ಮದ್ಯದ ಹಣ ವಿಚಾರ: ಅಳಿಯ ಹತ್ಯೆ – ಮಾವನಿಗೆ ಜೀವಾವಧಿ ಶಿಕ್ಷೆ
ಕಾರವಾರ: ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅಳಿಯನನ್ನು ಹತ್ಯೆ ಮಾಡಿದ ಮಾವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿ ಗ್ರಾಮದ ಗಣಪಾ ಗೌಡ ಎಂಬಾತ, ತನ್ನ ಅಳಿಯ ಮಂಜುನಾಥ ರಾಮಾ ಗೌಡ (40) ಜೊತೆ ವಾಸವಾಗಿದ್ದನು. ಮದ್ಯಕ್ಕಾಗಿ ಹಣ ಕೇಳುವ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು.
2024ರ ಮೇ 2ರಂದು ಮನೆಯವರು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ, ಮನೆಯಲ್ಲಿ ಒಬ್ಬನೇ ಇದ್ದ ಅಳಿಯನ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ 302ನೇ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿದ್ದು, ಪೊಲೀಸರು ಸಂಗ್ರಹಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ಸಾಕ್ಷಿದಾರರ ಹೇಳಿಕೆಗಳು ಹಾಗೂ ಲಭ್ಯವಿದ್ದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯ, ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದೆ.
ಶಿರಸಿ ನಗರದ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದ್ದಾರೆ. ಜೊತೆಗೆ, ಮೃತನ ಪತ್ನಿಗೆ ₹50,000 ಪರಿಹಾರ ನೀಡುವಂತೆ ಆದೇಶಿಸಿದ್ದು, ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದೆಂದು ನ್ಯಾಯಾಲಯ ತಿಳಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಬ್ಬಳ್ಳಿ
ಜಿಮ್ ವಿವಾದಕ್ಕೆ ಗಲಾಟೆ: ಹಳೆ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಜಿಮ್‌ಗೆ ಸಂಬಂಧಿಸಿದ ವಿವಾದ ಒಂದು... ಓದನ್ನು ಮುಂದುವರಿಸಿ
ಗರ್ಭಿಣಿ ಮಹಿಳೆ ಸಾವು: ಅತ್ತೆ-ಮಾವನ ಕಿರುಕುಳ ಆರೋಪ, ನಾಲ್ವರ ಬಂಧನ
ಶಿವಮೊಗ್ಗ : ಜಿಲ್ಲೆಯಲ್ಲಿ ಮನಕಲುಕುವ ಘಟನೆ ನಡೆದಿದೆ. ಆತ್ಮಹತ್ಯೆ... ಓದನ್ನು ಮುಂದುವರಿಸಿ
ಬೆಂಗಳೂರು ಪೊಲೀಸರ ತ್ವರಿತ ಕಾರ್ಯಾಚರಣೆ – ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ, ಬಾಲಕ ರಕ್ಷಣೆ!
ಬೆಂಗಳೂರು: ನಗರದಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಪೊಲೀಸರ ತ್ವರಿ... ಓದನ್ನು ಮುಂದುವರಿಸಿ
ಕೆ.ಆರ್ ಪುರದಲ್ಲಿ ರೌಡಿಶೀಟರ್ ದಾಳಿ – ಹೋರಾಟಗಾರನ ಮಗನ ಮೇಲೆ ಮಾರಣಾಂತಿಕ ಹಲ್ಲೆ, ಠಾಣೆ ಮುಂದೆ ಪ್ರತಿಭಟನೆ!
ಬೆಂಗಳೂರು: ನಗರದ ಕೆ.ಆರ್ ಪುರದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತ... ಓದನ್ನು ಮುಂದುವರಿಸಿ
ಕುಟುಂಬ ಕಲಹ ದುರಂತಕ್ಕೆ ಅಂತ್ಯ: ತಾಯಿ-ಮಗ ಸಾವಿನಿಂದ ಗ್ರಾಮದಲ್ಲಿ ಆಘಾತ
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕಹಳ್ಳಿ ಕೊಪ್ಪಲು ಗ್ರ... ಓದನ್ನು ಮುಂದುವರಿಸಿ
ಹೊಳಲ್ಕೆರೆ
ಅಪಪ್ರಚಾರ ಕಿರುಕುಳ ಆರೋಪ: ವಿದ್ಯಾರ್ಥಿನಿ ಆತ್ಮಹತ್ಯೆ – ಚಿತ್ರದುರ್ಗದಲ್ಲಿ ಆಕ್ರೋಶ
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಮನಕಲುಕುವ ಘಟನೆ... ಓದನ್ನು ಮುಂದುವರಿಸಿ
ಕಬ್ಬನ್ ಪಾರ್ಕ್‌ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ – ಆತ್ಮಹತ್ಯೆ ಶಂಕೆ
ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ... ಓದನ್ನು ಮುಂದುವರಿಸಿ
ನಕಲಿ ನಂಬರ್ ಪ್ಲೇಟ್ ಪ್ರಕರಣ: ರಿಕ್ಕಿ ರೈ ವಿರುದ್ಧ ಕೇಸ್, ವಿದೇಶಕ್ಕೆ ಪಲಾಯನ!
ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಬಳಸಿ ವಂಚನೆ ಮಾಡಿದ ಆರೋಪದಡಿ ಮಾ... ಓದನ್ನು ಮುಂದುವರಿಸಿ
ನಕಲಿ ಸ್ಲಿಂ ಪೌಡರ್ ದಂಧೆ ಬಯಲು: ತುಮಕೂರು ಪೊಲೀಸರ ದೊಡ್ಡ ದಾಳಿ
ತುಮಕೂರು: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮೂಲಕ ತೂಕ ಇಳಿಕೆ ಪೌಡರ್ ಸ... ಓದನ್ನು ಮುಂದುವರಿಸಿ
ಸೈಬರ್ ಕ್ರೈಂ ಹೆಚ್ಚಳ: ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ರಾಜ... ಓದನ್ನು ಮುಂದುವರಿಸಿ