ಉದ್ದಿಮೆಗಳಿಗೆ ಕೇಂದ್ರದ ಬೃಹತ್ ನೆರವು – 2.5 ಲಕ್ಷ ಕೋಟಿ ಕ್ರೆಡಿಟ್ ಗ್ಯಾರಂಟಿ ಯೋಜನೆ ಸಿದ್ಧ

ದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮದಿಂದ ಭಾರತದ ಹಲವು ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ, ಕೇಂದ್ರ ಸರ್ಕಾರ ಉದ್ದಿಮೆಗಳಿಗೆ ನೆರವಾಗಲು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಹೊಸ ಕ್ರೆಡಿಟ್ ಗ್ಯಾರಂಟಿ ಯೋಜನೆ ರೂಪಿಸಲು ಸರ್ಕಾರ ತಯಾರಿ ನಡೆಸಿದ್ದು, ಈ ಯೋಜನೆಯಡಿ ಸುಮಾರು 2.5 ಲಕ್ಷ ಕೋಟಿ ರೂಪಾಯಿ ಸಾಲಕ್ಕೆ ಖಾತ್ರಿ ನೀಡುವ ಸಾಧ್ಯತೆ ಇದೆ. ಮಾಹಿತಿ ಮೂಲಗಳ ಪ್ರಕಾರ, ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಆರ್ಥಿಕತೆ ಕುಂಠಿತಗೊಂಡು, ವಿಶೇಷವಾಗಿ ಎಂಎಸ್‌ಎಂಇ ಕ್ಷೇತ್ರ ಭಾರೀ ಹೊಡೆತ ಅನುಭವಿಸಿತ್ತು. ಅದನ್ನು ಎದುರಿಸಲು ಸರ್ಕಾರ ಜಾರಿಗೊಳಿಸಿದ್ದ ಇಸಿಜಿಎಲ್‌ಎಸ್ ಮಾದರಿಯನ್ನೇ ಇದೀಗ ವಿಸ್ತರಿಸಿ, ಹೊಸ ಯೋಜನೆ ತರಲು ಚಿಂತನೆ ನಡೆದಿದೆ.

 

ಈ ಯೋಜನೆಯಡಿ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಮೂಲಕ ಉದ್ದಿಮೆಗಳಿಗೆ 90 ಶೇಕಡಾ ವರೆಗೆ ಕ್ರೆಡಿಟ್ ಗ್ಯಾರಂಟಿ ಒದಗಿಸಲಾಗುತ್ತದೆ. ಸಾಲ ತೀರಿಸಲು ವಿಫಲವಾದರೆ, ಸರ್ಕಾರವೇ ಅದರ ಭಾರ ಹೊರುವ ವ್ಯವಸ್ಥೆ ಇರಲಿದೆ. ಇದಕ್ಕೆ ಜೊತೆಗೆ, ಬ್ಯಾಂಕುಗಳ ಬಡ್ಡಿದರವನ್ನು ಶೇ. 9.25 ಮೀರದಂತೆ ಹಾಗೂ ಎನ್‌ಬಿಎಫ್‌ಸಿಗಳ ಬಡ್ಡಿದರವನ್ನು ಶೇ. 14ರ ಒಳಗೆ ಇಡುವಂತೆ ನಿಯಂತ್ರಣ ಇರಲಿದೆ. ಒಂದು ವರ್ಷದವರೆಗೆ ಅಸಲು ಮೊತ್ತ ಪಾವತಿಸದೇ ಕೇವಲ ಬಡ್ಡಿ ಪಾವತಿಸುವ ಅವಕಾಶವೂ ನೀಡುವ ಸಾಧ್ಯತೆ ಇದೆ. ಕೋವಿಡ್ ಅವಧಿಯಲ್ಲಿ ಜಾರಿಗೊಂಡಿದ್ದ ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ ಕೋಟ್ಯಾಂತರ ಎಂಎಸ್‌ಎಂಇಗಳಿಗೆ ನೆರವು ಲಭ್ಯವಾಗಿದ್ದು, ಉದ್ಯಮ ಚೇತರಿಕೆಗೆ ಸಹಕಾರಿಯಾಗಿತ್ತು. ಇದೇ ಮಾದರಿಯಲ್ಲಿ ಇದೀಗ ಮತ್ತಷ್ಟು ವಿಸ್ತೃತ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಸಿಎಂ ಸ್ಥಾನ ತ್ಯಾಗದ ಸುಳಿವು? ನಿತೀಶ್ ಕುಮಾರ್ ಮುಂದಿನ ಹೆಜ್ಜೆ ಕುತೂಹಲ

ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗುವಂ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1

ಮಣಿಪುರದಲ್ಲಿ ಬಾಂಬ್ ದಾಳಿ – ಇಬ್ಬರು ಮಕ್ಕಳು ದುರ್ಮರಣ

ಇಂಪಾಲ: ಮಣಿಪುರದಲ್ಲಿ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

‘ಐಐಟಿ ವಾಲೆ ಬಾಬಾ’ ಮದುವೆ: ವೈರಲ್ ಸನ್ಯಾಸಿಯಿಂದ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಅಭಯ್ ಸಿಂಗ್

ಚಂಡೀಗಢ: ಕಳೆದ ವರ್ಷ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಭಾರೀ ವೈರಲ್... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಮಳೆಗೆ ತತ್ತರಿಸಿದ ಐಪಿಎಲ್ ಪಂದ್ಯ: ಕೆಕೆಆರ್–ಪಂಜಾಬ್ ಕಿಂಗ್ಸ್ ಮುಖಾಮುಖಿ ಸ್ಥಗಿತ

ಕೋಲ್ಕತ್ತಾ: ಐಪಿಎಲ್ 2026ರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಸಾಥನ್‌ಕುಲಂ ಕಸ್ಟಡಿ ಸಾವು ಪ್ರಕರಣ: 9 ಪೊಲೀಸರಿಗೆ ಮರಣದಂಡನೆ

ಚೆನ್ನೈ: ದೇಶವನ್ನೇ ಬೆಚ್ಚಿಬೀಳಿಸಿದ್ದ ಸಾಥನ್‌ಕುಲಂ ಕಸ್ಟಡಿ ಸಾವು... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

“ನಾನು ನನ್ನ ಇಚ್ಛೆಗೆ ಬದುಕುತ್ತೇನೆ” –“ಗಂಡನ ಬಿಟ್ಟು ಪ್ರಿಯಕರನ ಜೊತೆ ಬದುಕಲು ಒಪ್ಪಿಗೆ ಕೊಟ್ಟ ಕೋರ್ಟ್!

ದೆಹಲಿ: 19 ವರ್ಷದ ಯುವತಿ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಸ್... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಕೇರಳದಲ್ಲಿ ಬಿಜೆಪಿ–ಎಲ್‌ಡಿಎಫ್ ಒಳಒಪ್ಪಂದ ಆರೋಪ: ಡಿಕೆಶಿ ವಾಗ್ದಾಳಿ!

ಕೇರಳ ರಾಜಕೀಯ ರಂಗದಲ್ಲಿ ಚುನಾವಣಾ ಕಾವು ತಾರಕ್ಕೇರಿದೆ. ಈ ನಡುವೆ ಉಪಮುಖ್ಯಮಂತ್ರಿ ಡಿ.... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಯುದ್ಧದ ಮಧ್ಯೆಯೂ ಎಲ್ಪಿಜಿ ಕೊರತೆ ಇಲ್ಲ: ಜನರಿಗೆ ಕೇಂದ್ರದ ಭರವಸೆ!

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ನಡುವೆಯೇ ದೇಶದಲ್ಲಿ ಎಲ್ಪಿಜಿ ಕೊರತೆ ಉಂಟಾಗಬಹು... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಕೇರಳ-ಪುದುಚೇರಿ ಚುನಾವಣಾ ಪ್ರಚಾರದಲ್ಲಿ ಡಿಕೆಶಿ ಕಿಡಿ: ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ವಾಗ್ದಾಳಿ!

ಕೇರಳ ಹಾಗೂ ಪುದುಚೇರಿಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಮೊಮ್ಮಗನಿಗೆ ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಸ್ಮಶಾನ ಸೇರಿದ ಅಜ್ಜಿ

ಉತ್ತರ ಪ್ರದೇಶದ ಫಾರೂಕಾಬಾದ್‌ನಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಕಾರು ರಿವರ್ಸ್ ವೇ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1