ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕುಮಾರಸ್ವಾಮಿ ಕಾರಣ? ಮದ್ದೂರು ಶಾಸಕ ಉದಯ್ ಅಚ್ಚರಿ ಹೇಳಿಕೆ
ಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂದಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಿದ್ದಾರೆ ಎಂದು ಶಾಸಕ ಕೆ.ಎಂ. ಉದಯ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಮುಂದೆ ರಾಜಕೀಯವಾಗಿ ಯಾರು ಬೆಳೆಯಬಾರದು ಎಂಬ ಮನೋಭಾವದಿಂದಲೇ ಈ ಬೆಳವಣಿಗೆ ನಡೆದಿದೆ ಎಂದು ಆರೋಪಿಸಿದರು. “ಅವರ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಅವರ ಜನಪ್ರಿಯತೆ ಸಹಿಸದೆ ಚುನಾವಣಾ ವೇಳೆ ಪೆನ್ ಡ್ರೈವ್ ಸೃಷ್ಟಿಸಿ ಜೈಲಿಗೆ ಹಾಕಿಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮನಸ್ಸು ಮಾಡಿದ್ದರೆ ಪ್ರಜ್ವಲ್ ರೇವಣ್ಣರನ್ನು ಹೊರಗೆ ತರಬಹುದಿತ್ತು. ಆದರೆ ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂದಲೇ ಅವರು ಜೈಲಿನಿಂದ ಹೊರಬರಲು ಆಗುತ್ತಿಲ್ಲ ಎಂದು ಟೀಕಿಸಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಉದಯ್, “ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಕುಮಾರಸ್ವಾಮಿ ಅವರು ಗ್ರಾಮೀಣ ಪ್ರದೇಶಗಳು ಉಳಿಯಬೇಕು, ನಗರೀಕರಣ ಆಗಬಾರದು ಎಂಬ ಪ್ರತಿಭಟನೆಗಳಿಗೆ ಬೆಂಬಲ ನೀಡುತ್ತಿರುವುದು ಸರಿಯೇ?” ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ತಮ್ಮ ಮೇಲೆ ಅಪವಾದ ತರಲು ವಿಪಕ್ಷಗಳು ಹೋರಾಟ ನಡೆಸಿಸುತ್ತಿವೆ ಎಂದು ದೂರಿದರು. ಮದ್ದೂರು ನಗರವನ್ನು ನಗರಸಭೆಗೇರಿಸುವ ಪ್ರಸ್ತಾವನೆ ಜನರ ಒತ್ತಾಯದ ಮೇರೆಗೆ ಸಲ್ಲಿಸಲಾಗಿದೆ, ಇದು ವೈಯಕ್ತಿಕ ನಿರ್ಧಾರವಲ್ಲ ಎಂದರು.
ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ₹8 ಸಾವಿರ ಕೋಟಿ ಘೋಷಣೆ ಮಾಡಿದ್ದನ್ನು ಉಲ್ಲೇಖಿಸಿ, “ದಾಖಲೆ ಸಮೇತ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಬಿಡುಗಡೆ ಮಾಡಲಿ” ಎಂದು ಸವಾಲು ಹಾಕಿದರು.
ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಅವರು, “ಲೋಕಸಭಾ ಸದಸ್ಯನಾದರೆ ಪ್ರಧಾನಿ ಬಳಿ ಚರ್ಚಿಸಿ ಐದು ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಎಲ್ಲಿದೆ ಅನುಮತಿ? ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನ್ಯಾಯಾಲಯದ ಮೂಲಕ ಹೋರಾಟ ಮಾಡಿ ಒಪ್ಪಿಗೆ ಪಡೆದಿದ್ದಾರೆ” ಎಂದು ಹೇಳಿದರು.
ಇನ್ನಷ್ಟು ಟೀಕಿಸುತ್ತಾ, “ಎರಡು ಬಾರಿ ಸಿಎಂ ಆಗಿದ್ದಾಗ ಜಿಲ್ಲೆಯ ಕೊನೆ ಭಾಗಕ್ಕೆ ಕೆಆರ್‌ಎಸ್ ಜಲಾಶಯದಿಂದ ನೀರು ಸರಾಗವಾಗಿ ಹರಿಯಲು ನಾಲೆಗಳ ಆಧುನಿಕರಣ ಮಾಡಿದ್ದೀರಾ? ರೈತರಿಗೆ ಶಾಶ್ವತ ಪರಿಹಾರ ನೀಡಿದ್ದೀರಾ?” ಎಂದು ಪ್ರಶ್ನಿಸಿದರು.
ಹಳೆಯ ಚುನಾವಣೆಯಲ್ಲಿ ಡಬಲ್ ಬಿ-ಫಾರಂ ನೀಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ದಿವಂಗತ ಎಂ.ಎಸ್. ಸಿದ್ದರಾಜು ಅವರನ್ನು ಸೋಲಿಸಿದ ಘಟನೆಗೂ ಉಲ್ಲೇಖ ಮಾಡಿ, ಕ್ಷೇತ್ರದ ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮದ್ದೂರು ತಾಲೂಕಿನಲ್ಲಿ 70 ಎಕರೆ ಜಮೀನು ಕೈಗಾರಿಕಾ ಪ್ರದೇಶಕ್ಕೆ ನೀಡುವ ಕುರಿತು ಮಾತನಾಡಿ, “ಯಾವ ಕೈಗಾರಿಕೆ ತರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಅಭಿವೃದ್ಧಿಗೆ ಆಸಕ್ತಿ ಮತ್ತು ರೈತರ ಕಷ್ಟಗಳ ಅರಿವು ಇರಬೇಕು, ಬರಿ ಭಾಷಣಗಳಿಂದ ಸಾಲದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಯುವ ಘಟಕದ ಅಧ್ಯಕ್ಷ ಹಿತೈಶ್, ಮುಖಂಡರಾದ ಕೆ.ಎಂ. ರವಿ, ಮಹಾಲಿಂಗಯ್ಯ, ವಿಜಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಏರಿಕೆ – 3 ಹೊಸ ಸ್ವಚ್ಛತಾ ರಾಯಭಾರಿಗಳು ನೇಮಕ
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಕಡಿಮೆ ಮೌಲ್ಯದ ಪ್ಲಾಸ್ಟಿಕ್ ತ... ಓದನ್ನು ಮುಂದುವರಿಸಿ
ಇರಾನ್ ನಾಯಕನ ಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಯತ್ನಾಳ್ ದೇಶದ್ರೋಹ ಟೀಕೆ
ವಿಜಯಪುರ: ಕರ್ನಾಟಕದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್... ಓದನ್ನು ಮುಂದುವರಿಸಿ
ಹುಬ್ಬಳ್ಳಿ ಎನ್‌ಕೌಂಟರ್: ಹೈಕೋರ್ಟ್ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶ
ಬೆಂಗಳೂರು: ಹುಬ್ಬಳ್ಳಿ ನಗರದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾ... ಓದನ್ನು ಮುಂದುವರಿಸಿ
ಸಿಎಂ–ಡಿಸಿಎಂ ಬೆಂಬಲಿಗರ ಕಚ್ಚಾಟ; ಆಡಳಿತ ಕುಸಿತ.. ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ ಅವರು ರಾಜ್ಯದಲ್ಲಿ ಸಿ... ಓದನ್ನು ಮುಂದುವರಿಸಿ
ಫೀಸ್ ವಿಚಾರಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ನಿರಾಕರಣೆ: ರಾಣೇಬೆನ್ನೂರಿನಲ್ಲಿ ಶಿಕ್ಷಕಿ ಅಮಾನತು
ಹಾವೇರಿ: ರಾಣೇಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜುನಲ್ಲಿ ಶನಿವಾರ (... ಓದನ್ನು ಮುಂದುವರಿಸಿ
ಚಂದ್ರಗ್ರಹಣದ ದಿನವೂ ದರ್ಶನಕ್ಕೆ ಅವಕಾಶ: ಶ್ರೀ ಮಲೆ ಮಹದೇಶ್ವರ ದೇವಸ್ಥಾನ ಸ್ಪಷ್ಟನೆ
ಚಾಮರಾಜನಗರ: ಮಾರ್ಚ್ 3ರಂದು ಮಧ್ಯಾಹ್ನದ ಬಳಿಕ ಚಂದ್ರಗ್ರಹಣ ಇರುವ... ಓದನ್ನು ಮುಂದುವರಿಸಿ
ಬಳ್ಳಾರಿಯ 35 ಮಂದಿ ದುಬೈನಲ್ಲಿ ಸೇಫ್: ಶಾಸಕ ಭರತ್ ರೆಡ್ಡಿ ಭರವಸೆ
ಬಳ್ಳಾರಿ/ದುಬೈ: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ದು... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಭೀಕರ ಅಪಘಾತ: ಬುಲೆರೋ–ಬೈಕ್ ಡಿಕ್ಕಿ, ಹಲವರಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಯುದ್ಧ ಹಿನ್ನಲೆ: ಸಂಕಷ್ಟದಲ್ಲಿರುವವರ ನೆರವಿಗೆ ಸರ್ಕಾರ ಸಜ್ಜು-ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯ... ಓದನ್ನು ಮುಂದುವರಿಸಿ
ಬಿಪಿಎಲ್ ಕುಟುಂಬಗಳಿಗೆ ಮಾತ್ರ ಗ್ಯಾರಂಟಿ ಲಾಭ: ಶ್ರೀಮಂತರು ಸ್ವಯಂ ತ್ಯಜಿಸಬೇಕು – ಪಾಟೀಲ್
ಬೆಂಗಳೂರು: ವಿಜಯಪುರದ ಆಲಮಟ್ಟಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಎಂ... ಓದನ್ನು ಮುಂದುವರಿಸಿ