ವಿದ್ಯಾರ್ಥಿ ಚುನಾವಣೆ ಘೋಷಣೆಗೂ ಮುನ್ನವೇ ಮಂಗಳೂರು ಕಾಲೇಜಿನಲ್ಲಿ ರಾಜಕೀಯ ಕಿಚ್ಚು
ಮಂಗಳೂರು: ಪ್ರಖ್ಯಾತ ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ ಸಂಬಂಧ ರಾಜಕೀಯ ಉದ್ವಿಗ್ನತೆ ಉಂಟಾಗಿದೆ. ರಾಜ್ಯ ಬಜೆಟ್‌ನಲ್ಲಿ ಸಿದ್ದರಾಮಯ್ಯ ವಿದ್ಯಾರ್ಥಿ ಸಂಘ ಚುನಾವಣೆ ಮತ್ತು ಇಂದಿರಾ ಕ್ಯಾಂಟೀನ್ ಯೋಜನೆ ಘೋಷಣೆಯ ಬಳಿಕ, ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ ಕಾರ್ಯಕರ್ತರು ಕಾಲೇಜು ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಡಿ.ಕೆ. ಶಿವಕುಮಾರ್ ಪರ ಜಯಘೋಷಗಳನ್ನು ಕೂಗಿದ ಘಟನೆಗೆ ಬಿಜೆಪಿ ಬೆಂಬಲಿತ ಎಬಿವಿಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶೈಕ್ಷಣಿಕ ಕೇಂದ್ರದಲ್ಲಿ ರಾಜಕೀಯ ಚಟುವಟಿಕೆ ನಡೆದಂತೆ ಆರೋಪಿಸಿ, ಎಬಿವಿಪಿ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಪ್ರಾಂಶುಪಾಲ ಗಣಪತಿ ಗೌಡ “ಸಿಹಿ ಹಂಚಲು ಮಾತ್ರ ಅನುಮತಿ ನೀಡಿದ್ದೆವು, ಘೋಷಣೆ ಕೂಗಿದ್ದು ಗಮನಕ್ಕೆ ಬಂದಿಲ್ಲ” ಎಂದು ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ವರದಿ ನೀಡಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಈ ಘಟನೆ ಕ್ಯಾಂಪಸ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದರಿಂದ ಪೋಷಕರಲ್ಲಿ ಆತಂಕ ಮೂಡಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮನೆ ಮನೆಗೆ ಭೇಟಿ, ಹಳೆಯ ವಿದ್ಯಾರ್ಥಿಗಳ ಸಹಕಾರ: ಮಕ್ಕಳನ್ನು ಶಾಲೆಗೆ ಬರಿಸಲು ಮಧು ಬಂಗಾರಪ್ಪ ನಿರ್ದೇಶನ
ಬೆಂಗಳೂರು: 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ದಾಖಲಾತಿ ಅ... ಓದನ್ನು ಮುಂದುವರಿಸಿ
ಕುಷ್ಟಗಿ ಹಾಗೂ ಕೊಪ್ಪಳದಲ್ಲಿ ಹಿಂದುಳಿದ ವರ್ಗ ವಿದ್ಯಾರ್ಥಿನಿಲಯಗಳ ಅಗತ್ಯತೆಯನ್ನು ಹೆಚ್ಚಿಸಲಾಗುವುದು -ಶಾಸಕರ ಪ್ರಶ್ನೆಗೆ ಉತ್ತರ
ಬೆಂಗಳೂರು: ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ... ಓದನ್ನು ಮುಂದುವರಿಸಿ
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: 2026ನೇ ಮಾರ್ಚ್ 18ರಿಂದ ಕರ್ನಾಟಕದಲ್ಲಿ ಎಸ್‌ಎಸ್‌ಎಲ್... ಓದನ್ನು ಮುಂದುವರಿಸಿ
SSLC ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ – ಹಾಲ್‌ಟಿಕೆಟ್ ತೋರಿಸಿ ಉಚಿತ ಪ್ರಯಾಣ
ಬೆಂಗಳೂರು: 2025–26ನೇ ಸಾಲಿನ ಎಸ್‌ಎಸ್‌ಎಲ್... ಓದನ್ನು ಮುಂದುವರಿಸಿ
ಶಿಕ್ಷಣ ಇಲಾಖೆ: ಸಿಬ್ಬಂದಿ ಹಾಜರಾತಿಗೆ ‘ಕರ್ತವ್ಯ’ ಆ್ಯಪ್ ಕಡ್ಡಾಯ!
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತ... ಓದನ್ನು ಮುಂದುವರಿಸಿ
51,000 ಅತಿಥಿ ಶಿಕ್ಷಕರಿಗೆ ಸಂಬಳ 3 ತಿಂಗಳಿಂದ ವಿಳಂಬ: ಶಿಕ್ಷಕರು ಅಸಮಾಧಾನ
ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಸಂಬಳ ವಿಳಂಬದ ನಡುವ... ಓದನ್ನು ಮುಂದುವರಿಸಿ
90 ದಿನಗಳಲ್ಲಿ ಅಂಗನವಾಡಿ ಖಾಲಿ ಹುದ್ದೆ ಭರ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಹುದ್ದೆ ಖಾಲಿಯಾದಲ್... ಓದನ್ನು ಮುಂದುವರಿಸಿ
ಕೆಇಎ ಪರೀಕ್ಷಾ ವ್ಯವಸ್ಥೆ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ನಿಯೋಗ ಭೇಟಿ
ಬೆಂಗಳೂರು: ವೆಬ್ ಕಾಸ್ಟಿಂಗ್ ಹಾಗೂ ಮುಖ ಚಹರೆ ಪತ್ತೆ ತಂತ್ರಜ್ಞಾನ... ಓದನ್ನು ಮುಂದುವರಿಸಿ
ನಾಗಮಂಗಲ
ಗ್ರಾಮೀಣ ಶ್ರಮ ಫಲ: ಮಂಡ್ಯದ ಧನಂಜಯ್ UPSC ಮೂಲಕ IPS ಹುದ್ದೆ - 554ನೇ ರ್ಯಾಂಕ್ IPS ಗೆ ಆಯ್ಕೆ
ಮಂಡ್ಯ: ನಾಗಮಂಗಲ ತಾಲ್ಲೂಕಿನ ಕರಡಹಳ್ಳಿ ಗ್ರಾಮದ ಧನಂಜಯ್, ಯುಪಿಎಸ... ಓದನ್ನು ಮುಂದುವರಿಸಿ
ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಶೀಘ್ರ – ಸಚಿವ ಮಧು ಬಂಗಾರಪ್ಪ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಸು... ಓದನ್ನು ಮುಂದುವರಿಸಿ