ಕೆ.ಆರ್ ಪುರದಲ್ಲಿ ರೌಡಿಶೀಟರ್ ದಾಳಿ – ಹೋರಾಟಗಾರನ ಮಗನ ಮೇಲೆ ಮಾರಣಾಂತಿಕ ಹಲ್ಲೆ, ಠಾಣೆ ಮುಂದೆ ಪ್ರತಿಭಟನೆ!
ಬೆಂಗಳೂರು: ನಗರದ ಕೆ.ಆರ್ ಪುರದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಖಂಡಿಸಿ ಹೋರಾಟಗಾರರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಚನ್ನಸಂದ್ರ ಪ್ರದೇಶದಲ್ಲಿ ಏಪ್ರಿಲ್ 1ರಂದು ನಡೆದ ಈ ಘಟನೆಯಲ್ಲಿ, ಕನ್ನಡ ಹಾಗೂ ದಲಿತಪರ ಹೋರಾಟಗಾರ ಅಣ್ಣಯ್ಯ ಅವರ ಪುತ್ರ ಮಂಜುನಾಥ್ ಮೇಲೆ ರೌಡಿಶೀಟರ್ ಅಭಿ ಅಲಿಯಾಸ್ ಚಿಕ್ಕ ಅಭಿ ಹಾಗೂ ಅವರ ಅಣ್ಣ ಚಂದ್ರಶೇಖರ್ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಸೈಟ್ ವಿಚಾರವಾಗಿ ಮಾತನಾಡಬೇಕು ಎಂದು ಕರೆಯಿಸಿಕೊಂಡು, ಬಿಯರ್ ಬಾಟಲ್‌ನಿಂದ ಹಣೆಯ ಭಾಗಕ್ಕೆ ಹೊಡೆದು, ಕೈಗಳಿಂದ ಮುಖ ಮತ್ತು ಎದೆ ಭಾಗಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆಯ ತೀವ್ರತೆಗೆ ಮಂಜುನಾಥ್ ಅವರ ಹಣೆಯ ಭಾಗದಲ್ಲಿ ಗಾಯಗಳಾಗಿದ್ದು, ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದಲ್ಲದೆ, “ಸರ್ಕಾರ ನಮ್ಮದು, ಯಾರೂ ಏನೂ ಮಾಡಲಾಗುವುದಿಲ್ಲ” ಎಂದು ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿದೆ. ಜೊತೆಗೆ ಮಂಜುನಾಥ್ ಅವರ ಹೊಸ ಬೈಕ್‌ನ್ನು ಧ್ವಂಸಗೊಳಿಸಿರುವುದಾಗಿ ದೂರಲಾಗಿದೆ. ಈ ಘಟನೆ ಖಂಡಿಸಿ ದಲಿತಪರ, ಕನ್ನಡಪರ ಹಾಗೂ ಮಹಿಳಾ ಪರ ಸಂಘಟನೆಗಳು ಕಾಡುಗೋಡಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರೌಡಿಶೀಟರ್ ಅಭಿಯನ್ನು ಗಡಿಪಾರು ಮಾಡಬೇಕು ಹಾಗೂ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ. ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯೂ ಹೊರಬಂದಿದೆ.
ಈ ಸಂಬಂಧ ಕಾಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಬ್ಬಳ್ಳಿ
ಜಿಮ್ ವಿವಾದಕ್ಕೆ ಗಲಾಟೆ: ಹಳೆ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಜಿಮ್‌ಗೆ ಸಂಬಂಧಿಸಿದ ವಿವಾದ ಒಂದು... ಓದನ್ನು ಮುಂದುವರಿಸಿ
ಗರ್ಭಿಣಿ ಮಹಿಳೆ ಸಾವು: ಅತ್ತೆ-ಮಾವನ ಕಿರುಕುಳ ಆರೋಪ, ನಾಲ್ವರ ಬಂಧನ
ಶಿವಮೊಗ್ಗ : ಜಿಲ್ಲೆಯಲ್ಲಿ ಮನಕಲುಕುವ ಘಟನೆ ನಡೆದಿದೆ. ಆತ್ಮಹತ್ಯೆ... ಓದನ್ನು ಮುಂದುವರಿಸಿ
ಬೆಂಗಳೂರು ಪೊಲೀಸರ ತ್ವರಿತ ಕಾರ್ಯಾಚರಣೆ – ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ, ಬಾಲಕ ರಕ್ಷಣೆ!
ಬೆಂಗಳೂರು: ನಗರದಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಪೊಲೀಸರ ತ್ವರಿ... ಓದನ್ನು ಮುಂದುವರಿಸಿ
ಕುಟುಂಬ ಕಲಹ ದುರಂತಕ್ಕೆ ಅಂತ್ಯ: ತಾಯಿ-ಮಗ ಸಾವಿನಿಂದ ಗ್ರಾಮದಲ್ಲಿ ಆಘಾತ
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕಹಳ್ಳಿ ಕೊಪ್ಪಲು ಗ್ರ... ಓದನ್ನು ಮುಂದುವರಿಸಿ
ಹೊಳಲ್ಕೆರೆ
ಅಪಪ್ರಚಾರ ಕಿರುಕುಳ ಆರೋಪ: ವಿದ್ಯಾರ್ಥಿನಿ ಆತ್ಮಹತ್ಯೆ – ಚಿತ್ರದುರ್ಗದಲ್ಲಿ ಆಕ್ರೋಶ
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಮನಕಲುಕುವ ಘಟನೆ... ಓದನ್ನು ಮುಂದುವರಿಸಿ
ಕಾರವಾರ
ಮದ್ಯದ ಹಣ ವಿಚಾರ: ಅಳಿಯ ಹತ್ಯೆ – ಮಾವನಿಗೆ ಜೀವಾವಧಿ ಶಿಕ್ಷೆ
ಕಾರವಾರ: ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅಳಿಯನನ್ನು... ಓದನ್ನು ಮುಂದುವರಿಸಿ
ಕಬ್ಬನ್ ಪಾರ್ಕ್‌ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ – ಆತ್ಮಹತ್ಯೆ ಶಂಕೆ
ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ... ಓದನ್ನು ಮುಂದುವರಿಸಿ
ನಕಲಿ ನಂಬರ್ ಪ್ಲೇಟ್ ಪ್ರಕರಣ: ರಿಕ್ಕಿ ರೈ ವಿರುದ್ಧ ಕೇಸ್, ವಿದೇಶಕ್ಕೆ ಪಲಾಯನ!
ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಬಳಸಿ ವಂಚನೆ ಮಾಡಿದ ಆರೋಪದಡಿ ಮಾ... ಓದನ್ನು ಮುಂದುವರಿಸಿ
ನಕಲಿ ಸ್ಲಿಂ ಪೌಡರ್ ದಂಧೆ ಬಯಲು: ತುಮಕೂರು ಪೊಲೀಸರ ದೊಡ್ಡ ದಾಳಿ
ತುಮಕೂರು: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮೂಲಕ ತೂಕ ಇಳಿಕೆ ಪೌಡರ್ ಸ... ಓದನ್ನು ಮುಂದುವರಿಸಿ
ಸೈಬರ್ ಕ್ರೈಂ ಹೆಚ್ಚಳ: ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ರಾಜ... ಓದನ್ನು ಮುಂದುವರಿಸಿ