ಫೆಬ್ರವರಿ 11, 2026 - ಬುಧವಾರದ ರಾಶಿ ಭವಿಷ್ಯ

ಮೇಷ ರಾಶಿ – ಇಂದು ಮೇಷ ರಾಶಿಯವರಿಗೆ ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ದಿನವಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ಉತ್ತಮ ಅವಕಾಶಗಳು ಒದಗಿಬರಲಿವೆ. ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಮಾಡುವ ಮೂಲಕ ಸಂತೋಷ ಮತ್ತು ನೆಮ್ಮದಿ ಅನುಭವಿಸುವಿರಿ. ಇಂದು ನಿಮಗೆ ಯಾವುದೇ ಫೋನ್ ಕರೆಗಳು ಅಥವಾ ಸಂದೇಶಗಳು ಬಂದರೆ ತಾಳ್ಮೆಯಿಂದ ಉತ್ತರಿಸುವುದು ಉತ್ತಮ. ನಿಮ್ಮ ಮಾತುಗಳಿಂದ ನಿಮ್ಮ ಗೌರವಕ್ಕೆ ಯಾವುದೇ ಧಕ್ಕೆ ಬರದಂತೆ ಎಚ್ಚರ ವಹಿಸಿ. ವಾಕ್ ಶುದ್ಧಿಗಾಗಿ ಇಂದು ರಾಹುವಿಗೆ ಪ್ರಾರ್ಥನೆ ಮಾಡುವುದರಿಂದ ಶುಭಫಲ ದೊರೆಯಲಿದೆ.

 

ವೃಷಭ ರಾಶಿ – ಇಂದು ವೃಷಭ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ.ಮಕ್ಕಳ ವಿಚಾರದಲ್ಲಿ ಹೆಚ್ಚು ಗಮನ ಹರಿಸುವುದು ಅಗತ್ಯ. ಹಿಂದೆ ಸಂಗ್ರಹಿಸಿಕೊಂಡಿದ್ದ ಹಣಕ್ಕೆ ಅಡ್ಡಿ ಉಂಟಾಗುವ ಲಕ್ಷಣಗಳಿವೆ. ಪ್ರೇಮಿಗಳ ನಡುವೆ ಮಾತಿನ ಜಗಳ, ವಾದ–ವಿವಾದ ನಡೆಯುವ ಸಾಧ್ಯತೆ ಇದೆ. ಹೂಡಿಕೆ ಮಾಡಿದ್ದ ಹಣವು ಬೇರೆಯವರ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿ, ಅದರ ನಿಮಿತ್ತ ಕೋರ್ಟ್ ಮೆಟ್ಟಿಲೇರಬೇಕಾದ ಸಂದರ್ಭವೂ ಎದುರಾಗಬಹುದು—ಎಚ್ಚರ ಅಗತ್ಯ. ಇಂದು ಧಾನ್ಯಲಕ್ಷ್ಮಿ ಹಾಗೂ ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡುವುದರಿಂದ ಶುಭಫಲ ದೊರೆಯಲಿದೆ.

 

ಮಿಥುನ ರಾಶಿ – ಇಂದು ಮಿಥುನ ರಾಶಿಯವರು ತಮ್ಮ ಹಕ್ಕುಗಳು ಹಾಗೂ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದ ದಿನ. ಉನ್ನತ ಹುದ್ದೆಯಲ್ಲಿರುವವರಿಗೆ ಕೈಕೆಳಗೆ ಕೆಲಸ ಮಾಡುವವರಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ನೀವು ಕ್ಷಮೆಯಾಚಿಸಬೇಕಾದ ಪ್ರಸಂಗವೂ ಎದುರಾಗಬಹುದು. ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು ದೊರೆಯಲಿದೆ. ಇಂದು ಈಶ್ವರನನ್ನು ಆರಾಧಿಸುವುದು ಒಳಿತು.

 

ಕರ್ಕಾಟಕ ರಾಶಿ – ನಿಮ್ಮ ವಿಚಿತ್ರ ನಡವಳಿಕೆಯಿಂದ ನಿಮ್ಮ ಪ್ರೀತಿಪಾತ್ರರು ದೂರವಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಕೆಲವರು ಪ್ರಶಂಸಿಸಲಿದ್ದರೂ, ವೈಯಕ್ತಿಕ ಸ್ವಭಾವದ ಕಾರಣ ಅವಮಾನ ಹೆಚ್ಚಾಗಬಹುದು. ಇಂದು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದು ಅತ್ಯಗತ್ಯ.ಬೇರೆಯವರಿಗೆ ದುಃಖ ಉಂಟಾಗದಂತೆ ಎಚ್ಚರಿಕೆಯಿಂದ ಮಾತನಾಡಿ. ನವಗ್ರಹಗಳನ್ನು ಪ್ರಾರ್ಥನೆ ಮಾಡುವುದರಿಂದ ಮನಶಾಂತಿ ದೊರೆಯಲಿದೆ.

 

ಸಿಂಹ ರಾಶಿ – ಇಂದು ಸಿಂಹ ರಾಶಿಯವರಿಗೆ ಎಲ್ಲಾ ದಿಕ್ಕುಗಳಿಂದ ಶುಭ ಸುದ್ದಿ ಮತ್ತು ಶುಭಾಶಯಗಳು ಲಭಿಸಲಿವೆ. ಹಿಂದೆ ಮಾಡಿದ ಒಂದು ಕಾರ್ಯ ಇಂದು ನಿಮಗೆ ಹೆಚ್ಚಿನ ಗೌರವ ತಂದುಕೊಡಲಿದೆ. ಇಂದು ರಾತ್ರಿ ಹೊತ್ತಲ್ಲಿ ಪ್ರಯಾಣವನ್ನು ತಪ್ಪಿಸುವುದು ಉತ್ತಮ. ಹಿರಿಯರಿಗೆ ಗೌರವ, ಪುರಸ್ಕಾರ ಸಿಗುವ ದಿನವಾಗಿದೆ. ಯಾವುದೇ ಕಾರಣಕ್ಕೆ ಹೊರಡುವುದಿದ್ದರೆ ರಾತ್ರಿಯೊಳಗೆ ತಲುಪುವಂತೆ ಯೋಜಿಸಿ, ಇಲ್ಲವೇ ಪ್ರಯಾಣವನ್ನು ನಾಳೆಗೆ ಮುಂದೂಡಿ. ಗಣಪತಿಯನ್ನು ಪ್ರಾರ್ಥನೆ ಮಾಡಿ.

 

ಕನ್ಯಾ ರಾಶಿ – ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಿರುವ ಸಾಧ್ಯತೆ ಇದೆ. ಕೋಪವನ್ನು ನಿಮ್ಮ ಹಿಡಿತದಲ್ಲೇ ಇಟ್ಟುಕೊಳ್ಳುವುದು ಅತ್ಯವಶ್ಯಕ. ಉತ್ತಮ ಕಾರ್ಯಗಳತ್ತ ಗಮನ ಹರಿಸಿದರೆ ಒಳಿತು. ನಿಮ್ಮ ಸಲಹೆಗಳು ಇಂದು ಅನೇಕರಿಗೆ ಉಪಕಾರವಾಗಲಿವೆ. ಸಂಬಂಧಿಕರ ಮನೆಯಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ.

 

ತುಲಾ ರಾಶಿ – ತಂದೆಯ ಆರೋಗ್ಯದ ಬಗ್ಗೆ ವಿಶೇಷ ಗಮನ ವಹಿಸಿ. ಇಂದು ನಿಮ್ಮ ಕಾರ್ಯಕ್ಷೇತ್ರದಲ್ಲಿ ರಾಜಕೀಯ ನಡೆಯುವ ಸಾಧ್ಯತೆ ಇದೆ. ನಿಮ್ಮ ಮೇಲೆ ಹಣ ಅಥವಾ ಕಳ್ಳತನದ ಆರೋಪ ಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ. ಗಂಡ-ಹೆಂಡತಿಯ ನಡುವೆ ವೈಮನಸ್ಸು ಮೂಡುವ ಸಾಧ್ಯತೆ ಇದೆ. ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಂದರ್ಭದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳಬಹುದು. ಇಂದು ಹೆಚ್ಚು ಜಾಗೃತಿಯಿಂದ ಇರುವ ದಿನ. ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ.

 

ವೃಶ್ಚಿಕ ರಾಶಿ – ಹಿಂದೆ ಮಾಡಿದ ಸಾಲದ ಕಾರಣ ಇಂದು ಅವಮಾನ ಎದುರಾಗುವ ಸಾಧ್ಯತೆ ಇದೆ. ಸಮಯ ಕೇಳದೇ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಇತರೆ ಕೆಲಸಗಳಿಗೆ ಹಿನ್ನಡೆ ಉಂಟಾಗಬಹುದು. ಅಕ್ಕಪಕ್ಕದವರಿಂದ ಅವಮಾನ, ಗೌರವಕ್ಕೆ ಧಕ್ಕೆ ಬರುವ ಸೂಚನೆಗಳಿವೆ. ಮನೆಯ ವಾತಾವರಣ ಸಹಕಾರಿಯಾಗಿರುವುದಿಲ್ಲ.
ಮಹಾವಿಷ್ಣು ಮತ್ತು ಮಹಾಲಕ್ಷ್ಮಿಯನ್ನು ಆರಾಧಿಸಿ.

 

ಧನುಸ್ಸು ರಾಶಿ – ಇಂದು ವ್ಯಾಪಾರದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ಮಾಡಬೇಡಿ. ಖರ್ಚು ಹೆಚ್ಚಾಗುವ ಕಾರಣ ಮನಸ್ಸಿಗೆ ಅತೃಪ್ತಿ ಕಾಡುತ್ತದೆ. ಯಾವುದೇ ದುಬಾರಿ ವಸ್ತುಗಳನ್ನು ಇಂದು ಖರೀದಿಸುವುದನ್ನು ತಪ್ಪಿಸಿ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭ ಎದುರಾಗಬಹುದು. ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಪ್ರದರ್ಶಿಸಿ ಗೌರವ ಪಡೆಯಿರಿ, ತಾಳ್ಮೆ ಅಗತ್ಯ. ಭಗವತಿ ದೇವಿಯನ್ನು ಆರಾಧಿಸಿ.

 

ಮಕರ ರಾಶಿ – ತಾಯಿಯ ಆರೋಗ್ಯದಲ್ಲಿ ಏರುಪೇರು ಕಂಡುಬರುವ ಸಾಧ್ಯತೆ ಇದೆ—ಕಾಳಜಿ ವಹಿಸಿ. ದಂಪತಿಗಳ ನಡುವೆ ವೈಮನಸ್ಸು ಮೂಡುವ ಸೂಚನೆಗಳಿವೆ. ಹೋಟೆಲ್ ಉದ್ಯಮಿಗಳಿಗೆ ಇಂದು ಶುಭದಿನ. ಗಂಡ-ಹೆಂಡತಿಗೆ ಒಂದೇ ನಕ್ಷತ್ರ, ಒಂದೇ ರಾಶಿಯಾಗಿದ್ದರೆ ಪರಸ್ಪರ ದೂರವಾಗುವ ಅಥವಾ ಮನೆಬಿಟ್ಟು ಹೋಗುವ ಸೂಚನೆಗಳಿವೆ. ಲಕ್ಷ್ಮೀನಾರಾಯಣರನ್ನು ಆರಾಧಿಸಿ.

 

ಕುಂಭ ರಾಶಿ – ಇಂದು ಕೆಲಸದ ಒತ್ತಡ ಕಡಿಮೆಯಾಗಲಿದೆ, ಆದರೆ ಆಲಸ್ಯ ಬೇಡ. ಮನೆ ಕಟ್ಟುವ ಅಥವಾ ಖರೀದಿಸುವ ಮಾತುಕತೆಗೆ ಅನುಕೂಲಕರ ದಿನ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಶುಭದಿನ. ಎದುರಾಗಿ ಬಂದಿರುವ ಸವಾಲುಗಳಿಗೆ ಇಂದು ತಿರುವು ಸಿಗುವ ಸಾಧ್ಯತೆ ಇದೆ. ಸರಸ್ವತಿಯನ್ನು ಪ್ರಾರ್ಥನೆ ಮಾಡಿ.

 

ಮೀನ ರಾಶಿ – ಹೊಸ ಆಲೋಚನೆಗಳ ಬಗ್ಗೆ ಹೆಚ್ಚು ಕುತೂಹಲ ಇರುತ್ತದೆ. ಆದರೆ ಹೊರಗಿನವರಿಂದ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಎಚ್ಚರ ಅಗತ್ಯ. ನಿಮ್ಮ ಸಂಗಾತಿಯೊಂದಿಗೆ ಕೋಪ ಮತ್ತು ಅಸಮಾಧಾನ ಉಂಟಾಗಬಹುದು.
ಸಂಬಂಧಿಕರ ವಿಚಾರದಿಂದ ದುಃಖವಾಗುತ್ತದೆ. ಸಂಬಂಧಿಕರು ನಿಮ್ಮ ಅಭಿವೃದ್ಧಿಯನ್ನು ಸಹಿಸದ ಪರಿಸ್ಥಿತಿ ಎದುರಾಗಬಹುದು. ಪ್ರತ್ಯಂಗೀರಾ ದೇವಿಯನ್ನು ಆರಾಧಿಸಿ.

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1

ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ

ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1

ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ

ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಫೆಬ್ರವರಿ 10, 2026 - ಮಂಗಳವಾರದ ರಾಶಿ ಭವಿಷ್ಯ

ಮೇಷ ರಾಶಿ: ಭೂ ವ್ಯವಹಾರ ಹಾಗೂ ಹೂಡಿಕೆಯಿಂದ ಧನಲಾಭದ ಸೂಚನೆಗಳಿವೆ.... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಫೆಬ್ರವರಿ 9, 2026, ಸೋಮವಾರದ ರಾಶಿ ಭವಿಷ್ಯ

ಮೇಷ ರಾಶಿ : ಇಂದು ಮಿಶ್ರ ಫಲಗಳ ದಿನ ಶತ್ರುಗಳಿಂದ ತೊಂದರೆ ಉಂಟಾಗು... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಈ ಸಂಖ್ಯೆಯಲ್ಲಿ ಜನಿಸಿದವರು ಐಶ್ವರ್ಯಕ್ಕೆ ಕಾರಣರಾಗುತ್ತಾರೆ; ಕುಟುಂಬಕ್ಕೆ ಧನಲಾಭದ ಯೋಗ

ಅಂಕಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ಜೀವನ ಮಾತ್ರವಲ್ಲದೆ ಕುಟುಂಬದ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

ಫೆಬ್ರವರಿ 7, 2026, ಶನಿವಾರದ ರಾಶಿ ಭವಿಷ್ಯ

ಮೇಷ ರಾಶಿ – ಇಂದು ನೀವು ಬಹಳ ದಿನಗಳಿಂದ ಕಂಡಿದ್ದ ಪ್ರೀತಿಯ ಕನಸು... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1

ಫೆಬ್ರವರಿ 6, 2026,ಶುಕ್ರವಾರದ ರಾಶಿ ಭವಿಷ್ಯ

ಮೇಷ ರಾಶಿ  : ಸರ್ಕಾರಿ ವಲಯದಲ್ಲಿರುವವರ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಫೆಬ್ರವರಿ 5, 2026, ಗುರುವಾರದ ರಾಶಿ ಭವಿಷ್ಯ

ಮೇಷ ರಾಶಿ : ಇಂದು ಆತ್ಮವಿಶ್ವಾಸ ಹೆಚ್ಚಿರುತ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಫೆಬ್ರವರಿ 4, 2026, ಬುಧವಾರದ ರಾಶಿ ಭವಿಷ್ಯ

ಮೇಷ ರಾಶಿ : ಕೆಲಸದಲ್ಲಿ ಹೊಸ ಅವಕಾಶಗಳು ಕಾಣಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಫೆಬ್ರವರಿ 2, 2026, ಸೋಮವಾರದ ರಾಶಿ ಭವಿಷ್ಯ

ಮೇಷ ರಾಶಿ  : ಇಂದು ಹೊಸ ಆರಂಭಗಳಿಗೆ ಉತ್ತಮ ದಿನ. ಕೆಲಸದಲ್ಲ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1