ಸಿನಿಮಾದ ಸ್ಟೈಲ್ ದಾಳಿ : ಕಾರು ಅಡ್ಡಗಟ್ಟಿ 38 ಲಕ್ಷ ದೋಚಿದ ದುಷ್ಕರ್ಮಿಗಳು
ದಾವಣಗೆರೆ: ಕಾರು ಅಡ್ಡಗಟ್ಟಿ 38 ಲಕ್ಷ ರೂ. ದೋಚಿದ ದರೋಡೆ ಪ್ರಕರಣ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಭದ್ರಾವತಿ ಮೂಲದ ಮಾಲತೇಶ್ ಎಂಬವರಿಂದ ಹಣ ದೋಚಲಾಗಿದೆ. ಅವರು ತಮ್ಮ ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿ ಜಮೀನು ಮಾರಾಟ ಮಾಡಿ ಒಟ್ಟು 76 ಲಕ್ಷ ರೂ. ಹಣವನ್ನು ಓಮ್ನಿ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದರು.
ಮಲೆಬೆನ್ನೂರು ಸಮೀಪ ಒಂದು ಕಾರು ಅವರ ವಾಹನಕ್ಕೆ ಉಜ್ಜಿಕೊಂಡು ಹೋಗಿದ್ದು, ಅನುಮಾನಗೊಂಡ ಮಾಲತೇಶ್ ವೇಗವಾಗಿ ಮುಂದಕ್ಕೆ ಸಾಗಿದ್ದಾರೆ. ಆದರೆ ಅದೇ ಕಾರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಅರಕೆರೆ ಕಾಲೋನಿ ಬಳಿ ವಾಹನವನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಕಾರಿನಿಂದ ಇಳಿದ ನಾಲ್ವರು ದುಷ್ಕರ್ಮಿಗಳು ಮಾಲತೇಶ್ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿದ್ದ 38 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಾಣಭಯದಿಂದ ಮಾಲತೇಶ್ ಮಲೆಬೆನ್ನೂರಿಗೆ ತೆರಳಿ ಉಳಿದ ಹಣವನ್ನು ಸುರಕ್ಷಿತವಾಗಿ ಇಟ್ಟು, ಬಳಿಕ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದು ದಾವಣಗೆರೆ ಎಸ್‌ಪಿ ಹೆಚ್.ಟಿ. ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಆಡುಗೋಡಿಯಲ್ಲಿ ಗಾಂಜಾ ದಂಧೆ ಬಯಲು: ಮೂವರು ಪೆಡ್ಲರ್‌ಗಳು ಅರೆಸ್ಟ್
ಬೆಂಗಳೂರು: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರು ಪೆಡ್ಲರ್‌ಗಳನ್ನ... ಓದನ್ನು ಮುಂದುವರಿಸಿ
ಬ್ರಾಂಡೆಡ್ ವಾಚ್ ಖರೀದಿಗೆ ಎಚ್ಚರಿಕೆ: ಬ್ರಾಂಡೆಡ್ ಹೆಸರಿನಲ್ಲಿ ಮೋಸ: ₹25 ಲಕ್ಷದ ನಕಲಿ ವಾಚ್ ವಶ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್ ಖರೀದಿಸುವ ಗ್... ಓದನ್ನು ಮುಂದುವರಿಸಿ
ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗೆ ಗ್ಯಾಂಗ್ ದಾಳಿ
ಬೆಂಗಳೂರು: ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿ ಅಭಿಷೇಕ... ಓದನ್ನು ಮುಂದುವರಿಸಿ
ರ್ಯಾಪಿಡೋ ಚಾಲಕನಿಂದ ಯುವತಿಗೆ ಕಿರುಕುಳ: ಬೆಂಗಳೂರಿನಲ್ಲಿ ಬಂಧನ
ಬೆಂಗಳೂರು: ರ್ಯಾಪಿಡೋ ಬೈಕ್ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕು... ಓದನ್ನು ಮುಂದುವರಿಸಿ
ಗೃಹಸಚಿವರ ವಿರುದ್ಧ ಅವಹೇಳನಕಾರಿ ಪೋಸ್ಟ್: ಸೈಬರ್ ಕ್ರೈಂ ಕೇಸ್
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್... ಓದನ್ನು ಮುಂದುವರಿಸಿ
ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣ: 12 ವರ್ಷದ ಬಳಿಕ ತೀರ್ಪು: ಮುನಿಯಪ್ಪಗೆ 3 ವರ್ಷ ಜೈಲು, ₹4.5 ಕೋಟಿ ದಂಡ
ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟ... ಓದನ್ನು ಮುಂದುವರಿಸಿ
ಭದ್ರಾವತಿ
ಸೇತುವೆಯಿಂದ ಹಳ್ಳಕ್ಕೆ ಉರುಳಿದ ಬಸ್: ಅತಿ ವೇಗವೇ ಕಾರಣ?: ಬಸ್ ಅಪಘಾತದಲ್ಲಿ ಪ್ರಯಾಣಿಕರಿಗೆ ಗಾಯ
ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಾಗೇಹಳ್ಳ ಸಮೀಪ ಖಾಸಗಿ ಬಸ್ಸೊಂದು... ಓದನ್ನು ಮುಂದುವರಿಸಿ
ಗ್ಯಾಸ್ ಲೀಕ್ ದುರಂತ: ಕ್ಷಣಾರ್ಧದಲ್ಲಿ ಮನೆ ಸ್ಫೋಟ
ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ. ಅಬ್ಬೂರು ಗ್ರಾಮದಲ್ಲಿ ಗ... ಓದನ್ನು ಮುಂದುವರಿಸಿ
ಮಂಗಳೂರು
12ನೇ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಜಿಗಿದು ವೈದ್ಯಕೀಯ... ಓದನ್ನು ಮುಂದುವರಿಸಿ
ಡೀಸೆಲ್ ಸೋರಿಕೆ ನಡುವೆ ಅಪಘಾತ: ಅಗ್ನಿಶಾಮಕ ಸಿಬ್ಬಂದಿಯಿಂದ ಪರಿಸ್ಥಿತಿ ನಿಯಂತ್ರಣ
ಹಾಸನ: ನಗರದ ಎಂ.ಜಿ ರಸ್ತೆಯಲ್ಲಿ ಇಂದು ಮುಂಜಾನೆ ಡೀಸೆಲ್ ಟ್ಯಾಂಕರ... ಓದನ್ನು ಮುಂದುವರಿಸಿ