6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಸಚಿವ ವಿ. ಸೋಮಣ್ಣ ಭರವಸೆ
ಮಂಡ್ಯ: ಮದ್ದೂರು ನಗರದ ಶಿವಪುರ ರೈಲು ನಿಲ್ದಾಣವನ್ನು ಆಧುನೀಕರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಬೆಂಗಳೂರಿನಿಂದ ಮೈಸೂರಿನವರೆಗೆ ಪ್ರಸ್ತಾವಿತ ರೈಲ್ವೆ ಕಾಮಗಾರಿಗಳ ವೀಕ್ಷಣೆ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ವಿಶೇಷ ರೈಲಿನಲ್ಲಿ ಮದ್ದೂರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಮದ್ದೂರು ರೈಲು ನಿಲ್ದಾಣವು 80 ವರ್ಷಕ್ಕೂ ಹೆಚ್ಚು ಹಳೆಯದಾಗಿರುವುದರಿಂದ ಅದರ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು. ಇದೇ ವೇಳೆ, ಮದ್ದೂರಿನಲ್ಲಿ ಹೊಸ ರೈಲು ನಿಲ್ದಾಣ ನಿರ್ಮಾಣದ ಬೇಡಿಕೆಗೆ ಸ್ಪಂದಿಸಿ, ಶೀಘ್ರದಲ್ಲೇ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು. ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಕುರಿತಾಗಿ ಸಾರ್ವಜನಿಕರು ಮನವಿ ಸಲ್ಲಿಸಿದ ಹಿನ್ನೆಲೆ, ಆಧುನೀಕರಣದ ನಂತರ ಹೆಚ್ಚಿನ ರೈಲುಗಳಿಗೆ ನಿಲುಗಡೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪರಿಶೀಲನಾ ಕಾರ್ಯಕ್ರಮದ ವೇಳೆ ಕಾರ್ಯಕರ್ತರ ನೂಕು ನುಗ್ಗಲು ಉಂಟಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸಚಿವರು ಸಂಪೂರ್ಣ ಪರಿಶೀಲನೆ ನಡೆಸಲು ಸಾಧ್ಯವಾಗದೆ ಕೆಲವೇ ಸಮಯದಲ್ಲಿ ಸ್ಥಳ ತೊರೆದರು. ಇನ್ನೊಂದು ಕಡೆ, ಸಚಿವರಿಗೆ ಮನವಿ ಸಲ್ಲಿಸಲು ಬಂದಿದ್ದ ಇಬ್ಬರು ಅಂಗವಿಕಲರಿಗೆ ಅವಕಾಶ ಸಿಗದೇ ಅವರು ನಿರಾಶೆಯಿಂದ ವಾಪಸ್ಸಾದ ಘಟನೆ ಕೂಡ ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಂಕಷ್ಟದಲ್ಲಿದ್ದ ಪೂಜಾ ಕುಟುಂಬಕ್ಕೆ ಕುಮಾರಸ್ವಾಮಿ ನೆರವು: ಮಾನವೀಯತೆ ಮೆರೆದ ಕೇಂದ್ರ ಸಚಿವ
ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಸಂಕಷ್ಟಕ್... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ರೈಲಿನಲ್ಲೇ ಗಾಂಜಾ ಸೇವನೆ: ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನಲ್ಲಿ ಯುವಕರ ದೌರ್ಜನ್ಯ ವಿಡಿಯೋ ವೈರಲ್
ಹುಬ್ಬಳ್ಳಿ,: ಹಜರತ್ ನಿಜಾಮುದ್ದೀನ್–ಯಶವಂತಪುರ ನಡುವೆ ಸಂಚರಿಸುವ... ಓದನ್ನು ಮುಂದುವರಿಸಿ
ಮತದಾನದ ವೇಳೆ ಹಣ ಹಂಚಿಕೆ ಆರೋಪ: ಬಾಗಲಕೋಟೆಯಲ್ಲಿ ವೈರಲ್ ವಿಡಿಯೋ ಸಂಚಲನ
ಬಾಗಲಕೋಟೆ: ಉಪಚುನಾವಣೆಯ ಸಂದರ್ಭದಲ್ಲಿ ವಾಂಬೆ ಕಾಲೋನಿಯಲ್ಲಿ ಮತದಾ... ಓದನ್ನು ಮುಂದುವರಿಸಿ
ಹೊಸನಗರ
ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿತ – ಮೂವರು ಕಾರ್ಮಿಕರ ದುರ್ಮರಣ
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್... ಓದನ್ನು ಮುಂದುವರಿಸಿ
ಮಾಣಿಕ್ಯಾಧಾರದಲ್ಲಿ 15 ವರ್ಷದ ಬಾಲಕಿ ನಿಗೂಢ ನಾಪತ್ತೆ
ಚಿಕ್ಕಮಗಳೂರು: ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಪ್ರದೇಶದಲ್ಲಿ 1... ಓದನ್ನು ಮುಂದುವರಿಸಿ
20 ವರ್ಷದ ಕಾಡಾನೆ ಕಾಟಕ್ಕೆ ಪರಿಹಾರ: ಹಾಸನದಲ್ಲಿ ತಡೆಗೋಡೆ ಸಿದ್ಧ
ಹಾಸನ: ಕಳೆದ ಎರಡು ದಶಕಗಳಿಂದ ಜಿಲ್ಲೆಯ ಮಲೆನಾಡು ಭಾಗದ ಜನರನ್ನು ಕ... ಓದನ್ನು ಮುಂದುವರಿಸಿ
ಮೂಡಿಗೆರೆ
ಹೃದಯ ಕಲುಕುವ ಘಟನೆ: ಪತಿಯ ಶವದ ಪಕ್ಕದಲ್ಲೇ 10 ದಿನ ಬದುಕಿದ ಪತ್ನಿ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲ... ಓದನ್ನು ಮುಂದುವರಿಸಿ
ಆದಿಚುಂಚನಗಿರಿ ಮಠಕ್ಕೆ ಕುಮಾರಸ್ವಾಮಿ ಭೇಟಿ: ಆಶೀರ್ವಾದ ಪಡೆದ ಕೇಂದ್ರ ಸಚಿವ
ಬೆಂಗಳೂರು: ಮಾನ್ಯ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ... ಓದನ್ನು ಮುಂದುವರಿಸಿ
“ಸತ್ಯಕ್ಕೆ ಜಯ ಸಿಗಲಿದೆ” – ತೀರ್ಪು ಮುನ್ನ ವಿನಯ್ ಕುಲಕರ್ಣಿ ಮಾತು
ಬೆಂಗಳೂರು: ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್... ಓದನ್ನು ಮುಂದುವರಿಸಿ
ತಿಕೋಟಾ
ತಿಕೋಟಾ ತಾಲ್ಲೂಕಿನಲ್ಲಿ ಭೂಕಂಪನ ಅನುಭವ – ಜನರು ಮನೆಬಿಟ್ಟು ಹೊರಗೆ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲ್ಲೂಕು ಸೇರಿದಂತೆ ಹಲವು ಭಾಗಗಳಲ್ಲ... ಓದನ್ನು ಮುಂದುವರಿಸಿ