ಹುಳಿಯಾರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು: ಕಾಂತರಾಜು ಪ್ರಕರಣ ಸಿಐಡಿಗೆ ಹಸ್ತಾಂತರ
ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತರಲಾಗಿದ್ದ ಆರು ಮಂದಿಯಲ್ಲಿ ಒಬ್ಬರಾದ ಕಾಂತರಾಜು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿ ಮೃತನ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದೆ. ಮೃತ ಕಾಂತರಾಜು ಅವರು ಚಿಕ್ಕನಾಯಕನಹಳ್ಳಿ ತಾಲೂಕಿನ ಯಳನಾಡು ಗ್ರಾಮದ ನಿವಾಸಿಯಾಗಿದ್ದಾರೆ.
ಕಾಂತರಾಜು ಅವರ ಜೊತೆ ಇದ್ದ ಪ್ರದೀಪ್ ಅವರ ಪ್ರಕಾರ, ಜೂಜಾಟದಲ್ಲಿ ಭಾಗಿಯಾಗದಿದ್ದರೂ ಅವರನ್ನು ಠಾಣೆಗೆ ಕರೆತರಲಾಗಿತ್ತು. ಠಾಣೆಗೆ ಬಂದಾಗ ಕಾಂತರಾಜು ಸುಸ್ತಾಗಿದ್ದರೂ, ಅವರ ಆರೋಗ್ಯದ ಬಗ್ಗೆ ಪೊಲೀಸರು ಗಮನ ಹರಿಸಲಿಲ್ಲ ಎಂದು ಆರೋಪಿಸಲಾಗಿದೆ.
ಇದಲ್ಲದೆ, ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಬಳಿಕ ಠಾಣೆಯಿಂದ ಹೊರಬರುವ ವೇಳೆ ಕಾಂತರಾಜು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿ ಕುಟುಂಬಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮೃತನ ಪತ್ನಿ ಹಾಗೂ ಮಕ್ಕಳು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಮೃತನ ಮಗಳು ನಂದಿತಾ ಹಾಗೂ ಮಗ ತಿಲಕ್ ಗೌಡ, ಸಂಬಂಧಿತ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಹುಳಿಯಾರು ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬರುವ ನಿರೀಕ್ಷೆಯಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಗಬ್ಬೆದ್ದು ನಾರುತಿರುವ ಚರಂಡಿ
ತುಮಕೂರು : ಜಿಲ್ಲೆ, ತುಮಕೂರು ತಾಲೂಕಿನ ಕೋರ ಹೋಬಳಿಯ ಚಿಕ್ಕತೊಟ್ಲ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅಡವಿಸೋಮಾಪುರ ದನಗಳ ನೀರಿನ ತೊಟ್ಟಿ ಸ್ವಚ್ಛತೆ ಆರಂಭ: ಸುದ್ದಿ ಹಿನ್ನಲೆ ಗ್ರಾಮಸ್ಥರಿಗೆ ಸಿಕ್ಕ ಫಲ.!!
ಶಿಗ್ಗಾಂವಿ : ಕುನ್ನೂರ ಪಂಚಾಯಿತಿ ವ್ಯಾಪ್ತಿಯ ಅಡವಿಸೋಮಾಪುರ ಗ್ರಾ... ಓದನ್ನು ಮುಂದುವರಿಸಿ
ದೇವನಹಳ್ಳಿ
ದುಬೈನಿಂದ 200ಕ್ಕೂ ಹೆಚ್ಚು ಕನ್ನಡಿಗರು ಸುರಕ್ಷಿತವಾಗಿ ದೇವನಹಳ್ಳಿಗೆ ವಾಪಸ್
ಬೆಂಗಳೂರು ಗ್ರಾಮಾಂತರ : ಇತ್ತೀಚೆಗೆ ದುಬೈನಿಂದ 200ಕ್ಕೂ ಹೆಚ್ಚು... ಓದನ್ನು ಮುಂದುವರಿಸಿ
ಕೊಪ್ಪಳ ಪ.ಪಂ ಸಭೆ ಗಲಾಟೆ : ಸದಸ್ಯರ, ಪತ್ರಕರ್ತರ ಮೇಲೆ ಗುಂಪಿನ ಹಲ್ಲೆ ಯತ್ನ
ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅಡವಿಸೋಮಾಪುರದಲ್ಲಿ ದನಗಳ ನೀರಿನ ತೊಟ್ಟಿ ನಿರ್ಲಕ್ಷ್ಯ: ಗ್ರಾಮಸ್ಥರ ಆಕ್ರೋಶ
ಶಿಗ್ಗಾಂವಿ: ಕುನ್ನೂರ ಪಂಚಾಯತಿಯ ವ್ಯಾಪ್ತಿಯ ಅಡವಿಸೋಮಾಪುರ ಗ್ರಾಮ... ಓದನ್ನು ಮುಂದುವರಿಸಿ
ಮಾಹಿತಿ ತಡಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ₹50,000 ದಂಡ”
ಕಲಬುರಗಿ: ಮಾಹಿತಿ ಹಕ್ಕು ಅಧಿನಿಯಮ, 2005 ರ ಕಲಂ 18(3) ಮತ್ತು 2... ಓದನ್ನು ಮುಂದುವರಿಸಿ
4 ಗ್ರಾಮ ಪಂಚಾಯಿತಿಗಳನ್ನು ಕೈ ಬಿಡದಿದ್ದರೆ ಗೆಜ್ಜಲಗೆರೆದಿಂದ ವಿಧಾನಸೌಧದವರೆಗೆ ಪಾದಯಾತ್ರೆ – ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ
ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮದ್ದೂರು ನಗರಸಭೆಯ... ಓದನ್ನು ಮುಂದುವರಿಸಿ
ಮುಂಬರುವ ಪಂಚಾಯತ್ ಚುನಾವಣೆಗಳಿಗೆ ತಂತ್ರ: ‘ಯಡಿಯೂರಪ್ಪೋತ್ಸವ’ ಮೂಲಕ ಒಂದೇ ಕಲ್ಲಲ್ಲಿ ಎರಡು ಗುರಿ..!
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ‘ರಾಜಾಹುಲ... ಓದನ್ನು ಮುಂದುವರಿಸಿ
ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ; ಗುರಿ ಸಾಧನೆ ವಿಫಲವಾದರೆ ಕ್ರಮ
ವಿಜಯಪುರ : ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಗ್ರಾಮೀಣಾಭಿವ... ಓದನ್ನು ಮುಂದುವರಿಸಿ
ಕುಮಟಾ
ಕುಮಟಾ: ಮಿರ್ಜಾನ ಕೋಟೆ ರಸ್ತೆಯಲ್ಲಿ ಗೇಟ್ ಅಳವಡಿಸುವ ಪರಿಸ್ಥಿತಿಗೆ ಗ್ರಾಮಸ್ಥರ ಮತ್ತು ಮಾಧ್ಯಮ ಹೋರಾಟಕ್ಕೆ ಜಯ
ಕುಮಟಾ: ಐತಿಹಾಸಿಕ ಮಿರ್ಜಾನ ಕೋಟೆ ಬಳಿ ಛತ್ರಕೂರ್ವೆ ಗ್ರಾಮ ಸಂಪರ್... ಓದನ್ನು ಮುಂದುವರಿಸಿ