ಆಸ್ತಿ ವಾದದ ತೀವ್ರತೆಗೆ ಪಂಚಾಯ್ತಿ ಡಿ-ಗ್ರೂಪ್ ನೌಕರ ಆತ್ಮಹತ್ಯೆ; ಐವರ ವಿರುದ್ಧ ದೂರು ದಾಖಲು
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕು ವ್ಯಾಪ್ತಿಯ ಜಮಲಾಪೂರ ಗ್ರಾಮ ಪಂಚಾಯತ್ ನಲ್ಲಿ ಡಿ-ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ 35 ವರ್ಷದ ರಮೇಶ್ ದಂಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ನಸುಕಿನ ಜಾವ ಗ್ರಾಮ ಪಂಚಾಯತ್ ಕಟ್ಟಡದಲ್ಲೇ ಘಟನೆ ನಡೆದಿದೆ. ಈ ಪ್ರಕರಣವನ್ನು ತಾವರಗೇರಾ ಪೊಲೀಸ್ ಠಾಣೆ ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆಸ್ತಿ ಸಂಬಂಧಿ ಸಹೋದರಿಯರೊಂದಿಗೆ ನಡೆಯುತ್ತಿದ್ದ ಗಲಾಟೆ ಕಾರಣದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ವಿಚಾರ ನ್ಯಾಯಾಲಯದಲ್ಲೂ ದಾವೆ ಹಾಕಲಾಗಿತ್ತು ಎನ್ನಲಾಗಿದೆ.
ರಮೇಶ್ ಆತ್ಮಹತ್ಯೆ ಹಿನ್ನೆಲೆ ಅವರ ಸಹೋದರಿ ಸೇರಿ ಐದಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ಜಮಖಂಡಿ ತಾಲೂಕು ವ್ಯಾಪ್ತಿಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವ ಆತಂಕದಿಂದ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಪೆಟ್ರೋಲ್ ಬಾಯಿಗೆ ಹೋಗಿದ್ದ ಕಾರಣ ಅಸ್ವಸ್ಥರಾದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಹೆಚ್ಒ ಮಂಜುನಾಥ ಆರೋಗ್ಯ ವಿಚಾರಿಸಿ ಹಳೆಯ ನೌಕರರನ್ನು ಮುಂದುವರಿಸುವ ಭರವಸೆ ನೀಡಿದ್ದಾರೆ. ಈ ವೇಳೆ ದಲಿತ ಸಂಘಟನೆಗಳು ಮತ್ತು ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡರೂ, ಪೊಲೀಸರು ಮಧ್ಯಪ್ರವೇಶಿಸಿ ನಿಯಂತ್ರಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ; ಗುರಿ ಸಾಧನೆ ವಿಫಲವಾದರೆ ಕ್ರಮ
ವಿಜಯಪುರ : ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಗ್ರಾಮೀಣಾಭಿವ... ಓದನ್ನು ಮುಂದುವರಿಸಿ
ಕುಮಟಾ
ಕುಮಟಾ: ಮಿರ್ಜಾನ ಕೋಟೆ ರಸ್ತೆಯಲ್ಲಿ ಗೇಟ್ ಅಳವಡಿಸುವ ಪರಿಸ್ಥಿತಿಗೆ ಗ್ರಾಮಸ್ಥರ ಮತ್ತು ಮಾಧ್ಯಮ ಹೋರಾಟಕ್ಕೆ ಜಯ
ಕುಮಟಾ: ಐತಿಹಾಸಿಕ ಮಿರ್ಜಾನ ಕೋಟೆ ಬಳಿ ಛತ್ರಕೂರ್ವೆ ಗ್ರಾಮ ಸಂಪರ್... ಓದನ್ನು ಮುಂದುವರಿಸಿ
2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವು ಅತಿ ಹೆಚ್ಚು ತೆರಿಗೆ ವಸೂಲಾತಿ ಸಾಧನೆ, 2025-26ನೇ ಸಾಲಿನ ಫೆಬ್ರವರಿ 18ರ ತನಕ 71.39% ವಸೂಲಿ ದಾಖಲೆ
ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 2025-26ನೇ ಸಾಲಿನ ಫ... ಓದನ್ನು ಮುಂದುವರಿಸಿ
ಗುರುಮಿಟ್ಕಲ್
ಶಾಲಾ ಬಸ್ ಅಪಘಾತ: ಯಾದಗಿರಿಯಲ್ಲಿ ನಾಲ್ಕು ವರ್ಷದ ಬಾಲಕ ಸಾವು
ಯಾದಗಿರಿ : ಗುರುಮಠಕಲ್ ತಾಲ್ಲೂಕಿನ ಗಾಜರಕೋಟ್ ಗ್ರಾಮದಲ್ಲಿ 4 ವರ್... ಓದನ್ನು ಮುಂದುವರಿಸಿ
ಬೆಚ್ಚಿಬಿದ್ದ ಸಿಲಿಕಾನ್ ಸಿಟಿ: ನಕಲಿ ಪೊಲೀಸ್ ಯೂನಿಫಾರ್ಮ್ ಬಳಸಿ ₹20 ಲಕ್ಷ ಹಾಗೂ ಚಿನ್ನಾಭರಣ ಕಳ್ಳತನ
ಬೆಂಗಳೂರು: ಸಿಲಿಕಾನ್ ಸಿಟಿನಲ್ಲಿ ಪೊಲೀಸ್ ಯುನಿಫಾರ್ಮ್ ಧರಿಸಿದ ಕ... ಓದನ್ನು ಮುಂದುವರಿಸಿ
ಗ್ರಾ.ಪಂ. ಸಿಬ್ಬಂದಿಗೆ ಗುಡ್ ನ್ಯೂಸ್: ಪ್ರೋತ್ಸಾಹಧನಕ್ಕೆ ಸರ್ಕಾರ ಮಹತ್ವದ ಆದೇಶ!
ಬೆಂಗಳೂರು: ಮೃತ ಖಾತೆದಾರರ ವಾರಸುದಾರರಿಗೆ ಪಹಣಿ ದಾಖಲಿಸಲು... ಓದನ್ನು ಮುಂದುವರಿಸಿ
ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ: 15 ತಿಂಗಳ ಬಳಿಕ ಯಾವಾಗ ಬೇಕಾದರೂ ಸಾಧ್ಯ – ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ಪ್ರಮಾಣವಚನ ಸ್ವೀಕರಿ... ಓದನ್ನು ಮುಂದುವರಿಸಿ
ಗುಡಿಬಂಡಾ
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಅವಧಿ ಅಂತ್ಯ; ಆಡಳಿತಾಧಿಕಾರಿಗಳ ನೇಮಕ.
ಗುಡಿಬಂಡೆ: ಗುಡಿಬಂಡೆ ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮ... ಓದನ್ನು ಮುಂದುವರಿಸಿ
ಮಂಗಳೂರು
ಕುಪ್ಪೆಪದವು: ನಿವೇಶನ ರಹಿತರ ಗುಡಸಿಲು ಪ್ರತಿಭಟನೆ ಫೆಬ್ರವರಿ 16ರಂದು
ಮಂಗಳೂರು : ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ 80 ವಸತಿ ರಹಿ... ಓದನ್ನು ಮುಂದುವರಿಸಿ
ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ ಯೋಜನೆ: ₹10,000 ವರೆಗೆ ವಿದ್ಯಾರ್ಥಿ ಸಹಾಯಕ್ಕೆ ಅರ್ಜಿಗಳನ್ನು ಆಹ್ವಾನ
ಬೆಂಗಳೂರು: ಕರ್ನಾಟಕದ ಗ್ರಾಮ ಪಂಚಾಯಿತಿಗಳು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತ... ಓದನ್ನು ಮುಂದುವರಿಸಿ