ಫಾರ್ಮಾ ಕ್ಷೇತ್ರಕ್ಕೆ ಶಾಕ್ : ಅಮೆರಿಕದ ದೊಡ್ಡ ಕ್ರಮ- ಔಷಧ ಆಮದು ಮೇಲೆ 100% ಸುಂಕ

ವಾಷಿಂಗ್ಟನ್: ಇರಾನ್‌ ಯುದ್ಧದ ನಡುವೆಯೇ ಅಮೆರಿಕ ಮತ್ತೊಂದು ದೊಡ್ಡ ಆರ್ಥಿಕ ಕ್ರಮಕ್ಕೆ ಮುಂದಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಾಂಡೆಡ್ ಮತ್ತು ಪೇಟೆಂಟ್ ಹೊಂದಿರುವ ಔಷಧಗಳ ಆಮದು ಮೇಲೆ 100% ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಈ ಕ್ರಮದ ಮುಖ್ಯ ಉದ್ದೇಶ, ಔಷಧ ತಯಾರಿಕಾ ಕಂಪನಿಗಳನ್ನು ಅಮೆರಿಕದಲ್ಲೇ ಉತ್ಪಾದನೆ ನಡೆಸುವಂತೆ ಪ್ರೇರೇಪಿಸುವುದು, ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ದೇಶೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಾಗಿದೆ.

 

ಈ ಹೊಸ ನಿಯಮದ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಒಪ್ಪುವ ಕಂಪನಿಗಳಿಗೆ ಸುಂಕವನ್ನು 20%ಕ್ಕೆ ಇಳಿಕೆ ಮಾಡಲಾಗುತ್ತದೆ. ಆದರೆ 2030ರೊಳಗೆ ಉತ್ಪಾದನೆ ಆರಂಭಿಸದಿದ್ದರೆ, ಮತ್ತೆ 100% ಸುಂಕ ಜಾರಿಯಾಗಲಿದೆ. ಇನ್ನು, ಕಂಪನಿಗಳು ಅಮೆರಿಕದಲ್ಲೇ ಔಷಧ ತಯಾರಿಸಿ ಕಡಿಮೆ ಬೆಲೆಗೆ ಪೂರೈಸಲು ಒಪ್ಪಿದರೆ, ಅಂತಹ ಕಂಪನಿಗಳಿಗೆ ಸಂಪೂರ್ಣ ಸುಂಕ ವಿನಾಯಿತಿಯೂ ನೀಡಲಾಗುತ್ತದೆ.

 

ದೊಡ್ಡ ಕಂಪನಿಗಳಿಗೆ ತಮ್ಮ ಯೋಜನೆಗಳನ್ನು ಸಲ್ಲಿಸಲು 120 ದಿನಗಳ ಗಡುವು ನೀಡಲಾಗಿದ್ದು, ಸಣ್ಣ ಕಂಪನಿಗಳಿಗೆ 180 ದಿನಗಳ ಅವಧಿ ನಿಗದಿಪಡಿಸಲಾಗಿದೆ. ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಿಂದ ಆಗಮಿಸುವ ಔಷಧಗಳಿಗೆ ಸುಮಾರು 15% ಸುಂಕ ವಿಧಿಸಲಾಗುತ್ತದೆ. ಬ್ರಿಟನ್‌ಗೆ ಇನ್ನಷ್ಟು ರಿಯಾಯಿತಿ ಸಿಗುವ ಸಾಧ್ಯತೆಯಿದೆ.

 

ಗಮನಾರ್ಹ ವಿಷಯವೆಂದರೆ, ಈ ಆದೇಶವು ಸಾಮಾನ್ಯ ಜನರಿಕ್ ಔಷಧಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಬಳಸುವ ಬಹುತೇಕ ಔಷಧಗಳು ಜನರಿಕ್ ಆಗಿರುವುದರಿಂದ, ತಕ್ಷಣದ ಬೆಲೆ ಏರಿಕೆ ಸಮಸ್ಯೆ ಎದುರಾಗುವುದಿಲ್ಲ. ಜನರಿಕ್ ಔಷಧಗಳಿಗೆ ವಿನಾಯಿತಿ ಇರುವ ಹಿನ್ನೆಲೆ, ಭಾರತಕ್ಕೆ ತಕ್ಷಣದ ದೊಡ್ಡ ಪರಿಣಾಮ ಇರುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 hours ago

   
Image 1
Image 1

ಅಮೆರಿಕದ ಮತ್ತೊಂದು F-35 ವಿಮಾನ ಪತನ? ಇರಾನ್ ದಾವೆ

ಟೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1

ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1

ಅಮೆರಿಕ ಸೇನೆಯಲ್ಲಿ ದೊಡ್ಡ ಬೆಳವಣಿಗೆ: ಮುಖ್ಯಸ್ಥರಿಗೆ ರಾಜೀನಾಮೆ ಸೂಚನೆ

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕ ಸೇನೆಯಲ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1

“ಭಾರತೀಯ ಹಡಗುಗಳು ಸುರಕ್ಷಿತ” – ಇರಾನ್ ಸ್ಪಷ್ಟನೆ

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕ್ಕೇರಿರುವ ಹಿನ್... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1

ಟ್ರಂಪ್ ಹೇಳಿಕೆಗೆ ಇರಾನ್ ಕೌಂಟರ್: “ಸುಳ್ಳು” ಎಂದು ಖಂಡನೆ

ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ನಡುವೆ ಕದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಪ್ರೇಯಸಿಯ ಜೊತೆ ಗಂಡ… ಅಚಾನಕ್ ಬಂದ ಹೆಂಡತಿ: ವೈರಲ್ ವಿಡಿಯೋ!

ಥೈಲ್ಯಾಂಡ್: ಗಂಡ–ಹೆಂಡತಿ ಹಾಗೂ ಮತ್ತೊಬ್ಬ ಮಹಿಳೆ ನಡುವೆ ನಡೆದ ಗಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ನಿಧನ

ಇಸ್ಲಾಮಾಬಾದ್: ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಹೊಸ ಬೆಡ್‌ಶೀಟ್‌ ತೊಳೆಯದೆ ಉಪಯೋಗಿಸಿದ ವ್ಯಕ್ತಿ ಬೆಳಿಗ್ಗೆ ನೀಲಿ ಬಣ್ಣದಲ್ಲಿ ಎದ್ದನು

ಲಂಡನ್: ಯುನೈಟೆಡ್ ಕಿಂಗ್‌ಡಮ್‌ನಲ್ಲಿ 42 ವರ್ಷದ ಟೋಮಿ ಲಿಂಚ್ ಅವರ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಮಾಜಿ ರ್ಯಾಪರ್ ಬಾಲೇಂದ್ರ ಶಾ ನೇಪಾಳದ 47ನೇ ಪ್ರಧಾನಿ - ಬೆಂಗಳೂರಿನಲ್ಲಿ ಓದಿದ ಬಾಲೇಂದ್ರ ಶಾ!

ಕಠ್ಮಂಡು: ನೇಪಾಳದಲ್ಲಿ ನಡೆದ ರಾಜಕೀಯ ಬದಲಾವಣೆಯ ನಡುವೆಯೇ, ಮಾಜಿ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಹಾರ್ಮುಜ್‌ ಜಲಸಂಧಿಯಲ್ಲಿ ಚೀನೀ ಹಡಗುಗಳಿಗೆ ಇರಾನ್ ನಿರಾಕರಣೆ – ಗಲ್ಫ್ ದೇಶಗಳಿಗೆ ಸರಕು ಸಾಗಣೆ ಅಡಚಣೆ

ವಾಷಿಂಗ್ಟನ್: ಇರಾನ್‌ ಹಾರ್ಮುಜ್‌ ಜಲಸಂಧಿ ಮೂಲಕ ಸಾಗಣೆಗೆ ಪ್ರಯತ್... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1