2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವು ಅತಿ ಹೆಚ್ಚು ತೆರಿಗೆ ವಸೂಲಾತಿ ಸಾಧನೆ, 2025-26ನೇ ಸಾಲಿನ ಫೆಬ್ರವರಿ 18ರ ತನಕ 71.39% ವಸೂಲಿ ದಾಖಲೆ
ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 2025-26ನೇ ಸಾಲಿನ ಫೆಬ್ರವರಿ 18ರ ತನಕ ಶೇ. 71.39 ರಷ್ಟು ತೆರಿಗೆ ಸಂಗ್ರಹವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದಂತೆ, ಈ ಸಾಲಿನ ಗುರಿ ತಲುಪುವ ಸಾಧ್ಯತೆ ಕಡಿಮೆ, ಆದರೆ ಉಳಿದ ಬಾಕಿ ತೆರಿಗೆ ಮಾರ್ಚ್ 2026 ರೊಳಗೆ ವಸೂಲಾತಿ ಮಾಡಲಾಗುವುದು. ಕಳೆದ ಸಾಲುಗಳ ಬಾಕಿ 3,352.4 ಕೋಟಿ ರೂ., ಇದನ್ನು ಆಸ್ತಿ ವರ್ಗೀಕರಣದಂತೆ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ತೆರಿಗೆ ಬೇಡಿಕೆ ದ್ವಿಗುಣವಾಗಿದ್ದು, ವಸೂಲಾತಿ ಮೊತ್ತವೂ ಹೆಚ್ಚಳವಾಗಿದೆ. ಆದ್ದರಿಂದ 2024-25ನೇ ಸಾಲಿನಲ್ಲಿ ಕರ್ನಾಟಕ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ವಸೂಲಾತಿ ಸಾಧಿಸಿದೆ ಎಂದು ಮಾಹಿತಿ ಪ್ರಕಟಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊಸ ವಿಧಾನಗಳಿಂದ ತೆರಿಗೆ ವಸೂಲಾತಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಉದಾಹರಣೆಗೆ
ವಿಜಯನಗರ ಜಿಲ್ಲೆ: 137 ಗ್ರಾಮ ಪಂಚಾಯತಿಗಳಲ್ಲಿ ‘ವಿಶೇಷ ತೆರಿಗೆ ವಸೂಲಾತಿ ಅಭಿಯಾನ’ ಮೂಲಕ 3.07 ಕೋಟಿ ರೂ. ವಸೂಲಾತಿ
ಯಾದಗಿರಿ ಜಿಲ್ಲೆ: 122 ಗ್ರಾಮ ಪಂಚಾಯತಿಗಳಲ್ಲಿ ‘ಒಂದು ದಿನ ಆಸ್ತಿ ತೆರಿಗೆ ಅಭಿಯಾನ’ ಮೂಲಕ 3.12 ಕೋಟಿ ರೂ. ವಸೂಲಾತಿ
ಸಾರ್ವಜನಿಕರಿಗೆ ತಮ್ಮ ಆಸ್ತಿಗೆ ಸಂಬಂಧಿಸಿದ ತೆರಿಗೆ ಪಾವತಿಗಾಗಿ ಫೋನ್ ಪೆ, ಗೂಗಲ್ ಪೆ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈೊಂದಿಗೆ, ಪಂಚಮಿತ್ರ ತಂತ್ರಾಂಶದಲ್ಲಿ ತೆರಿಗೆ ವಿವರ ವೀಕ್ಷಣೆ ಸಹ ಲಭ್ಯವಾಗಿದೆ. ಸರಕಾರವು ಗ್ರಾಮಠಾಣಗಳ ಹೊರಗೆ ಮನೆ ನಿರ್ಮಿಸಿಕೊಂಡವರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಮುಂತಾದ ನಾಗರಿಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಹಿನ್ನೆಲೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿ (ಕೇಸ್ 199, 199ಬಿ, 199ಸಿ) ಮಾಡಲಾಗಿದೆ ಮತ್ತು 7.4.2025 ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ.
ಇದರೊಂದಿಗೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು-2025 17.10.2025ರಿಂದ ಜಾರಿಗೆ ಬಂದಿದ್ದು, ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲವನ್ನು ಹೆಚ್ಚಿಸಲು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಇ-ಸ್ವತ್ತು 2.0 ತಂತ್ರಾಂಶದಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಇದ್ದರೂ ಸರಿಪಡಿಸಲಾಗುತ್ತಿದೆ. ಹಿಂದಿನ ಸಾಲುಗಳೊಂದಿಗೆ ಹೋಲಿಸಿದರೆ, ತೆರಿಗೆ ಬೇಡಿಕೆ ಮತ್ತು ವಸೂಲಾತಿ ಮೊತ್ತ ಎರಡೂ ಹೆಚ್ಚಾಗಿವೆ ಎಂದು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ; ಗುರಿ ಸಾಧನೆ ವಿಫಲವಾದರೆ ಕ್ರಮ
ವಿಜಯಪುರ : ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಗ್ರಾಮೀಣಾಭಿವ... ಓದನ್ನು ಮುಂದುವರಿಸಿ
ಕುಮಟಾ
ಕುಮಟಾ: ಮಿರ್ಜಾನ ಕೋಟೆ ರಸ್ತೆಯಲ್ಲಿ ಗೇಟ್ ಅಳವಡಿಸುವ ಪರಿಸ್ಥಿತಿಗೆ ಗ್ರಾಮಸ್ಥರ ಮತ್ತು ಮಾಧ್ಯಮ ಹೋರಾಟಕ್ಕೆ ಜಯ
ಕುಮಟಾ: ಐತಿಹಾಸಿಕ ಮಿರ್ಜಾನ ಕೋಟೆ ಬಳಿ ಛತ್ರಕೂರ್ವೆ ಗ್ರಾಮ ಸಂಪರ್... ಓದನ್ನು ಮುಂದುವರಿಸಿ
ಗುರುಮಿಟ್ಕಲ್
ಶಾಲಾ ಬಸ್ ಅಪಘಾತ: ಯಾದಗಿರಿಯಲ್ಲಿ ನಾಲ್ಕು ವರ್ಷದ ಬಾಲಕ ಸಾವು
ಯಾದಗಿರಿ : ಗುರುಮಠಕಲ್ ತಾಲ್ಲೂಕಿನ ಗಾಜರಕೋಟ್ ಗ್ರಾಮದಲ್ಲಿ 4 ವರ್... ಓದನ್ನು ಮುಂದುವರಿಸಿ
ಕುಷ್ಟಗಿ
ಆಸ್ತಿ ವಾದದ ತೀವ್ರತೆಗೆ ಪಂಚಾಯ್ತಿ ಡಿ-ಗ್ರೂಪ್ ನೌಕರ ಆತ್ಮಹತ್ಯೆ; ಐವರ ವಿರುದ್ಧ ದೂರು ದಾಖಲು
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕು ವ್ಯಾಪ್ತಿಯ ಜಮಲಾಪೂರ ಗ್ರಾಮ... ಓದನ್ನು ಮುಂದುವರಿಸಿ
ಬೆಚ್ಚಿಬಿದ್ದ ಸಿಲಿಕಾನ್ ಸಿಟಿ: ನಕಲಿ ಪೊಲೀಸ್ ಯೂನಿಫಾರ್ಮ್ ಬಳಸಿ ₹20 ಲಕ್ಷ ಹಾಗೂ ಚಿನ್ನಾಭರಣ ಕಳ್ಳತನ
ಬೆಂಗಳೂರು: ಸಿಲಿಕಾನ್ ಸಿಟಿನಲ್ಲಿ ಪೊಲೀಸ್ ಯುನಿಫಾರ್ಮ್ ಧರಿಸಿದ ಕ... ಓದನ್ನು ಮುಂದುವರಿಸಿ
ಗ್ರಾ.ಪಂ. ಸಿಬ್ಬಂದಿಗೆ ಗುಡ್ ನ್ಯೂಸ್: ಪ್ರೋತ್ಸಾಹಧನಕ್ಕೆ ಸರ್ಕಾರ ಮಹತ್ವದ ಆದೇಶ!
ಬೆಂಗಳೂರು: ಮೃತ ಖಾತೆದಾರರ ವಾರಸುದಾರರಿಗೆ ಪಹಣಿ ದಾಖಲಿಸಲು... ಓದನ್ನು ಮುಂದುವರಿಸಿ
ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ: 15 ತಿಂಗಳ ಬಳಿಕ ಯಾವಾಗ ಬೇಕಾದರೂ ಸಾಧ್ಯ – ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ಪ್ರಮಾಣವಚನ ಸ್ವೀಕರಿ... ಓದನ್ನು ಮುಂದುವರಿಸಿ
ಗುಡಿಬಂಡಾ
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಅವಧಿ ಅಂತ್ಯ; ಆಡಳಿತಾಧಿಕಾರಿಗಳ ನೇಮಕ.
ಗುಡಿಬಂಡೆ: ಗುಡಿಬಂಡೆ ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮ... ಓದನ್ನು ಮುಂದುವರಿಸಿ
ಮಂಗಳೂರು
ಕುಪ್ಪೆಪದವು: ನಿವೇಶನ ರಹಿತರ ಗುಡಸಿಲು ಪ್ರತಿಭಟನೆ ಫೆಬ್ರವರಿ 16ರಂದು
ಮಂಗಳೂರು : ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ 80 ವಸತಿ ರಹಿ... ಓದನ್ನು ಮುಂದುವರಿಸಿ
ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ ಯೋಜನೆ: ₹10,000 ವರೆಗೆ ವಿದ್ಯಾರ್ಥಿ ಸಹಾಯಕ್ಕೆ ಅರ್ಜಿಗಳನ್ನು ಆಹ್ವಾನ
ಬೆಂಗಳೂರು: ಕರ್ನಾಟಕದ ಗ್ರಾಮ ಪಂಚಾಯಿತಿಗಳು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತ... ಓದನ್ನು ಮುಂದುವರಿಸಿ