ವಿವಾದಗಳ ನಡುವೆ ‘ದಿ ಕೇರಳ ಸ್ಟೋರಿ 2’ ಬಿಡುಗಡೆ – ವಾರಾಂತ್ಯದಲ್ಲಿ ಕಲೆಕ್ಷನ್ ಏರಿಕೆ
ವಿವಾದಗಳ ನಡುವೆಯೇ ದಿ ಕೇರಳ ಸ್ಟೋರಿ 2 ಸಿನಿಮಾ ತೆರೆಗೆ ಬಂದು ಗಮನ ಸೆಳೆಯುತ್ತಿದೆ. ಬಿಡುಗಡೆಗೆ ಮುನ್ನ ಕೇರಳ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದರೂ, ಮರು ವಿಚಾರಣೆ ಬಳಿಕ ಚಿತ್ರಕ್ಕೆ ಬಿಡುಗಡೆ ಅನುಮತಿ ನೀಡಿತು. ಶುಕ್ರವಾರ ಚಿತ್ರ ದೇಶದಾದ್ಯಂತ ಬಿಡುಗಡೆಯಾಯಿತು.
ಮೊದಲ ದಿನ ಸಿನಿಮಾ ಕೇವಲ ₹75 ಲಕ್ಷ ಗಳಿಕೆ ಮಾಡಿತ್ತು. ಆದರೆ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಏರಿಕೆ ಕಂಡಿದೆ. ಶನಿವಾರ ₹4.65 ಕೋಟಿ ಹಾಗೂ ಭಾನುವಾರ ₹5 ಕೋಟಿ ಗಳಿಕೆ ಮಾಡುವ ಮೂಲಕ ಮೂರು ದಿನಗಳಲ್ಲಿ ಗಮನಾರ್ಹ ಕಲೆಕ್ಷನ್ ಸಾಧಿಸಿದೆ.
ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಹಾಗೂ ಐಶ್ವರ್ಯಾ ಓಝಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶಿಸಿದ್ದು, ನಿರ್ಮಾಣವನ್ನು ವಿಪುಲ್ ಅಮೃತ್ಲಾಲ್ ಶಾ ಮಾಡಿದ್ದಾರೆ.
ಚಿತ್ರದಲ್ಲಿ ‘ಲವ್ ಜಿಹಾದ್’ ಹಿನ್ನೆಲೆಯ ಕಥಾವಸ್ತುವನ್ನು ತೋರಿಸಲಾಗಿದ್ದು, ಇದರಿಂದಲೇ ವಿವಾದ ಉಂಟಾಗಿದೆ. ಈ ಹಿಂದೆ ಬಿಡುಗಡೆಯಾದ ದಿ ಕೇರಳ ಸ್ಟೋರಿ ಚಿತ್ರವೂ ಇದೇ ರೀತಿಯ ವಿವಾದಕ್ಕೆ ಕಾರಣವಾಗಿತ್ತು. ಆ ಚಿತ್ರದಲ್ಲಿ ಕೆಲವು ಹಿಂದೂ ಯುವತಿಯರನ್ನು ಮತಾಂತರಿಸಿ ಐಸಿಸ್‌ಗೆ ಸೇರಿಸುವ ಕಥಾವಸ್ತುವನ್ನು ಚಿತ್ರಿಸಲಾಗಿತ್ತು. ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯಗಳು ಚಿತ್ರಕ್ಕೆ ನಿಷೇಧ ಹೇರಲು ಪ್ರಯತ್ನಿಸಿದ್ದರೂ, ಅದು ಫಲಿಸಿರಲಿಲ್ಲ.
ಈ ಬಾರಿ ‘ದಿ ಕೇರಳ ಸ್ಟೋರಿ 2’ ಕೂಡ ಚರ್ಚೆಗೆ ಗ್ರಾಸವಾಗಿದ್ದು, ವಾರಾಂತ್ಯದ ಕಲೆಕ್ಷನ್ ಏರಿಕೆಯಿಂದ ಮುಂದಿನ ದಿನಗಳಲ್ಲಿ ಚಿತ್ರದ ಒಟ್ಟು ಗಳಿಕೆ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತುಳುನಾಡು ದೈವ ಅವಮಾನ: ರಣವೀರ್ ಸಿಂಗ್ ಕೇಸ್ ವಿಚಾರಣೆ ಮುಂದೂಡಿಕೆ
ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿಕೊಂಡು, ತುಳುನಾಡಿನ ದೈವ ಪರಂಪರೆಯನ್ನು... ಓದನ್ನು ಮುಂದುವರಿಸಿ
ಮದುವೆ ನಂತರ ಗ್ರಾಮದಲ್ಲಿ ಸಂಭ್ರಮ: 2000 ಜನರಿಗೆ ಅನ್ನದಾನ ಮಾಡಿದ ರಶ್ಮಿಕಾ–ವಿಜಯ್
ಇತ್ತೀಚೆಗೆ ವಿವಾಹವಾದ ದಕ್ಷಿಣ ಭಾರತದ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದ... ಓದನ್ನು ಮುಂದುವರಿಸಿ
ಹೋಳಿ ಗೆ ಮೊದಲ ಉಡುಗೊರೆ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಲಾಂಚ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಚಿತ್ರತಂಡ ಭರ್ಜರಿ ಪ್ರಚಾರಕ... ಓದನ್ನು ಮುಂದುವರಿಸಿ
ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ ರೆಸಿಪ್ಷನ್: ಭದ್ರತೆ ಗಟ್ಟಿಯಾಗಿ, ಪ್ರವೇಶ ಸೀಮಿತ
ಹೈದರಾಬಾದ್: ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ದುಬೈ ವಿಮಾನ ನಿಲ್ದಾಣದಲ್ಲಿ ಲಾಕ್ ಆದ ಡ್ರೋನ್ ಪ್ರತಾಪ್
ಇರಾನ್–ಇಸ್ರೇಲ್ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ವಿಮಾನ ಸ... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಉದ್ವಿಗ್ನತೆ: ಇರಾನ್–ಅಮೆರಿಕ–ಇಸ್ರೇಲ್ ಸಂಘರ್ಷ ತೀವ್ರ, ಅಜಾಜ್ ಖಾನ್ ಹೇಳಿಕೆ ವಿವಾದ
ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇಸ್ರೇ... ಓದನ್ನು ಮುಂದುವರಿಸಿ
ಸಿನಿಮಾ–ರಾಜಕೀಯ ಗಣ್ಯರ ನಡುವೆ ದುಷ್ಯಂತ್ ಮದುವೆ; ಹಾಜರಾಗಿ ಶುಭ ಕೋರಿದ ಸಿಎಂ ಸಿದ್ದರಾಮಯ್ಯ
ಇತ್ತೀಚೆಗೆ ಹಸೆಮಣೆ ಏರಿರುವ ನಟ ದುಷ್ಯಂತ್ ಮತ್ತು ರಚನಾ ಅವರ ಮದುವೆ ಆರತಕ್ಷತೆ ಬೆಂಗಳೂ... ಓದನ್ನು ಮುಂದುವರಿಸಿ
ದಳಪತಿ ವಿಜಯ್‌ಗೆ ವೈಯಕ್ತಿಕ ಸಂಕಷ್ಟ: ಪತ್ನಿ ಸಂಗೀತ ವಿಚ್ಛೇದನ ಅರ್ಜಿ, ಮಕ್ಕಳ ಹಾಗೂ ಜೀವನಾಂಶ ಭಾರಿ ಬೇಡಿಕೆ
ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಕೌಟುಂಬಿಕ ನ್ಯಾಯಾಲಯದಲ್ಲಿ... ಓದನ್ನು ಮುಂದುವರಿಸಿ
ಸಿನಿಮಾ ಸ್ಟಾರ್ ವಿಷ್ಣು ಮಂಚು ದುಬೈಲ್ಲಿ ಕ್ಷಿಪಣಿ ದಾಳಿಯಿಂದ ಭಯಾನಕ ಅನುಭವ; ಶಾಂತಿಯಿಗಾಗಿ ಪ್ರಾರ್ಥನೆ
ಕ್ಷಿಪಣಿಗಳು ಹಾರುತ್ತಿರುವ ದೃಶ್ಯ, ಮಗಳು ಐರಾ ಭಯಗೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹ... ಓದನ್ನು ಮುಂದುವರಿಸಿ
ಮಾರ್ಚ್ 19 ಬಿಡುಗಡೆಗೂ ಮುನ್ನ ‘ಧುರಂಧರ್ 2’: ಯಾಮಿ ಗೌತಮ್ ಕಡೆಯಿಂದ ಮೊದಲ ಮೆಚ್ಚುಗೆ ವಿಮರ್ಶೆ
ಬಹುನಿರೀಕ್ಷಿತ ಧುರಂಧರ್ 2 ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನ... ಓದನ್ನು ಮುಂದುವರಿಸಿ