ತುಂಗಭದ್ರ ಅಚ್ಚುಕಟ್ಟು ರೈತರ ಸಂಕಷ್ಟ: 33 ಗೇಟ್‌ಗಳನ್ನು ಶೀಘ್ರ ಅಳವಡಿಸಲು ಟಿ. ಎ. ಶರವಣ ಆಗ್ರಹ
ಬೆಂಗಳೂರು: ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಸಂಕಷ್ಟದ ಕುರಿತು ಟಿ. ಎ. ಶರವಣ ಅವರು ಕರ್ನಾಟಕ ವಿಧಾನ ಪರಿಷತ್ ನಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ತುಂಗಭದ್ರ ಜಲಾಶಯದ ಗೇಟ್‌ಗಳ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ತುಂಗಭದ್ರ ಜಲಾಶಯದ 33 ಗೇಟ್‌ಗಳ ದುರಸ್ತಿ ಕಾರ್ಯವನ್ನು ಹಂತ ಹಂತವಾಗಿ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ವಿನಂತಿಸಲಾಗಿತ್ತು. ಆದರೆ ಸರ್ಕಾರ ಎಲ್ಲಾ ಗೇಟ್‌ಗಳನ್ನು ಒಟ್ಟಿಗೆ ತೆಗೆದುಹಾಕಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಅವರು ಆರೋಪಿಸಿದರು. ಮುಂಗಾರು ಮಳೆ ಆರಂಭವಾಗುವ ಮುನ್ನ ಎಲ್ಲ ಗೇಟ್‌ಗಳನ್ನು ಅಳವಡಿಸಬೇಕಾದ ಅಗತ್ಯವಿದೆ. ಆದರೆ ಇದುವರೆಗೆ ಕೇವಲ 12 ಗೇಟ್‌ಗಳ ಅಳವಡಿಕೆ ಮಾತ್ರ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಗೇಟ್‌ಗಳನ್ನು ಸಮಯಕ್ಕೆ ಸರಿಯಾಗಿ ಅಳವಡಿಸದಿದ್ದರೆ ಕಾಲುವೆಗಳ ಮೂಲಕ ನೀರು ಹರಿದು ಬರದೇ, ನದಿಯ ನೀರು ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಹರಿದು ಹೋಗುವ ಸಾಧ್ಯತೆ ಇದೆ. ಇದರಿಂದ ಆ ರಾಜ್ಯಗಳಿಗೆ ಹೆಚ್ಚು ಲಾಭವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.
ಇನ್ನೂ ನವಿಲೆ ಸಮನಾಂತರ ಜಲಾಶಯ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಸುಮಾರು 15 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದ್ದು, ನೆರೆಯ ರಾಜ್ಯಗಳಿಗೆ ಈ ಯೋಜನೆ ಬಗ್ಗೆ ಆಸಕ್ತಿ ಇಲ್ಲ ಎಂದು ಆರೋಪಿಸಿದರು.
ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅಕ್ಕಿ ಗಿರಣಿಗಳು ಬಹುತೇಕ ಬಂದಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತುಂಗಭದ್ರ ಜಲಾಶಯದ ಎಲ್ಲ 33 ಗೇಟ್‌ಗಳನ್ನು ಅಳವಡಿಸುವವರೆಗೆ ರೈತರು ತಮ್ಮ ಊರುಗಳಿಗೆ ಹಿಂತಿರುಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಆದ್ದರಿಂದ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ತುಂಗಭದ್ರ ಜಲಾಶಯದ ಎಲ್ಲ 33 ಗೇಟ್‌ಗಳನ್ನು ಅತೀ ಶೀಘ್ರದಲ್ಲಿ ಅಳವಡಿಸುವಂತೆ ಉಪಮುಖ್ಯಮಂತ್ರಿಯನ್ನು ಶಾಸಕ ಟಿ. ಎ. ಶರವಣ ಒತ್ತಾಯಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಲಭ್ಯ – ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ ಜಗದೀಶ.ಜಿ
ಬೆಂಗಳೂರು: ನಗರದಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಾಕಷ್ಟ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರ್.ಕೆ.ಪುರಂ ಶಾಸಕ ಬೈರತಿ ಬಸವರಾಜ್‌ಗೆ ನ್ಯಾಯಾಲಯದಿಂದ ಜಾಮೀನು
ಬೆಂಗಳೂರು: ಭಾರೀ ಸಂಚಲನ ಮೂಡಿಸಿದ್ದ ಬಿಕ್ಲು ಶಿವ ಕೊಲೆ ಪ್ರಕರಣದಲ... ಓದನ್ನು ಮುಂದುವರಿಸಿ
1 ಗಂಟೆ ಒಳಗೆ ಬ್ಲಾಸ್ಟ್: ಬಸವಭವನಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ!
ಬೆಂಗಳೂರು: ನಗರದ ಬಸವಭವನ ಕಟ್ಟಡಗೆ ಸೈನೇಡ್ ಬಾಂಬ್ ಸ್ಫೋಟ ಮಾಡುವು... ಓದನ್ನು ಮುಂದುವರಿಸಿ
ಜಿಬಿಎ ವ್ಯಾಪ್ತಿಯಲ್ಲಿ 441 ಹೊಸ ಶೌಚಾಲಯಗಳ ನಿರ್ಮಾಣ – ಡಿ. ಕೆ. ಶಿವಕುಮಾರ್ ಪ್ರಕಟಣೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 388... ಓದನ್ನು ಮುಂದುವರಿಸಿ
ರಾಜ್ಯ ಸರ್ಕಾರ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕುತ್ತಿರುವುದು ಸುಳ್ಳಲ್ಲ – ಬಿ. ವೈ. ವಿಜಯೇಂದ್ರ ಟೀಕೆ
ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್ ಜನರ ನಿರೀಕ್ಷೆಗಳಿಗೆ... ಓದನ್ನು ಮುಂದುವರಿಸಿ
ಅಡುಗೆ ಅನಿಲ ಪೂರೈಕೆ ವ್ಯತ್ಯಯ: ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ತಾತ್ಕಾಲಿಕ ಸ್ಥಗಿತ -ಟಿ. ಎ. ಶರವಣ
ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ... ಓದನ್ನು ಮುಂದುವರಿಸಿ
ಬಂಡೀಪುರ–ನಾಗರಹೊಳೆಯಲ್ಲಿ ಸಫಾರಿ ತಾತ್ಕಾಲಿಕ ಬಂದ್: ಸಚಿವ ಈಶ್ವರ್ ಬಿ. ಖಂಡ್ರೆ ಸ್ಪಷ್ಟನೆ
ಬೆಂಗಳೂರು/ಚಾಮರಾಜನಗರ: ಕಳೆದ ನವೆಂಬರ್‌ನಲ್ಲಿ ಬಂಡೀಪುರ ರಾಷ್ಟ್ರೀ... ಓದನ್ನು ಮುಂದುವರಿಸಿ
ಕೇರಳ ಸರ್ಕಾರದ ಲೋಗೋ ಬಳಸಿ ನಕಲಿ ಲಾಟರಿ! 15 ಲಕ್ಷ ಬಹುಮಾನ ಎಂಬ ಮೆಸೇಜ್‌ಗೆ ಪ್ರತಿಕ್ರಿಯಿಸಬೇಡಿ
ಗದಗ: ಜಿಲ್ಲೆಯಲ್ಲಿ ನಕಲಿ ಲಾಟರಿ ಯೋಜನೆಯ ಹೆಸರಿನಲ್ಲಿ ಜನರನ್ನು ಮ... ಓದನ್ನು ಮುಂದುವರಿಸಿ
ತಿಪಟೂರು
ಮದುವೆಯಾಗಿ ಮೂರು ತಿಂಗಳಲ್ಲೇ ಪತಿ ಕೊಲೆ: ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿದ ಪತ್ನಿ ಬಂಧನ
ತುಮಕೂರು: ಜಿಲ್ಲೆಯ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ... ಓದನ್ನು ಮುಂದುವರಿಸಿ
ಅಡುಗೆ ಅನಿಲ ಕೊರತೆ ಕುರಿತು ಸಂಸತ್ತಿನಲ್ಲಿ ಮಾತನಾಡಲಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕ... ಓದನ್ನು ಮುಂದುವರಿಸಿ