಷೆ
ಬೆಂಗಳೂರು: ಕರ್ನಾಟಕದಲ್ಲಿ ಕಮರ್ಷಿಯಲ್ ಗ್ಯಾಸಿನ ಪೂರೈಕೆ ಸಮಸ್ಯೆ... ಓದನ್ನು ಮುಂದುವರಿಸಿ
ಮದ್ದೂರು
ಪರಿಶಿಷ್ಟ ಜಾತಿ ಕುಟುಂಬಕ್ಕೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ – ತಾರತಮ್ಯ ಅಡ್ಡಿ ನಿವಾರಣೆ
ಮಂಡ್ಯ: ಮಂಡ್ಯದ ಮದ್ದೂರು ತಾಲ್ಲೂಕಿನ ಹುಲಿಕೆರೆ ಗ್ರಾಮದ ಬಸವೇಶ್ವ... ಓದನ್ನು ಮುಂದುವರಿಸಿ