ಪಾರ್ಕಿಂಗ್ ವಿಚಾರಕ್ಕೆ ಗಲಾಟೆ – ಕ್ರಿಕೆಟ್ ಬ್ಯಾಟ್, ರಾಡ್‌ನಿಂದ ಹಲ್ಲೆ
ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನೆರೆಹೊರೆಯರ ನಡುವೆ ಆರಂಭವಾದ ಗಲಾಟೆ ಹಲ್ಲೆಗೆ ತಿರುಗಿದ ಘಟನೆ ನಗರದ ಹೆರೋಹಳ್ಳಿಯ ಸಿಂಡಿಕೇಟ್ ಲೇಔಟ್‌ನಲ್ಲಿ ನಡೆದಿದೆ. ಸಂತೋಷ್ ಮತ್ತು ಅವರ ಪತ್ನಿ ಶುಭಾ ಹಲ್ಲೆಗೆ ಒಳಗಾದವರಾಗಿದ್ದಾರೆ. ಸಂತೋಷ್ ಪ್ರತಿದಿನ ತಮ್ಮ ಮನೆ ಮುಂದೆ ಕಾರ್ ಪಾರ್ಕ್ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಮೊನ್ನೆ ಕಾರ್ ಪಾರ್ಕ್ ಮಾಡಲು ಹೋದ ವೇಳೆ, ರತ್ನಮ್ಮ ಅವರ ಮಗನ ಬೈಕ್ ಅಡ್ಡವಾಗಿ ನಿಂತಿತ್ತು. ಬೈಕ್ ತೆಗೆದು ಹಾಕುವಂತೆ ಕೇಳಿದ ಸಂದರ್ಭದಲ್ಲಿ ವಾಗ್ವಾದ ಉಂಟಾಗಿದೆ.
ವಾದವಿವಾದ ತೀವ್ರಗೊಂಡಿದ್ದು, ಈ ವೇಳೆ ರತ್ನಮ್ಮ ಹಾಗೂ ಅವರ ಕುಟುಂಬದ ಸದಸ್ಯರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕ್ರಿಕೆಟ್ ಬ್ಯಾಟ್, ಕಬ್ಬಿಣದ ರಾಡ್ ಮತ್ತು ಚಾಕುವಿನಿಂದ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಲಾಟೆ ನಿಲ್ಲಿಸಲು ಮುಂದಾದ ಪತ್ನಿ ಶುಭಾ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳು ಕಾರಿಗೂ ಹಾನಿ ಮಾಡಿರುವುದಾಗಿ ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡ ಸಂತೋಷ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೇವನಹಳ್ಳಿ
ದೇಗುಲ ವಿವಾದ: ಎರಡು ಗುಂಪುಗಳ ನಡುವೆ ಘರ್ಷಣೆ ಪೊಲೀಸರಿಂದ ಲಾಠಿ ಪ್ರಹಾರ
ಬೆಂಗಳೂರು ಗ್ರಾಮಾಂತರ: ದೇಗುಲದ ಅಸ್ತಿತ್ವದ ವಿಚಾರವಾಗಿ ಎರಡು ಗುಂ... ಓದನ್ನು ಮುಂದುವರಿಸಿ
ಕಾರು ಬೆಂಕಿಗಾಹುತಿಯಾಗಿ ಮೂವರು ಸಾವು – ಓರ್ವ ಗಂಭೀರ ಗಾಯ
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪ... ಓದನ್ನು ಮುಂದುವರಿಸಿ
ಅಶ್ಲೀಲ ಒತ್ತಾಯ ಆರೋಪ: ಸ್ನೇಹಿತೆಯೊಂದಿಗೆ ಸಂಬಂಧಕ್ಕೆ ಒತ್ತಾಯ – ಪತ್ನಿ ವಿರುದ್ಧ ಪತಿ ದೂರು
ಬೆಂಗಳೂರು: ಪತ್ನಿಯಿಂದ ಮಾನಸಿಕ ಹಾಗೂ ವೈವಾಹಿಕ ಕಿರುಕುಳ ಎದುರಿಸು... ಓದನ್ನು ಮುಂದುವರಿಸಿ
ಏಪ್ರಿಲ್ ಫೂಲ್ ದಿನ – ಜನರಿಗೆ ಸುರಕ್ಷತೆ ಪಾಠ ಕಲಿಸಿದ ಪೊಲೀಸರು
ಬೆಂಗಳೂರು: ಏಪ್ರಿಲ್ 1ರ ‘ಏಪ್ರಿಲ್ ಫೂಲ್’ ದಿನದ ಅಂಗವಾಗಿ ಬೆಂಗಳೂ... ಓದನ್ನು ಮುಂದುವರಿಸಿ
ಸುರಪುರ
2 ಎಕರೆ ಜಮೀನುಗಾಗಿ ಭೀಕರ ಹತ್ಯೆ – ಕುಟುಂಬ ಕಲಹ ರಕ್ತಪಾತ
ಸುರಪುರ: ಕೇವಲ ಎರಡು ಎಕರೆ ಜಮೀನಿಗಾಗಿ ದಶಕಗಳಿಂದ ಮುಂದುವರಿದಿದ್ದ... ಓದನ್ನು ಮುಂದುವರಿಸಿ
ಆಡುಗೋಡಿಯಲ್ಲಿ ಗಾಂಜಾ ದಂಧೆ ಬಯಲು: ಮೂವರು ಪೆಡ್ಲರ್‌ಗಳು ಅರೆಸ್ಟ್
ಬೆಂಗಳೂರು: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರು ಪೆಡ್ಲರ್‌ಗಳನ್ನ... ಓದನ್ನು ಮುಂದುವರಿಸಿ
ಬ್ರಾಂಡೆಡ್ ವಾಚ್ ಖರೀದಿಗೆ ಎಚ್ಚರಿಕೆ: ಬ್ರಾಂಡೆಡ್ ಹೆಸರಿನಲ್ಲಿ ಮೋಸ: ₹25 ಲಕ್ಷದ ನಕಲಿ ವಾಚ್ ವಶ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್ ಖರೀದಿಸುವ ಗ್... ಓದನ್ನು ಮುಂದುವರಿಸಿ
ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗೆ ಗ್ಯಾಂಗ್ ದಾಳಿ
ಬೆಂಗಳೂರು: ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿ ಅಭಿಷೇಕ... ಓದನ್ನು ಮುಂದುವರಿಸಿ
ರ್ಯಾಪಿಡೋ ಚಾಲಕನಿಂದ ಯುವತಿಗೆ ಕಿರುಕುಳ: ಬೆಂಗಳೂರಿನಲ್ಲಿ ಬಂಧನ
ಬೆಂಗಳೂರು: ರ್ಯಾಪಿಡೋ ಬೈಕ್ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕು... ಓದನ್ನು ಮುಂದುವರಿಸಿ
ಗೃಹಸಚಿವರ ವಿರುದ್ಧ ಅವಹೇಳನಕಾರಿ ಪೋಸ್ಟ್: ಸೈಬರ್ ಕ್ರೈಂ ಕೇಸ್
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್... ಓದನ್ನು ಮುಂದುವರಿಸಿ