75ರ ವಯಸ್ಸಿನ ತಂದೆ, ಸೊಸೆ ಸಹಿತ ಮಹಿಳೆಯರೊಂದಿಗೆ ಅನೈತಿಕ ಚಟುವಟಿಕೆ – ನಂತರ ಸಂಭವಿಸಿದ ದುರಂತ!
ಯಾದಗಿರಿ: ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಹತ್ಯೆ ಪ್ರಕರಣಕ್ಕೆ ಸಂಚಲನಕಾರಿ ತಿರುವು ಸಿಕ್ಕಿದ್ದು, ತಂದೆಯ ವರ್ತನೆಗೆ ಬೇಸತ್ತು ಮಗನೇ ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮಾರ್ಚ್ 12ರ ರಾತ್ರಿ 74 ವರ್ಷದ ಪಂಪಣ್ಣ ಸಜ್ಜನ ಹತ್ಯೆಯಾಗಿದ್ದು, ಈ ಕುರಿತು ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ವಿಫಲರಾಗಿದ್ದರು.
ನಾಲ್ಕು ದಿನಗಳ ತನಿಖೆಯ ಬಳಿಕ ಪೊಲೀಸರು ರಮೇಶ್, ಜಿ. ವಿರೇಶ್, ಎಂ. ವಿರೇಶ್ ಹಾಗೂ ಕೃಷ್ಟ ಎಂಬ ಆರೋಪಿಗಳನ್ನು ಬಂಧಿಸಿದರು. ಬಂಧನದ ನಂತರ ಪ್ರಕರಣದ ನಿಜಾಂಶ ಬೆಳಕಿಗೆ ಬಂದಿದ್ದು, ತಿರುಪತಿ ಮೂಲದ ನಾಲ್ವರು ಹಂತಕರು ಕೊಲೆ ನಡೆಸಿದ್ದು, ಹತ್ಯೆಗೆ ಸುಪಾರಿ ನೀಡಿದ್ದು ಮೃತನ ಮತ್ತೊಬ್ಬ ಪುತ್ರ ನರಸರೆಡ್ಡಿ ಎಂಬುದು ತಿಳಿದುಬಂದಿದೆ.
ಮೊದಲಿನಿಂದ ಆಸ್ತಿ ವಿಚಾರವಾಗಿ ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದರು. ಆದರೆ ಮೃತನ ಮೊಬೈಲ್ ಪರಿಶೀಲನೆ ವೇಳೆ ಹಲವು ಮಹಿಳೆಯರೊಂದಿಗೆ ತೆಗೆದಿರುವ ಫೋಟೋಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ತನಿಖೆಯ ಪ್ರಕಾರ, ಮೃತನು ಕಳೆದ ಹಲವು ವರ್ಷಗಳಿಂದ ಜಮೀನಿನಲ್ಲೇ ಶೆಡ್ ಹಾಕಿಕೊಂಡು ವಾಸವಾಗಿದ್ದ. ಪತ್ನಿ ಸಾವಿನ ಬಳಿಕ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಆತ, ಮದ್ಯಪಾನಕ್ಕೆ ಒಳಗಾಗಿದ್ದು, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆ, ಕುಟುಂಬದಲ್ಲಿ ಉಂಟಾದ ಅಸಮಾಧಾನ ತೀವ್ರಗೊಂಡಿದ್ದು, ಮಗ ನರಸರೆಡ್ಡಿ ತಂದೆಯ ವರ್ತನೆಗೆ ಬೇಸತ್ತು ಸುಮಾರು ₹2 ಲಕ್ಷ ನೀಡಿ ಹತ್ಯೆ ಮಾಡಿಸುವಂತೆ ಸುಪಾರಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಳಿಯಾರು ಪೊಲೀಸ್ ಠಾಣೆ: ಅನುಮಾನಾಸ್ಪದ ಸಾವು ಪ್ರಕರಣ – ತನಿಖೆ ಸಿಐಡಿಗೆ ಸಾಗಿಸಲು ರಾಜ್ಯ ಸರ್ಕಾರ ಆದೇಶ
ತುಮಕೂರು: ಹುಳಿಯಾರು ಪೊಲೀಸ್ ಠಾಣೆಯಲ್ಲಿ ಜೂಜಾಟ ಸಂಬಂಧ ವಿಚಾರಣೆಗ... ಓದನ್ನು ಮುಂದುವರಿಸಿ
ಭೂಮಿ ವಿವಾದಕ್ಕೆ ಸ್ವಂತ ತಂಗಿಯನ್ನೇ ಕೊಚ್ಚಿ ಕೊಂದ ಅಣ್ಣ
ಧಾರವಾಡ: ಅಮ್ಮಿನಬಾವಿ ಗ್ರಾಮದ ಭೂಮಿ ವಿವಾದಕ್ಕೆ ಸಂಬಂಧಿಸಿ ತಂಗಿಯ... ಓದನ್ನು ಮುಂದುವರಿಸಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್ ಮುಖಂಡರ ವಿರುದ್ಧ ಅನ್ಯಾಯ ಆರೋಪ
ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಚಾರ್ಜ್‌ಶೀಟ್... ಓದನ್ನು ಮುಂದುವರಿಸಿ
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆ ಅಂತಿಮ ಹಂತ, ವರದಿ ಮುಂದಿನ ವಾರ ಸಲ್ಲಿಕೆ!
ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ಅತಿವೇಗ ಬೈಕ್–ಕಾರು ಡಿಕ್ಕಿ; ಸ್ಥಳದಲ್ಲೇ ಸವಾರ ವೆಂಕಟೇಗೌಡ ಸಾವು
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ জেলার ದೇವನಹಳ್ಳಿ ತಾಲ್ಲೂಕಿನ... ಓದನ್ನು ಮುಂದುವರಿಸಿ
ಲಾಕಪ್ ಸಾವು? ವಿಚಾರಣೆಯ ವೇಳೆ ವ್ಯಕ್ತಿ ಸಾವು – ಗ್ರಾಮಸ್ಥರು ಪೊಲೀಸರ ವಿರುದ್ಧ ಶವವಿಟ್ಟು ಪ್ರತಿಭಟನೆ
ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡು ಗ್ರಾಮದಲ್ಲಿ ವಿ... ಓದನ್ನು ಮುಂದುವರಿಸಿ
ತುಮಕೂರು ಲಾಕಪ್ ಡೆತ್ ಪ್ರಕರಣ – ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬೆಂಗಳೂರು: ತುಮಕೂರಿನಲ್ಲಿ ನಡೆದ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ತನಿಖೆಗೆ ಒ... ಓದನ್ನು ಮುಂದುವರಿಸಿ
ಅರ್ಚಕರೇ ಟಾರ್ಗೆಟ್! ಮುತ್ತೈದೆಯರ ಒಡವೆ ಎಗರಿಸುತ್ತಿದ್ದ ಖತರ್ನಾಕ್ ವಂಚಕ ಅರೆಸ್ಟ್
ಬೆಂಗಳೂರು: ನಗರದಲ್ಲಿ ವಿಚಿತ್ರ ರೀತಿಯಲ್ಲಿ ಕಳ್ಳತನ ನಡೆಸುತ್ತಿದ್... ಓದನ್ನು ಮುಂದುವರಿಸಿ
ಯುಗಾದಿ ದಿನವೇ ರಕ್ತಪಾತ :ಅಣ್ಣನಿಂದ ತಂಗಿ ಮೇಲೆ ಬರ್ಬರ ಹಲ್ಲೆ
ಧಾರವಾಡ: ಯುಗಾದಿ ಹಬ್ಬದ ಸಂಭ್ರಮದ ನಡುವೆ, ಜಿಲ್ಲೆಯ ಅಮ್ಮಿನಭಾವಿ... ಓದನ್ನು ಮುಂದುವರಿಸಿ
ಚಿತ್ರದುರ್ಗದಲ್ಲಿ ಆ್ಯಸಿಡ್ ದಾಳಿ: ಪತಿಯ ಕ್ರೂರ ಕೃತ್ಯ, ನಾಲ್ವರಿಗೆ ಗಾಯ!
ಚಿತ್ರದುರ್ಗ: ಜಿಲ್ಲೆಯ ಮಾಳಪ್ಪನಹಟ್ಟಿಯಲ್ಲಿ ಮಹಿಳೆಯ ಮೇಲೆ ಮಚ್ಚಿ... ಓದನ್ನು ಮುಂದುವರಿಸಿ