PM Kisan ಹೊಸ ನಿಯಮ: ಫಾರ್ಮರ್ ಐಡಿ ಇಲ್ಲದಿದ್ದರೆ ₹2,000 ಕಂತು ಹಣ ಲಭ್ಯವಿಲ್ಲ
ಬೆಂಗಳೂರು: ದೇಶದ ಸಣ್ಣ ಮತ್ತು ಮಧ್ಯಮ ರೈತರಿಗೆ ಆರ್ಥಿಕ ನೆರವು ನೀಡುವ PM Kisan Samman Nidhi Yojana ಯೋಜನೆಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇನ್ನುಮುಂದೆ ಯೋಜನೆಯ ಕಂತು ಪಡೆಯಲು ಫಾರ್ಮರ್ ಐಡಿ ಕಡ್ಡಾಯವಾಗಿದೆ.
ಯೋಜನೆಯಡಿ ರೈತರಿಗೆ ವರ್ಷಕ್ಕೆ ₹6,000 ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000 ರೈತರ ಖಾತೆಗೆ ಜಮೆಯಾಗುತ್ತದೆ. ಈಗ ರೈತರು 22ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಸೂಚನೆಯಂತೆ, 2,000 ರೂಪಾಯಿ ಪಡೆಯಲು ರೈತರು ಫಾರ್ಮರ್ ಐಡಿ ಹೊಂದಿರಬೇಕು. ಕರ್ನಾಟಕದ ರೈತರು fruits.karnataka.gov.in ವೆಬ್‌ಸೈಟ್ ಮೂಲಕ ಐಡಿ ಪಡೆಯಬಹುದು. ಜೊತೆಗೆ pmkisan.gov.in ಪೋರ್ಟಲ್‌ನಲ್ಲಿ ಇ-ಆಧಾರ್ ಮಾಹಿತಿ ನಮೂದಿಸುವ ಮೂಲಕವೂ ಐಡಿ ಸೃಷ್ಟಿಸಬಹುದು.
ಇ-ಕೆವೈಸಿ ಸಬ್ಮಿಷನ್ ಕಡ್ಡಾಯ: ಯೋಜನೆಯ ಲಾಭ ಪಡೆಯಲು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ಕಂತು ಹಣ ಲಭ್ಯವಿಲ್ಲ. ಅಲ್ಲದೇ, ಆಧಾರ್ ವಿವರಗಳಲ್ಲಿ ವ್ಯತ್ಯಾಸ, ಹೆಸರು ತಿದ್ದುಪಡಿ ಮುಂತಾದ ಸಮಸ್ಯೆಗಳಿದ್ದರೆ ಸಹ ಹಣ ಜಮೆಯಾಗದ ಸಾಧ್ಯತೆ ಇದೆ.
PM Kisan ಯೋಜನೆ 2019ರಲ್ಲಿ ಜಾರಿಗೆ ಬಂದಿದೆ. ಪ್ರತಿ ಕಂತಿನಲ್ಲಿ ಸುಮಾರು 9 ಕೋಟಿ ರೈತರಿಗೆ ₹18,000 ಕೋಟಿ ವಿತರಿಸಲಾಗುತ್ತದೆ. ಇದುವರೆಗೆ ಯೋಜನೆಯಡಿ ಸುಮಾರು ₹3.7 ಲಕ್ಷ ಕೋಟಿ ರೈತರ ಖಾತೆಗೆ ಜಮೆಯಾಗಿದ್ದು, ರೈತರಿಗೆ ನಿರಂತರ ಆರ್ಥಿಕ ನೆರವು ಒದಗಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ರೈತರಿಗೆ ಹೊಸ ಆದಾಯದ ಮಾರ್ಗ: ಕಾಡಿನ ರಾಜ ಮಹೋಗಾನಿ: 15 ವರ್ಷದಲ್ಲಿ ₹2 ಕೋಟಿ ಆದಾಯದ ಸಾಧ್ಯತೆ
ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿರುವ ರೈತರಿಗೆ ಮಹೋಗಾನಿ ಬ... ಓದನ್ನು ಮುಂದುವರಿಸಿ
ಕೋಲಾರ ಎಪಿಎಂಸಿ ಮಾರುಕಟ್ಟೆ ಖಾಲಿ: ಇರಾನ್–ಇಸ್ರೇಲ್ ಯುದ್ಧದಿಂದ ಟೊಮಾಟೊ ಹಾಗೂ ತರಕಾರಿಗಳ ವ್ಯಾಪಾರ ಸ್ಥಗಿತ
ಕೋಲಾರ, ಮಾ. 21: ಮಧ್ಯಪ್ರಾಚ್ಯದ ಇರಾನ್–ಇಸ್ರೇಲ್ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ
ದಾವಣಗೆರೆ ಈರುಳ್ಳಿ ಮಾರುಕಟ್ಟೆ: ಬೆಲೆ ಕುಸಿತ ರೈತರಿಗೆ ಸಂಕಷ್ಟ, ಯುದ್ಧದ ಪ್ರಭಾವ ಸ್ಪಷ್ಟ
ದಾವಣಗೆರೆ: ಜಾಗತಿಕ ಯುದ್ಧದ ಪರಿಣಾಮ ದಾವಣಗೆರೆಯ ಈರುಳ್ಳಿ ಮಾರುಕಟ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಮಳೆಯಿಂದ ರಾಗಿ ಖರೀದಿ ಸ್ಥಗಿತ: ರೈತರು ಪರದಾಟ, ಟ್ರಾಕ್ಟರ್‌ಗಳಲ್ಲಿ ಸಿಲಿಂಗ್ ಹಾನಿ ಭೀತಿ
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟ... ಓದನ್ನು ಮುಂದುವರಿಸಿ
ಹನೂರುಗೆ 490 ಕೋಟಿ ರೂ.: ಸಣ್ಣ ನೀರಾವರಿ ಯೋಜನೆಗಳಿಗೆ ಭರ್ಜರಿ ಅನುದಾನ
ಬೆಂಗಳೂರು: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತ... ಓದನ್ನು ಮುಂದುವರಿಸಿ
ಅಮನಿ ಕೆರೆ ತೋಟಿ ಏತ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ರೈತರಿಗೆ ಬಾಕಿ ಪರಿಹಾರ ಶೀಘ್ರ ಬಿಡುಗಡೆ ಭರವಸೆ
ಬೆಂಗಳೂರು: “ಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳ... ಓದನ್ನು ಮುಂದುವರಿಸಿ
ರೈತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಹೊಸ ಸಹಕಾರಿ ಕೃಷಿ ಸಾಲ ಯೋಜನೆ
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದ ರೈತರ ಆರ್ಥಿಕ ಸ್ಥಿತಿ ಸದೃಢ... ಓದನ್ನು ಮುಂದುವರಿಸಿ
ಕಬ್ಬು ಬೆಳೆಗಾರರಿಗೆ ₹100 ಹೆಚ್ಚುವರಿ ಹಣ ನೇರ ಜಮಾ ಮಾಡಲು ಜಿಲ್ಲಾಧಿಕಾರಿಗಳ ಸೂಚನೆ: ಡಾ. ಕುಮಾರ
ಮಂಡ್ಯ: ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು 2025-26ನೇ ಸ... ಓದನ್ನು ಮುಂದುವರಿಸಿ
ಹವಾಮಾನ ಹೊಡೆತ: ರಾಮನಗರದಲ್ಲಿ ಮಾವು ಬೆಳೆ ಅರ್ಧಕ್ಕೆ ಕುಸಿತ
ರಾಮನಗರ: ಮಾವು ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಪ್ರಮುಖ ತೋಟಗಾರ... ಓದನ್ನು ಮುಂದುವರಿಸಿ
ರೈತರಿಗೆ ಸಿಹಿ ಸುದ್ದಿ: ಪಿಎಂ ಕಿಸಾನ್ 22ನೇ ಕಂತಿನ ₹2,000 ಮಾರ್ಚ್ 13ಕ್ಕೆ ಜಮೆ ಸಾಧ್ಯತೆ
ನವದೆಹಲಿ: PM Kisan Samman Nidhi Yojana ಯೋಜನೆಯ 22ನೇ ಕಂತಿನ... ಓದನ್ನು ಮುಂದುವರಿಸಿ