2 ಎಕರೆ ಜಮೀನುಗಾಗಿ ಭೀಕರ ಹತ್ಯೆ – ಕುಟುಂಬ ಕಲಹ ರಕ್ತಪಾತ

ಸುರಪುರ: ಕೇವಲ ಎರಡು ಎಕರೆ ಜಮೀನಿಗಾಗಿ ದಶಕಗಳಿಂದ ಮುಂದುವರಿದಿದ್ದ ಕೌಟುಂಬಿಕ ಕಲಹ, ಕೊನೆಗೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ನಡೆದಿದೆ. 27 ವರ್ಷದ ಪರಮೇಶ್ವರ ಎಂಬ ಯುವಕನನ್ನು ಆತನ ದೊಡ್ಡಪ್ಪ ಹನುಮಂತರಾಯ ಹಾಗೂ ಕುಟುಂಬದವರು ಸೇರಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 

ತಲ್ವಾರ್, ಬರ್ಚಿ ಹಾಗೂ ಕಲ್ಲುಗಳಿಂದ ದಾಳಿ ನಡೆಸಿ, ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲೇ ಪರಮೇಶ್ವರನನ್ನು ನಿರ್ದಯವಾಗಿ ಕೊಚ್ಚಿ ಕೊಂದಿದ್ದಾರೆ. ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಗಲಾಟೆ ತಡೆಯಲು ಮುಂದಾದ ಪರಮೇಶ್ವರನ ಸಹೋದರ ರೇವಣಸಿದ್ದನ ಮೇಲೂ ಹಲ್ಲೆ ನಡೆದಿದ್ದು, ಆತ ಗಾಯಗೊಂಡಿದ್ದಾನೆ.

 

ಮಲ್ಲಪ್ಪ ಮತ್ತು ಹನುಮಂತರಾಯ ಸಹೋದರರಾಗಿದ್ದು, ಜಮೀನು ಹಂಚಿಕೆ ವೇಳೆ ಉಳಿದಿದ್ದ 2 ಎಕರೆ ಭೂಮಿಯನ್ನು ಹನುಮಂತರಾಯ ಹಲವು ವರ್ಷಗಳಿಂದ ಬಳಸುತ್ತಿದ್ದ. ಬಳಿಕ ಪರಮೇಶ್ವರ ಕಾನೂನು ಹೋರಾಟದ ಮೂಲಕ ಜಮೀನನ್ನು ವಾಪಸ್ ಪಡೆದಿದ್ದು, ಇದೇ ದ್ವೇಷಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

 

ಘಟನೆಯ ವೇಳೆ ಮಾರಕಾಸ್ತ್ರಗಳನ್ನು ಬಳಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿ ಗಲಾಟೆ ನಿಲ್ಲಿಸಲು ಮುಂದಾಗಲಿಲ್ಲ. ಮಾಹಿತಿ ತಿಳಿದ ತಕ್ಷಣ ಯಾದಗಿರಿ ಎಸ್‌ಪಿ ಪೃಥ್ವಿಕ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ 21 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

18 hours ago

   
Image 1
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ದೇಗುಲ ವಿವಾದ: ಎರಡು ಗುಂಪುಗಳ ನಡುವೆ ಘರ್ಷಣೆ ಪೊಲೀಸರಿಂದ ಲಾಠಿ ಪ್ರಹಾರ

ಬೆಂಗಳೂರು ಗ್ರಾಮಾಂತರ: ದೇಗುಲದ ಅಸ್ತಿತ್ವದ ವಿಚಾರವಾಗಿ ಎರಡು ಗುಂ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ತುಮಕೂರು

ಕಾರು ಬೆಂಕಿಗಾಹುತಿಯಾಗಿ ಮೂವರು ಸಾವು – ಓರ್ವ ಗಂಭೀರ ಗಾಯ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಅಶ್ಲೀಲ ಒತ್ತಾಯ ಆರೋಪ: ಸ್ನೇಹಿತೆಯೊಂದಿಗೆ ಸಂಬಂಧಕ್ಕೆ ಒತ್ತಾಯ – ಪತ್ನಿ ವಿರುದ್ಧ ಪತಿ ದೂರು

ಬೆಂಗಳೂರು: ಪತ್ನಿಯಿಂದ ಮಾನಸಿಕ ಹಾಗೂ ವೈವಾಹಿಕ ಕಿರುಕುಳ ಎದುರಿಸು... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಏಪ್ರಿಲ್ ಫೂಲ್ ದಿನ – ಜನರಿಗೆ ಸುರಕ್ಷತೆ ಪಾಠ ಕಲಿಸಿದ ಪೊಲೀಸರು

ಬೆಂಗಳೂರು: ಏಪ್ರಿಲ್ 1ರ ‘ಏಪ್ರಿಲ್ ಫೂಲ್’ ದಿನದ ಅಂಗವಾಗಿ ಬೆಂಗಳೂ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಪಾರ್ಕಿಂಗ್ ವಿಚಾರಕ್ಕೆ ಗಲಾಟೆ – ಕ್ರಿಕೆಟ್ ಬ್ಯಾಟ್, ರಾಡ್‌ನಿಂದ ಹಲ್ಲೆ

ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನೆರೆಹೊರೆಯರ ನ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಬೆಂಗಳೂರು ನಗರ

ಆಡುಗೋಡಿಯಲ್ಲಿ ಗಾಂಜಾ ದಂಧೆ ಬಯಲು: ಮೂವರು ಪೆಡ್ಲರ್‌ಗಳು ಅರೆಸ್ಟ್

ಬೆಂಗಳೂರು: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರು ಪೆಡ್ಲರ್‌ಗಳನ್ನ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಬ್ರಾಂಡೆಡ್ ವಾಚ್ ಖರೀದಿಗೆ ಎಚ್ಚರಿಕೆ: ಬ್ರಾಂಡೆಡ್ ಹೆಸರಿನಲ್ಲಿ ಮೋಸ: ₹25 ಲಕ್ಷದ ನಕಲಿ ವಾಚ್ ವಶ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್ ಖರೀದಿಸುವ ಗ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗೆ ಗ್ಯಾಂಗ್ ದಾಳಿ

ಬೆಂಗಳೂರು: ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿ ಅಭಿಷೇಕ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರ್ಯಾಪಿಡೋ ಚಾಲಕನಿಂದ ಯುವತಿಗೆ ಕಿರುಕುಳ: ಬೆಂಗಳೂರಿನಲ್ಲಿ ಬಂಧನ

ಬೆಂಗಳೂರು: ರ್ಯಾಪಿಡೋ ಬೈಕ್ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಗೃಹಸಚಿವರ ವಿರುದ್ಧ ಅವಹೇಳನಕಾರಿ ಪೋಸ್ಟ್: ಸೈಬರ್ ಕ್ರೈಂ ಕೇಸ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1