ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ – ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಪರಮೇಶ್ವರ್
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಎರಡು ವರ್ಷಗಳಿಗೂ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023ರಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದರಿಂದ ಈ ಬಗ್ಗೆ ಯಾವುದೇ ಅನುಮಾನ ಅಗತ್ಯವಿಲ್ಲ ಎಂದರು. “2013ರಲ್ಲಿ ಸಹ ಹೈಕಮಾಂಡ್ ಸ್ಪಷ್ಟ ಅವಧಿ ಘೋಷಿಸದಿದ್ದರೂ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದರು. ಈ ಬಾರಿ ಕೂಡ ಅವರು ಪೂರ್ಣಾವಧಿ ಮುಗಿಸುತ್ತಾರೆ,” ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಕುರಿತು ಯಾವುದೇ ಚರ್ಚೆ ಅಥವಾ ಬೆಳವಣಿಗೆ ಇಲ್ಲ. ಹೈಕಮಾಂಡ್ ಆದೇಶವಿಲ್ಲದೆ ವೈಯಕ್ತಿಕ ಅಭಿಪ್ರಾಯಗಳಿಗೆ ಮಹತ್ವವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದೇ ವೇಳೆ, ಡಿ.ಕೆ. ಶಿವಕುಮಾರ್ ನಮ್ಮ ನಾಯಕರು ಎಂದು ಹೇಳಿದ ಪರಮೇಶ್ವರ್, ರಾಜ್ಯದ ಎಲ್ಲ ಶಾಸಕರು ಸಿಎಂ ಸ್ಥಾನಕ್ಕೆ ಅರ್ಹರು ಎಂಬುದು ಸಿದ್ಧಾಂತ ಮಾತ್ರ ಎಂದು ತಿಳಿಸಿದರು. ಉಪಚುನಾವಣೆ ಫಲಿತಾಂಶಕ್ಕೂ ಸಿಎಂ ಸ್ಥಾನ ಬದಲಾವಣೆಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ ಅವರು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವಂತೆ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ವೇಗದ ಕಾರಿನ ಡಿಕ್ಕಿ: 9 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಬೀದರ್: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕ... ಓದನ್ನು ಮುಂದುವರಿಸಿ
“ನನ್ನನ್ನು ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ” – ಸಿಎಂ ಸಿದ್ದರಾಮಯ್ಯ ಕಿಡಿ
ದಾವಣಗೆರೆ: ನಾವು ಮಾಡಿದ ಅಭಿವೃದ್ಧಿ ಮತ್ತು ಜನಪರ ಕೆಲಸಗಳ ಆಧಾರದಲ... ಓದನ್ನು ಮುಂದುವರಿಸಿ
“ಅರಳು ಮರಳು ಆರೋಪ ಬೇಡ” –“ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದೆ?” – ಯಡಿಯೂರಪ್ಪಗೆ ಸಿಎಂ ಸವಾಲು
ಬಾಗಲಕೋಟೆ: ಯಡಿಯೂರಪ್ಪ ಅವರ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ... ಓದನ್ನು ಮುಂದುವರಿಸಿ
ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗು ಮೇಲೆ ಟ್ರ್ಯಾಕ್ಟರ್ ಹರಿದು ಸಾವು
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ... ಓದನ್ನು ಮುಂದುವರಿಸಿ
ಯಡಿಯೂರಪ್ಪ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು – ‘ಆಧಾರವಿದ್ದರೆ ಹೇಳಲಿ’
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಪಗಳಿಗೆ ಮುಖ್... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ – ಸಂತ್ರಸ್ತೆಯ ಮತ್ತೆರಡು ವಿಡಿಯೋ ಬಿಡುಗಡೆ- ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದ ಯುವತಿ
ಹುಬ್ಬಳ್ಳಿ: ಕೇಶ್ವಾಪುರದಲ್ಲಿ ದಾಖಲಾಗಿರುವ ಎರಡನೇ ಲವ್ ಜಿಹಾದ್ ಪ... ಓದನ್ನು ಮುಂದುವರಿಸಿ
ಶೃಂಗೇರಿ ಫಲಿತಾಂಶ ವಿವಾದ: ಅಂಚೆ ಮತಪತ್ರ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ
ಬೆಂಗಳೂರು/ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ... ಓದನ್ನು ಮುಂದುವರಿಸಿ
ಕುಟುಂಬ ರಾಜಕಾರಣದ ವಿರುದ್ಧ ಜೋಶಿ ವಾಗ್ದಾಳಿ – ‘ಈ ಬಾರಿ ಮತದಾರರು ಬದಲಾವಣೆ ತರುತ್ತಾರೆ’
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕುಟುಂಬ ರಾಜ... ಓದನ್ನು ಮುಂದುವರಿಸಿ
ಉಪಚುನಾವಣೆಗಳು ಕಾಂಗ್ರೆಸ್‌ಗೆ ‘ಕಬ್ಬಿಣದ ಕಡಲೆ’ – ವಿಜಯೇಂದ್ರ ವಾಗ್ದಾಳಿ
ದಾವಣಗೆರೆ: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗಳು ಕಾಂಗ್ರೆಸ... ಓದನ್ನು ಮುಂದುವರಿಸಿ
‘ಲಿಂಗಾಯತರು ಹಿಂದೂಗಳಲ್ಲ’ ಎನ್ನುವುದು ರಾಜಕೀಯ ಲಾಭಕ್ಕಾಗಿ – ಬಸವರಾಜ ಬೊಮ್ಮಾಯಿ
ಬಾಗಲಕೋಟೆ: ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂದು ಹೇಳುವುದು ಧರ್... ಓದನ್ನು ಮುಂದುವರಿಸಿ