ವಿದ್ಯುತ್ ಖಾಸಗೀಕರಣ ವಿರೋಧಿಸಿ ಮದ್ದೂರಿನಲ್ಲಿ ಚೆಸ್ಕಾಂ ನೌಕರರ ಪ್ರತಿಭಟನೆ
ಮಂಡ್ಯ:- ಇಂಧನ ಇಲಾಖೆಯನ್ನು ಖಾಸಗೀಕರಣ ಹಾಗೂ ಹೊರಗುತ್ತಿಗೆಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘ–659 ಹಾಗೂ ನೌಕರರ ಒಕ್ಕೂಟದ ವತಿಯಿಂದ ಗುರುವಾರ ಮದ್ದೂರು ಚೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಮದ್ದೂರು ನಗರದ ಚೆಸ್ಕಾಂ ಕಚೇರಿ ಆವರಣದಲ್ಲಿ ಜಮಾಯಿಸಿದ ಅಧಿಕಾರಿಗಳು ಮತ್ತು ನೌಕರರು ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ಹಾಗೂ ಹೊರಗುತ್ತಿಗೆ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ಶಿವಕುಮಾರ್, “ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವುದರಿಂದ ಮುಂದಿನ ದಿನಗಳಲ್ಲಿ ಗ್ರಾಹಕರು ಹಾಗೂ ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗಲಿದೆ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುವುದರಿಂದ ಜನರ ಹಿತಾಸಕ್ತಿಗೆ ಧಕ್ಕೆಯಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ವರ್ಷ ಅಧಿವೇಶನದಲ್ಲಿ ಈ ಸಂಬಂಧ ಬಿಲ್ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದ್ದರೂ, ದೇಶದ ವಿವಿಧ ಎಸ್ಕಾಂಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿತ್ತು. ಆದರೆ ಈ ವರ್ಷ ಮತ್ತೆ ಕಾಯ್ದೆ ತರಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು. “ಇದರಿಂದ ಗ್ರಾಹಕರಿಗೆ ಉಂಟಾಗುವ ಅನಾನುಕೂಲಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಇಲಾಖೆಗೆ ನಷ್ಟವಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಇಲಾಖೆ ನಷ್ಟದಲ್ಲಿದೆ ಎಂಬ ನೆಪವೊಡ್ಡಿ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿದ ಅವರು, “ಇಲಾಖೆಯನ್ನು ಲಾಭದಾಯಕವಾಗಿ ಮುಂದುವರಿಸಲು ಎಲ್ಲರ ಸಹಕಾರ ಅಗತ್ಯ. ಆಗ ಮಾತ್ರ ಖಾಸಗೀಕರಣದ ವಿರುದ್ಧ ಹೋರಾಟ ಫಲಪ್ರದವಾಗಲಿದೆ” ಎಂದರು. ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಹದೇವು ಮಾತನಾಡಿ, “ಇಂಧನ ಇಲಾಖೆ ಹಲವಾರು ನೌಕರರ ಬಲಿದಾನದಿಂದ ಕಟ್ಟಲ್ಪಟ್ಟ ಬೃಹತ್ ಸಂಸ್ಥೆ. ಇದನ್ನು ಖಾಸಗೀಕರಣ ಮತ್ತು ಹೊರಗುತ್ತಿಗೆ ಮಾಡಲು ಹೊರಟಿರುವುದು ಸರಿಯಲ್ಲ. ಕೂಡಲೇ ಈ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು. ವಿರೋಧದ ನಡುವೆಯೂ ಲೋಕಸಭೆಯಲ್ಲಿ ಕಾಯ್ದೆ ಮಂಡನೆಯಾದರೆ ಒಕ್ಕೂಟ ಉಗ್ರ ಹೋರಾಟಕ್ಕೆ ಸಜ್ಜಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಇಇ ಹೆಚ್.ಇ. ಮಹದೇವು, ಲೆಕ್ಕಾಧಿಕಾರಿ ಸುನೀತಾ, ಅಧ್ಯಕ್ಷ ಸುರೇಶ್ ಕೆ.ಎ., ಕಾರ್ಯದರ್ಶಿ ಸಿ.ಎಸ್. ಶ್ರೀಧರ್, ಉಪಾಧ್ಯಕ್ಷ ಚನ್ನೇಗೌಡ ಸೇರಿದಂತೆ ವಾಸುದೇವ, ವೆಂಕಟೇಶ್, ಗಿರೀಶ್, ಸುಜಿತ್ ಕುಮಾರ್, ನಾಗರಾಜ್, ಉಷಾ, ಸೌಮ್ಯ, ಮಹದೇವಯ್ಯ ಹಾಗೂ ಇತರ ಶಾಖಾಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ರಬಕವಿ ಬನಹಟ್ಟಿ
“ಸಿಎಂ ಅಧಿಕಾರದಲ್ಲಿ ಕಳೆಯುವ ದಿನಗಳಿಗಿಂತ, ಜನರಿಗೆ ನೀಡಿದ ಫಲಿತಾಂಶವೇ ಮುಖ್ಯ: ಬಿವೈ ವಿಜಯೇಂದ್ರ”
ಬಾಗಲಕೋಟೆ: ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬನಹಟ್ಟಿ ನ... ಓದನ್ನು ಮುಂದುವರಿಸಿ
ನಾಳೆ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ವಿದ್ಯುತ್ ಕಡಿತ – ಬೆಸ್ಕಾಂ ಎಚ್ಚರಿಕೆ
ಬೆಂಗಳೂರು: ಬೆಸ್ಕಾಂ ನಾಳೆ ಫೆಬ್ರವರಿ 13ರಂದು ತುರ್ತು ನಿರ್ವಹಣಾ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪದ ಅಧಿಕಾರಿಗಳ ಮನೆ-ಕಚೇರಿಗಳ ಮೇಲೆ ಶೋಧ
ಬೆಂಗಳೂರು/ಮೈಸೂರು/ದಾವಣಗೆರೆ:- ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್... ಓದನ್ನು ಮುಂದುವರಿಸಿ
ಹುಬ್ಬಳ್ಳಿ
"KIMS ಆಸ್ಪತ್ರೆಯಲ್ಲಿ ಅನಧಿಕೃತ ಹಣ ವಸೂಲಿ: 3 ಸಿಬ್ಬಂದಿಗೆ ಗೇಟ್ ಪಾಸ್"
ಹುಬ್ಬಳ್ಳಿ:- ಉತ್ತರ ಕರ್ನಾಟಕದ ಬಡಜನರಿಗೆ ಆರೈಕೆ ನೀಡುವ ಹೆಸರಾಂತ... ಓದನ್ನು ಮುಂದುವರಿಸಿ
‘ವಿಬಿ-ಜಿ ರಾಮ್ ಜಿ’ ಹೊಸ ಕಾಯ್ದೆ ಗ್ರಾಮೀಣಾಭಿವೃದ್ಧಿಗೆ ಸಹಕಾರಿ: ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ್
ಮಂಡ್ಯ:- ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ವಿಬಿ-ಜಿ ರಾಮ್ ಜಿ’... ಓದನ್ನು ಮುಂದುವರಿಸಿ
ಸಿದ್ದರಾಮಯ್ಯ 2028ರವರೆಗೆ ಸಿಎಂ; ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧತೆ – ಜಮೀರ್ ಅಹಮ್ಮದ್ ಖಾನ್
ವಿಜಯನಗರ: ರಾಜ್ಯ ರಾಜಕೀಯದ ಚರ್ಚೆಯ ನಡುವೆ, ವಿಜಯನಗರ ಜಿಲ್ಲಾ ಉಸ್... ಓದನ್ನು ಮುಂದುವರಿಸಿ
"ಸಾಕು ನಾಯಿಗಳ ನಿಯಂತ್ರಣಕ್ಕೆ ಜಿಬಿಎ ಹೊಸ ನಿಯಮ; ಉಲ್ಲಂಘಿಸಿದರೆ ಮಾಲೀಕರ ಮೇಲೆ ಕಾನೂನು ಕ್ರಮ"
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಮಸ್ಯೆಯನ್ನ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಹತ್ಯೆ ಪ್ರಕರಣ: ಜಾಮೀನು ತಿರಸ್ಕಾರ ಬೆನ್ನಲ್ಲೇ ಭೈರತಿ ಬಸವರಾಜ್ ವಿದೇಶ ಪ್ರಯಾಣದ ಸುಳಿವು?
ಬೆಂಗಳೂರು: ಕಳೆದ ವರ್ಷ ಜುಲೈ 15ರಂದು ಭಾರತಿ ನಗರ ಪೊಲೀಸ್ ಠಾಣೆ ವ... ಓದನ್ನು ಮುಂದುವರಿಸಿ
ಪತ್ನಿ ದೂರವಿದ್ದಾಳೆ ಅಂದ್ರೆ ಸಾಕು? ಮಗುವಿನ ಪಿತೃತ್ವಕ್ಕೆ DNA ಪರೀಕ್ಷೆಗೆ ಹೈಕೋರ್ಟ್ ನಿರಾಕರಣೆ
ಬೆಂಗಳೂರು: ಜೀವನಾಂಶಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿ,... ಓದನ್ನು ಮುಂದುವರಿಸಿ
ನಾಡದ್ರೋಹಿ ಕಾಂಗ್ರೆಸ್ ಪಕ್ಷವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ: ತಮನ್ನಾ ಭಾಟಿಯಾ ನೇಮಕಕ್ಕೆ ಡಾ. ಕೆ. ಸುಧಾಕರ್ ಆಕ್ಷೇಪ
ಬೆಂಗಳೂರು: ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಪ್ರತಿನಿಧಿ... ಓದನ್ನು ಮುಂದುವರಿಸಿ