ಇಸ್ರೇಲ್–ಅಮೆರಿಕ ದಾಳಿ: ಇರಾನ್ ಟಾಪ್ ನಾಯಕರ ಹತ್ಯೆ, ಮಧ್ಯಪ್ರಾಚ್ಯ ಉಡೀಸ್

ಮಧ್ಯಪ್ರಾಚ್ಯ: ಇರಾನ್ ಸೂಪ್ರೀಂ ನಾಯಕ ಅಲಿ ಖಮೇನಿ ಹತ್ಯೆಯ ನಂತರ, ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಮತ್ತಷ್ಟು ತೀವ್ರಗೊಂಡಿದೆ. ಇಸ್ರೇಲ್ ಮತ್ತು ಅಮೆರಿಕದ ಮಿಸೈಲ್ ದಾಳಿಗಳಲ್ಲಿ इरಾನ್‌ನ ಟಾಪ್ ಕಮಾಂಡರ್‌ಗಳು ಮತ್ತು ಸೇನಾ ಪ್ರಭಾವಶೀಲರು ಹತ್ಯೆಯಾಗಿದ್ದಾರೆ. ಮೃತರಲ್ಲಿ ರಕ್ಷಣಾ ಸಚಿವ ಅಜೀಜ್ ನಾಸಿರ್‌ಝಾದೆ, ಕಮಾಂಡರ್ ಚೀಫ್ ಮೊಹಮದ್ ಪಕ್ಪೋರ್, ಮಿಲಿಟರಿ ಸಲಹೆಗಾರ ಅಲಿ ಶಮ್ಖಾನಿ, ಸೇನಾ ಮುಖ್ಯಸ್ಥ ಮೇಜರ್ ಜನರಲ್ ಸಯ್ಯದ್ ಅಬ್ದುಲ್ರಹೀಮ್ ಮೌಸಾವಿ, ಸೇನಾ ಕಮಾಂಡರ್ ಅಮೀರ್ ಹತಾಮಿ ಸೇರಿದ್ದಾರೆ.

 

ಇರಾನ್ ಪ್ರತೀಕಾರ ಮತ್ತು ಸಂಘರ್ಷದ ಗಂಭೀರತೆ

ಟಾಪ್ ಕಮಾಂಡರ್‌ಗಳನ್ನು ಕಳೆದುಕೊಂಡರೂ, ಇರಾನ್ ಸೇನಾಪಡೆಗಳು ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ದಾಳಿಯನ್ನು ಮುಂದುವರಿಸುತ್ತಿವೆ. ಕುವೈತ್‌ನ ಅಮೆರಿಕ ವಾಯುನೆಲೆ ಗುರಿಯಾಗಿಸಿ ದಾಳಿ ನಡೆದಿದ್ದು, ಅಲ್ಲಿನ ನಿವಾಸಿಗಳಿಗೆ ತುರ್ತು ಎಚ್ಚರಿಕೆ ನೀಡಲಾಗಿದೆ. ಇರಾನ್ ತನ್ನ ಪ್ರತೀಕಾರದ ವಾಯುದಾಳಿ ನಡೆಸಿ ಅಮೆರಿಕ–ಇಸ್ರೇಲ್‌ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

 

ಅಂತಾರಾಷ್ಟ್ರೀಯ ಹಾಗೂ ಆರ್ಥಿಕ ಪರಿಣಾಮಗಳು

ಈ ಸಂಘರ್ಷವು ಭಾರತ ಸೇರಿದಂತೆ ಇತರ ದೇಶಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಉಂಟುಮಾಡಲಿದೆ. ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ತೈಲದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ, ಇದು ಪೆಟ್ರೋಲ್, ಡೀಸೆಲ್ ಬೆಲೆ ಮತ್ತು ರೂಪಾಯಿಯ ಮೌಲ್ಯದಲ್ಲಿಯೂ ಪರಿಣಾಮ ಬೀರುತ್ತದೆ.

 

ಭಾರತೀಯರ ಭದ್ರತೆ

ಗಲ್ಫ್ ದೇಶಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಭಾರತೀಯರ ಸುರಕ್ಷತೆ ವಿಶೇಷ ಆತಂಕವಾಗಿದೆ. ಸಂಘರ್ಷ ತೀವ್ರವಾದರೆ, ಅಲ್ಲಿರುವ ಭಾರತೀಯರ ಮೇಲೆ ನೇರ ಹಾಗೂ ತುರ್ತು ಪರಿಣಾಮ ಬೀರುತ್ತದೆ. ಸರ್ಕಾರ ಮತ್ತು ವಿದೇಶಾಂಗ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಖಮೇನಿ ಹತ್ಯೆ ನಂತರ ಮಧ್ಯಪ್ರಾಚ್ಯ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅಮೆರಿಕ–ಇಸ್ರೇಲ್–ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಇದು ಸ್ಥಳೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಹಾಗೂ ಭದ್ರತಾ ಪ್ರಭಾವ ಬೀರುವಂತಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

16 hours ago

   
Image 1
Image 1

ಖಮೇನಿ ನಿಧನದ ನಂತರ ಇರಾನ್: ಮಧ್ಯಂತರ ನಾಯಕತ್ವಕ್ಕೆ ಅಲಿರೆಜಾ ಅರಾಫಿ ನೇಮಕ

ಟೆಹ್ರಾನ್ನಲ್ಲಿ ವರದಿಯಾಗಿರುವಂತೆ, ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಅಯತೊಲ್ಲಾ ಅಲಿ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1

ಅಂತರಾಷ್ಟ್ರೀಯ ಪ್ರತಿಕ್ರಿಯೆ: ಅಮೆರಿಕ–ಇಸ್ರೇಲ್ ವಿರುದ್ಧ ಕಲ್ಲು ಎಸೆಯುವ ಪ್ರತಿಭಟನೆ

ಅಯತೊಲ್ಲಾ ಅಲಿ ಖಮೇನಿರ ನಿಧನದ ವರದಿ ಬಂದಿದ್ದು, ಜಾಗತಿಕ ಮಟ್ಟದಲ್ಲಿ ಪ್ರತಿಕ್ರಿಯೆಗಳು... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1

ದುಬೈ ವಿಮಾನ ನಿಲ್ದಾಣದಲ್ಲಿ ಇರಾನ್ ದಾಳಿ: 4 ಗಾಯ, ಮಧ್ಯಪ್ರಾಚ್ಯ ಭದ್ರತಾ ಆತಂಕ

ದುಬೈ: ಇರಾನ್–ಇಸ್ರೇಲ್–ಅಮೆರಿಕ ಸಂಘರ್ಷದ ಹಿನ್ನೆಲೆ, ದುಬೈ ಅಂತಾರ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ಇರಾನ್ ಸೂಪ್ರೀಂ ನಾಯಕ ಅಲಿ ಖಮೇನಿ ನಿಧನ – 37 ವರ್ಷಗಳ ಆಳ್ವಿಕೆ ಅಂತ್ಯ

ಇರಾನ್: ಇರಾನ್‌ನ ಸೂಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಶನಿವಾರ ನ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ಐರ್ಲೆಂಡ್‌ನಲ್ಲಿ ದಕ್ಷಿಣ ಕನ್ನಡ ಯುವಕ ನಿಗೂಢ ಸಾವು; ಇಂಡಿಯನ್ ಪೊಲೀಸರು ತನಿಖೆ ಆರಂಭ

ಮಂಗಳೂರು / ಐರ್ಲೆಂಡ್: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

Jeffrey Epstein ಪ್ರಕರಣಕ್ಕೆ ಹೊಸ ಟ್ವಿಸ್ಟ್: ಸಂತ್ರಸ್ತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯ ಹೆಸರು!

ವಾಷಿಂಗ್ಟನ್ : ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ Jeff... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ವಿಶ್ವ ಚಿನ್ನದ ದರದಲ್ಲಿ ಕುಸಿತದ ಭಾವನೆ: ಅಮೆರಿಕ ಕ್ರಮ ಚೀನಾದ ಮೇಲೆ ಹೊರೆ ಹಾಕಬಹುದೇ?

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರೀ ಏರಿಕೆ ಕ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಪುತ್ರನ ನೆನಪಿಗಾಗಿ 6 ಕೋಟಿ ರೂ. BMW ಕಾರನ್ನು ಸಮಾಧಿ ಮಾಡಿದ ತಂದೆ

ಮಾಸ್ಕೋ: ಪುತ್ರನ ಅಕಾಲಿಕ ಮರಣದ ದುಃಖವನ್ನು ಸಹಿಸಲು ಆಗದೇ, ಮಾಸ್ಕ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಭಾರತಕ್ಕೆ ನೀರಿನ ಹಕ್ಕು, ಪಾಕ್‌ಗಾಗಿ ಚಿಂತಾಜನಕ ಸುದ್ದಿಯಾಗಲಿದೆ ರಾವಿ ನದಿ ನಿರ್ಬಂಧ

ನವದೆಹಲಿ: ಭಾರತವು ಶಹಪುರ್ ಕಂಡಿ ಬ್ಯಾರೇಜ್ ಪೂರ್ಣಗೊಳಿಸುತ್ತಿರುವ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

"ಅಮೆರಿಕದಲ್ಲಿ ಪೊಲೀಸ್ ನಿರ್ಲಕ್ಷ್ಯ: ಭಾರತೀಯ ವಿದ್ಯಾರ್ಥಿನಿ ಸಾವು – ಕುಟುಂಬಕ್ಕೆ ₹262 ಕೋಟಿ ಪರಿಹಾರ"

ವಾಷಿಂಗ್ಟನ್:- ಅಮೆರಿಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪ... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1