ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಗಂಡನ ವಿಕೃತಿಗೆ ಹೆಂಡತಿ ಸಾಥ್!
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಾಲೆಯ ಮಾಲೀಕ ಧನಂಜಯ್ ಮತ್ತು ಅವರ ಪತ್ನಿ ಶೈಲಜಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಬಾಲಕಿಯರಿಗೆ ಮಾಲೀಕನೇ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ವರದಿ ಪ್ರಕಾರ, ಧನಂಜಯ್ ರಾತ್ರಿವೇಳೆ ಮದ್ಯಪಾನದ ಪರಿಸ್ಥಿತಿಯಲ್ಲಿ ಬಾಲಕಿಯರ ಕೊಠಡಿಗೆ ಪ್ರವೇಶಿಸಿ ಕೆಲವೊಮ್ಮೆ ವಾರ್ಡನ್ ಕೊಠಡಿಗೆ ಕರೆಸಿ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಬಾಲಕಿಯರು ಈ ವಿಚಾರವನ್ನು ಪತ್ನಿ ಶೈಲಜಾಗೆ ತಿಳಿಸಿದರೂ, ಆಕೆ ಕೂಡ ಗಂಡನ ಪರವಾಗಿ ನಿಂತು ಈ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ತಾಕೀತು ಮಾಡಿದ್ದಾಳೆ.
ಬಾಲಕಿಯರು ಎಂಟು ದಿನಗಳ ಕಾಲ ಹೊರಗೆ ಹೋಗಲು ಅಥವಾ ಪೋಷಕರಿಗೆ ಕರೆ ಮಾಡಲು ಅವಕಾಶ ಪಡೆಯಲಿಲ್ಲ. ನಂತರ ಫೆಬ್ರವರಿ 27ರಂದು ಪೋಷಕರಿಗೆ ಕರೆ ಮಾಡಿ ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿದರು. ಪೋಷಕರು ತಕ್ಷಣ ಶಾಲೆಗೆ ಬಂದು ದಂಪತಿಗಳ ವಿರುದ್ಧ ದೂರು ನೀಡಿದ್ದಾರೆ.
ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ವಸತಿ ಶಾಲೆಯ ಮಾಲೀಕ ಧನಂಜಯ್ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷನಾಗಿಯೂ ಇದ್ದಾನೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಪೋಕ್ಸೋ ಕಾಯ್ದೆಯಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಲೆಗೈದ ಪ್ರಿಯಕರ!
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ತೇಜಸ್ವಿನಿ ಎಂಬ ಮಹಿಳೆ ತ... ಓದನ್ನು ಮುಂದುವರಿಸಿ
ಲಕ್ಷ್ಮೇಶ್ವರ
ಆಸ್ತಿ ಕಲಹದಲ್ಲಿ ಮಗನಿಂದ ತಂದೆ ಕೊಲೆ – ಮದ್ಯಪಾನದ ಸಂದರ್ಭದಲ್ಲಿ ಹತ್ಯೆ
ಗದಗ: ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಗೋವನಾಳ ಗ್ರಾಮದಲ್ಲಿ ಆಸ್ತಿ ಹಕ್ಕು ಸಂಬಂಧಿತ... ಓದನ್ನು ಮುಂದುವರಿಸಿ
ಕೌಟುಂಬಿಕ ಕಲಹದಿಂದ ಮನೋವೈದ್ಯ ತೀವ್ರ ಖಿನ್ನತೆಯಿಂದ ಆತ್ಮಹತ್ಯೆ
ಮಂಡ್ಯ, ಫೆಬ್ರವರಿ 28: ಕೆ.ಆರ್.ನಗರ ಮೂಲದ ಸುಖದೇವ್ (53), ಮೈಸೂರ... ಓದನ್ನು ಮುಂದುವರಿಸಿ
ಲಕ್ಷ್ಮೇಶ್ವರ
ಶಿಗ್ಲಿ ಗ್ರಾಮದಲ್ಲಿ ಯುವಕ ಕ್ರೂರ ಹತ್ಯೆ – ಶವ ಹೊಲದಲ್ಲಿ ಪತ್ತೆ
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಯು... ಓದನ್ನು ಮುಂದುವರಿಸಿ
ಶ್ರೀರಂಗಪಟ್ಟಣ
ಬಲಮುರಿ ಪ್ರವಾಸದಲ್ಲಿ ನದಿ ಅಪಘಾತ : ಪ್ರವಾಸ ಮಧ್ಯೆ ನದಿ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು – ಮಂಡ್ಯ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿಯಲ್ಲಿ ಕಾವೇರ... ಓದನ್ನು ಮುಂದುವರಿಸಿ
ಹಾಸನ: FD ಆಮಿಷದಲ್ಲಿ 3 ಕೋಟಿ ರೂ. ವಂಚನೆ – ಬ್ಯಾಂಕ್ ಮ್ಯಾನೇಜರ್ H. S. ಪೂಜಾ ಪರಾರಿಯಾಗುವ ಯತ್ನ
ಹಾಸನ: ನಿಗದಿತ ಠೇವಣಿ (FD) ಆಮಿಷದಲ್ಲಿ ವಂಚನೆ: 50ಕ್ಕೂ ಅಧಿಕ ಗ್... ಓದನ್ನು ಮುಂದುವರಿಸಿ
ಗುಂಡ್ಲುಗುರ್ಕಿ ಗ್ರಾಮದಲ್ಲಿ ವ್ಯಕ್ತಿ ಕಿಟಕಿಗೆ ನೇಣು ಬಿಗಿದು ಪತ್ತೆ – ಆತ್ಮಹತ್ಯೆ ಅಥವಾ ಕೊಲೆ?
ಚಿಕ್ಕಬಳ್ಳಾಪುರ: ಜಿಲ್ಲೆಯ ಗುಂಡ್ಲುಗುರ್ಕಿ ಗ್ರಾಮದಲ್ಲಿ ವ್ಯಕ್ತಿ... ಓದನ್ನು ಮುಂದುವರಿಸಿ
ಬಾಡಿಗೆ ಮನೆಯಲ್ಲಿ ಕೊಳೆತ ಶವ ಪತ್ತೆ: ಅನೈತಿಕ ಸಂಬಂಧಕ್ಕೆ ಸಂಬಂಧಿಸಿದ ಕೊಲೆ ಶಂಕೆ
ಬೆಂಗಳೂರು: ಬಾಗಲಗುಂಟೆ, ಮಂಜುನಾಥನಗರ 2ನೇ ರಸ್ತೆ, ವಿಜಯಲಕ್ಷ್ಮಿ... ಓದನ್ನು ಮುಂದುವರಿಸಿ
ಪವನ್ ಕುಮಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಂಜನ್ ಬಂಧನ: ಗುಂಡೇಟಿನಿಂದ ಗಾಯ
ಬೆಂಗಳೂರು: ರೌಡಿಶೀಟರ್ ಪವನ್ ಕುಮಾರ್ ಬರ್ಬರ ಹತ್ಯೆ ಪ್ರಕರಣದ ಪ್ರ... ಓದನ್ನು ಮುಂದುವರಿಸಿ
ಕೆಆರ್ ಪುರದಲ್ಲಿ ಬೈಕ್ ಕಳವು; ಕಳ್ಳನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆ
ಬೆಂಗಳೂರು: ಕೆಆರ್ ಪುರದ ಕುಂದಲಹಳ್ಳಿ ಕಾಲೋನಿಯ 6ನೇ ಕ್ರಾಸ್‌ನಲ್ಲ... ಓದನ್ನು ಮುಂದುವರಿಸಿ