ವಿದ್ಯುತ್ ದರ ಏರಿಕೆ: ಏಪ್ರಿಲ್ 1ರಿಂದ ಹೊಸ ದರ ಜಾರಿ: ಬಿಲ್ ಹೆಚ್ಚಳ ಶಾಕ್
ಬೆಂಗಳೂರು: ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ವಾಣಿಜ್ಯ ಹಾಗೂ ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ ದರ ಏರಿಕೆಯ ಹೊರೆ ಬೀಳಲಿದೆ. ವಿದ್ಯುತ್ ಸರಬರಾಜು ಕಂಪನಿಗಳ ನಷ್ಟವನ್ನು ಸಮತೋಲನಗೊಳಿಸಲು ಕೆಇಆರ್‌ಸಿ (KERC) ದರ ಪರಿಷ್ಕರಣೆಗೆ ಅನುಮತಿ ನೀಡಿದ್ದು, ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರಲಿದೆ.
ಈ ಪರಿಷ್ಕರಣೆ 2025-26ರ ಆರ್ಥಿಕ ವರ್ಷಕ್ಕೆ ಅನ್ವಯವಾಗಿದ್ದು, ಆ ಅವಧಿಯಲ್ಲಿ ಬಳಸಿದ ವಿದ್ಯುತ್‌ಗೆ ಹೆಚ್ಚುವರಿ ಮೊತ್ತವನ್ನು ಈಗ ಪಾವತಿಸಬೇಕಾಗುತ್ತದೆ. ಈ ಬಾಕಿ ಮೊತ್ತವನ್ನು ಬೆಸ್ಕಾಂ (BESCOM) ಸೇರಿದಂತೆ ಎಲ್ಲಾ ಎಸ್ಕಾಂಗಳು 2026-27ರ ಬಿಲ್‌ಗಳಲ್ಲಿ ವಸೂಲಿ ಮಾಡುವುದಾಗಿ ತಿಳಿಸಿವೆ. ಕೈಗಾರಿಕೆಗಳು, ಹೋಟೆಲ್‌ಗಳು ಮತ್ತು ಸಿನಿಮಾ ಮಂದಿರಗಳಂತಹ ವಾಣಿಜ್ಯ ಬಳಕೆದಾರರಿಗೆ ಹೆಚ್ಚಿನ ದರ ಏರಿಕೆ ವಿಧಿಸಲಾಗಿದ್ದು, ಇದರಿಂದ ಉತ್ಪಾದನಾ ವೆಚ್ಚ ಮತ್ತು ಸೇವಾ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇತ್ತೀಚಿನ ವರದಿಗಳ ಪ್ರಕಾರ ರಾಜ್ಯದಲ್ಲಿ ವಿದ್ಯುತ್ ಬಳಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಬಳಕೆ ಹೆಚ್ಚಾಗಿ ಕಂಡುಬಂದಿದ್ದು, ಈ ತಿಂಗಳಲ್ಲಿ ಒಟ್ಟು ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ. ಬೆಂಗಳೂರಿನ ಪೀಕ್ ಡಿಮ್ಯಾಂಡ್ 2,000 ರಿಂದ 2,500 ಮೆಗಾವ್ಯಾಟ್ ನಡುವೆಯೇ ಇದೆ.
ಬೇಸಿಗೆ ತಾಪಮಾನ ಏರಿಕೆಯಿಂದ ಎಸಿ ಬಳಕೆ ಹೆಚ್ಚಾಗಿರುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಾವರಿ ಪಂಪ್‌ಸೆಟ್‌ಗಳ ಹೆಚ್ಚಿದ ಬಳಕೆ ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸಿದೆ. ಜೊತೆಗೆ, ಅಡುಗೆ ಅನಿಲ ಕೊರತೆಯಿಂದ ಮನೆಗಳು ಮತ್ತು ಹೋಟೆಲ್‌ಗಳು ಇಂಡಕ್ಷನ್ ಸ್ಟೌವ್ ಹಾಗೂ ಹೀಟರ್‌ಗಳ ಬಳಕೆಗೆ ತಿರುಗಿರುವುದು ಗ್ರಿಡ್ ಮೇಲೆ ಹೆಚ್ಚುವರಿ 400-500 ಮೆಗಾವ್ಯಾಟ್ ಹೊರೆ ಉಂಟುಮಾಡುವ ಸಾಧ್ಯತೆ ಇದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಾರವಾರ
ಸಿಲಿಂಡರ್ ಸಿಗದೆ ಸಂಕಷ್ಟ: ಅರಣ್ಯಕ್ಕೆ ದೌಡಾಯಿಸಿದ ಜನ
ಕಾರವಾರ: ಗ್ಯಾಸ್ ಸಿಲಿಂಡರ್ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯ ಗ... ಓದನ್ನು ಮುಂದುವರಿಸಿ
ಸಂಗಮ ವನ್ಯಜೀವಿಧಾಮದಿಂದ ಆನೆಗಳ ಸಂಚಾರ?: ಜನರಲ್ಲಿ ಆತಂಕ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೆಲ ಭಾಗಗ... ಓದನ್ನು ಮುಂದುವರಿಸಿ
“ಬೂಟ್ ನೆಕ್ಕುವ ಸಂಸ್ಕೃತಿ ಇದೆಯಾ?”: ಬಿಜೆಪಿ ವಿರುದ್ಧ ಸೋಮಶೇಖರ್ ಪ್ರಶ್ನೆ
ಬೆಂಗಳೂರು: ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾದ ಶಾಸಕ ಎಸ್.ಟಿ. ಸೋಮಶ... ಓದನ್ನು ಮುಂದುವರಿಸಿ
ಬಿಸಿಲಿನ ತಾಪಕ್ಕೆ ಬ್ರೇಕ್: 9 ಜಿಲ್ಲೆಗಳಲ್ಲಿ ಕಚೇರಿ ಸಮಯ ಬದಲಾವಣೆ
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನವನ್ನು... ಓದನ್ನು ಮುಂದುವರಿಸಿ
ದಾಸವಾಳ ಹೂ ನುಂಗಿ ಶಿಶು ಸಾವು: ಮೈಸೂರಿನಲ್ಲಿ ಮನಕಲಕುವ ಘಟನೆ
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್... ಓದನ್ನು ಮುಂದುವರಿಸಿ
ಜಿಮ್ ಟ್ರೈನರ್ ವಿರುದ್ಧ ಅಸಭ್ಯ ವರ್ತನೆ ಆರೋಪ: ಯುವತಿಯರೊಂದಿಗೆ ದುರ್ವರ್ತನೆ?: ಜಿಮ್‌ಗೆ ಬೀಗ ಹಾಕಿ ಆಕ್ರೋಶ
ಧಾರವಾಡ: ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂಬ ಆರೋಪದ... ಓದನ್ನು ಮುಂದುವರಿಸಿ
ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು : ಯುವ ರೈತನ ಸಾವು
ಬೀದರ್: ಕೃಷಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದ ಯುವ ರೈತ ಸಿಡಿಲಿಗ... ಓದನ್ನು ಮುಂದುವರಿಸಿ
ಹಿಂದಿ ಹೇರಿಕೆ ವಿರೋಧ: “ಕನ್ನಡಕ್ಕೇ ಮೊದಲ ಆದ್ಯತೆ”: ಸಕ್ಕರೆನಾಡಿನಲ್ಲಿ ಸಂಭ್ರಮ
ಮಂಡ್ಯ: ರಾಜ್ಯ ಸರ್ಕಾರದ ಹಿಂದಿ ಹೇರಿಕೆ ವಿರೋಧಿ ನಿರ್ಧಾರಕ್ಕೆ ಸಕ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಏಪ್ರಿಲ್ 1ರಿಂದ ಸ್ವಯಂ ಜನಗಣತಿ ಆರಂಭ: ಸಾರ್ವಜನಿಕರಿಗೆ ಪಾಲಿಕೆ ಮನವಿ
ಹುಬ್ಬಳ್ಳಿ: ದೇಶವ್ಯಾಪಿ ಜನಗಣತಿ ಪ್ರಕ್ರಿಯೆಯ ಭಾಗವಾಗಿ ಏಪ್ರಿಲ್... ಓದನ್ನು ಮುಂದುವರಿಸಿ
ಮೂಲ ಸೌಕರ್ಯ ಇಲ್ಲ: ದಾವಣಗೆರೆ ಉಪಚುನಾವಣೆಗೆ ಮತದಾನ ಬಹಿಷ್ಕಾರ ಎಚ್ಚರಿಕೆ
ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾವು ದಿನದಿಂದ ದಿನಕ್ಕ... ಓದನ್ನು ಮುಂದುವರಿಸಿ