ವ್ಯಾಜ್ಯದಲ್ಲಿರುವ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡುವುದು ಕಾನೂನಿಗೆ ವಿರುದ್ಧ: ಬೆಂಗಳೂರು ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ನ್ಯಾಯಾಲಯದಲ್ಲಿ ಆಸ್ತಿ ಹಕ್ಕಿನ ಬಗ್ಗೆ ವ್ಯಾಜ್ಯ (Pending Litigation) ನಡೆಯುತ್ತಿರುವ ಸಂದರ್ಭದಲ್ಲಿ ಆ ಆಸ್ತಿಯನ್ನು ಖರೀದಿಸುವ ಮೂರನೇ ವ್ಯಕ್ತಿಗೆ ಯಾವುದೇ ಕಾನೂನುಬದ್ಧ ಹಕ್ಕು ಸಿಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯವು ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 52ರ ಅಡಿ ಇರುವ ‘ಲಿಸ್ ಪೆಂಡೆನ್ಸ್’ (Lis Pendens) ತತ್ವವನ್ನು ವಿವರಿಸಿ, ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಜ್ಯದಲ್ಲಿರುವ ಆಸ್ತಿಯನ್ನು ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಬೆಂಗಳೂರಿನ ಹನುಮಂತನಗರದಲ್ಲಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದ್ದು, ಮೂಲ ಅರ್ಜಿದಾರ ಎನ್. ಶಿವಾನಂದ್ ಅವರು 1994ರಲ್ಲಿ ಆಸ್ತಿ ಖರೀದಿ ಒಪ್ಪಂದ ಮಾಡಿಕೊಂಡಿದ್ದರು. ಈ ವಿಚಾರದಲ್ಲಿ ಬಿ.ಕೆ. ಕೃಷ್ಣಮೂರ್ತಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ. 1998ರಲ್ಲಿ ಆಸ್ತಿಗೆ ದಾವೆ ಹೂಡಲಾಗಿತ್ತು. ಆದರೆ 2003ರಲ್ಲಿ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಲಾಗಿತ್ತು. ಈ ಮಾರಾಟವನ್ನು ಅರ್ಜಿದಾರರು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯದ ಪ್ರಮುಖ ಅಂಶಗಳು
ನ್ಯಾಯಾಲಯದ ಅನುಮತಿ ಕಡ್ಡಾಯ
ಯಾವುದೇ ಆಸ್ತಿ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇದ್ದಲ್ಲಿ, ನ್ಯಾಯಾಲಯದ ಅನುಮತಿ ಇಲ್ಲದೆ ಆಸ್ತಿಯನ್ನು ಮಾರಾಟ ಅಥವಾ ವರ್ಗಾವಣೆ ಮಾಡಲಾಗುವುದಿಲ್ಲ.
ಖರೀದಿದಾರನಿಗೆ ಸ್ವತಂತ್ರ ಹಕ್ಕಿಲ್ಲ
ವ್ಯಾಜ್ಯದ ನಡುವೆ ನಡೆದ ಮಾರಾಟವು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಈ ಪ್ರಕರಣದಲ್ಲಿ 1998ರಲ್ಲಿ ದಾವೆ ದಾಖಲಾಗಿದ್ದರಿಂದ, 2003ರಲ್ಲಿ ನಡೆದ ಮಾರಾಟವು ಶಿವಾನಂದ್ ಅವರ ಹಕ್ಕನ್ನು ಹಾನಿಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಕಲಿ ದಾಖಲೆ ಪತ್ತೆ
ಪ್ರತಿವಾದಿಗಳು ಅರ್ಜಿದಾರರನ್ನು ಕೇವಲ ‘ಬಾಡಿಗೆದಾರ’ ಎಂದು ತೋರಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಕೈಬರಹ ತಜ್ಞರ ಪರೀಕ್ಷೆಯಿಂದ ಸಾಬೀತಾಗಿದೆ. ಇದನ್ನು ಭಾರತೀಯ ಸಾಕ್ಷ್ಯ ಕಾಯ್ದೆಯಡಿ ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಲಾಗಿದೆ. ಈ ತೀರ್ಪು ಆಸ್ತಿ ಖರೀದಿಸುವವರಿಗಾಗಿ ಮಹತ್ವದ ಸಂದೇಶ ನೀಡಿದ್ದು, ವ್ಯಾಜ್ಯದಲ್ಲಿರುವ ಆಸ್ತಿಗಳ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯವೆಂಬುದನ್ನು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನನ್ನ ಪರವಾಗಿ ಯಾರೂ ದೆಹಲಿಗೆ ಹೋಗಬೇಡಿ”: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು, ಫೆ. 27: “ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಗುಡುಗು ಮಳೆಯ ಎಚ್ಚರಿಕೆ; ಹಾಸನ, ಕೊಡಗು, ಮೈಸೂರು ಯೆಲ್ಲೋ ಅಲರ್ಟ್
ಬೆಂಗಳೂರು : ರಾಜ್ಯದ ಕೆಲ ಭಾಗಗಳಲ್ಲಿ ಕೆಲವು ದಿನಗಳಿಂದ ತಾಪಮಾನ ಹ... ಓದನ್ನು ಮುಂದುವರಿಸಿ
ನಾಗರಿಕರೇ ಎಚ್ಚರ : ಗಾಳಿ ಕಳೆದುಹೋಗುತ್ತಿದೆ: ಬೆಂಗಳೂರು ಜನರಿಗೆ ಆರೋಗ್ಯ ಎಚ್ಚರಿಕೆ
ಬೆಂಗಳೂರು : ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಹೆಚ್ಚಾ... ಓದನ್ನು ಮುಂದುವರಿಸಿ
ಸಿಲಿಕಾನ್ ಸಿಟಿ ಜನರೇ, ಬೀದಿ ನಾಯಿಗಳಿಗೆ ಕಲ್ಲು ಹೊಡೆಯಬೇಡಿ: ಸುಧಾ ಮೂರ್ತಿ ಮನವಿ
ಬೆಂಗಳೂರು: ಸಿಲಿಕಾನ್ ಸಿಟಿಯ ಬೀದಿ ನಾಯಿಗಳ ಹಾವಳಿ ಮತ್ತು ದೌರ್ಜನ... ಓದನ್ನು ಮುಂದುವರಿಸಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ, “ಕಾಂಗ್ರೆಸ್ ಸರ್ಕಾರ ಸುಳ್ಳಾಟದಿಂದ ರಾಜ್ಯ ಆರೋಗ್ಯ ವ್ಯವಸ್ಥೆ ಕುಸಿತ”
ಬೆಂಗಳೂರು : ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸುಳ್ಳು ಹೇಳ... ಓದನ್ನು ಮುಂದುವರಿಸಿ
ಬಿಜೆಪಿ ಶಾಸಕ ಪ್ರದೀಪ್ ಈಶ್ವರ: ಆರೋಗ್ಯ ಕಾರ್ಯಕ್ರಮದಲ್ಲಿ ಉರ್ದು ಬಳಕೆಯ ಬಗ್ಗೆ ಮಾಹಿತಿ ಇಲ್ಲ
ಬೆಂಗಳೂರು : ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಭಾಷೆ ಬಳಕೆಯ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳ ಆಕ್ರೋಶ: ಭಾರತೀಯ ಸೈನಿಕರ ಬಗ್ಗೆ ಅವಹೇಳನ ಹೇಳಿಕೆಗೆ ಪ್ರತಿಭಟನೆ
ಹುಬ್ಬಳ್ಳಿ: ನಗರದಲ್ಲಿ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದ್ದು,... ಓದನ್ನು ಮುಂದುವರಿಸಿ
: ಶಿರಹಟ್ಟಿ ಬಿಜೆಪಿ ಶಾಸಕರ ಬಂಧನದ ವಿರುದ್ಧ ಲಕ್ಷ್ಮೇಶ್ವರದಲ್ಲಿ ಪ್ರತಿಭಟನೆ
ಗದಗ : ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರ ಲಂಚ ಪ್ರ... ಓದನ್ನು ಮುಂದುವರಿಸಿ
ಗುರುಮಿಟ್ಕಲ್
ಗಾಂಧಿ–ನೇತಾಜಿ ಕುರಿತು ವಿವಾದಾತ್ಮಕ ಹೇಳಿಕೆ : ಬಿಜೆಪಿ ನಾಯಕ ಯತ್ನಾಳ್ ವಿರುದ್ಧ ಸ್ವಯಂಪ್ರೇರಿತ ಕೇಸ್
ಯಾದಗಿರಿ : ಜಿಲ್ಲಾ ಗುರುಮಠಕಲ್ನಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯ... ಓದನ್ನು ಮುಂದುವರಿಸಿ
ಸಚಿವೆ ಕ್ಷೇತ್ರದಲ್ಲೇ ಎಕ್ಸ್‌ಪೈರ್ಡ್ ಲಡ್ಡು ವಿವಾದ .. ಬೆಳಗಾವಿ ಅಂಗನವಾಡಿ ಮಕ್ಕಳಿಗೆ ಅವಧಿ ಮುಗಿದ ಲಡ್ಡು ವಿತರಣೆ
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ... ಓದನ್ನು ಮುಂದುವರಿಸಿ