ಶುಕ್ರವಾರದ ರಾಶಿ ಭವಿಷ್ಯ – 20 ಮಾರ್ಚ್ 2026

ಮೇಷ ರಾಶಿ: ಮೇಷ ರಾಶಿಯವರಿಗೆ ಮಿಶ್ರ ಫಲಗಳು ಕಂಡುಬರುತ್ತಿವೆ. ಲಾಭದಾಯಕ ಸ್ಥಾನದಲ್ಲಿರುವ ಬುಧನ ಪ್ರಭಾವದಿಂದ ಹೊಸ ವ್ಯಾಪಾರ ಪ್ರಾರಂಭಿಸಲು ಉತ್ತಮ ಅವಕಾಶಗಳು ದೊರೆಯಲಿವೆ. ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಿರೀಕ್ಷೆಗೂ ಮೀರಿದ ಆದಾಯವನ್ನು ಗಳಿಸುವ ಸಾಧ್ಯತೆ ಇದೆ. ಭೂ ವ್ಯವಹಾರ ಹಾಗೂ ಹೂಡಿಕೆಗಳಿಂದ ಧನಲಾಭವಾಗುವ ಸೂಚನೆಗಳಿವೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಭಾಗ್ಯ ಕೂಡ ಒಲಿಯಬಹುದು. ಆದರೆ, ದಾಂಪತ್ಯ ಜೀವನದಲ್ಲಿ ಅಸಮಾಧಾನ ಮತ್ತು ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ. ಗಂಡ-ಹೆಂಡತಿ ಮಧ್ಯೆ ವಾದ-ವಿವಾದಗಳು ಹೆಚ್ಚಾಗಬಹುದು. ಹಳೆಯ ಒಪ್ಪಂದಗಳಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದ್ದು, ಅಧಿಕಾರಿವರ್ಗದವರು ಕೆಲವು ಆತಂಕಗಳನ್ನು ಅನುಭವಿಸಬಹುದು. ಕುಟುಂಬ ಸದಸ್ಯರ ವಿವಾಹಯೋಗದಲ್ಲಿ ವಿಘ್ನಗಳು ಎದುರಾಗುವ ಸಾಧ್ಯತೆ ಇದೆ. ವೃತ್ತಿ ಕ್ಷೇತ್ರದಲ್ಲಿ ಕೆಲವೊಂದು ವೈಫಲ್ಯಗಳು ಕಂಡುಬರುವ ಸಾಧ್ಯತೆ ಇದ್ದು, ಸಂಬಳ ವಿಚಾರವಾಗಿ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹೋಟೆಲ್ ಮತ್ತು ಸಿದ್ಧ ಉಡುಪು ವ್ಯಾಪಾರದಲ್ಲಿರುವವರು ಧನಹಾನಿ ಬಗ್ಗೆ ಎಚ್ಚರಿಕೆಯಿಂದಿರಬೇಕು. ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ನೇರತೆ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಮಾತ್ರ ಲಾಭ ಪಡೆಯಲು ಸಾಧ್ಯ. ಈ ವಾರ ಉಪನ್ಯಾಸಕರಿಗೆ ಒಂದು ಸಿಹಿ ಸುದ್ದಿ ಕೇಳಿಬರಬಹುದು. ಮದುವೆ ಕುರಿತ ಆಶಾಭಾವನೆಗಳು ಮನದಲ್ಲಿ ಮೂಡಲಿವೆ. ಆದರೆ, ಶತ್ರುಗಳ ಸಂಖ್ಯೆ ಹೆಚ್ಚಾಗುವ ಸೂಚನೆ ಇದ್ದು, ಭದ್ರತೆ ಕಡೆ ಗಮನ ಹರಿಸುವುದು ಒಳಿತು. ಆರೋಗ್ಯದ ದೃಷ್ಟಿಯಿಂದ ಹೃದಯ ಮತ್ತು ಮೂತ್ರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಅನುಮಾನಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಸಂವಹನದಲ್ಲಿ ಸ್ಪಷ್ಟತೆ ಕಾಪಾಡಿಕೊಳ್ಳುವುದು ಉತ್ತಮ.

 

ವೃಷಭ ರಾಶಿ: ವೃಷಭ ರಾಶಿಯವರಿಗೆ  ಸವಾಲುಗಳೊಂದಿಗೆ ಕೆಲವು ಶುಭ ಫಲಗಳು ಕೂಡ ಕಂಡುಬರುವ ಸಾಧ್ಯತೆ ಇದೆ. ಹೊಸ ಯೋಜನೆಗಳನ್ನು ಆರಂಭಿಸುವಲ್ಲಿ ಎಚ್ಚರಿಕೆ ಅಗತ್ಯ, ಏಕೆಂದರೆ ಧನನಷ್ಟ ಸಂಭವಿಸುವ ಸಾಧ್ಯತೆ ಇದೆ. ಕೃಷಿಕರು ಹಾಗೂ ವ್ಯಾಪಾರಸ್ಥರಿಗೆ ಹೆಚ್ಚಿನ ನಷ್ಟ ಉಂಟಾಗುವ ಸೂಚನೆಗಳಿದ್ದು, ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯವಾಗಿದೆ. ಕುಟುಂಬದಲ್ಲಿ ಕಲಹಗಳು ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಗಣ್ಯ ವ್ಯಕ್ತಿಯೊಬ್ಬರ ಭೇಟಿಯಿಂದ ನಿಮ್ಮ ಕೆಲವು ಪ್ರಮುಖ ಕೆಲಸಗಳು ಯಶಸ್ಸು ಕಾಣುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಮುಂದಿನ ಹಂತವಾಗಿ ಮದುವೆ ತೀರ್ಮಾನವಾಗುವ ಸಾಧ್ಯತೆ ಇದ್ದು, ಪ್ರೇಮಿಗಳ ಕುಟುಂಬದಿಂದ ಸಹಕಾರ ದೊರೆಯಬಹುದು. ಮಗಳ ಕುಟುಂಬಕ್ಕೆ ಸಂಬಂಧಿಸಿದ ಶುಭ ಸುದ್ದಿ ಕೇಳಿಬರಲಿದೆ. ಆರಕ್ಷಕ ವರ್ಗ ಹಾಗೂ ಕಾವಲು ಪಡೆ ಸಿಬ್ಬಂದಿಗೆ ಶುಭ ಸುದ್ದಿಗಳು ದೊರೆಯುವ ಸಾಧ್ಯತೆ ಇದೆ. ಹಣ ಲಾಭವಿದ್ದರೂ ಉಳಿತಾಯದಲ್ಲಿ ಕೊರತೆ ಕಾಣಿಸಿಕೊಳ್ಳಲಿದೆ. ದಿನಗೂಲಿ ನೌಕರರಿಗೆ ಖಾಯಂ ಉದ್ಯೋಗದ ಸೂಚನೆಗಳು ಕಾಣಿಸುತ್ತಿವೆ. ವೃತ್ತಿ ಕ್ಷೇತ್ರದಲ್ಲಿ ಏರುಪೇರುಗಳಿದ್ದು, ಕೆಲವರಿಗೆ ಉದ್ಯೋಗ ಬದಲಾವಣೆ ಅಥವಾ ವರ್ಗಾವಣೆ ಸಂಬಂಧಿತ ಅಡಚಣೆಗಳು ಎದುರಾಗಬಹುದು. ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಕೆಲವು ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ದೇಹದಲ್ಲಿ ನಿಶ್ಯಕ್ತಿ ಹಾಗೂ ಚರ್ಮ ಸಂಬಂಧಿತ ಕಾಯಿಲೆಗಳು ಕಾಡಬಹುದು. ವಿದೇಶ ಪ್ರಯಾಣಕ್ಕೆ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವವರು ಹೆಚ್ಚಿನ ಎಚ್ಚರಿಕೆಯಿಂದಿರಬೇಕು, ಏಕೆಂದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಮಕ್ಕಳಿಂದ ಅಪ್ರಯೋಜಕ ಖರ್ಚುಗಳು ಹೆಚ್ಚಾಗುವ ಸೂಚನೆ ಇದ್ದು, ಆರ್ಥಿಕ ನಿಯಂತ್ರಣ ಮುಖ್ಯವಾಗಿದೆ. ಯತ್ನಿಸಿದ ಉದ್ಯೋಗದಲ್ಲಿ ವಿಘ್ನಗಳು ಎದುರಾಗಬಹುದು. ಆದರೆ, ಪ್ರೇಮಿಗಳ ನಡುವೆ ಸರಸ-ಸಾಮರಸ್ಯ ಹೆಚ್ಚಾಗುವ ಸೂಚನೆ ಕೂಡ ಇದೆ. ಇಷ್ಟಪಟ್ಟವರೊಂದಿಗೆ ಗೌಪ್ಯತೆ ಕಾಪಾಡಿಕೊಳ್ಳುವುದು ಈ ವಾರ ಅತ್ಯಂತ ಮುಖ್ಯ.

 

ಮಿಥುನ ರಾಶಿ: ಮಿಥುನ ರಾಶಿಯವರಿಗೆ  ಮಿಶ್ರ ಫಲಗಳು ಕಂಡುಬರುವ ಸಾಧ್ಯತೆ ಇದೆ. ತಂತ್ರಜ್ಞಾನ ಪದವಿ ಪಡೆದವರು ಉದ್ಯೋಗಕ್ಕಾಗಿ ಹೆಚ್ಚು ಪ್ರಯತ್ನ ಮತ್ತು ಅಲೆದಾಟ ಅನುಭವಿಸಬೇಕಾಗಬಹುದು. ಕೃಷಿ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬರುವ ಸೂಚನೆಗಳಿದ್ದು, ಹೊಸ ಒಡಂಬಡಿಕೆಗಳಿಂದ ಧನಲಾಭ ಸಾಧ್ಯತೆ ಇದೆ. ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿ ಆದಾಯ ದ್ವಿಗುಣವಾಗುವ ಸಾಧ್ಯತೆ ಇದೆ. ಧನ ಲಾಭದ ವಿಷಯದಲ್ಲಿ ಕೆಲವೊಂದು ವ್ಯತ್ಯಯಗಳು ಕಂಡುಬರಬಹುದು, ಆದ್ದರಿಂದ ಹಣಕಾಸು ನಿರ್ವಹಣೆಯಲ್ಲಿ ಎಚ್ಚರಿಕೆ ಅಗತ್ಯ. ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಮತ್ತು ವರ್ಗಾವಣೆಯ ಅವಕಾಶಗಳು ಎದುರಾಗಬಹುದು. ಹಳೆಯ ಸಾಲಗಳನ್ನು ಮರುಪಾವತಿ ಮಾಡುವ ಸಂದರ್ಭ ಎದುರಾಗಲಿದ್ದು, ಸ್ನೇಹಿತರಿಂದ ಸಹಾಯ ದೊರೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹೊಸ ವ್ಯವಹಾರಗಳಿಗೆ ಕೈ ಹಾಕುವುದನ್ನು ತಪ್ಪಿಸಿ, ಈಗಾಗಲೇ ಮಾಡುತ್ತಿರುವ ವ್ಯವಹಾರವನ್ನು ಮುಂದುವರಿಸುವುದು ಉತ್ತಮ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವಿವಿಧ ಮಾರ್ಗಗಳಿಂದ ಧನಲಾಭ ಕಂಡುಬರುವ ಸಾಧ್ಯತೆ ಇದೆ. ವಾಣಿಜ್ಯ ಸಂಕೀರ್ಣ ನಿರ್ಮಾಣ ಯೋಜನೆಗಳು ಮುಂದುವರಿಯುವ ಸೂಚನೆಗಳಿವೆ. ಆಯುರ್ವೇದ ಕ್ಷೇತ್ರದ ಪರಿಣಿತರಿಗೆ ಪತ್ನಿ ಹಾಗೂ ಬಂಧು ವರ್ಗದವರಿಂದ ಧನಲಾಭ ದೊರೆಯಬಹುದು. ಆದರೆ, ವಾಕ್ ಸಮರಗಳಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದ್ದು, ದಂಡ ಕಟ್ಟುವ ಪರಿಸ್ಥಿತಿ ಬರಬಹುದು. ಅಧಿಕಾರಿವರ್ಗದವರು ಕೆಲ ಸಂದರ್ಭಗಳಲ್ಲಿ ಉತ್ತಮ ಆದಾಯ ಗಳಿಸಿದರೂ ಜಾಗ್ರತೆ ಅಗತ್ಯವಾಗಿದೆ. ಒಟ್ಟಾರೆ, ಈ ವಾರದಲ್ಲಿ ಲಾಭ-ನಷ್ಟಗಳ ಮಿಶ್ರ ಅನುಭವ ಇದ್ದು, ಸಮಚಿತ್ತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳಿತು.

 

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಈ ವಾರ ಮಿಶ್ರ ಫಲಿತಾಂಶಗಳು ಕಂಡುಬರುವ ಸಾಧ್ಯತೆ ಇದೆ. ವಿವಿಧ ಕ್ಷೇತ್ರಗಳಲ್ಲಿ ಕೆಲವೊಂದು ಘರ್ಷಣೆಗಳು ಎದುರಾಗುವ ಸೂಚನೆ ಇದ್ದು, ಮನಶಾಂತಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಷೇರು ವ್ಯಾಪಾರದಲ್ಲಿ ಉತ್ತಮ ಫಲಶ್ರುತಿ ದೊರೆಯುವ ಸಾಧ್ಯತೆ ಇದ್ದು, ವಾಹನ ಖರೀದಿಗೆ ಯೋಗ ಕೂಡ ಒಲಿಯಬಹುದು. ದಾಂಪತ್ಯ ಜೀವನದಲ್ಲಿ ಸುಧಾರಣೆ ಕಂಡುಬರುವ ಸಾಧ್ಯತೆ ಇದೆ. ನವದಂಪತಿಗಳು ಸಂತಸದ ಕ್ಷಣಗಳನ್ನು ಅನುಭವಿಸಲು ಪ್ರಯತ್ನಿಸಬಹುದು. ಸಂಗಾತಿಯೊಂದಿಗೆ ಕಿರು ಪ್ರವಾಸ ಕೈಗೊಳ್ಳುವ ಅವಕಾಶವೂ ಸಿಗಬಹುದು. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರವಾಸದ ಯೋಗ ಇದ್ದು, ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ. ಆದರೆ, ಹಾಲು ಉತ್ಪನ್ನ ವ್ಯಾಪಾರದಲ್ಲಿ ತೊಡಗಿರುವವರಿಗೆ ಕೆಲವು ಅಡಚಣೆಗಳು ಎದುರಾಗಬಹುದು. ಬಂಧುಗಳ ಮುಖಾಂತರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ಕುಟುಂಬ ಸದಸ್ಯರಿಂದ ದೂರವಾಗುವ ಸಂದರ್ಭ ಎದುರಾಗಬಹುದು. ಕೆಲವರಿಗೆ ಏಕಾಂಗಿ ಜೀವನದ ಅನುಭವ ಕಾಣಿಸಬಹುದು. ಮಿತ್ರರಿಂದ ಧನಹಾನಿ ಮತ್ತು ಆತ್ಮೀಯರಿಂದ ಮಾನಹಾನಿ ಸಂಭವಿಸುವ ಸಾಧ್ಯತೆ ಇದ್ದು, ಎಷ್ಟೇ ಪ್ರಯತ್ನಿಸಿದರೂ ಕೆಲವು ಕೆಲಸಗಳಲ್ಲಿ ವಿಳಂಬ ಅಥವಾ ನಿರಾಸೆ ಎದುರಾಗಬಹುದು. ವ್ಯಾಪಾರದಲ್ಲಿ ವಿಳಂಬ ಮತ್ತು ನಷ್ಟ ಸಂಭವಿಸುವ ಸೂಚನೆಗಳಿವೆ. ಇದರ ನಡುವೆಯೇ ಬಂಧುಗಳಿಂದ ಸಮಾಧಾನ ದೊರೆಯುವ ಸಾಧ್ಯತೆ ಇದೆ. ಶಿಕ್ಷಕರಿಗೆ ಸಿಹಿ ಸುದ್ದಿ ಕೇಳಿಬರಬಹುದು. ಮಕ್ಕಳಿಗೆ ಐಶ್ವರ್ಯ ವೃದ್ಧಿ ಕಂಡುಬರುವ ಸೂಚನೆ ಇದ್ದು, ಶುಭ ಕಾರ್ಯಗಳಿಂದ ಸಂತೋಷ ಹೆಚ್ಚಾಗುತ್ತದೆ. ಆಸ್ತಿ ಸಂಪಾದನೆಗೆ ಅವಕಾಶಗಳು ಲಭ್ಯವಾಗಬಹುದು. ಕೆಲವರಿಗೆ ನಿವೃತ್ತಿ ಜೀವನದಲ್ಲಿ ಸಂತೋಷಕರ ಕ್ಷಣಗಳು ದೊರೆಯುವ ಸಾಧ್ಯತೆ ಇದೆ.

 

ಸಿಂಹ ರಾಶಿ: ಸಿಂಹ ರಾಶಿಯವರಿಗೆ  ಹೊಸ ಅವಕಾಶಗಳು ಮತ್ತು ಸವಾಲುಗಳ ಮಿಶ್ರಣವಾಗಿರಲಿದೆ. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಯೋಗ ಕಂಡುಬರುತ್ತಿದ್ದು, ಗುರುಗ್ರಹದ ಲಾಭಸ್ಥಾನದ ಪ್ರಭಾವದಿಂದ ಉದ್ಯೋಗ ಪ್ರಾಪ್ತಿ ಹಾಗೂ ಮದುವೆ ಯೋಗವೂ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸುವ ಅವಕಾಶಗಳು ಕಂಡುಬರುತ್ತಿವೆ. ಆದರೆ, ಹೊರದೇಶ ಪ್ರವಾಸವನ್ನು ಸದ್ಯಕ್ಕೆ ಮುಂದೂಡುವುದು ಒಳಿತು. ಕಾರ್ಖಾನೆ ಮಾಲಕರಿಗೆ ಕುಶಲಕರ್ಮಿಗಳ ಕೊರತೆ ಕಾಡಬಹುದು, ಇದರಿಂದ ವ್ಯವಹಾರದಲ್ಲಿ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ಯಂತ್ರ ಮತ್ತು ಕಾರ್ಖಾನೆ ಉದ್ಯಮದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಾಲದ ಭಯವೂ ಕಾಡಬಹುದು. ಕುಟುಂಬದಲ್ಲಿ ಕೆಲವೊಂದು ಅಸಮಾಧಾನಕರ ಪರಿಸ್ಥಿತಿಗಳು ಎದುರಾಗುವ ಸಾಧ್ಯತೆ ಇದೆ. ತಂದೆ-ಮಗನ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಪತಿ-ಪತ್ನಿಯರ ನಡುವೆ ಬಿನ್ನಾಭಿಪ್ರಾಯಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಕುಟುಂಬ ಸದಸ್ಯರಿಂದ ವಿರೋಧ ಎದುರಾಗಬಹುದು. ಜನಪ್ರತಿನಿಧಿಗಳಿಗೆ ರಾಜಕೀಯ ಬೆಳವಣಿಗೆಗಳಿಂದ ಆತಂಕ ಉಂಟಾಗುವ ಸೂಚನೆಗಳಿವೆ. ಉದ್ಯೋಗ ಕ್ಷೇತ್ರದಲ್ಲಿ ಕೆಲವರಿಗೆ ಅಪಮಾನ ಅಥವಾ ಅಸಹಜ ಪರಿಸ್ಥಿತಿಗಳು ಎದುರಾಗಬಹುದು. ನಿವೃತ್ತಿ ಜೀವನದಲ್ಲಿರುವ ಕೆಲವರಿಗೆ ಜಿಗುಪ್ಸೆ ಉಂಟಾಗಬಹುದು. ಮಗನ ಪ್ರಯತ್ನಗಳಿಗೆ ಸಂಬಂಧಿಸಿದ ಶುಭ ಸುದ್ದಿ ಕೇಳಿಬರಬಹುದು. ಕಂಪ್ಯೂಟರ್ ಮತ್ತು ಬಿಡಿಭಾಗಗಳ ವ್ಯಾಪಾರದಲ್ಲಿ ಮಂದಗತಿಯಲ್ಲಿದ್ದರೂ ಕೆಲವು ಅನುಕೂಲಗಳು ದೊರೆಯುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವವರು ಅಪಘಾತಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ. ಒಟ್ಟಾರೆ, ಈ ವಾರ ಲಾಭದ ಜೊತೆಗೆ ಜಾಗ್ರತೆ ಅಗತ್ಯವಿರುವ ಕಾಲವಾಗಿದ್ದು, ಸಮತೋಲನದಿಂದ ನಡೆದುಕೊಳ್ಳುವುದು ಒಳಿತು.

 

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ  ಮಿಶ್ರ ಫಲಿತಾಂಶಗಳು ಕಂಡುಬರುವ ಸಾಧ್ಯತೆ ಇದೆ. ಕೃಷಿಕರಿಗೆ ಸಾಮಾನ್ಯ ಮಟ್ಟದ ಫಲಗಳು ದೊರೆಯಲಿದ್ದು, ಹಳೆಯ ವಿವಾದಗಳು ನಿವಾರಣೆಯಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಷ್ಟ ಪ್ರಮಾಣ ಹೆಚ್ಚಿದ್ದರೂ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ಆಪ್ತರೊಬ್ಬರ ಹಣಕಾಸು ಸಹಾಯದಿಂದ ನಿವೇಶನ ಖರೀದಿ ಮಾಡುವ ಅವಕಾಶ ದೊರೆಯಬಹುದು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬರುವ ಸೂಚನೆಗಳಿವೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯ ಸಮಯ ಪ್ರಾರಂಭವಾಗುತ್ತಿದ್ದು, ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಆದರೆ, ಅಧಿಕಾರಿಗಳಿಗೆ ಕಾರ್ಯಕ್ಷೇತ್ರದಲ್ಲಿ ಅಡ್ಡಿಗಳು ಮತ್ತು ಆತಂಕಗಳು ಎದುರಾಗಬಹುದು. ಸಹೋದರರೊಂದಿಗೆ ಅನಾವಶ್ಯಕ ವೈಮನಸ್ಸು ಉಂಟಾಗುವ ಸಾಧ್ಯತೆ ಇದ್ದು, ನಂತರ ಕುಟುಂಬ ಪುನರ್ಮಿಲನದ ಬಯಕೆ ಹೆಚ್ಚಾಗಬಹುದು. ಬಂಧುಗಳೊಂದಿಗೆ ಮತ್ತೆ ಸಂಪರ್ಕ ಬೆಳೆಸುವ ಸಂದರ್ಭ ಎದುರಾಗಬಹುದು. ಧನಾಗಮನ ಇದ್ದರೂ ಉಳಿತಾಯದಲ್ಲಿ ಕೊರತೆ ಕಂಡುಬರಲಿದೆ. ವಿದೇಶ ಪ್ರಯಾಣಕ್ಕೆ ಪ್ರಯತ್ನಿಸಿದವರಿಗೆ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ಆದರೆ, ಆಸ್ತಿಪಾಸ್ತಿ ಖರೀದಿಯಲ್ಲಿ ಕೆಲವು ಅಡಚಣೆಗಳು ಎದುರಾಗಬಹುದು. ಪ್ರೇಮ ಸಂಬಂಧಗಳಲ್ಲಿ ಮದುವೆ ಆಸೆಗಳಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ. ಮಗಳ ಕುಟುಂಬದಲ್ಲಿ ವಿವಾದಗಳು ಮತ್ತು ತಕರಾರುಗಳು ಎದುರಾಗಬಹುದು. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಕಷ್ಟ ಮತ್ತು ಲಾಭ ಎರಡೂ ಸಮತೋಲನದಲ್ಲಿರಲಿವೆ. ಒಟ್ಟಾರೆ, ಈ ವಾರದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತಾ, ಸಮಾಧಾನದಿಂದ ನಡೆದುಕೊಳ್ಳುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯ.

 

ತುಲಾ ರಾಶಿ: ತುಲಾ ರಾಶಿಯವರಿಗೆ  ಶುಭ ಹಾಗೂ ಸವಾಲುಗಳ ಸಮತೋಲನ ಕಂಡುಬರುವ ಸಾಧ್ಯತೆ ಇದೆ. ಹೊಸ ಕೆಲಸಗಳನ್ನು ಆರಂಭಿಸಲು ಇದು ಅನುಕೂಲಕರ ಸಮಯವಾಗಿದ್ದು, ಉಡುಗೊರೆ ರೂಪದಲ್ಲಿ ಬೆಲೆಬಾಳುವ ಕಾಣಿಕೆಗಳನ್ನು ಪಡೆಯುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಶುಭ ಸಮಯವಾಗಿದ್ದು, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ದೊರೆಯಬಹುದು. ಇಷ್ಟಪಟ್ಟಿರುವ ಸ್ಥಳಕ್ಕೆ ವರ್ಗಾವಣೆ ಯೋಗವೂ ಕಾಣಿಸುತ್ತದೆ. ವ್ಯಾಪಾರದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವ ಸೂಚನೆಗಳಿದ್ದು, ವಿವಿಧ ಮೂಲಗಳಿಂದ ಧನಲಾಭ ದೊರೆಯಬಹುದು. ಸಾಲ ಸೌಲಭ್ಯಗಳು ದೊರೆಯುವುದರ ಜೊತೆಗೆ ಹಳೆಯ ಸಾಲಬಾಧೆಯಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಆದರೆ ಖರ್ಚಿನಲ್ಲಿ ನಿಯಂತ್ರಣ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಕಾರ್ಖಾನೆ ಮಾಲಕರಿಗೆ ಹಿನ್ನಡೆ ಎದುರಾಗಬಹುದು. ಜನಸಂಪರ್ಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಅಧಿಕಾರಿಗಳಿಗೆ ನಿರೀಕ್ಷೆಗೆ ಮೀರಿದ ಉಡುಗೊರೆಗಳು ದೊರೆಯುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಮತ್ತು ವಿಶ್ವಾಸ ಹೆಚ್ಚಾಗುವ ಸಾಧ್ಯತೆ ಇದೆ. ಸಂಗಾತಿಗೆ ಒಲವಿನ ಉಡುಗೊರೆ ನೀಡುವ ಸಂದರ್ಭಗಳು ಎದುರಾಗಬಹುದು. ಆದರೆ, ಕುಟುಂಬದ ಸದಸ್ಯರೊಡನೆ ಕೆಲವೊಂದು ವಿರಸ ಮೂಡುವ ಸಾಧ್ಯತೆ ಇದೆ. ಆಸ್ತಿ ಪಾಲುದಾರಿಕೆಯಲ್ಲಿ ಕುಟುಂಬದ ಹಿರಿಯರಿಂದ ಒತ್ತಡ ಎದುರಾಗಬಹುದು. ಆಸ್ತಿಪಾಸ್ತಿ ಮಾರಾಟದಲ್ಲಿ ಅಡಚಣೆಗಳು ಎದುರಾಗುವ ಸಾಧ್ಯತೆ ಇದ್ದು, ಅತ್ತೆ-ಮಾವನವರೊಡನೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಒಟ್ಟಾರೆ, ಈ ವಾರದಲ್ಲಿ ಧನಲಾಭದ ಜೊತೆಗೆ ಸಂಬಂಧಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ.

 

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ  ಜೀವನದಲ್ಲಿ ಮಹತ್ವದ ತಿರುವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕ ಘಟನೆಗಳು ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸಬಹುದು. ಸಿರಿಧಾನ್ಯ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯಲಿದ್ದು, ಕೃಷಿಕರಿಗೆ ಧನಲಾಭದ ಸೂಚನೆಗಳಿವೆ. ಮಿತ್ರರಿಂದ ಉತ್ತಮ ಸಹಕಾರ ಸಿಗಲಿದ್ದು, ಮಂಗಳಕಾರ್ಯಗಳು ಜರುಗುವ ಸಾಧ್ಯತೆ ಇದೆ. ಕೃಷಿಭೂಮಿ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿರುವವರಿಗೆ ಉತ್ತಮ ಆದಾಯ ದೊರೆಯಲಿದೆ. ಕರಕುಶಲ ವಸ್ತು ತಯಾರಿಕಾ ಘಟಕ ಹೊಂದಿದವರಿಗೆ ಆದಾಯದಲ್ಲಿ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರಗಳಲ್ಲಿ ಪ್ರಗತಿ ಕಾಣಿಸಿಕೊಳ್ಳಲಿದೆ. ಸಣ್ಣ ಕೈಗಾರಿಕೆ ಆರಂಭಿಸಲು ಇದು ಉತ್ತಮ ಸಮಯವಾಗಿದೆ. ರಾಜಕಾರಣಿಗಳಿಗೆ ಸುವರ್ಣಾವಕಾಶಗಳು ಎದುರಾಗುವ ಸಾಧ್ಯತೆ ಇದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮುಖ್ಯ. ವಿದೇಶ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕಾರ್ಯಗಳು ಯಶಸ್ವಿಯಾಗುವ ಸೂಚನೆಗಳಿವೆ. ಆಕಸ್ಮಿಕ ಧನಲಾಭದಿಂದ ಸಾಲಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪತ್ನಿಯಿಂದ ಸಹಕಾರ, ಪ್ರೀತಿ ಮತ್ತು ವಿಶ್ವಾಸ ದೊರೆಯಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯ ಸಾಧ್ಯತೆ ಇದೆ. ಆದರೆ, ಕೆಲವೊಮ್ಮೆ ಪತ್ನಿಗೆ ವೈರಾಗ್ಯ ಮನೋಭಾವ ಕಾಣಿಸಿಕೊಳ್ಳಬಹುದು. ಇದರ ಜೊತೆಗೆ, ಪ್ರಯಾಣದ ವೇಳೆ ಅಪಘಾತ ಭಯ ಇರುವುದರಿಂದ ಎಚ್ಚರಿಕೆ ಅಗತ್ಯ. ಮಕ್ಕಳಿಂದ ಕೆಲವೊಂದು ಅನಾವಶ್ಯಕ ಕಾರ್ಯಗಳಿಂದ ಅವಮಾನ ಸಂಭವಿಸಬಹುದು. ಹಿತಶತ್ರುಗಳಿಂದ ಕಿರಿಕಿರಿ ಎದುರಾಗಬಹುದು. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆ, ಈ ವಾರದಲ್ಲಿ ಲಾಭದ ಜೊತೆಗೆ ಎಚ್ಚರಿಕೆ ಅಗತ್ಯವಿದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯ.

 

 

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ  ಶುಭ ಫಲಗಳು ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇದ್ದರೂ, ಕೆಲವು ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವಾಹನ ಚಾಲನೆ ಮಾಡುವಾಗ ವಿಶೇಷ ಜಾಗ್ರತೆ ವಹಿಸುವುದು ಒಳಿತು. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಭರವಸೆಯ ದಾರಿ ಸ್ಪಷ್ಟವಾಗುತ್ತಿದ್ದು, ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕೆಲವೊಂದು ಕಿರಿಕಿರಿ ಎದುರಾಗಬಹುದು. ಆದರೆ, ಶುಕ್ರಗ್ರಹದ ಅನುಕೂಲದಿಂದ ಮನೆಯಲ್ಲಿ ಮಂಗಳಕಾರ್ಯಗಳು ನೆರವೇರುವ ಸಾಧ್ಯತೆ ಇದೆ. ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ಯಶಸ್ಸು ದೊರೆಯಲಿದ್ದು, ಇಷ್ಟವಾದ ಸಂಗಾತಿ ಸಿಗುವ ಸಾಧ್ಯತೆ ಕೂಡ ಇದೆ. ಹೊಸ ಉದ್ಯಮ ಪ್ರಾರಂಭಿಸಲು ಆರ್ಥಿಕ ಸಹಾಯ ದೊರೆಯುವ ಸೂಚನೆಗಳಿದ್ದು, ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಲಾಭ ಕಂಡುಬರುವ ಸಾಧ್ಯತೆ ಇದೆ. ಭೂಮಿ ವ್ಯವಹಾರ, ಷೇರು ಮಾರುಕಟ್ಟೆ ಮತ್ತು ಯಂತ್ರೋಪಕರಣ ತಯಾರಿಕಾ ಕ್ಷೇತ್ರಗಳಲ್ಲಿ ಉತ್ತಮ ಆದಾಯ ದೊರೆಯಬಹುದು. ಬೆಳ್ಳಿ ಮತ್ತು ಸುವರ್ಣ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ ಕಂಡುಬರುತ್ತದೆ. ಹಾಲು ಉತ್ಪನ್ನ ಮಾರಾಟಗಾರರು, ವಿಮಾ ಸಲಹೆಗಾರರು ಮತ್ತು ವಿವಿಧ ಉದ್ಯೋಗ ಕ್ಷೇತ್ರದವರು ಧನಲಾಭ ಪಡೆಯುವ ಸಾಧ್ಯತೆ ಇದೆ. ಹಣಕಾಸು ಸಂಸ್ಥೆ ನಡೆಸುತ್ತಿರುವವರಿಗೆ ಆರ್ಥಿಕ ಚೇತರಿಕೆ ಕಾಣಿಸಿಕೊಳ್ಳಲಿದೆ. ಸಾಲ ಮರುಪಾವತಿಯಲ್ಲಿ ಹೆಚ್ಚಳ ಕಂಡುಬರುವ ಸಾಧ್ಯತೆ ಇದೆ. ಉದ್ಯೋಗ ಬದಲಾವಣೆ ಮಾಡುವ ಯೋಚನೆಯನ್ನು ಸದ್ಯಕ್ಕೆ ಮುಂದೂಡುವುದು ಒಳಿತು, ಏಕೆಂದರೆ ಪ್ರಸ್ತುತ ಉದ್ಯೋಗದಲ್ಲೇ ಪ್ರಗತಿಯ ಕಾಲ ಇದೆ. ವೃತ್ತಿ ಕ್ಷೇತ್ರದಲ್ಲಿ ಪ್ರಮೋಷನ್ ಭಾಗ್ಯದಿಂದ ಸಂತೋಷ ದೊರೆಯಬಹುದು. ಆರೋಗ್ಯದ ದೃಷ್ಟಿಯಿಂದ ಅತಿ ಉಷ್ಣದಿಂದ ಕೆಲವೊಂದು ತೊಂದರೆಗಳು ಕಂಡುಬರಬಹುದು, ಆದರೆ ನಂತರ ಸುಧಾರಣೆ ಸಾಧ್ಯತೆ ಇದೆ. ಖರ್ಚುಗಳು ಹೆಚ್ಚಾಗುವ ಆತಂಕ ಇದ್ದರೂ, ಆದಾಯವೂ ಸಮರ್ಪಕವಾಗಿರುತ್ತದೆ. ಒಟ್ಟಾರೆ, ಈ ವಾರದಲ್ಲಿ ಆತ್ಮವಿಶ್ವಾಸ ಮತ್ತು ಧನಾತ್ಮಕ ಮನೋಭಾವದಿಂದ ಮುಂದುವರಿದರೆ ಯಶಸ್ಸು ನಿಮ್ಮದಾಗಲಿದೆ.

 

ಮಕರ ರಾಶಿ: ಮಕರ ರಾಶಿಯವರಿಗೆ  ಹೊಸ ಉತ್ಸಾಹ ಮತ್ತು ಜವಾಬ್ದಾರಿಗಳ ಕಾಲವಾಗಿರಲಿದೆ. ಹೊಸ ಉತ್ಸಾಹದಿಂದ ವ್ಯಾಪಾರ ಪ್ರಾರಂಭಿಸಲು ಉತ್ತಮ ಅವಕಾಶ ದೊರೆಯುತ್ತಿದ್ದು, ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ಸು ಕಾಣುವ ಸಾಧ್ಯತೆ ಇದೆ. ಹಳೆಯ ಬಾಕಿ ಹಣ ವಸೂಲಾಗುವ ಸಾಧ್ಯತೆ ಇದ್ದು, ನೌಕರರಿಗೆ ವಿವಿಧ ಮೂಲಗಳಿಂದ ಧನಲಾಭ ದೊರೆಯಬಹುದು. ಸಂಗಾತಿಯೊಂದಿಗೆ ಹೊಸ ಬಯಕೆಗಳು ಮೂಡಲಿದ್ದು, ದಾಂಪತ್ಯ ಜೀವನದಲ್ಲಿ ಕೆಲವು ವಿಶೇಷ ಕ್ಷಣಗಳು ಎದುರಾಗಬಹುದು. ಮಕ್ಕಳ ಸಾಧನೆಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆ ಇದ್ದು, ಇದರಿಂದ ಕುಟುಂಬದಲ್ಲಿ ಸಂತೋಷ ವಾತಾವರಣ ನಿರ್ಮಾಣವಾಗಬಹುದು. ಆದರೆ, ಪಾಲುದಾರಿಕೆ ವ್ಯವಹಾರದಲ್ಲಿ ಅವಿಶ್ವಾಸದಿಂದ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಿ ನಿಮ್ಮ ಮೇಲೆ ಬರುವ ಸಾಧ್ಯತೆ ಇದೆ. ಕುಟುಂಬದ ಕಲಹಗಳನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವುದನ್ನು ತಪ್ಪಿಸುವುದು ಒಳಿತು. ವರ್ಗಾವಣೆ ಅಥವಾ ಪ್ರಮೋಷನ್ ಸಂಬಂಧಿತ ಪ್ರಯತ್ನಗಳಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಇದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸ್ಥಿರತೆ ಬಗ್ಗೆ ಆತಂಕ ಎದುರಾಗಬಹುದು. ಮನೆ ಬದಲಾವಣೆ ಯೋಚನೆ ಮಾಡುವವರಿಗೆ ಇದು ಅನುಕೂಲಕರ ಸಮಯ. ಪುಸ್ತಕ, ಬೇಕರಿ, ಕಾಂಡಿಮೆಂಟ್ ಮತ್ತು ಕ್ಯಾಂಟೀನ್ ವ್ಯವಹಾರಗಳಲ್ಲಿ ಲಾಭ ದೊರೆಯಬಹುದು. ಮೀನುಗಾರಿಕೆ ಸಂಬಂಧಿತ ವ್ಯಾಪಾರದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಫೋಟೋಗ್ರಾಫರ್, ವಿಡಿಯೋಗ್ರಾಫರ್ ಮತ್ತು ಕಲಾವಿದರಿಗೆ ಉತ್ತಮ ಆದಾಯ ದೊರೆಯುವ ಸಾಧ್ಯತೆ ಇದೆ. ಆದರೆ, ಸಂಗಾತಿಯ ಮನಸ್ಸಿನಲ್ಲಿ ಚಂಚಲತೆ ಕಾಣಿಸಿಕೊಳ್ಳುವುದರಿಂದ ಆತಂಕ ಉಂಟಾಗಬಹುದು. ದಾಯಾದಿಗಳಿಂದ ಆಸ್ತಿ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು. ನಂಬಿಕಸ್ಥರಿಂದ ಧನ ಮತ್ತು ಮಾನ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉನ್ನತ ಮಟ್ಟದ ಯಶಸ್ಸು ದೊರೆಯುವ ಸಾಧ್ಯತೆ ಇದೆ. ಒಟ್ಟಾರೆ, ಈ ವಾರದಲ್ಲಿ ಲಾಭದ ಜೊತೆಗೆ ಜಾಗ್ರತೆ ಮತ್ತು ಸಮತೋಲನ ಅಗತ್ಯವಿದೆ.

 

ಕುಂಭ ರಾಶಿ: ಕುಂಭ ರಾಶಿಯವರಿಗೆ  ಹತ್ತಿರವಿರುವ ಸಾಧನೆ ಮತ್ತು ಸವಾಲುಗಳ ಕಾಲವಾಗಲಿದೆ. ಆಸ್ತಿ ಹಾಗೂ ಭೂಮಿ ಖರೀದಿ ಯಶಸ್ವಿಯಾಗುವ ಸಾಧ್ಯತೆ ಇದೆ, ಆದರೆ ಹಳೆಯ ವ್ಯವಹಾರಗಳಿಂದ ಮಾನಸಿಕ ಕಿರಿಕಿರಿ ಎದುರಾಗಬಹುದು. ಅವಿವಾಹಿತರು ಮತ್ತು ವಯಸ್ಸು ಮೀರಿದವರಿಗೆ ವಿವಾಹ ನೆರವೇರುವ ಸಾಧ್ಯತೆ ಇದೆ. ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಸೂಚನೆ ಇದೆ. ಗಂಡ-ಹೆಂಡತಿ ನಡುವೆ ರಾಜಿಯಾಗುವ ಮನೋಭಾವ ಬೆಳೆಸಿಕೊಳ್ಳುವುದರಿಂದ ದಾಂಪತ್ಯ ಜೀವನ ಸುಗಮವಾಗಬಹುದು. ಹೊಸ ವ್ಯಾಪಾರ ಪ್ರಾರಂಭಿಸುವ ಮೂಲಕ ಏಳಿಗೆ ಪಡೆಯಲು ಅವಕಾಶ ದೊರೆಯಲಿದೆ. ಸಗಟು ವ್ಯಾಪಾರಿಗಳು ಮತ್ತು ಬಂಗಾರಪೇಟೆ ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದ ಅಭಿವೃದ್ಧಿಗಾಗಿ ಆರ್ಥಿಕ ಬಲದ ಜೊತೆಗೆ ಕೆಲ ಉಪಾಯಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಮರಗೆಲಸ ವ್ಯಾಪಾರಿಗಳಿಗೆ ಉತ್ತಮ ಧನಲಾಭದ ಸೂಚನೆ ಇದೆ. ಜೂಜಾಟದ ಯಾವುದೇ ಚಟುವಟಿಕೆಗಳು ತಪ್ಪಿಸುವುದು ಸೂಕ್ತವಾಗಿದೆ. ಮಹಿಳಾ ರಾಜಕಾರಣಿಗಳಿಗೆ ಉನ್ನತ ಮಟ್ಟದ ಯಶಸ್ಸು ಕಂಡುಬರುತ್ತದೆ. ರಕ್ಷಣಾ ಇಲಾಖೆಯ ಉದ್ಯೋಗಿಗಳಿಗೆ ಮತ್ತು ಹೈನುಗಾರರಿಗೆ ಧನಲಾಭ ದೊರೆಯುತ್ತದೆ. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ ಸಾಧ್ಯತೆ ಇದೆ. ಮಂಗಳಕಾರ್ಯ ಮತ್ತು ಯತ್ನ ಕಾರ್ಯಗಳಲ್ಲಿ ಜಯ ಸಾಧಿಸಲು ಸಾಧ್ಯ. ಉದ್ಯೋಗದಲ್ಲಿ ಬದಲಾವಣೆ ಅಥವಾ ಬಡ್ತಿ ಸಂಭವಿಸಬಹುದು. ದಾಂಪತ್ಯದಲ್ಲಿ ಕೆಲವೊಮ್ಮೆ ಬಿರುಕು ಕಂಡುಬರುತ್ತದೆ. ಶತ್ರುಗಳಿಂದ ಶಾಂತ ಸಂದೇಶ ದೊರೆಯುವ ಮೂಲಕ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಹು ದಿನಗಳಿಂದ ಕಾಡುತ್ತಿದ್ದ ರೋಗದ ಬಾಧೆಯಿಂದ ಮುಕ್ತಿ ದೊರೆಯಲಿದೆ. ಒಟ್ಟಾರೆ, ಈ ವಾರ ಲಾಭ ಮತ್ತು ಅವಕಾಶಗಳೊಂದಿಗೆ ಎಚ್ಚರಿಕೆ ಹಾಗೂ ಸಮತೋಲನ ಅಗತ್ಯವಾಗಿದೆ.

 

ಮೀನ ರಾಶಿ: ಮೀನ ರಾಶಿಯವರಿಗೆ ಸಂತೋಷದ ಜೊತೆ ಕೆಲವು ಎಚ್ಚರಿಕೆಗಳೂ ಅಗತ್ಯ. ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ ಬೆಳೆಯುವ ಸಮಯ ಬಂದಿದೆ. ಉದ್ಯೋಗದಲ್ಲಿ ಇದ್ದವರಿಗೆ ಸಹೋದ್ಯೋಗಿಗಳಿಂದ ಮಾನಸಿಕ ಕಿರಿಕಿರಿ ಎದುರಾಗಬಹುದು, ಆದರೆ ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು ತಲುಪುವ ಸಾಧ್ಯತೆ ಇದೆ. ಪ್ರೇಮಿಗಳ ಮನಸ್ಸು ಉಲ್ಲಾಸದಿಂದ ತುಂಬಿ ಶುಭಾರಂಭವಾಗಲಿದೆ. ಮದುವೆಯ ಪ್ರಯತ್ನದಲ್ಲಿ ತಾಳ್ಮೆ ಮುಖ್ಯವಾಗಿದ್ದು, ಯಶಸ್ಸು ತಡವಾಗಿ ಬರುತ್ತದೆ. ಗರ್ಭಿಣಿಯರು ವಿಶೇಷ ಜಾಗ್ರತೆ ವಹಿಸುವುದು ಅಗತ್ಯ. ಹೋಟೆಲ್ ಉದ್ಯಮ ಮತ್ತು ಅಡುಗೆ ವೃತ್ತಿದಾರರಿಗೆ ಲಾಭದಾಯಕ ಸಮಯ; ಆಹಾರ ಪದಾರ್ಥ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಮತ್ತು ವರ್ಗಾವಣೆಯ ಅವಕಾಶ ಕಂಡುಬರುತ್ತದೆ. ಮೀನುಗಾರರಿಗೆ ಅದೃಷ್ಟದ ದಿನವಾಗಿದ್ದು, ಧನ ಲಾಭ ಕೂಡ ದೊರೆಯಲಿದೆ. ವಿದ್ಯಾರ್ಜನೆಗಾಗಿ ವಿದೇಶ ಪ್ರವಾಸ ಯಶಸ್ವಿಯಾಗುವ ಸೂಚನೆ ಇದೆ. ನೂತನ ವಾಹನ ಖರೀದಿ, ನಿವೇಶನ ಖರೀದಿ ಹಾಗೂ ಕಂಕಣಬಲ ಪ್ರಾಪ್ತಿಯ ಅವಕಾಶಗಳು ಸಹ ಸಿಗುತ್ತವೆ. ಪಾಲುದಾರಿಕೆ ವ್ಯಾಪಾರದಲ್ಲಿ ಕೆಲವೊಂದು ಅಲ್ಪ ಹಿನ್ನಡೆ ಕಾಣಿಸಬಹುದು. ವೈದ್ಯರು, ಪುಸ್ತಕ ವ್ಯಾಪಾರಿಗಳು, ರಂಗಭೂಮಿ ಕಲಾವಿದರು, ವ್ಯಾಪಾರಸ್ಥರು ಹಾಗೂ ರಾಜಕಾರಣಿಗಳಿಗೆ ಪ್ರಯೋಜನಕಾರಿ ಅವಕಾಶಗಳು ಎದುರಾಗುತ್ತವೆ. ಮಕ್ಕಳಿಂದ ಸಿಹಿ ಸುದ್ದಿ ದೊರೆಯುತ್ತದೆ. ಧನಪ್ರಾಪ್ತಿ ಯೋಗ ಕಂಡುಬರುತ್ತಿದ್ದು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ಎದುರಾಗಬಹುದು. ಒಟ್ಟಾರೆ, ಈ ವಾರ ಲಾಭ, ಅವಕಾಶ ಮತ್ತು ಎಚ್ಚರಿಕೆಯ ಸಮತೋಲನವನ್ನು ಕಾಪಾಡಿಕೊಂಡರೆ ಯಶಸ್ಸು ನಿಮ್ಮದಾಗಲಿದೆ.

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಶನಿವಾರ, 21 ಮಾರ್ಚ್ 2026 ರಾಶಿ ಭವಿಷ್ಯ

ಮೇಷ ರಾಶಿ – ದಿನಭವಿಷ್ಯ

ಮೇಷ ರಾಶಿಯವರಿಗೆ ಇಂದು ಮಿಶ್ರ ಫಲ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1

ಗುರುವಾರ, 19 ಮಾರ್ಚ್ 2026 ರಾಶಿಫಲ

ಮೇಷ ರಾಶಿ ವಾರಭವಿಷ್ಯ: ಸಂತೋಷ-ಸವಾಲುಗಳ ಮಿಶ್ರ ಅನುಭವ

ಈ ವ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

2026 ಮಾರ್ಚ್ 18 ಬುಧವಾರ ದಿನದ ರಾಶಿ ಭವಿಷ್ಯ

ಮೇಷ ರಾಶಿ : ಮೇಷ ರಾಶಿಯವರಿಗೆ ಇಂದಿನ ದಿನ ಮಿಶ್ರ ಫಲಿತಾಂಶಗಳನ್ನು... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಮಂಗಳವಾರ, 17 ಮಾರ್ಚ್ 2026 – ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ: ಉದ್ಯೋಗದಲ್ಲಿ ಸವಾಲು, ವ್ಯಾಪಾರದಲ್ಲಿ ಲಾಭದ ಸೂಚನೆ ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಶನಿವಾರದ ರಾಶಿ ಭವಿಷ್ಯ – 14 ಮಾರ್ಚ್ 2026

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   

ಮನೋಭಿಲಾಷೆಗಳು ಕ್ರಮೇಣ ಈಡೇರುವ ಸಾಧ್ಯತೆ ಕಂಡುಬರುತ್ತಿದೆ.

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   

ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ ಕೆಲಸಗಳು

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   

2026

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   

14 ಮಾರ್ಚ್ 2026

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   

ಶನಿವಾರದ ರಾಶಿ ಭವಿಷ್ಯ – 14 ಮಾರ್ಚ್ 2026

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1