ನಾಲ್ವರು ಮಾಡಿದ ಪ್ರತಿಭಟನೆಗೆ ರಾಹುಲ್ ಗಾಂಧಿ ಹೊಣೆಗಾರರಲ್ಲ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಎಐ ಶೃಂಗಸಭೆ ವೇಳೆ ಯೂತ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಗೆ ನೇರವಾಗಿ ರಾಹುಲ್ ಗಾಂಧಿಯವರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು. ನಗರದಲ್ಲಿ ಮಾತನಾಡಿದ ಅವರು, ಕೆಲ ಯುವಕರು ಸ್ವತಃ ನಿರ್ಧಾರ ತೆಗೆದುಕೊಂಡು ಪ್ರತಿಭಟನೆ ನಡೆಸಿರಬಹುದು. ಅದಕ್ಕೆ Rahul Gandhi ಸೂಚನೆ ನೀಡಿದ್ದಾರೆ ಎಂದು ಹೇಳುವುದು ಯುಕ್ತಿಯುಕ್ತವಲ್ಲ ಎಂದು ತಿರುಗೇಟು ನೀಡಿದರು. ಯೂತ್ ಕಾಂಗ್ರೆಸ್‌ನ ಕ್ರಮಕ್ಕೆ ನೇರ ಹೊಣೆ ರಾಹುಲ್ ಗಾಂಧಿಯವರ ಮೇಲೆ ಹಾಕುವುದು ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟರು.
ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ 56 ದೇಶಗಳು ಭಾರತಕ್ಕೆ ಬಂದಿದ್ದಾಗ ಇದೇ ಬಿಜೆಪಿ ಪ್ರತಿಭಟನೆ ನಡೆಸಿರಲಿಲ್ಲವೇ? ಆಗ ದೇಶದ ಗೌರವ ಹಾಳಾಗಲಿಲ್ಲವೇ ಎಂದು ಪ್ರಶ್ನಿಸಿದ ಖರ್ಗೆ, ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ದಿನಬೆಳಗ್ಗೆ ಎದ್ದು ‘ನಾನೇ ಯುದ್ಧ ನಿಲ್ಲಿಸಿದ್ದೇನೆ, ಎಲ್ಲವೂ ನನ್ನಿಂದಲೇ ನಡೆದಿದೆ’ ಎಂದು ಹೇಳಿದಾಗ ದೇಶದ ಮರ್ಯಾದೆಗೆ ಧಕ್ಕೆಯಾಗಲಿಲ್ಲವೇ ಎಂದು ಕಿಡಿಕಾರಿದರು.
ನಾವು ಏನು ಹೇಳುತ್ತೇವೆ ಅನ್ನುವುದಕ್ಕಿಂತ ವಿದೇಶಿ ತಜ್ಞರು ಎಐ ಶೃಂಗಸಭೆ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಗಮನಿಸಬೇಕು. ಶೃಂಗಸಭೆಯನ್ನು ಸಮರ್ಪಕವಾಗಿ ಆಯೋಜಿಸಿದ್ದರೆ ಪ್ರತಿಭಟನೆಯ ಅವಶ್ಯಕತೆಯೇ ಉಂಟಾಗುತ್ತಿರಲಿಲ್ಲ ಎಂದರು. ಚೀನಾಗೆ ಭೂಮಿ ಕೊಟ್ಟಾಗ ದೇಶದ ಗೌರವಕ್ಕೆ ಧಕ್ಕೆಯಾಗಲಿಲ್ಲವೇ? ಆಪರೇಷನ್ ಸಿಂಧೂರ ಕುರಿತಾಗಿ ಅಮೆರಿಕ ಹೇಳಿಕೆ ನೀಡಿದಾಗ ಅಥವಾ ಶೇ.50ರಷ್ಟು ತೆರಿಗೆ ವಿಧಿಸಿದಾಗ ದೇಶದ ಮರ್ಯಾದೆ ಹಾಳಾಗಲಿಲ್ಲವೇ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಯಾರೋ ನಾಲ್ವರು ಪ್ರತಿಭಟನೆ ನಡೆಸಿದರೆ ಅದರ ಹೊಣೆಯನ್ನು ರಾಹುಲ್ ಗಾಂಧಿಯವರ ಮೇಲೆ ಹಾಕುವುದು ಸರಿಯಲ್ಲ. ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದಾಗ ಕೆಲವು ಬಿಜೆಪಿ ನಾಯಕರು ‘ಭಾರತೀಯರಾಗಿ ಹುಟ್ಟಿದ್ದಕ್ಕೆ ನಾಚಿಕೆ ಆಗುತ್ತಿದೆ’ ಎಂದು ಹೇಳಿರಲಿಲ್ಲವೇ? ಆಗ ದೇಶದ ಮರ್ಯಾದೆ ಹೋಗಲಿಲ್ಲವೇ ಎಂದು ಪ್ರಶ್ನಿಸಿದರು. ಬಡತನ ಸೂಚ್ಯಂಕ ಹಾಗೂ ಪಾಸ್‌ಪೋರ್ಟ್ ರ್ಯಾಂಕಿಂಗ್‌ನಲ್ಲಿಯೂ ದೇಶದ ಸ್ಥಾನ ಕುಸಿದಿರುವುದನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಭ್ರಷ್ಟಾಚಾರ ಪುನರಾವರ್ತನೆಗೆ ಎಚ್ಚರಿಕೆ: ಬಿಜೆಪಿ ವಿರುದ್ಧ ಈಶ್ವರ್ ಖಂಡ್ರೆ ತೀವ್ರ ಟೀಕೆ
ಬೀದರ್ : ₹5 ಲಕ್ಷ ಕಮಿಷನ್ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ತನ... ಓದನ್ನು ಮುಂದುವರಿಸಿ
ರಾಯಚೂರು: ರಸ್ತೆ ಬದಿಗೆ ಬಿದ್ದ ಸರ್ಕಾರಿ ಔಷಧಿ-ಸಿರಂಜ್; ಸ್ಥಳೀಯರಲ್ಲಿ ಆಕ್ರೋಶ
ರಾಯಚೂರು: ಬಡವರಿಗೆ ವಿತರಿಸಬೇಕಾದ ಔಷಧಿಗಳನ್ನು ರಸ್ತೆ ಬದಿ ತಿಪ್ಪ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲ: ಪರ್ಫ್ಯೂಮ್ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ, 40 ಸಿಬ್ಬಂದಿ ಪ್ರಾಣಾಪಾಯದಿಂದ ಪಾರು
ನೆಲಮಂಗಲ : ಪರ್ಫ್ಯೂಮ್ ಗೋದಾಮಿನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘ... ಓದನ್ನು ಮುಂದುವರಿಸಿ
ಗುರುಮಿಟ್ಕಲ್
ರಾಜಕೀಯ ಸಂಕಟ : “ಗಾಂಧಿಯನ್ನು ರಾಷ್ಟ್ರಪಿತ ಎಂದು ಒಪ್ಪಲ್ಲ” – ಬಹಿರಂಗ ಸಮಾವೇಶದಲ್ಲಿ ಯತ್ನಾಳ್ ವಿವಾದಾತ್ಮಕ ಹೇಳಿಕೆ!
ಯಾದಗಿರಿ: ಗುರುಮಠಕಲ್‌ನಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್... ಓದನ್ನು ಮುಂದುವರಿಸಿ
ಮಂಗಳೂರು
ಜೀವವೇ ಕಳೆದ ಲೂಡೋ ಆಟ: ಪ್ಲಾಸ್ಟಿಕ್ ಕಾಯಿನ್ ನುಂಗಿ 8 ವರ್ಷದ ಬಾಲಕಿ ಸಾವು
ಮಂಗಳೂರು : ಲೂಡೋ ಆಟ ಆಡುತ್ತಿದ್ದ ವೇಳೆ ಪ್ಲಾಸ್ಟಿಕ್ ಕಾಯಿನ್ ನುಂ... ಓದನ್ನು ಮುಂದುವರಿಸಿ
ಬಿಜೆಪಿ ಮೇಲೆ ಸಿಎಂ ವಾಗ್ದಾಳಿ: ಚಂದ್ರು ಲಮಾಣಿ ವಿರುದ್ಧ ಲಂಚ ಆರೋಪ ಚರ್ಚೆಗೆ ಕೇಂದ್ರ
ಬೆಂಗಳೂರು : ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ವ... ಓದನ್ನು ಮುಂದುವರಿಸಿ
ಕಾಡಾನೆ ಕಾಟಕ್ಕೆ ಮತ್ತೊಂದು ಜೀವ ಬಲಿ – ಚಿಕ್ಕಮಗಳೂರಿನಲ್ಲಿ ಆತಂಕ
ಚಿಕ್ಕಮಗಳೂರು : ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ಕಾಡಾನೆ ದಾ... ಓದನ್ನು ಮುಂದುವರಿಸಿ
ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಮನ : ಶಾಲೆ-ಕಾಲೇಜುಗಳಲ್ಲಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ – ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರು : ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ 16 ವರ್ಷದೊಳಗಿನ ವಿದ... ಓದನ್ನು ಮುಂದುವರಿಸಿ
“ನಾನು ಹೋಗದೇ ಮತ್ಯಾರು ಹೋಗುತ್ತಾರೆ”: ಡಿಸಿಎಂ ಶಿವಕುಮಾರ್ ದೆಹಲಿಯ ಪ್ಲಾನ್ ಸ್ಪಷ್ಟ
ಬೆಂಗಳೂರು, ಫೆ. 22 : ಡಿಪುಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್... ಓದನ್ನು ಮುಂದುವರಿಸಿ
ಹೆಚ್.ಡಿ. ಕುಮಾರಸ್ವಾಮಿ ಟೀಕೆಯನ್ನು ತಮಾಷೆಯಾಗಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಸಾಮಾಜಿಕ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಲೇಖನದ ಬಗ್ಗ... ಓದನ್ನು ಮುಂದುವರಿಸಿ