ಅರ್ಚಕರೇ ಟಾರ್ಗೆಟ್! ಮುತ್ತೈದೆಯರ ಒಡವೆ ಎಗರಿಸುತ್ತಿದ್ದ ಖತರ್ನಾಕ್ ವಂಚಕ ಅರೆಸ್ಟ್
ಬೆಂಗಳೂರು: ನಗರದಲ್ಲಿ ವಿಚಿತ್ರ ರೀತಿಯಲ್ಲಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ವಂಚಕನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಮನೆ ಕಳ್ಳತನ ಅಥವಾ ಸರಗಳ್ಳತನ ಮಾಡದೆ, ದೇವಾಲಯ ಅರ್ಚಕರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ಆರೋಪಿಯನ್ನು ಪ್ರವೀಣ್ ಭಟ್ ಎಂದು ಗುರುತಿಸಲಾಗಿದೆ.
ಆರೋಪಿ ಮೊದಲಿಗೆ ನಗರದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ, ತಾನು ಶ್ರೀಮಂತ ಉದ್ಯಮಿ ಎಂದು ಪರಿಚಯಿಸಿಕೊಂಡು ಅರ್ಚಕರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಬಳಿಕ ಪೂಜೆಗಳನ್ನು ಮಾಡಿಸಿ, ದೇವಸ್ಥಾನಕ್ಕೆ ಸಾವಿರಾರು ರೂಪಾಯಿ ಕಾಣಿಕೆ ನೀಡಿ ಅವರ ವಿಶ್ವಾಸ ಗಳಿಸುತ್ತಿದ್ದ
.
ನಂತರ “ಹೊಸ ಅಂಗಡಿ ಆರಂಭಿಸುತ್ತಿದ್ದೇನೆ, ಪೂಜೆ ಮಾಡಬೇಕು” ಎಂದು ಹೇಳಿ ಅರ್ಚಕರನ್ನು ಸಂಪರ್ಕಿಸುತ್ತಿದ್ದ. ಪೂಜೆಗೆ ಮುತ್ತೈದೆಯರು ಬೇಕು ಎಂದು ಹೇಳಿ, ಅರ್ಚಕರ ಪತ್ನಿ ಅಥವಾ ಮನೆಯ ಮಹಿಳೆಯರನ್ನು ಕಳುಹಿಸುವಂತೆ ಕೇಳುತ್ತಿದ್ದ. ಮಹಿಳೆಯರು ಒಡವೆ ಧರಿಸಿ ಬರುತ್ತಾರೆ ಎಂಬುದನ್ನು ಬಳಸಿಕೊಂಡು ತನ್ನ ಯೋಜನೆಯನ್ನು ರೂಪಿಸಿದ್ದ.
ಪೂಜೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಮಹಿಳೆಯನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದ ಆರೋಪಿ, ಮಧ್ಯದಲ್ಲೇ “ಅಲ್ಲಿ ಒಡವೆ ಹಾಕಬೇಡಿ” ಎಂದು ಹೇಳಿ ಅವರಿಂದ ಆಭರಣಗಳನ್ನು ಪಡೆದುಕೊಳ್ಳುತ್ತಿದ್ದ. ನಂತರ ಅವುಗಳನ್ನು ಹಿಂದಿರುಗಿಸುವುದಾಗಿ ನಂಬಿಸಿ, ಮಾರುಕಟ್ಟೆ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗುತ್ತಿದ್ದ.
ಈ ರೀತಿಯಾಗಿ ಹೆಬ್ಬಾಳ, ರಾಮಮೂರ್ತಿನಗರ, ಸಿಟಿ ಮಾರ್ಕೆಟ್, ರಾಜಾಜಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅರ್ಚಕರ ಕುಟುಂಬದ ದೂರಿನ ಆಧಾರದಲ್ಲಿ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು ₹15 ಲಕ್ಷ ಮೌಲ್ಯದ 116 ಗ್ರಾಂ ಚಿನ್ನ ಹಾಗೂ 409 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಈತನ ಪಾತ್ರವಿರುವ ಸಾಧ್ಯತೆ ಇದ್ದು, ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಳಿಯಾರು ಪೊಲೀಸ್ ಠಾಣೆ: ಅನುಮಾನಾಸ್ಪದ ಸಾವು ಪ್ರಕರಣ – ತನಿಖೆ ಸಿಐಡಿಗೆ ಸಾಗಿಸಲು ರಾಜ್ಯ ಸರ್ಕಾರ ಆದೇಶ
ತುಮಕೂರು: ಹುಳಿಯಾರು ಪೊಲೀಸ್ ಠಾಣೆಯಲ್ಲಿ ಜೂಜಾಟ ಸಂಬಂಧ ವಿಚಾರಣೆಗ... ಓದನ್ನು ಮುಂದುವರಿಸಿ
ಭೂಮಿ ವಿವಾದಕ್ಕೆ ಸ್ವಂತ ತಂಗಿಯನ್ನೇ ಕೊಚ್ಚಿ ಕೊಂದ ಅಣ್ಣ
ಧಾರವಾಡ: ಅಮ್ಮಿನಬಾವಿ ಗ್ರಾಮದ ಭೂಮಿ ವಿವಾದಕ್ಕೆ ಸಂಬಂಧಿಸಿ ತಂಗಿಯ... ಓದನ್ನು ಮುಂದುವರಿಸಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್ ಮುಖಂಡರ ವಿರುದ್ಧ ಅನ್ಯಾಯ ಆರೋಪ
ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಚಾರ್ಜ್‌ಶೀಟ್... ಓದನ್ನು ಮುಂದುವರಿಸಿ
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆ ಅಂತಿಮ ಹಂತ, ವರದಿ ಮುಂದಿನ ವಾರ ಸಲ್ಲಿಕೆ!
ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ಅತಿವೇಗ ಬೈಕ್–ಕಾರು ಡಿಕ್ಕಿ; ಸ್ಥಳದಲ್ಲೇ ಸವಾರ ವೆಂಕಟೇಗೌಡ ಸಾವು
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ জেলার ದೇವನಹಳ್ಳಿ ತಾಲ್ಲೂಕಿನ... ಓದನ್ನು ಮುಂದುವರಿಸಿ
ಲಾಕಪ್ ಸಾವು? ವಿಚಾರಣೆಯ ವೇಳೆ ವ್ಯಕ್ತಿ ಸಾವು – ಗ್ರಾಮಸ್ಥರು ಪೊಲೀಸರ ವಿರುದ್ಧ ಶವವಿಟ್ಟು ಪ್ರತಿಭಟನೆ
ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡು ಗ್ರಾಮದಲ್ಲಿ ವಿ... ಓದನ್ನು ಮುಂದುವರಿಸಿ
75ರ ವಯಸ್ಸಿನ ತಂದೆ, ಸೊಸೆ ಸಹಿತ ಮಹಿಳೆಯರೊಂದಿಗೆ ಅನೈತಿಕ ಚಟುವಟಿಕೆ – ನಂತರ ಸಂಭವಿಸಿದ ದುರಂತ!
ಯಾದಗಿರಿ: ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಹತ್ಯೆ ಪ್ರ... ಓದನ್ನು ಮುಂದುವರಿಸಿ
ತುಮಕೂರು ಲಾಕಪ್ ಡೆತ್ ಪ್ರಕರಣ – ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬೆಂಗಳೂರು: ತುಮಕೂರಿನಲ್ಲಿ ನಡೆದ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ತನಿಖೆಗೆ ಒ... ಓದನ್ನು ಮುಂದುವರಿಸಿ
ಯುಗಾದಿ ದಿನವೇ ರಕ್ತಪಾತ :ಅಣ್ಣನಿಂದ ತಂಗಿ ಮೇಲೆ ಬರ್ಬರ ಹಲ್ಲೆ
ಧಾರವಾಡ: ಯುಗಾದಿ ಹಬ್ಬದ ಸಂಭ್ರಮದ ನಡುವೆ, ಜಿಲ್ಲೆಯ ಅಮ್ಮಿನಭಾವಿ... ಓದನ್ನು ಮುಂದುವರಿಸಿ
ಚಿತ್ರದುರ್ಗದಲ್ಲಿ ಆ್ಯಸಿಡ್ ದಾಳಿ: ಪತಿಯ ಕ್ರೂರ ಕೃತ್ಯ, ನಾಲ್ವರಿಗೆ ಗಾಯ!
ಚಿತ್ರದುರ್ಗ: ಜಿಲ್ಲೆಯ ಮಾಳಪ್ಪನಹಟ್ಟಿಯಲ್ಲಿ ಮಹಿಳೆಯ ಮೇಲೆ ಮಚ್ಚಿ... ಓದನ್ನು ಮುಂದುವರಿಸಿ