ಮಾರ್ಚ್ 26ಕ್ಕೆ ಬಜೆಟ್ ಅಧಿವೇಶನ ಮುಕ್ತಾಯ: ಸ್ಪೀಕರ್ ಖಾದರ್ ಘೋಷಣೆ
ಬೆಂಗಳೂರು: ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಮಾರ್ಚ್ 26ರಂದು ಮುಕ್ತಾಯಗೊಳಿಸಲಾಗುವುದು ಎಂದು ಸ್ಪೀಕರ್ ಯು. ಟಿ. ಖಾದರ್ ಘೋಷಣೆ ಮಾಡಿದ್ದಾರೆ. ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳ ಕುರಿತು ಸದನದಲ್ಲಿ ಮಾಹಿತಿ ನೀಡಿದ ಸ್ಪೀಕರ್, ಬಜೆಟ್ ಮೇಲಿನ ಚರ್ಚೆ ಇಂದು ಅಂತ್ಯಗೊಳ್ಳಲಿದೆ ಎಂದು ಹೇಳಿದರು. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಚರ್ಚೆಗೆ ಉತ್ತರ ನೀಡಲಿದ್ದಾರೆ. ಅದರ ನಂತರ ಮಾರ್ಚ್ 26ರಂದು ಅಧಿವೇಶನವನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಮೂಲತಃ ಮಾರ್ಚ್ 27ರವರೆಗೆ ಅಧಿವೇಶನ ನಡೆಸುವ ಯೋಜನೆ ಇತ್ತು. ಆದರೆ ಇದೀಗ ಒಂದು ದಿನ ಮುಂಚಿತವಾಗಿ ಅಧಿವೇಶನ ಮುಕ್ತಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ, ನಾಯಕರಿಗೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುರಿತು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸರ್ವಪಕ್ಷ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ 13 ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನವನ್ನು 12 ದಿನಗಳಿಗೆ ಸೀಮಿತಗೊಳಿಸಿ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕೆಎಂಎಫ್ ಸಹಕಾರ: ಐಪಿಎಲ್ ವೇದಿಕೆಯಲ್ಲಿ ನಂದಿನಿ ಉತ್ಪನ್ನಗಳಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಸಾರ
ಬೆಂಗಳೂರು: Royal Challengers Bangalore ಮತ್ತು ಕರ್ನಾಟಕ ಮಿಲ... ಓದನ್ನು ಮುಂದುವರಿಸಿ
ವಿವಾಹ ಮುರಿದು ಬೀಳುವ ಪ್ರಕರಣಗಳು ಹೆಚ್ಚಾಗಿ, ಕೌನ್ಸೆಲಿಂಗ್ ಕೇಂದ್ರ ಬೇಕೆಂದು ಶರವಣ ಒತ್ತಾಯ
ಬೆಂಗಳೂರು: ಟಿ.ಎ. ಶರವಣ ಅವರು ಕರ್ನಾಟಕ ಅಂತರ್ಜಾತಿ ವಿವಾಹ ತಿದ್ದ... ಓದನ್ನು ಮುಂದುವರಿಸಿ
ದಾವಣಗೆರೆ ದಕ್ಷಿಣ: ಶ್ರೀನಿವಾಸ್ ದಾಸಕರಿಯಪ್ಪ ಕುಟುಂಬದವರು ಪ್ರಚಾರ ಚುರುಕು
ದಾವಣಗೆರೆ: ದಾವಣಗೆರೆ ದಕ್ಷಿಣ ಉಪಚುನಾವಣೆಯ ಹಿನ್ನೆಲೆಯಲ್ಲಿ, ಬಿಜ... ಓದನ್ನು ಮುಂದುವರಿಸಿ
ನೀರಾನೆ ದಾಳಿಯಲ್ಲಿ ಸಾವನ್ನಪ್ಪಿದ ಯುವ ಪಶುವೈದ್ಯೆಗೆ ನ್ಯಾಯ – ಸಚಿವ ಭರವಸೆ
ಶಿವಮೊಗ್ಗ: ನಗರ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ... ಓದನ್ನು ಮುಂದುವರಿಸಿ
ವಯನಾಡಿಗೆ ₹10 ಕೋಟಿ ಅನುದಾನ: ರಾಜ್ಯದಲ್ಲಿ ರಾಜಕೀಯ ವಾಗ್ವಾದ
ಬೆಂಗಳೂರು: ಕೇರಳದ ವಯನಾಡು ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕ ಸರ್... ಓದನ್ನು ಮುಂದುವರಿಸಿ
ಬಿಬಿಎಂಪಿಯಲ್ಲಿ ಲಂಚಾವತಾರ: ಫೋನ್‌ಪೇ ಟ್ರಾನ್ಸಾಕ್ಷನ್ ಸಾಕ್ಷಿ ಪ್ರದರ್ಶನ ತೋರಿಸಿದ ಆರ್ ಅಶೋಕ್!
ಬೆಂಗಳೂರು: ಗ್ರೇಟರ್ ಬೆಂಗಳೂರು ಪಾಲಿಕೆಯಲ್ಲಿ ಇ-ಖಾತಾ ಪ್ರಕ್ರಿಯೆ... ಓದನ್ನು ಮುಂದುವರಿಸಿ
‘ಅಪ್ಪಾಜಿ ಕ್ಯಾಂಟೀನ್’ ಮರುಾರಂಭ – ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ - ಟಿ.ಎ. ಶರವಣ ಚಾಲನೆ
ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ನ... ಓದನ್ನು ಮುಂದುವರಿಸಿ
ವಿಧಾನಸಭೆ ಪಶ್ಚಿಮ ಪ್ರವೇಶ ದ್ವಾರ ಉದ್ಘಾಟನೆ – ಸದಸ್ಯರೊಂದಿಗೆ ಗ್ರೂಪ್ ಫೋಟೋ
ಬೆಂಗಳೂರು: ವಿಧಾನಸಭೆಯ ಪಶ್ಚಿಮ ಪ್ರವೇಶ ದ್ವಾರ ಉದ್ಘಾಟನೆ ಮತ್ತು... ಓದನ್ನು ಮುಂದುವರಿಸಿ
16 ವರ್ಷದೊಳಗಿನ ಮಕ್ಕಳ ಮೊಬೈಲ್ ಬಳಕೆ ನಿಯಂತ್ರಣ : ಪೋಷಕರು, ತಜ್ಞರ ಸಲಹೆ ನಂತರ ಅಂತಿಮ ನಿರ್ಧಾರ
ಬೆಂಗಳೂರು: 16 ವರ್ಷದೊಳಗಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿ... ಓದನ್ನು ಮುಂದುವರಿಸಿ
ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ – ಹೈಕೋರ್ಟ್ ಕಠಿಣ ಸೂಚನೆ
ಬೆಂಗಳೂರು: ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣಪತ್ರ ನೀಡಿ... ಓದನ್ನು ಮುಂದುವರಿಸಿ