“ಒಳ್ಳೆಯ ಕಾರಣಕ್ಕೆ ಸುದ್ದಿಯೇ ಇಲ್ಲ” — ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ಟೀಕೆ
ವಿಜಯಪುರ: ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ದಿನವೂ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದರು. ನಗರದಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸುನೀಲ್ ಕುಮಾರ್ ಜೊತೆಯಾಗಿ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಮುಡಾ, ಡ್ರಗ್ಸ್ ಪ್ರಕರಣ, ವಾಲ್ಮೀಕಿ ಹಗರಣ, ರೈತರ ಹಾಗೂ ಸರ್ಕಾರಿ ನೌಕರರ ಆತ್ಮಹತ್ಯೆ ಸೇರಿದಂತೆ ಹಲವು ನಕಾರಾತ್ಮಕ ವಿಚಾರಗಳ ಕಾರಣದಿಂದಲೇ ಸರ್ಕಾರ ಸುದ್ದಿಯಲ್ಲಿದೆ ಎಂದು ಆರೋಪಿಸಿದರು.
“ಒಂದು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಸಿಎಂ ಹಾಗೂ ಸಚಿವರು ಹೇಳಲಿ” ಎಂದು ಸವಾಲು ಹಾಕಿದ ಅವರು, ಸರ್ಕಾರದ ಸಾಧನೆಗಳ ಬಗ್ಗೆ ಪ್ರಶ್ನೆ ಎತ್ತಿದರು. ಉಪಚುನಾವಣೆ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಿರುವುದನ್ನೂ ಪ್ರಶ್ನಿಸಿದ ಅವರು, “ಚುನಾವಣೆ ಬಳಿಕ ಅದನ್ನು ಮುಂದುವರಿಸುತ್ತಾರೆಯೇ ಎಂಬುದು ಅನುಮಾನ” ಎಂದು ವ್ಯಂಗ್ಯವಾಡಿದರು.
ಬೆಲೆ ಏರಿಕೆ ವಿಷಯದಲ್ಲಿಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಅಬಕಾರಿ ಸುಂಕ, ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕ ಹೆಚ್ಚಿಸಿರುವುದನ್ನು “ಹಗಲುದರೋಡೆ” ಎಂದು ಟೀಕಿಸಿದರು. ಡ್ರಗ್ಸ್ ಸಮಸ್ಯೆಯ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಡ್ರಗ್ ಪೆಡ್ಲರ್‌ಗಳು ಹೆಚ್ಚುತ್ತಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕರ್ನಾಟಕಕ್ಕೆ ಕೇಂದ್ರ ಅನ್ಯಾಯ – ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾ... ಓದನ್ನು ಮುಂದುವರಿಸಿ
“ಜನರ ಪ್ರೀತಿಯೇ ದೊಡ್ಡ ಗೌರವ” – ಡಾಕ್ಟರೇಟ್ ತಿರಸ್ಕರಿಸಿದ ಬೊಮ್ಮಾಯಿ
ಬೆಂಗಳೂರು: ಹಾವೇರಿ ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿ ಬಸವರಾ... ಓದನ್ನು ಮುಂದುವರಿಸಿ
ಐಪಿಎಲ್ ನಿಲ್ಲಿಸಬೇಕು: ರಾಮನಗರದಲ್ಲಿ ವಾಟಾಳ್ ಆಕ್ರೋಶ
ರಾಮನಗರ: ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ರಾಮನ... ಓದನ್ನು ಮುಂದುವರಿಸಿ
“ಭಯದಿಂದ ಬದುಕುತ್ತಿದ್ದಾರೆ ಮಹಿಳೆಯರು” - ಸಿದ್ದರಾಮಯ್ಯ ಸರ್ಕಾರ ವಿರುದ್ಧ ಬೊಮ್ಮಾಯಿ ಆರೋಪ
ಬಾಗಲಕೋಟೆ: ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಥಕವಾಗಿದೆ... ಓದನ್ನು ಮುಂದುವರಿಸಿ
ಅಭಿವೃದ್ಧಿಗಿಂತ ಗ್ಯಾರಂಟಿ? ಸರ್ಕಾರ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ
ದಾವಣಗೆರೆ: ಎಲ್‌ಪಿಜಿ (LPG) ಅಭಾವದ ಹಿನ್ನೆಲೆ ಆಟೋ ಚಾಲಕರಿಗೆ ಸಣ... ಓದನ್ನು ಮುಂದುವರಿಸಿ
ಬಿಜೆಪಿ ಗೆಲ್ಲಬಾರದು: ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಮನವಿ
ಬಾಗಲಕೋಟೆ : ರೈತ-ಕಾರ್ಮಿಕ ವರ್ಗ ಹಾಗೂ ಶೋಷಿತ ಸಮುದಾಯಗಳನ್ನು ಒಟ್... ಓದನ್ನು ಮುಂದುವರಿಸಿ
“ಬಡವರ ಪರ ಕಾಂಗ್ರೆಸ್” — ಉಪ ಚುನಾವಣೆಗೆ ಸಿದ್ದರಾಮಯ್ಯ ಕರೆ
ಬಾಗಲಕೋಟೆ: ರೈತ-ಕಾರ್ಮಿಕ ವರ್ಗದ ಜೊತೆಗೆ ಶೋಷಿತ ಸಮುದಾಯಗಳನ್ನು ಒ... ಓದನ್ನು ಮುಂದುವರಿಸಿ
ಮಡಿಕೇರಿ
ತಡಿಯಂಡಮೋಳ್ ಟ್ರೆಕ್ಕಿಂಗ್ ದುರಂತ: 4ನೇ ದಿನವೂ ಮಹಿಳೆ ನಾಪತ್ತೆ
ಮಡಿಕೇರಿ: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಕ... ಓದನ್ನು ಮುಂದುವರಿಸಿ
ಆಧಾರಿತ RF ಟೆಕ್ : ಬೆಂಗಳೂರಿನ ಸ್ಟಾರ್ಟ್‌ಅಪ್‌ನಿಂದ ‘ಡಾರ್ಕ್ ಶಿಪ್ಪಿಂಗ್’ ಪತ್ತೆ ಮಾಡುವ ಹೊಸ ತಂತ್ರಜ್ಞಾನ
ಬೆಂಗಳೂರು: ಪಶ್ಚಿಮ ಏಷ್ಯಾ ಸಂಕಷ್ಟದ ನಡುವೆ ಕಳ್ಳ ಸಾಗಣೆ, ಅಕ್ರಮ... ಓದನ್ನು ಮುಂದುವರಿಸಿ
IndiGo ವಿಮಾನದಲ್ಲಿ ‘ಬಾಂಬ್’ ಸಂದೇಶ: 183 ಪ್ರಯಾಣಿಕರ ತುರ್ತು ಇಳಿಕೆ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು... ಓದನ್ನು ಮುಂದುವರಿಸಿ