ಕೋಮುವಾದ ಪರಿಸ್ಥಿತಿ ಕಾರಣವಾಗಿ ಐಟಿ-ಬಿಟಿ ಹೂಡಿಕೆ ತಡೆ — ಖರ್ಗೆ ಎಚ್ಚರಿಕೆ
ಬೆಂಗಳೂರು: ಕೋಮುವಾದದ ವಾತಾವರಣ ಕರಾವಳಿ ಭಾಗದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು. ನಗರದ ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಟಿ-ಬಿಟಿ ಕಂಪನಿಗಳು ಹೂಡಿಕೆ ಮಾಡಲು ಸಿದ್ಧವಾಗಿದ್ದರೂ ಭದ್ರತೆ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ ಎಂದರು. “ಕಂಪನಿಗಳಿಗೆ ಹೂಡಿಕೆ ಮಾಡಿ ಎಂದು ಹೇಳಿದಾಗ ಅವರು ಒಪ್ಪುತ್ತಾರೆ. ಆದರೆ ನಾಳೆ ಅವರ ಉದ್ಯೋಗಿಗಳಿಗೆ ತೊಂದರೆ ಆದರೆ ಏನು ಮಾಡುವುದು ಎಂಬ ಪ್ರಶ್ನೆ ಅವರದ್ದು,” ಎಂದು ಹೇಳಿದರು.
ಸಮಾಜದಲ್ಲಿ ಧಾರ್ಮಿಕ ಉದ್ವಿಗ್ನತೆ ಮುಂದುವರಿದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅವರು, ರಾಜಕಾರಣಿಗಳು ಮತ್ತು ಧರ್ಮಗುರುಗಳು ಪ್ರಬುದ್ಧವಾಗಿ ನಡೆದುಕೊಳ್ಳಬೇಕೆಂದು ಹೇಳಿದರು. “ಧರ್ಮ ಮನುಷ್ಯನಿಗಾಗಿ ಇದೆ; ಮನುಷ್ಯ ಧರ್ಮಕ್ಕಾಗಿ ಅಲ್ಲ. ಧರ್ಮದ ನಶೆ ನಿಲ್ಲಬೇಕು,” ಎಂದು ಕಿಡಿಕಾರಿದರು. ಈ ವೇಳೆ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕರನ್ನು ಟೀಕಿಸಿದ ಅವರು, “ನಾನು ಮಠದಲ್ಲಿ ಓದಿದವನು. ಆದರೂ ನನ್ನನ್ನು ಕಾನ್ವೆಂಟ್‌ನಲ್ಲಿ ಓದಿದವನು ಎಂದು ಹೇಳಲಾಗುತ್ತಿದೆ,” ಎಂದು ಆರೋಪಿಸಿದರು. ಇತಿಹಾಸ ಮತ್ತು ಧರ್ಮವನ್ನು ರಾಜಕೀಯಕ್ಕೆ ಬಳಸುವುದನ್ನು ಖಂಡಿಸಿದ ಸಚಿವರು, ಔರಂಗಜೇಬನ ಸಮಾಧಿ ವಿಚಾರವನ್ನು ಉದಾಹರಣೆಯಾಗಿ ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
90ನೇ ವಾರ್ಷಿಕೋತ್ಸವ: ಮಲಬಾರ್ ಮುಸ್ಲಿಂ ಅಸೋಸಿಯೇಷನ್‍ಗೆ ಸಿಎಂ ಸಿದ್ದರಾಮಯ್ಯ ಮತ್ತಿತರ ಗಣ್ಯರ ಸನ್ಮಾನ
ಬೆಂಗಳೂರು: ಸಿದ್ದರಾಮಯ್ಯ ಅವರು ಮಲಬಾರ್ ಮುಸ್ಲಿಂ ಅಸೋಸಿಯೇಷನ್ 90... ಓದನ್ನು ಮುಂದುವರಿಸಿ
ಸ್ಥಳೀಯ ಚುನಾವಣೆಗೆ ಮೈತ್ರಿ ಸಂಕಟ: ಜೆಡಿಎಸ್ ಪ್ಲ್ಯಾನ್–ಬಿ ಸಿದ್ಧ
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಹತ್ಯೆ ಪ್ರಕರಣ ತೀವ್ರತೆ: ಬೈರತಿ ಬಸವರಾಜ್ ಸಿಐಡಿ ಕಸ್ಟಡಿಗೆ
ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ... ಓದನ್ನು ಮುಂದುವರಿಸಿ
ಜಲಾಶಯದಲ್ಲಿ ತೇಲುತ್ತಿದ್ದ ಹುಲಿ ಶವ: ಅರಣ್ಯ ಇಲಾಖೆ ತೀವ್ರ ತನಿಖೆ
ಚಾಮರಾಜನಗರ, ಫೆ.15: ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ... ಓದನ್ನು ಮುಂದುವರಿಸಿ
ಮಹಾಶಿವರಾತ್ರಿ ಸಂಭ್ರಮದಲ್ಲಿ ಕೋಲಾರ ಮಿಂದೆದ್ದಿತು; ಭಾರತ ಜಯಕ್ಕಾಗಿ ವಿಶೇಷ ಪೂಜೆ
ಕೋಲಾರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕೋಲಾರ ನಗರ ಭಕ್ತಿಭಾವದಿಂ... ಓದನ್ನು ಮುಂದುವರಿಸಿ
ಗುಡಿಬಂಡಾ
ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆ
ಗುಡಿಬಂಡೆ: ತಾಲೂಕಿನ ವಿವಿಧ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾ... ಓದನ್ನು ಮುಂದುವರಿಸಿ
ಗುಡಿಬಂಡಾ
ಇಂದು ಪರಿಸರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜಯ ಕರ್ನಾಟಕ, ಗ್ರೀನ್ ವಾರಿಯರ್ಸ್, ರಾಜಭೀದಿಯಲ್ಲಿ ಗಿಡ ನೆಟ್ಟು ಮಹಾಶಿವರಾತ್ರಿ ಹಬ್ಬ ಆಚರಣೆ
ಗುಡಿಬಂಡೆ : ಇಂದು ಪರಿಸರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜ... ಓದನ್ನು ಮುಂದುವರಿಸಿ
ಗುಡಿಬಂಡಾ
ಗುಡಿಬಂಡೆಯ ಶ್ರೀಕರ್ ಪಬ್ಲಿಕ್ ಶಾಲೆಯಲ್ಲಿ 'ಸಮಾಜ ದಿನ' ಆಚರಣೆ: ವಿದ್ಯಾರ್ಥಿಗಳಿಂದ ಐತಿಹಾಸಿಕ ಮಾದರಿಗಳ ಪ್ರದರ್ಶನ
ಗುಡಿಬಂಡೆ: ಪಟ್ಟಣದ ಶ್ರೀಕರ್ ಪಬ್ಲಿಕ್ ಶಾಲೆಯಲ್ಲಿ... ಓದನ್ನು ಮುಂದುವರಿಸಿ
ದಾಖಲೆ ಬಜೆಟ್ ಮಧ್ಯೆ ಆದಾಯ ಒತ್ತಡ: ಸರ್ಕಾರಕ್ಕೆ 15,000 ಕೋಟಿ ರೂ. ಕೊರತೆ ಭೀತಿ
ಬೆಂಗಳೂರು, ಫೆಬ್ರವರಿ 15: ಪ್ರಸಕ್ತ 2025-26ನೇ ಆರ್ಥಿಕ ವರ್ಷಕ್ಕ... ಓದನ್ನು ಮುಂದುವರಿಸಿ
ನೆಲಮಂಗಲ
ತಾಯಿಯ ಪ್ರೆಗ್ನೆನ್ಸಿ ಫೋಟೋಶೂಟ್ ವೇಳೆ 3 ವರ್ಷದ ಮಗು ನೀರಿನಲ್ಲಿ ಮುಳುಗಿ ದುರಂತ ಸಾವು
ನೆಲಮಂಗಲ: ಗಿಡ್ಡೆನಹಳ್ಳಿಯಲ್ಲಿ ಸಂತೋಷದ ಕ್ಷಣ ದುರಂತಕ್ಕೆ ತಿರುಗಿ... ಓದನ್ನು ಮುಂದುವರಿಸಿ