ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸ್ವಾಮೀಜಿ ಮಠದಲ್ಲಿ ಆತ್ಮಹತ್ಯೆ: ರಾಯಚೂರಿನಲ್ಲಿ ನಿಗೂಢ ಘಟನೆ
ರಾಯಚೂರು: ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರಪ್ಪ (58), ಸ್ವಾಮೀಜಿಯಾಗಿ ಮಠ ಸ್ಥಾಪಿಸಿ ಧಾರ್ಮಿಕ ಜೀವನವನ್ನು ಅಳವಡಿಸಿಕೊಂಡರೂ, ಅಂತಿಮವಾಗಿ ಬಸಾಪುರ ಗ್ರಾಮದಲ್ಲಿ ಮಠದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಮೃತದೇಹವನ್ನು ಮಠದ ಭಜನಾ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ದೇವೇಂದ್ರಪ್ಪ, ಕಳೆದ ಹಲವು ವರ್ಷಗಳಿಂದ ಧಾರ್ಮಿಕ ಜೀವನದತ್ತ ತಿರುಗಿ ಶಿವಾನಂದ ಜಗದ್ಗುರು ಮಠವನ್ನು ಸ್ಥಾಪಿಸಿದ್ದರು. ಖಾವಿ ವಸ್ತ್ರ ಧರಿಸಿ, ಪುರಾಣ ಮತ್ತು ಪ್ರವಚನಗಳ ಮೂಲಕ ಭಕ್ತರಲ್ಲಿ ಪ್ರಭಾವ ಬೀರಿದ್ದರು.
ಆದರೆ, ಇತ್ತೀಚೆಗೆ ಸಂಭವಿಸಿದ ಅಪಘಾತದಿಂದ ಅವರು ಮಾನಸಿಕವಾಗಿ ಕುಗ್ಗಿದ್ದು, ಖಿನ್ನತೆಯಿಂದ ಈ ದಾರುಣ ನಿರ್ಧಾರಕ್ಕೆ ಕಾರಣವಾಗಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ತುರುವಿಹಾಳ ಪೊಲೀಸ್ ಠಾಣೆ ಪಿಎಸ್ಐ ಸುಜಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಯುಗಾದಿ ಹೊಸತೊಡಕು : ಹಾಟ್ ಫೇವರಿಟ್ ನಾಟಿ ಕೋಳಿಗೆ ಭಾರೀ ಡಿಮ್ಯಾಂಡ್!
ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ಸಂಭ್ರಮದಲ್ಲಿ ನಾನ್‌ವೆಜ್ ಪ್ರಿಯ... ಓದನ್ನು ಮುಂದುವರಿಸಿ
ಸಿದ್ದರಾಮಯ್ಯ ಕಚೇರಿ: ನೌಕರರ ವರ್ಗಾವಣೆ ನೀತಿಗೆ ಹೊರತಾಗಿ ಶಿಫಾರಸು ಮಾತ್ರ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯ ವಿಷಯದಲ್ಲಿ ಮುಖ್ಯ... ಓದನ್ನು ಮುಂದುವರಿಸಿ
ಉಪಚುನಾವಣೆಗೆ ಬಿ ಫಾರಂ ವಿತರಣೆ – ಕುಟುಂಬವಲ್ಲ, ಪಕ್ಷವೇ ಪ್ರಮುಖ – ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಕಾನೂನು ತಜ್ಞರು ಹೇಳಿದಂತೆ, ಆಲಮಟ್ಟಿ ಅಣೆಕಟ್ಟಿನ ಎತ್... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ದೊಡ್ಡಬಳ್ಳಾಪುರದಲ್ಲಿ ತಡರಾತ್ರಿ ಧಾರಾಕಾರ ಮಳೆ: ನೆಲಕ್ಕುರುಳಿದ ಅಡಿಕೆ ಮರಗಳು, ವಿದ್ಯುತ್ ಕಂಬಗಳು – ಗ್ರಾಮಸ್ಥರಲ್ಲಿ ಸಂಕಷ್ಟ
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ತಡರಾತ್ರ... ಓದನ್ನು ಮುಂದುವರಿಸಿ
ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಗಲ್ಫ್ ಯುದ್ಧದ ಹೊಡೆತ: ಉತ್ಪಾದನೆ ಕುಸಿತ, ಕಾರ್ಮಿಕರ ಭವಿಷ್ಯ ಗಂಭೀರ
ಬಳ್ಳಾರಿ: ಗಲ್ಫ್ ಯುದ್ಧದ ಪರಿಣಾಮ ಬಳ್ಳಾರಿ ಜಿಲ್ಲೆ ಆಧಾರಿತ ಜೀನ್... ಓದನ್ನು ಮುಂದುವರಿಸಿ
ಮಿರ್ಜಾಪುರದಲ್ಲಿ ಹೊಸದಾಗಿ ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲಿ ಹ್ಯಾಂಡ್ ಪಂಪ್: ಸ್ಥಳೀಯರಲ್ಲಿ ತೀವ್ರ ಆಕ್ರೋಶ
ಮಿರ್ಜಾಪುರ, ಉತ್ತರ ಪ್ರದೇಶ: ವಿಂಧ್ಯಾಚಲ ಪ್ರದೇಶದಲ್ಲಿ ದೂಧ್‌ನಾಥ... ಓದನ್ನು ಮುಂದುವರಿಸಿ
ಪೋಕ್ಸೊ ಪ್ರಕರಣ: ಮಲ್ಲಿಕಾರ್ಜುನ ಮುತ್ಯಾಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್
ಯಾದಗಿರಿ: ಪೋಕ್ಸೊ ಪ್ರಕರಣದಲ್ಲಿ ಮಲ್ಲಿಕಾರ್ಜುನ ಮುತ್ಯಾಗೆ ಹೈಕೋರ... ಓದನ್ನು ಮುಂದುವರಿಸಿ
ಪಾಂಡವಪುರ
ಮೇಲುಕೋಟೆ ವೈರಮುಡಿ ಉತ್ಸವ: ಖಾಸಗಿ ಸ್ಪಾನ್ಸರ್ ವಿವಾದ – ಸರ್ಕಾರದ ಅನುದಾನ ಪ್ರಶ್ನೆ
ಮಂಡ್ಯ ; ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ಮಾರ್ಚ್... ಓದನ್ನು ಮುಂದುವರಿಸಿ
ದಾವಣಗೆರೆ ಟಿಕೆಟ್ ರಿಯಲ್ ಡ್ರಾಮಾ: ಯತ್ನಾಳ್ ಎಚ್ಚರಿಕೆ – ಕೊನೆ ಕ್ಷಣದಲ್ಲಿ ಬದಲಾವಣೆ ಸಾಧ್ಯ, ಬಿಜೆಪಿ ಒಳಜಗಳ ತೀವ್ರತೆ
ವಿಜಯಪುರ: ವಿಜಯಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಬಸ... ಓದನ್ನು ಮುಂದುವರಿಸಿ
ಮಂಗಳೂರು
ಯುದ್ಧದ ಪರಿಣಾಮ: ಕಚ್ಚಾ ತೈಲದ ಬೆಲೆ ಸ್ಫೋಟ – ಕರಾವಳಿ ಪ್ಲಾಸ್ಟಿಕ್ ಉದ್ಯಮಕ್ಕೆ ಭಾರಿ ಸಂಕಷ್ಟ
ಮಂಗಳೂರು: ಮಧ್ಯಪ್ರಾಚ್ಯ ಯುದ್ಧ ಪರಿಣಾಮ ಕರಾವಳಿ ಪ್ಲಾಸ್ಟಿಕ್ ಉದ್... ಓದನ್ನು ಮುಂದುವರಿಸಿ