ಸ್ಮೃತಿ ನೇತೃತ್ವದ RCB vs ಡೆಲ್ಲಿ ಕ್ಯಾಪಿಟಲ್ಸ್ – ಕಪ್‌ಗೆ ಮಹಾಸಮರ!
ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಡೀ ಟೂರ್ನಿಯಲ್ಲಿ ತಮ್ಮ ಆಕ್ರಮಣಕಾರಿ ಆಟ ಮತ್ತು ಸ್ಥಿರ ಪ್ರದರ್ಶನದಿಂದ ಮೆಚ್ಚುಗೆ ಗಳಿಸಿರುವ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪ್ರಶಸ್ತಿಯತ್ತ ದೃಢ ಹೆಜ್ಜೆ ಇಟ್ಟಿದೆ. ಇದೀಗ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಆರ್‌ಸಿಬಿಗೆ ಕಠಿಣ ಸವಾಲು ಎದುರಾಗಲಿದೆ. ಎರಡೂ ತಂಡಗಳು ಬಲಿಷ್ಠ ಸಂಯೋಜನೆ, ಮ್ಯಾಚ್‌ವಿನ್ನರ್ ಆಟಗಾರ್ತಿಯರು ಮತ್ತು ಫೈನಲ್ ಅನುಭವದೊಂದಿಗೆ ಕಣಕ್ಕಿಳಿಯುತ್ತಿರುವುದರಿಂದ, ಅಭಿಮಾನಿಗಳಿಗೆ ನಖಕಚ್ಚುವ ಪೈಪೋಟಿ ಗ್ಯಾರಂಟಿ!
RCB ಈ ಬಾರಿ ಕಪ್ ಎತ್ತುತ್ತದೆಯಾ? ಅಥವಾ DC ತಮ್ಮದೇ ಇತಿಹಾಸ ಬರೆಯುತ್ತದೆಯಾ?
ಈ ಹೈವೋಲ್ಟೇಜ್ ಫೈನಲ್ ಪಂದ್ಯದ ದಿನಾಂಕ, ಸಮಯ ಮತ್ತು ವೀಕ್ಷಣೆಯ ವಿವರಗಳು ಇಲ್ಲಿದೆ.
ಪಂದ್ಯದ ದಿನಾಂಕ ಮತ್ತು ಸ್ಥಳ
ದಿನಾಂಕ: ಫೆಬ್ರವರಿ 5, 2026 (ಗುರುವಾರ)
ಸ್ಥಳ: ಬಿ.ಸಿ.ಎ ಸ್ಟೇಡಿಯಂ (ಕೋಟಂಬಿ), ವಡೋದರಾ.
ಸಮಯ: ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಸಂಜೆ 7:00 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ
ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (Star Sports Network).
ಲೈವ್ ಸ್ಟ್ರೀಮಿಂಗ್: ಜಿಯೋಹಾಟ್‌ಸ್ಟಾರ್ (JioHotstar) ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ.
ತಂಡಗಳ ಹಾದಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ.
ಆರ್‌ಸಿಬಿಗೆ 2ನೇ ಪ್ರಶಸ್ತಿಯ ಕನಸು
ಎರಡನೇ ಸೀಸನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ ತಂಡವು ಈ ಬಾರಿ ಕೂಡ ಭರ್ಜರಿ ಫಾರ್ಮ್‌ನಲ್ಲಿದೆ. ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರಂತಹ ಆಟಗಾರ್ತಿಯರು ತಂಡದ ಬಲವಾಗಿದ್ದಾರೆ. ಮತ್ತೊಂದೆಡೆ ಮೂರು ಬಾರಿ ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದೆ. ಒಟ್ಟಿನಲ್ಲಿ ವಡೋದರಾದಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯವು ಕೋಟಿಗಟ್ಟಲೆ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. 'ಈ ಸಲವೂ ಕಪ್ ನಮ್ದೇ' ಎನ್ನುತ್ತಿರುವ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
IPL ಸೀಸನ್ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡ ಹೊಸ ದಾಖಲೆ
IPL ಸೀಸನ್ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡ ಹೊಸ ದಾಖಲೆ ಸೃಷ್ಟ... ಓದನ್ನು ಮುಂದುವರಿಸಿ
ದಿನೇ ದಿನೇ ತನ್ನ ಪರ್ಫಾಮೆನ್ಸ್ನಿಂದ ಗಮನ ಸೆಳೆಯುತ್ತಿರುವ ಟೀಮ್ ಇಂಡಿಯಾ ಆಟಗಾರ ಹರ್ಷಿತ್ ರಾಣಾ
ದಿನೇ ದಿನೇ ತನ್ನ ಪರ್ಫಾಮೆನ್ಸ್ನಿಂದ ಗಮನ ಸೆಳೆಯುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರ... ಓದನ್ನು ಮುಂದುವರಿಸಿ
ಹೀನಾಯವಾಗಿ ಸೂತ ಸೂರ್ಯಕುಮಾರ್ ಯಾದವ್ ಪಡೆ.. ಸೋಲಿಗೆ ಕಾರಣವಾಯ್ತು 3 ತಪ್ಪುಗಳು..!
ನಿನ್ನೆ ವಿಶಾಖಪಟ್ಟಣಂನ ACA-VDCA ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್... ಓದನ್ನು ಮುಂದುವರಿಸಿ
ಬಾರಿಯ ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸಿದ್ದ 20 ತಂಡಗಳಲ್ಲಿ ಸೂಪರ್-8 ಸುತ್ತಿಗೆ 8 ಎಂಟ್ರಿ ಕೊಟ್ಟ ತಂಡಗಳು ಯಾವುವು ಗೊತ್ತಾ..?
ಫ್ಲೋರಿಡಾ: ಬಾರಿಯ ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸಿದ್ದ 20 ತಂಡಗ... ಓದನ್ನು ಮುಂದುವರಿಸಿ
4 ಓವರ್, 3 ವಿಕೆಟ್ ಕಿತ್ತು ನೂತನ ದಾಖಲೆ ಬರೆದ ಲಾಕಿ ಫರ್ಗ್ಯೂಸನ್!
ಟ್ರಿನಿಡಾಡ್: ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್ ಮೇಡನ್ ಮಾಡುವುದು ಅಪರೂಪ. ಹೀಗಿರು... ಓದನ್ನು ಮುಂದುವರಿಸಿ
ಕೊಹ್ಲಿ ಹಾಗೂ ರೋಹಿತ್ ಅನುಭವ ಭಾರತ ತಂಡಕ್ಕೆ ನಿಜಕ್ಕೂ ಅಗತ್ಯವಿದೆ : ಸಂಜಯ್ ಮಾಂಜ್ರೇಕರ್
ನವದೆಹಲಿ: ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಭವ ತಂಡಕ್ಕೆ ನಿಜಕ್ಕೂ... ಓದನ್ನು ಮುಂದುವರಿಸಿ
ಟಿ20 ವಿಶ್ವಕಪ್ನಲ್ಲಿ ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿ ಪಾಕಿಸ್ತಾನ ತಂಡ 19ನೇ ಓವರ್ನಲ್ಲಿ ಗೆಲುವು
ಟಿ20 ವಿಶ್ವಕಪ್ನಲ್ಲಿ ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಪಾಕಿಸ್ತಾ... ಓದನ್ನು ಮುಂದುವರಿಸಿ
ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್!?.. ಪದಗ್ರಹಣಕ್ಕೆ ಡೇಟ್ ಫಿಕ್ಸ್!
ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರಯಾಣದ ಆಧಾರದ ಮೇಲೆ ಗಂಭೀರ್ ಪದಗ್ರಹಣವಾಗಲಿದೆ... ಓದನ್ನು ಮುಂದುವರಿಸಿ
ರೋಹಿತ್ ಶರ್ಮಾರನ್ನು ಅನ್ ಫಾಲೋ ಮಾಡಿದ ಶುಭ್ಮನ್ ಗಿಲ್! ಯಾಕೆ ಗೊತ್ತಾ..?
ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಲೀಗ್ ಸುತ್ತಿನ ಪಂದ್ಯಗಳು ಮ... ಓದನ್ನು ಮುಂದುವರಿಸಿ
ಟೀಂ ಇಂಡಿಯಾದಲ್ಲಿ ಮೂಡಿತೇ ಬಿರುಕು.!? ಇಬ್ಬರು ಆಟಗಾರರು ಭಾರತಕ್ಕೆ ವಾಪಸ್..!
ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಲೀಗ್ ಸ... ಓದನ್ನು ಮುಂದುವರಿಸಿ