ವೈರಮುಡಿ ಬ್ರಹ್ಮೋತ್ಸವ: ಮಂಡ್ಯದಲ್ಲಿ 13 ದಿನಗಳ ಶೋಭಾಯಾತ್ರೆ ಪ್ರಾರಂಭ

ಮಂಡ್ಯ: ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ನಡೆಯುವ ವೈರಮುಡಿ ಬ್ರಹ್ಮೋತ್ಸವ 2026 ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿತು. ಮಾರ್ಚ್ 28 ಶನಿವಾರ, ಕಿರೀಟಧಾರಣೆ ಹಾಗೂ ಉತ್ಸವ ಆಚರಣೆ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಕುಮಾರ ಸಭೆಯಲ್ಲಿ ಮಾತನಾಡಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು, ಹಾಲಿ ಇರುವ ನೀರಿನ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಬೇಕು ಎಂದು ಎಚ್ಚರಿಸಿದ್ದಾರೆ. ಭಕ್ತಾದಿಗಳಿಗೆ ಯಾವುದೇ ಆರೋಗ್ಯ ತೊಂದರೆ ಉಂಟಾಗದಂತೆ, ಆಂಬುಲೆನ್ಸ್ ಮತ್ತು ಮೆಡಿಸಿನ್ ವ್ಯವಸ್ಥೆ ಸಿದ್ಧಪಡಿಸಬೇಕು. ಎಲ್ಲಾ ವಿದಧ ವೈದ್ಯರು ಕಡ್ಡಾಯವಾಗಿ ನಿಗದಿತ ಸ್ಥಳಗಳಲ್ಲಿ ಇರುವುದು ಅನಿವಾರ್ಯವಾಗಿದೆ.

 

ಸಹಜ ಸುರಕ್ಷತೆಗಾಗಿ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ, ಸಿ.ಸಿ.ಟಿ.ವಿ. ಕವರ್‌ ಮಾಡಿದ ಪ್ರದೇಶಗಳಲ್ಲಿ ಹೆಚ್ಚುವರಿ ಕ್ಯಾಂಮೆರಾ ಅಳವಡಿಸುವುದು, ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಮತ್ತು ದೇವಾಲಯಕ್ಕೆ ಉಚಿತ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಕೊಳದ ಬಳಿ ಈಜು ಪಡೆ, ಅಗ್ನಿಶಾಮಕ ಸಿಬ್ಬಂದಿ ನಿಯೋಜನೆ ಮತ್ತು ರಸ್ತೆಗಳ ದುರಸ್ತಿ ಕೂಡ ಸೂಚಿಸಲಾಗಿದೆ. ಬಯೋ ಶೌಚಾಲಯಗಳನ್ನು ಮೇಲುಕೋಟೆ ಕಲ್ಯಾಣ, ಬಸ್ ನಿಲ್ದಾಣ ಮತ್ತು ದೇವಾಲಯದ ಹತ್ತಿರ ನಿರ್ಮಿಸಿ, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚಿಸಲಾಗಿದೆ. ಶ್ರದ್ಧಾವಂತರಿಗೆ ನಿರಂತರ ವಿದ್ಯುತ್ ಪೂರೈಕೆ, ಬೀದಿ ದೀಪಗಳ ದುರಸ್ತಿ ಮತ್ತು ಮಂಟಪ ಹಾಗೂ ಕಲ್ಯಾಣಿಯಲ್ಲಿ ದೀಪ ಮತ್ತು ಹೂವಿನ ಅಲಂಕಾರ ವ್ಯವಸ್ಥೆ ಕೂಡಾ ನಡೆಸಲು ಸೂಚಿಸಲಾಗಿದೆ.

 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಹೇಳಿದರು, ಬ್ರಹ್ಮೋತ್ಸವದಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ ಹಾಗೂ ಗಣ್ಯರು ಮತ್ತು ಅತಿ ಗಣ್ಯರಿಗೆ ಶಿಷ್ಟಾಚಾರ ವ್ಯವಸ್ಥೆ ಕಲ್ಪಿಸಬೇಕು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಟಿ.ಎನ್ ನರಸಿಂಹಮೂರ್ತಿ, ಮುಜರಾಯಿ ತಹಶೀಲ್ದಾರ್ ತಮ್ಮೆಗೌಡ, ಪಾಂಡವಪುರ ಇ.ಒ ವೀಣಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

20 hours ago

   
Image 1
Image 1
ಚಾಮರಾಜನಗರ

ಬಿಳಿಗಿರಿ ಅರಣ್ಯದಲ್ಲಿ ಹುಲಿ ಸಾವು: ಉರುಳು ಹಾಕಿದ್ದ ಬೇಟೆಗಾರ ಬಂಧನ

ಚಾಮರಾಜನಗರ: ಬಿಳಿಗಿರಿ ಹುಲಿ ಸಂರಕ್ಷಿತಾರಣ್ಯದ ಕೊಳ್ಳೇಗಾಲ ವಲಯದಲ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಹಾಸನ

ಹಾಸನಾಂಬೆ ಉತ್ಸವ ದೀಪಾಲಂಕಾರದಲ್ಲಿ ಗೋಲ್ಮಾಲ್? 15 ಲಕ್ಷ ರೂಪಾಯಿ ಗಲಾಟೆ ಸಂಶಯ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ನೀಡುವ ಶಕ್ತಿದೇವತೆ ಹ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಗದಗ

ಲಕ್ಕುಂಡಿ “ಚಿನ್ನದ ನಿಧಿ” ಪ್ರಕರಣಕ್ಕೆ ಹೊಸ ತಿರುವು .. ಹಂಡೆಯಲ್ಲಿ ಚಿನ್ನದ ನಾಣ್ಯ ವಿಡಿಯೋ… ಬಳಿಕ ಬಯಲಾದ ನಕಲಿ ಕಥೆ

ಗದಗ: ಲಕ್ಕುಂಡಿ ಗ್ರಾಮದಲ್ಲಿ 455 ಗ್ರಾಂ ಚಿನ್ನ ಪತ್ತೆಯಾದ ಸುದ್ದ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಉತ್ತರಕನ್ನಡ

ದಾಂಡೇಲಿ

ರಸ್ತೆ ಬದಿ ಚಪ್ಪಲಿ ಹೊಲಿಸಿದ ಅಣ್ಣಂದಿರ ಕನಸು ನನಸಾದ ದಿನ –ಸಿವಿಲ್ ಜಡ್ಜ್ ಆದ ಪದ್ಮಾವತಿ ಮಾದಿಗ

ದಾಂಡೇಲಿ : ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ತಮ್... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ವಿಜಯಪುರ

ಸಿಂದಗಿ ಆಸ್ಪತ್ರೆ ದುರಂತ: ವೈದ್ಯರ ಕೊರತೆ, ಹೆರಿಗೆ ವೇಳೆ ನವಜಾತ ಶಿಶು ಹಾಗೂ ತಾಯಿ ಸಾವು

ವಿಜಯಪುರ : ಸಿಂದಗಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ರಾಮನಗರ

ರಾಮನಗರದಲ್ಲಿ ವಿಶೇಷ ಕ್ಷಣ : ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆಗೆ ಆಗಮ

ರಾಮನಗರ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಮ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಕಲ್ಬುರ್ಗಿ

ಕಲಬುರಗಿ: ಬೀದಿ ನಾಯಿಗಳ ದಾಳಿಯಲ್ಲಿ 5 ಮಕ್ಕಳಿಗೆ ಗಂಭೀರ ಗಾಯ

ಕಲಬುರಗಿ : ನಗರದ ದೇವಿನಗರ ಬಡಾವಣೆಯಲ್ಲಿ ಭಾನುವಾರದಂದು ನಡೆದ ದುರ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ QR ಕೋಡ್‌ ಜೊತೆ ಹೊಸ ಸುರಕ್ಷತಾ ಕ್ರಮ

ಬೆಂಗಳೂರು: ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳ ಸುರಕ್ಷತೆಯನ್ನು... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

ಕಲ್ಯಾಣ ಮಂಟಪಗಳಿಗೆ ವಧು–ವರರ ವಯಸ್ಸು ಪರಿಶೀಲನೆ ಕಡ್ಡಾಯವಿಲ್ಲ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ಬಾಲ್ಯ ವಿವಾಹ ಆರೋಪದಲ್ಲಿ ಹುಸೈನ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಮಂಡ್ಯ

ಮದ್ದೂರು

ನಾಡಬಾಂಬ್ ಸ್ಫೋಟದಲ್ಲಿ ಹಸುವಿನ ಬಾಯಿ ಛಿದ್ರ-ಛಿದ್ರ; ರೈತ ಮಹಿಳೆ ಗಂಭೀರ ಆಘಾತ

ಮಂಡ್ಯ: ಮದ್ದೂರು ತಾಲ್ಲೂಕಿನ K. M. Doddi ಸಮೀಪದ ಹರಳಹಳ್ಳಿ ಗ್ರ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1