‘ಐಐಟಿ ವಾಲೆ ಬಾಬಾ’ ಮದುವೆ: ವೈರಲ್ ಸನ್ಯಾಸಿಯಿಂದ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಅಭಯ್ ಸಿಂಗ್
ಚಂಡೀಗಢ: ಕಳೆದ ವರ್ಷ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಭಾರೀ ವೈರಲ್ ಆಗಿದ್ದ ‘ಐಐಟಿ ವಾಲೆ ಬಾಬಾ’ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಯ್ ಸಿಂಗ್ ಎಂಬುದು ಅವರ ನಿಜವಾದ ಹೆಸರು. ಹರಿಯಾಣದ ಜಜ್ಜರ್ ಜಿಲ್ಲೆಯವರಾದ ಅವರು, ಬೆಂಗಳೂರಿನ ಎಂಜಿನಿಯರ್ ಪ್ರತೀಕಾ ಅವರೊಂದಿಗೆ ವಿವಾಹವಾಗಿದ್ದಾರೆ. ಫೆಬ್ರವರಿ 15ರಂದು ಮಹಾಶಿವರಾತ್ರಿ ಹಬ್ಬದಂದು ಹಿಮಾಚಲ ಪ್ರದೇಶದ ಅಂಜೋರ್ ಮಹಾದೇವ್ ದೇವಸ್ಥಾನದಲ್ಲಿ ಈ ಜೋಡಿ ಸರಳವಾಗಿ ಮದುವೆಯಾಗಿದ್ದಾರೆ.
ಇತ್ತೀಚೆಗೆ ಅಭಯ್ ಸಿಂಗ್ ತಮ್ಮ ತಂದೆಯನ್ನು ಭೇಟಿ ಮಾಡಲು ಜಜ್ಜರ್‌ಗೆ ತೆರಳಿದ್ದು, ಈ ವೇಳೆ ಪತ್ನಿ ಪ್ರತೀಕಾ ಕೂಡ ಜೊತೆಯಲ್ಲಿದ್ದರು. ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ತಪಸ್ವಿಯಂತೆ ವೇಷ ಧರಿಸಿ “ನಾನು ಐಐಟಿ ಪದವೀಧರ” ಎಂದು ಹೇಳಿಕೊಂಡಿದ್ದರಿಂದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದರು. ‘ಐಐಟಿ ವಾಲೆ ಬಾಬಾ’ ಎಂಬ ಹೆಸರಿನಿಂದ ಅಪಾರ ಜನಪ್ರಿಯತೆ ಪಡೆದಿದ್ದರು. ಮದುವೆಯ ನಂತರ ದಂಪತಿ ತಮ್ಮ ಜೀವನವನ್ನು ಸನಾತನ ಧರ್ಮದ ಪ್ರಚಾರಕ್ಕೆ ಮೀಸಲಿಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಸನಾತನ ವಿಶ್ವವಿದ್ಯಾಲಯ ಸ್ಥಾಪನೆಗೂ ಯೋಜನೆ ರೂಪಿಸಿದ್ದಾರೆ.
ಇತ್ತಿಚೆಗೆ ಕೆಲವು ವಿವಾದಗಳಲ್ಲೂ ಸಿಲುಕಿದ್ದ ಅಭಯ್ ಸಿಂಗ್, ಜೈಪುರದಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈಗ ಮದುವೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿರುವ ‘ಐಐಟಿ ವಾಲೆ ಬಾಬಾ’, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸರಾಗಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಳೆಗೆ ತತ್ತರಿಸಿದ ಐಪಿಎಲ್ ಪಂದ್ಯ: ಕೆಕೆಆರ್–ಪಂಜಾಬ್ ಕಿಂಗ್ಸ್ ಮುಖಾಮುಖಿ ಸ್ಥಗಿತ
ಕೋಲ್ಕತ್ತಾ: ಐಪಿಎಲ್ 2026ರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂ... ಓದನ್ನು ಮುಂದುವರಿಸಿ
ಸಾಥನ್‌ಕುಲಂ ಕಸ್ಟಡಿ ಸಾವು ಪ್ರಕರಣ: 9 ಪೊಲೀಸರಿಗೆ ಮರಣದಂಡನೆ
ಚೆನ್ನೈ: ದೇಶವನ್ನೇ ಬೆಚ್ಚಿಬೀಳಿಸಿದ್ದ ಸಾಥನ್‌ಕುಲಂ ಕಸ್ಟಡಿ ಸಾವು... ಓದನ್ನು ಮುಂದುವರಿಸಿ
“ನಾನು ನನ್ನ ಇಚ್ಛೆಗೆ ಬದುಕುತ್ತೇನೆ” –“ಗಂಡನ ಬಿಟ್ಟು ಪ್ರಿಯಕರನ ಜೊತೆ ಬದುಕಲು ಒಪ್ಪಿಗೆ ಕೊಟ್ಟ ಕೋರ್ಟ್!
ದೆಹಲಿ: 19 ವರ್ಷದ ಯುವತಿ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಸ್... ಓದನ್ನು ಮುಂದುವರಿಸಿ
ಕೇರಳದಲ್ಲಿ ಬಿಜೆಪಿ–ಎಲ್‌ಡಿಎಫ್ ಒಳಒಪ್ಪಂದ ಆರೋಪ: ಡಿಕೆಶಿ ವಾಗ್ದಾಳಿ!
ಕೇರಳ ರಾಜಕೀಯ ರಂಗದಲ್ಲಿ ಚುನಾವಣಾ ಕಾವು ತಾರಕ್ಕೇರಿದೆ. ಈ ನಡುವೆ ಉಪಮುಖ್ಯಮಂತ್ರಿ ಡಿ.... ಓದನ್ನು ಮುಂದುವರಿಸಿ
ಯುದ್ಧದ ಮಧ್ಯೆಯೂ ಎಲ್ಪಿಜಿ ಕೊರತೆ ಇಲ್ಲ: ಜನರಿಗೆ ಕೇಂದ್ರದ ಭರವಸೆ!
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ನಡುವೆಯೇ ದೇಶದಲ್ಲಿ ಎಲ್ಪಿಜಿ ಕೊರತೆ ಉಂಟಾಗಬಹು... ಓದನ್ನು ಮುಂದುವರಿಸಿ
ಕೇರಳ-ಪುದುಚೇರಿ ಚುನಾವಣಾ ಪ್ರಚಾರದಲ್ಲಿ ಡಿಕೆಶಿ ಕಿಡಿ: ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ವಾಗ್ದಾಳಿ!
ಕೇರಳ ಹಾಗೂ ಪುದುಚೇರಿಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ... ಓದನ್ನು ಮುಂದುವರಿಸಿ
ಮೊಮ್ಮಗನಿಗೆ ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಸ್ಮಶಾನ ಸೇರಿದ ಅಜ್ಜಿ
ಉತ್ತರ ಪ್ರದೇಶದ ಫಾರೂಕಾಬಾದ್‌ನಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಕಾರು ರಿವರ್ಸ್ ವೇ... ಓದನ್ನು ಮುಂದುವರಿಸಿ
ಟ್ರಂಪ್ ಹೆಸರು ಉಲ್ಲೇಖಿಸಿ ಮೋದಿ ಸರ್ಕಾರದ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ!
ಅಸ್ಸಾಂ ಚುನಾವಣಾ ರಂಗದಲ್ಲಿ ರಾಜಕೀಯ ವಾಗ್ವಾದ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷರ ಹೆಸರ... ಓದನ್ನು ಮುಂದುವರಿಸಿ
ಬಿಜೆಪಿ ಕಚೇರಿ ಬಳಿ ಸ್ಫೋಟ ಪ್ರಕರಣ: ಐವರು ಅರೆಸ್ಟ್ – ಐಎಸ್‌ಐ ಸಂಪರ್ಕ ಶಂಕೆ!
ಚಂಡೀಗಢದಲ್ಲಿ ಬಿಜೆಪಿ ಪ್ರಧಾನ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂ... ಓದನ್ನು ಮುಂದುವರಿಸಿ
ಪ್ರೇಮ ವಿವಾಹದ ಬಳಿಕ ಯುವತಿಯ ಹತ್ಯೆ – ಪೋಸ್ಟ್‌ಮಾರ್ಟಂನಲ್ಲಿ ಬಯಲು, ಸಿಐ ಅಮಾನತು!
ಹೈದರಾಬಾದ್: ಆಂಧ್ರಪ್ರದೇಶದ ಮಾಚೆರ್ಲಾ ಪಟ್ಟಣದಲ್ಲಿ ನಡೆದ ಗಂಭೀರ... ಓದನ್ನು ಮುಂದುವರಿಸಿ