ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿ - ಜಿಲ್ಲಾಧಿಕಾರಿ ಜಾನಕಿ ಕೆ.ಎಂ
ಮತದಾನದ ಪ್ರಕ್ರಿಯೆಯಲ್ಲಿ ಮತದಾರರು ಭಾಗವಹಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಜಾನಕಿ ಕೆ.ಎಂ ಅವರು ಕರೆ ನೀಡಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಕಾಲ್ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆವರಣದಿಂದ ಹಮ್ಮಿಕೊಂಡಿದ್ದ ಬೃಹತ್ ಕಾಲ್ನಡಿಗೆ ಕಾರ್ಯಕ್ರಮಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಶಶಿಧರ ಕುರೇರ ಅವರೊಂದಿಗೆ ಚಾಲನೆ ನೀಡಿದರು.
ಕಾಲ್ನಡಿಗೆ ಜಾಥವು ಜಿಲ್ಲಾ ಆಡಳಿತ ಭವನದಿಂದ ಆರಂಭಗೊಂಡು, ನವನಗರ ಬಸ್ ನಿಲ್ದಾಣ, ಎಲ್ ಐಸಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ಭವನದ ಮಾರ್ಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಮುಕ್ತಾಯಗೊಂಡಿತು.
ಬಳಿಕ ಮಾತನಾಡಿದ ಅವರು ಪ್ರಜಾಪ್ರಭುತ್ವದ ಯಶಸ್ವಿಗಾಗಿ ಅರ್ಹ ಮತದಾರರು ಮೇ 7 ರಂದು ನಡೆಯುವ ಮತದಾನದ ದಿನ ಮತಗಟ್ಟೆಗೆ ಬಂದು ಮತಚಲಾಯಿಸಿ, ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾದ್ಯಂತ ವಿಭಿನ್ನ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳೂ ಆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶಶಿಧರ ಕುರೇರ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಸ್ವೀಪ್ ಕಾರ್ಯ ಚಟುವಟಿಕೆಗಳ ರೂಪುರೇಷೆ ಸಿದ್ಧಪಡಿಸಿಕೊಂಡು ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಮತದಾರರು ತಮಗೆ ದೊರೆತಿರುವ ಹಕ್ಕನ್ನು ಮತದಾನ ದಿವಸ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ,ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟೆ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು,ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನಗರಸಭೆ ಅಧಿಕಾರಿ, ಸಿಬ್ಬಂದಿ ಕಾಲ್ನಡಿಗೆ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಿಕ್ಕಬಳ್ಳಾಪುರ: ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿದರೆ ಕಾಂಗ್ರೆಸ್‌ಗೆ ಟಫ್ ಫೈಟ್ ಕಾಯಂ...!
ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಸಲು ನೀಡಿದ ಬ... ಓದನ್ನು ಮುಂದುವರಿಸಿ
ಕಡಬ ತಾಲೂಕು
ಲಂಚಕ್ಕಾಗಿ ಅಲೆದಾಡಿಸಿದ ಪ. ಪಂ ಮಹಿಳಾ ಸಿಬ್ಬಂದಿ - ದಾಖಲೆ ಪತ್ರಕ್ಕಾಗಿ ಕಛೇರಿಗೆ ಬಂದ ವ್ಯಕ್ತಿಯನ್ನು ಸತಾಯಿಸಿದ ಅಧಿಕಾರಿ
ಕಡಬ: ಬ್ಯಾಂಕ್ ಲೋನ್ ಪಡೆದು ಮನೆ ಕಟ್ಟುವ ಸಲುವಾಗಿ ಅಗತ್ಯ ದಾಖಲೆ... ಓದನ್ನು ಮುಂದುವರಿಸಿ
ಯಲಹಂಕ
ರಾಜಾನುಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಚನ್ನಮ್ಮ
ಯಲಹಂಕ: ರಾಜಾನುಕುಂಟೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಚನ್... ಓದನ್ನು ಮುಂದುವರಿಸಿ
ಕಿತ್ತೂರು
ಕಿತ್ತೂರು ತಾ.ಪಂ ಕಚೇರಿಗೆ ಜಿ.ಪಂ ಸಿಇಒ ರಾಹುಲ್ ಶಿಂಧೆ ಭೇಟಿ - ಸಾಂಕ್ರಾಮಿಕ ರೋಗ ಬಾರದಂತೆ ಮುಂಜಾಗ್ರತ ಕ್ರಮಕ್ಕೆ ಸೂಚನೆ
ಕಿತ್ತೂರು: ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ಕಾಯಿಲೆಗಳು ಉಲ್ಬ... ಓದನ್ನು ಮುಂದುವರಿಸಿ
ಕಾರ್ಕಳ
ಇನ್ನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ 8 ಟವರ್ ನಿರ್ಮಾಣ – ಗ್ರಾಮಸ್ಥರ ಆಕ್ರೋಶ
ಕಾರ್ಕಳ : ಉಡುಪಿ ಜಿಲ್ಲೆಯ ಎಲ್ಲೂರು ಗ್ರಾಮದ ನಂದಿಕೂರಿನಿಂದ ಕೇರಳ... ಓದನ್ನು ಮುಂದುವರಿಸಿ
ನೀರಿಗಾಗಿ ಹಾಹಾಕಾರದ ನಡುವೆ ಫ್ಲೋರೈಡ್ ಯುಕ್ತ ನೀರು ಪೂರೈಕೆ : ಗ್ರಾಮ ಪಂಚಾಯತಿ ವಿರುಧ್ಧ ಗ್ರಾಮಸ್ಥರ ಆಕ್ರೋಶ
ಗದಗ: ನೀರಿಗಾಗಿ ಹಾಹಾಕಾರದ ನಡುವೆ ಫ್ಲೋರೈಡ್ ಯುಕ್ತ ನೀರು ಪೂರೈಕೆ... ಓದನ್ನು ಮುಂದುವರಿಸಿ
ಚಾಮರಾಜನಗರ: ಪಂಚಾಯಿತಿಯಿಂದ ಆಶ್ರಯ ಮನೆ ಕೊಡಿಸುವುದಾಗಿ ಪುಸಲಾಯಿಸಿ ವಿವಾಹಿತೆ ಮೇಲೆ ಅತ್ಯಾಚಾರ!
ಚಾಮರಾಜನಗರ: ಆಶ್ರಯ ಮನೆ ಕೊಡಿಸುವುದಾಗಿ ಪುಸಲಾಯಿಸಿ ವಿವಾಹಿತೆ ಮೇ... ಓದನ್ನು ಮುಂದುವರಿಸಿ
ಹೆಬ್ಬಸೂರು ಗ್ರಾ. ಪಂ ವ್ಯಾಪ್ತಿಯ ಹಿತ್ತಲಗುಡ್ಡ ಗ್ರಾಮದ ಸೋಲಿಗರ ಕಾಲನಿಯ ದುಸ್ಥಿತಿ... ಸೋರುವ ಸೂರಿನಲ್ಲಿ ಸೋಲಿಗರ ಜೀವನ
ಚಾಮರಾಜನಗರ : ಒಂದೆಡೆ ಹೊಸ ಮನೆ ನಿರ್ಮಾಣಗೊಳ್ಳುವವರೆಗೂ ಜೋಪಡಿ, ಶ... ಓದನ್ನು ಮುಂದುವರಿಸಿ
ನೀರಿನ ಟ್ಯಾಂಕ್, ಬೋರ್‌ವೆಲ್‌ಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸಿಇಒ ಸೂಚನೆ
ಮೈಸೂರು: ಕುಡಿಯುವ ನೀರಿನ ಟ್ಯಾಂಕ್, ಬೋರ್‌ವೆಲ್‌ಗಳ ಸ್ವಚ್ಛತೆ ಹ... ಓದನ್ನು ಮುಂದುವರಿಸಿ
ಜಗಳೂರು
ತೋರಣಗಟ್ಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರಪ್ಪ ಅವಿರೋಧ ಆಯ್ಕೆ
ಜಗಳೂರು : ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿ... ಓದನ್ನು ಮುಂದುವರಿಸಿ