ಐಪಿಎಲ್ ಟಿಕೆಟ್ ಗೊಂದಲ: KSCA ವಿರುದ್ಧ ಶಾಸಕ ಗಣಿಗ ರವಿ ಆಕ್ರೋಶ

ಮಂಡ್ಯ: ಐಪಿಎಲ್ ಪಂದ್ಯಗಳ ಟಿಕೆಟ್ ಹಂಚಿಕೆ ಹಾಗೂ ಮಾರಾಟ ವ್ಯವಸ್ಥೆ ಕುರಿತು ಶಾಸಕ ಗಣಿಗ ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತಿರುವುದು ಸಂತೋಷದ ಸಂಗತಿಯೇ ಸರಿ, ಆದರೆ ಸಾಮಾನ್ಯ ಅಭಿಮಾನಿಗಳಿಗೆ ಟಿಕೆಟ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಅವರು ಪ್ರಶ್ನಿಸಿದ್ದಾರೆ.

 

ಕೆಎಸ್‌ಸಿಎ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಅವರು, ಟಿಕೆಟ್ ವ್ಯವಸ್ಥೆಯಲ್ಲಿ ಅಸಮಾನತೆ ಇದ್ದು, ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟವಾಗುತ್ತಿದೆ ಎಂದು ಆರೋಪಿಸಿದರು. ಮೂಲ ದರಕ್ಕಿಂತ ಹತ್ತು ಪಟ್ಟು ಹೆಚ್ಚಾಗಿ ಟಿಕೆಟ್ ಮಾರಾಟವಾಗುತ್ತಿರುವುದನ್ನು ‘ಟಿಕೆಟ್ ಗ್ಯಾಂಬ್ಲಿಂಗ್’ ಎಂದು ಕಿಡಿಕಾರಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಟೀಕಿಸಿದ ಅವರು, “ಸ್ಟೇಡಿಯಂ ಅನ್ನು ಹಣ ಮಾಡುವ ಯಂತ್ರವನ್ನಾಗಿ ಮಾಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ತಮಗೆ ಸಿಕ್ಕ ಎರಡು ಟಿಕೆಟ್‌ಗಳನ್ನು ಬಡ ಮಕ್ಕಳಿಗೆ ನೀಡಿದ್ದಾಗಿ ಹೇಳಿದ ಅವರು, “ಅವರಿಗೆ ಸ್ಟೇಡಿಯಂನಲ್ಲಿ ಕೂತು ಪಂದ್ಯ ನೋಡುವ ಆಸೆ ಇರೋದಿಲ್ಲವೇ?” ಎಂದು ಪ್ರಶ್ನಿಸಿದರು. ಬಡವರಿಗೂ ಸಮಾನ ಅವಕಾಶ ಸಿಗಬೇಕು ಎಂದು ಒತ್ತಾಯಿಸಿದ ಅವರು, “ನಾನು ಹಣ ಕೊಟ್ಟು ಸಾಲಿನಲ್ಲಿ ನಿಂತು ಟಿಕೆಟ್ ತೆಗೆದುಕೊಳ್ಳಲು ಸಿದ್ಧ. ಆದರೆ ಟಿಕೆಟ್ ಸಿಗುವ ಕೌಂಟರ್ ಎಲ್ಲಿದೆ ಎಂದು ತೋರಿಸಿ” ಎಂದು ಸವಾಲು ಹಾಕಿದರು. ಸ್ಟೇಡಿಯಂನ 40 ಸಾವಿರ ಆಸನಗಳಲ್ಲಿ ಕನಿಷ್ಠ 20 ಸಾವಿರ ಟಿಕೆಟ್‌ಗಳನ್ನು ಕೌಂಟರ್ ಮೂಲಕ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದ ಅವರು, “ನಾನು ಗಲ್ಲಿ ಕ್ರಿಕೆಟ್ ಆಡುವ ಹುಡುಗರ ಪರ, ಬಡವರ ಪರ. ಅವರಿಗೆ ಪಂದ್ಯ ನೋಡುವ ಅವಕಾಶ ದೊರೆಯಬೇಕು” ಎಂದು ಹೇಳಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಐಪಿಎಲ್ ಪಂದ್ಯದಲ್ಲಿ ಬ್ಯಾಟ್ ವಿವಾದ – ತೆವಾಟಿಯಾ ತಡೆ

ಐಪಿಎಲ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳ್ಳರ ಅಟ್ಟಹಾಸ : 28 ಮೊಬೈಲ್ ವಶಕ್ಕೆ, ಅಪ್ರಾಪ್ತರು ಸೇರಿ ಮೂವರು ಅರೆಸ್ಟ್‌

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಮತ್ತು SRH... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1

ಚೆಂಡು ವಿರೂಪ ಆರೋಪ: ಫಖರ್ ಝಮಾನ್‌ಗೆ 2 ಪಂದ್ಯ ನಿಷೇಧ

ಲಾಹೋರ್: ಲಾಹೋರ್ ಖಲಂದರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಫಖರ್ ಝ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಪಶ್ಚಿಮ ಬಂಗಾಳ ಚುನಾವಣೆ : ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ

ಕೋಲ್ಕತ್ತಾ: ಭಾರತೀಯ ಟೆನಿಸ್ ಲೋಕದ ಖ್ಯಾತ ಆಟಗಾರ ಲಿಯಾಂಡರ್ ಪೇಸ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

CSK ಸೋಲು ನಡುವೆ ಜಡೇಜಾ ಭಾವುಕ ಕ್ಷಣ: ವಿಡಿಯೋ ವೈರಲ್

ಚೆನ್ನೈ: ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದ್ದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಚೆನ್ನೈ ವಿರುದ್ಧ ರಾಜಸ್ಥಾನ ದಿಗ್ವಿಜಯ: 12 ಓವರ್‌ಗಳಲ್ಲಿ ಗುರಿ ಚೇಸ್

ಚೆನ್ನೈ: ಬೌಲರ್‌ಗಳ ಕಟ್ಟುಪಾಡಿನ ದಾಳಿ ಹಾಗೂ ವೈಭವ್ ಸೂರ್ಯವಂಶಿ ಅ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಚಿನ್ನಸ್ವಾಮಿಯಲ್ಲಿ RCB ಯಶಸ್ವಿ ಪಂದ್ಯ: ಪೋಲೀಸರ ಕಾರ್ಯಕ್ಕೆ ಭಾರಿ ಮೆಚ್ಚುಗೆ

ಬೆಂಗಳೂರು, ಮಾ. 29: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಆರ್‌ಸಿಬಿ ದಾಂಡಿಗರ ಆರ್ಭಟಕ್ಕೆ ಟಿ20 ವಿಶ್ವ ದಾಖಲೆ ಉಡೀಸ್!

ಬೆಂಗಳೂರು: ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

15.4 ಓವರ್‌ಗಳಲ್ಲಿ 202 ಚೇಸ್ ಮಾಡಿದ ಆರ್‌ಸಿಬಿ – ಐಪಿಎಲ್‌ಗೆ ಭರ್ಜರಿ ಶುಭಾರಂಭ

ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 202... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಐಪಿಎಲ್ 2026: ಎಸ್‌ಆರ್‌ಎಚ್ 202 ರನ್ ಗಳಿಂದ ಆರ್‌ಸಿಬಿಗೆ ಭಾರೀ ಗುರಿ!

ಬೆಂಗಳೂರು : ಎಂ. ಚಿನ್ನಸ್ವಾಮಿ ಸ್ಟೇಡಿಯಂ: ಐಪಿಎಲ್ 19ನೇ ಸೀಸನ್‌... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1