ಮದ್ಯದ ನಶೆಯಲ್ಲಿ ಅಣ್ಣ–ತಂಗಿ ಹತ್ಯೆ: ಆರೋಪಿಗೆ ಬಂಧನ
ಮಡಿಕೇರಿ: ತಾಲೂಕಿನ ಭಾಗಮಂಡಲದಲ್ಲಿ ಮದ್ಯದ ನಶೆಯಲ್ಲಿ ವ್ಯಕ್ತಿಯೋರ್ವ ಅಣ್ಣ ಮತ್ತು ತಂಗಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಯಶೋಧಾ (45) ಮತ್ತು ಕುಂಞರಾಮ (47) ಮೃತಪಟ್ಟಿದ್ದು, ಆರೋಪಿ ಚಂದು (65) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಮದ್ಯಪಾನದ ನಶೆಯಲ್ಲಿ ಮಾರಕಾಸ್ತ್ರ ಬಳಸಿ ಇಬ್ಬರ ಮೇಲೂ ದಾಳಿ ನಡೆಸಿದ್ದಾನೆ. ಪರಿಣಾಮವಾಗಿ ಒಡಹುಟ್ಟಿದ ಅಣ್ಣ–ತಂಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಅವಳಿ ಕೊಲೆ ಪ್ರಕರಣಕ್ಕೆ ಮರಣದಂಡನೆ
ಇದಕ್ಕೆ ಮಧ್ಯೆ, ಮತ್ತೊಂದು ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮಹಿಳೆಯೊಂದಿಗಿನ ಅನೈತಿಕ ಸಂಬಂಧದ ವಿಚಾರವಾಗಿ ಆಕೆ ಮತ್ತು ಅವಳ ಪತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
2019ರ ಆಗಸ್ಟ್ 30ರಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಾತ್ಕೋಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಆರೋಪಿ ಗೋವಿಂದಪ್ಪ ಮಚ್ಚಿನಿಂದ ದಾಳಿ ನಡೆಸಿ ಮನೆಯಲ್ಲಿ ಮಲಗಿದ್ದ ಧರ್ಮಯ್ಯ (53) ಮತ್ತು ಅವರ ಪತ್ನಿ ಭಾರತಿ (33) ಅವರನ್ನು ಹತ್ಯೆ ಮಾಡಿದ್ದನು.
ತನಿಖೆಯಲ್ಲಿ ಭಾರತಿ ಮತ್ತು ಗೋವಿಂದಪ್ಪ ನಡುವೆ ಅಕ್ರಮ ಸಂಬಂಧವಿದ್ದ ವಿಚಾರ ಬಹಿರಂಗವಾಗಿತ್ತು. ಈ ಸಂಬಂಧದಿಂದಾಗಿ ಭಾರತಿ ಪತಿ ಧರ್ಮಯ್ಯ ಮತ್ತು ಗೋವಿಂದಪ್ಪ ನಡುವೆ ಜಗಳವೂ ನಡೆದಿತ್ತು. ಬಳಿಕ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆದಿದ್ದರೂ, ಎರಡು ತಿಂಗಳ ಬಳಿಕ ಗೋವಿಂದಪ್ಪ ಈ ದಂಪತಿಯನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಗೋವಿಂದಪ್ಪನಿಗೆ ಮರಣದಂಡನೆ ಶಿಕ್ಷೆಯ ಜೊತೆಗೆ 20 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕೊಪ್ಪಳದಲ್ಲಿ ಭಾರೀ ಗೋಲ್ಡ್ ರಾಬರಿ: ಬಸ್‌ನಲ್ಲಿ ಇಟ್ಟ ಬ್ಯಾಗ್ ಕದ್ದುಕೊಂಡು 50 ಲಕ್ಷ ಮೌಲ್ಯದ ಬಂಗಾರ ಕಳ್ಳತನ!
ಕೊಪ್ಪಳ : ಕೊಪ್ಪಳದಲ್ಲಿ ಭಾರೀ ಗೋಲ್ಡ್ ರಾಬರಿ ಸಂಭವಿಸಿದೆ. ತವಾ ಪ... ಓದನ್ನು ಮುಂದುವರಿಸಿ
ರಾಜ್ಯದ 9 ಜೈಲಿನಿಂದ ಸನ್ನಡತೆ ಆಧಾರದ ಮೇಲೆ 31 ಕೈದಿಗಳು ಬಿಡುಗಡೆ
ಬೆಂಗಳೂರು: ರಾಜ್ಯದ 9 ಜೈಲಿನಿಂದ 31 ಕೈದಿಗಳನ್ನು ಸನ್ನಡತೆ ಆಧಾರದ... ಓದನ್ನು ಮುಂದುವರಿಸಿ
ಬೈಕ್‌ಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು: ತಡರಾತ್ರಿ ಪೆಟ್ರೋಲ್ ಕಳವು
ಬೆಂಗಳೂರು: ತಡರಾತ್ರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಂ... ಓದನ್ನು ಮುಂದುವರಿಸಿ
ಕೆ. ನಾರಾಯಣಪುರದಲ್ಲಿ ಇಬ್ಬರು ಬಾಂಗ್ಲದೇಶಿ ಪ್ರಜೆಗಳು ಪತ್ತೆ
ಬೆಂಗಳೂರು: ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ನಾರಾಯಣಪುರ... ಓದನ್ನು ಮುಂದುವರಿಸಿ
ಬೆಂಗಳೂರಿಗರೇ ಎಚ್ಚರ: ಮನೆಯ ಚಿನ್ನವನ್ನು ಚಾಲಕ ಕದ್ದು ಮಾರಿದ ಭೂಪ!
ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಒಂದೇ ಕುಟುಂಬದಲ್ಲಿ ಚಾಲಕನಾಗ... ಓದನ್ನು ಮುಂದುವರಿಸಿ
ಸಿದ್ದಾಪುರ ಮಹೇಶ್ ಕೊಲೆ ಪ್ರಕರಣ: ವಿಲ್ಸನ್ ಗಾರ್ಡನ್ ನಾಗ್ ಸೇರಿದಂತೆ ಆರು ಆರೋಪಿಗಳ ಜಾಮೀನು ಹೈಕೋರ್ಟ್ ವಜಾ
ಸಿದ್ದಾಪುರ: 2023ರ ಆಗಸ್ಟ್‌ನಲ್ಲಿ ಸಿದ್ದಾಪುರದಲ್ಲಿ ನಡೆದ ಮಹೇಶ್... ಓದನ್ನು ಮುಂದುವರಿಸಿ
ಬೆಂಗಳೂರು ಸೆಂಟ್ರಲ್ ಜೈಲ್ ವಾರ್ಡರ್ ಗಾಂಜಾ ಪೂರೈಕೆ ಪ್ರಕರಣದಲ್ಲಿ ಬಂಧನ
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಜೈಲ್‌ನಲ್ಲಿ ವಾರ್ಡರ್ ಪ್ರಕಾಶ್... ಓದನ್ನು ಮುಂದುವರಿಸಿ
ಚಿಟ್ಟಗುಪ್ಪ
ಶಾಲಾ ಕಟ್ಟಡದಿಂದ ಬಾಲಕಿ ಆತ್ಮಹತ್ಯೆ – ತಾಯಿ ಹೇಳಿಕೆ, ಸಹಪಾಠಿಯ ಹಿಗ್ಗಾಟ ಕಾರಣ
ಬೀದರ್: ಚಿಟಗುಪ್ಪಾ ತಾಲ್ಲೂಕಿನ ಭೆಮಳಖೇಡ ಗ್ರಾಮದಲ್ಲಿ 16 ವರ್ಷದ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಆನೇಕಲ್ ಕಿಡ್ನ್ಯಾಪ್-ಕೊಲೆ ಪ್ರಕರಣದಲ್ಲಿ ಪೊಲೀಸರ ಯಶಸ್ಸು: 8 ಆರೋಪಿಗಳ ಸೆರೆ
ಆನೇಕಲ್: ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ (... ಓದನ್ನು ಮುಂದುವರಿಸಿ
ಎರಡು ವರ್ಷದ ಮಗುವಿನ ಜೊತೆ ತಾಯಿ ಆತ್ಮಹತ್ಯೆ — ಹೃದಯವಿದ್ರಾವಕ ಘಟನೆ
ತುಮಕೂರು: ಜಿಲ್ಲೆಯ ಹಾಗಲವಾಡಿ ಗ್ರಾಮದಲ್ಲಿ ತಾಯಿ ಗಂಗಾಮಣಿ (30)... ಓದನ್ನು ಮುಂದುವರಿಸಿ