ಆರ್‌ಸಿಬಿ ದಾಂಡಿಗರ ಆರ್ಭಟಕ್ಕೆ ಟಿ20 ವಿಶ್ವ ದಾಖಲೆ ಉಡೀಸ್!
ಬೆಂಗಳೂರು: ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವಿನೊಂದಿಗೆ ಹೊಸ ಇತಿಹಾಸ ನಿರ್ಮಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 202 ರನ್‌ಗಳ ಗುರಿ ಬೆನ್ನಟ್ಟಿ 6 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ದೊಡ್ಡ ಮೊತ್ತ ಕಲೆಹಾಕಿದರೂ, ಆರ್‌ಸಿಬಿಯ ದಾಂಡಿಗರ ಎದುರು ಆ ಮೊತ್ತ ಸಾಕಾಗಲಿಲ್ಲ. 202 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅಜೇಯ 69 ರನ್‌ಗಳಿಸಿದರೆ, ದೇವದತ್ ಪಡಿಕ್ಕಲ್ 61 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ನಾಯಕ ರಜತ್ ಪಟಿದಾರ್ 31 ರನ್‌ಗಳ ಸಹಾಯದಿಂದ ತಂಡದ ಗೆಲುವನ್ನು ಇನ್ನಷ್ಟು ಸುಲಭಗೊಳಿಸಿದರು.
ಈ ಅಬ್ಬರದ ಬ್ಯಾಟಿಂಗ್‌ನಿಂದ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 203 ರನ್ ಗಳಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಈ ಜಯದೊಂದಿಗೆ ಟಿ20 ಲೀಗ್ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 200ಕ್ಕಿಂತ ಹೆಚ್ಚು ರನ್‌ಗಳ ಗುರಿ ಬೆನ್ನಟ್ಟಿ ಗೆದ್ದ ವಿಶ್ವ ದಾಖಲೆಯನ್ನು ಆರ್‌ಸಿಬಿ ತನ್ನದಾಗಿಸಿಕೊಂಡಿದೆ.
ಇದಕ್ಕೂ ಮುನ್ನ ಈ ದಾಖಲೆ ರಾಜಸ್ಥಾನ್ ರಾಯಲ್ಸ್ ತಂಡದ ಹೆಸರಿನಲ್ಲಿತ್ತು. 2025ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 15.5 ಓವರ್‌ಗಳಲ್ಲಿ 210 ರನ್‌ಗಳನ್ನು ಚೇಸ್ ಮಾಡಿದ್ದ ರಾಜಸ್ಥಾನ್, ಈ ಸಾಧನೆ ಮಾಡಿತ್ತು. ಆದರೆ ಇದೀಗ ಆ ದಾಖಲೆಯನ್ನು ಮುರಿದ ಆರ್‌ಸಿಬಿ, ಐಪಿಎಲ್ 2026ರ ಮೊದಲ ಪಂದ್ಯದಲ್ಲೇ ತಮ್ಮ ಬಲ ಪ್ರದರ್ಶಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಐಪಿಎಲ್ ಪಂದ್ಯದಲ್ಲಿ ಬ್ಯಾಟ್ ವಿವಾದ – ತೆವಾಟಿಯಾ ತಡೆ
ಐಪಿಎಲ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲ... ಓದನ್ನು ಮುಂದುವರಿಸಿ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳ್ಳರ ಅಟ್ಟಹಾಸ : 28 ಮೊಬೈಲ್ ವಶಕ್ಕೆ, ಅಪ್ರಾಪ್ತರು ಸೇರಿ ಮೂವರು ಅರೆಸ್ಟ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಮತ್ತು SRH... ಓದನ್ನು ಮುಂದುವರಿಸಿ
ಚೆಂಡು ವಿರೂಪ ಆರೋಪ: ಫಖರ್ ಝಮಾನ್‌ಗೆ 2 ಪಂದ್ಯ ನಿಷೇಧ
ಲಾಹೋರ್: ಲಾಹೋರ್ ಖಲಂದರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಫಖರ್ ಝ... ಓದನ್ನು ಮುಂದುವರಿಸಿ
ಪಶ್ಚಿಮ ಬಂಗಾಳ ಚುನಾವಣೆ : ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ
ಕೋಲ್ಕತ್ತಾ: ಭಾರತೀಯ ಟೆನಿಸ್ ಲೋಕದ ಖ್ಯಾತ ಆಟಗಾರ ಲಿಯಾಂಡರ್ ಪೇಸ್... ಓದನ್ನು ಮುಂದುವರಿಸಿ
ಐಪಿಎಲ್ ಟಿಕೆಟ್ ಗೊಂದಲ: KSCA ವಿರುದ್ಧ ಶಾಸಕ ಗಣಿಗ ರವಿ ಆಕ್ರೋಶ
ಮಂಡ್ಯ: ಐಪಿಎಲ್ ಪಂದ್ಯಗಳ ಟಿಕೆಟ್ ಹಂಚಿಕೆ ಹಾಗೂ ಮಾರಾಟ ವ್ಯವಸ್ಥೆ... ಓದನ್ನು ಮುಂದುವರಿಸಿ
CSK ಸೋಲು ನಡುವೆ ಜಡೇಜಾ ಭಾವುಕ ಕ್ಷಣ: ವಿಡಿಯೋ ವೈರಲ್
ಚೆನ್ನೈ: ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದ್ದ... ಓದನ್ನು ಮುಂದುವರಿಸಿ
ಚೆನ್ನೈ ವಿರುದ್ಧ ರಾಜಸ್ಥಾನ ದಿಗ್ವಿಜಯ: 12 ಓವರ್‌ಗಳಲ್ಲಿ ಗುರಿ ಚೇಸ್
ಚೆನ್ನೈ: ಬೌಲರ್‌ಗಳ ಕಟ್ಟುಪಾಡಿನ ದಾಳಿ ಹಾಗೂ ವೈಭವ್ ಸೂರ್ಯವಂಶಿ ಅ... ಓದನ್ನು ಮುಂದುವರಿಸಿ
ಚಿನ್ನಸ್ವಾಮಿಯಲ್ಲಿ RCB ಯಶಸ್ವಿ ಪಂದ್ಯ: ಪೋಲೀಸರ ಕಾರ್ಯಕ್ಕೆ ಭಾರಿ ಮೆಚ್ಚುಗೆ
ಬೆಂಗಳೂರು, ಮಾ. 29: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸ... ಓದನ್ನು ಮುಂದುವರಿಸಿ
15.4 ಓವರ್‌ಗಳಲ್ಲಿ 202 ಚೇಸ್ ಮಾಡಿದ ಆರ್‌ಸಿಬಿ – ಐಪಿಎಲ್‌ಗೆ ಭರ್ಜರಿ ಶುಭಾರಂಭ
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 202... ಓದನ್ನು ಮುಂದುವರಿಸಿ
ಐಪಿಎಲ್ 2026: ಎಸ್‌ಆರ್‌ಎಚ್ 202 ರನ್ ಗಳಿಂದ ಆರ್‌ಸಿಬಿಗೆ ಭಾರೀ ಗುರಿ!
ಬೆಂಗಳೂರು : ಎಂ. ಚಿನ್ನಸ್ವಾಮಿ ಸ್ಟೇಡಿಯಂ: ಐಪಿಎಲ್ 19ನೇ ಸೀಸನ್... ಓದನ್ನು ಮುಂದುವರಿಸಿ