ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿತ – ಮೂವರು ಕಾರ್ಮಿಕರ ದುರ್ಮರಣ
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಭಾರೀ ದುರಂತ ಸಂಭವಿಸಿದೆ. ಗುಡ್ಡ ಕುಸಿತದಿಂದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತರನ್ನು ರಾಘವೇಂದ್ರ (37), ರಾಜು (30) ಮತ್ತು ಶಬ್ಬೀರ್ (40) ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬರು ಹೊರ ರಾಜ್ಯದ ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ. ಕುಂದಾಪುರ–ಶಿವಮೊಗ್ಗ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಗುಡ್ಡ ಕುಸಿದು ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸುಮಂತ ಮತ್ತು ಪರಮೇಶ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆದುಕೊಳ್ಳಲು ಕಾರ್ಯಾಚರಣೆ ಮುಂದುವರಿದಿದೆ. ಆದರೆ ರಾತ್ರಿ ಸಮಯದ ಹಿನ್ನೆಲೆ ರಕ್ಷಣಾ ಕಾರ್ಯದಲ್ಲಿ ಅಡಚಣೆಗಳು ಎದುರಾಗಿವೆ. ಘಟನಾ ಸ್ಥಳಕ್ಕೆ ಹೊಸನಗರ ತಹಶೀಲ್ದಾರ್ ಭರತ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ದುರಂತದಿಂದ ಕುಂದಾಪುರ–ಶಿವಮೊಗ್ಗ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳನ್ನು ಪರ್ಯಾಯ ಮಾರ್ಗಗಳತ್ತ ಹರಿಸಲಾಗುತ್ತಿದೆ.= ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಂಕಷ್ಟದಲ್ಲಿದ್ದ ಪೂಜಾ ಕುಟುಂಬಕ್ಕೆ ಕುಮಾರಸ್ವಾಮಿ ನೆರವು: ಮಾನವೀಯತೆ ಮೆರೆದ ಕೇಂದ್ರ ಸಚಿವ
ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಸಂಕಷ್ಟಕ್... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ರೈಲಿನಲ್ಲೇ ಗಾಂಜಾ ಸೇವನೆ: ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನಲ್ಲಿ ಯುವಕರ ದೌರ್ಜನ್ಯ ವಿಡಿಯೋ ವೈರಲ್
ಹುಬ್ಬಳ್ಳಿ,: ಹಜರತ್ ನಿಜಾಮುದ್ದೀನ್–ಯಶವಂತಪುರ ನಡುವೆ ಸಂಚರಿಸುವ... ಓದನ್ನು ಮುಂದುವರಿಸಿ
ಮತದಾನದ ವೇಳೆ ಹಣ ಹಂಚಿಕೆ ಆರೋಪ: ಬಾಗಲಕೋಟೆಯಲ್ಲಿ ವೈರಲ್ ವಿಡಿಯೋ ಸಂಚಲನ
ಬಾಗಲಕೋಟೆ: ಉಪಚುನಾವಣೆಯ ಸಂದರ್ಭದಲ್ಲಿ ವಾಂಬೆ ಕಾಲೋನಿಯಲ್ಲಿ ಮತದಾ... ಓದನ್ನು ಮುಂದುವರಿಸಿ
ಮಾಣಿಕ್ಯಾಧಾರದಲ್ಲಿ 15 ವರ್ಷದ ಬಾಲಕಿ ನಿಗೂಢ ನಾಪತ್ತೆ
ಚಿಕ್ಕಮಗಳೂರು: ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಪ್ರದೇಶದಲ್ಲಿ 1... ಓದನ್ನು ಮುಂದುವರಿಸಿ
ಮದ್ದೂರು
6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಸಚಿವ ವಿ. ಸೋಮಣ್ಣ ಭರವಸೆ
ಮಂಡ್ಯ: ಮದ್ದೂರು ನಗರದ ಶಿವಪುರ ರೈಲು ನಿಲ್ದಾಣವನ್ನು ಆಧುನೀಕರಿಸಲ... ಓದನ್ನು ಮುಂದುವರಿಸಿ
20 ವರ್ಷದ ಕಾಡಾನೆ ಕಾಟಕ್ಕೆ ಪರಿಹಾರ: ಹಾಸನದಲ್ಲಿ ತಡೆಗೋಡೆ ಸಿದ್ಧ
ಹಾಸನ: ಕಳೆದ ಎರಡು ದಶಕಗಳಿಂದ ಜಿಲ್ಲೆಯ ಮಲೆನಾಡು ಭಾಗದ ಜನರನ್ನು ಕ... ಓದನ್ನು ಮುಂದುವರಿಸಿ
ಮೂಡಿಗೆರೆ
ಹೃದಯ ಕಲುಕುವ ಘಟನೆ: ಪತಿಯ ಶವದ ಪಕ್ಕದಲ್ಲೇ 10 ದಿನ ಬದುಕಿದ ಪತ್ನಿ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲ... ಓದನ್ನು ಮುಂದುವರಿಸಿ
ಆದಿಚುಂಚನಗಿರಿ ಮಠಕ್ಕೆ ಕುಮಾರಸ್ವಾಮಿ ಭೇಟಿ: ಆಶೀರ್ವಾದ ಪಡೆದ ಕೇಂದ್ರ ಸಚಿವ
ಬೆಂಗಳೂರು: ಮಾನ್ಯ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ... ಓದನ್ನು ಮುಂದುವರಿಸಿ
“ಸತ್ಯಕ್ಕೆ ಜಯ ಸಿಗಲಿದೆ” – ತೀರ್ಪು ಮುನ್ನ ವಿನಯ್ ಕುಲಕರ್ಣಿ ಮಾತು
ಬೆಂಗಳೂರು: ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್... ಓದನ್ನು ಮುಂದುವರಿಸಿ
ತಿಕೋಟಾ
ತಿಕೋಟಾ ತಾಲ್ಲೂಕಿನಲ್ಲಿ ಭೂಕಂಪನ ಅನುಭವ – ಜನರು ಮನೆಬಿಟ್ಟು ಹೊರಗೆ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲ್ಲೂಕು ಸೇರಿದಂತೆ ಹಲವು ಭಾಗಗಳಲ್ಲ... ಓದನ್ನು ಮುಂದುವರಿಸಿ